ವೈಶಿಷ್ಟ್ಯಪೂರ್ಣ ಕರ್ಜಗಿಯ ಕಾರಹುಣ್ಣಿಮೆ

•ಮೂರು ದಿನಗಳ ಸಂಭ್ರಮಾಚರಣೆ •ಬ್ರಹ್ಮಲಿಂಗೇಶ್ವರ ಮಹೋತ್ಸವದ ಜಾತ್ರಾ ವೈಭವ

Team Udayavani, Jun 14, 2019, 11:46 AM IST

hv-tdy-1..

ಹಾವೇರಿ: ಅತ್ಯಾಕರ್ಷಕ ಅಲಂಕಾರಗೊಂಡ ಬಂಡಿಗಳು. ಸ್ಪರ್ಧೆಯೊಡ್ಡುವ ರೀತಿ ಭರದಿಂದ ಓಡುವ ಬಂಡಿಯ ಎತ್ತುಗಳು-ಇದು ತಾಲೂಕಿನ ಕರ್ಜಗಿ ಗ್ರಾಮದ ಕಾರಹುಣ್ಣಿಮೆಯ ವಿಶೇಷ.

ಕಾರಹುಣ್ಣಿಮೆ ವೈಭವ ಎಂದೇ ಪ್ರಸಿದ್ಧಿ ಪಡೆದಿರುವ ಶ್ರೀಬ್ರಹ್ಮಲಿಂಗೇಶ್ವರ ಕಾರಹುಣ್ಣಿಮೆ ಮಹೋತ್ಸವವು ಜೂ. 18ರಿಂದ 20ರ ವರೆಗೆ ಮೂರು ದಿನಗಳ ಕಾಲ ವಿಜೃಂಭಣೆ ಹಾಗೂ ಹಲವು ವಿಶಿಷ್ಟ ಸಂಪ್ರದಾಯಗಳ ಪ್ರಕಾರ ನಡೆಯಲಿದೆ.

ವರದಾ ನದಿ ದಂಡೆಯಲ್ಲಿರುವ ಕರ್ಜಗಿ ಗ್ರಾಮದಲ್ಲಿ ಮೂರು ದಿನ ನಡೆಯುವ ಶ್ರೀಬ್ರಹ್ಮ ಲಿಂಗೇಶ್ವರ ಜಾತ್ರೆ ಕಾರಹುಣ್ಣಿಮೆ ವೈಭವ ನೋಡುವುದೇ ಕಣ್ಣಿಗೆ ಹಬ್ಬ. ಈ ಹಬ್ಬದಲ್ಲಿ ಗ್ರಾಮದ ಎಲ್ಲ ಜಾತಿ ಜನಾಂಗದವರೂ ಏಕತೆಯಿಂದ ಭಾಗವಹಿಸುವುದು ಇಲ್ಲಿನ ವಿಶೇಷತೆಗಳಲ್ಲೊಂದಾಗಿದೆ.

ಕರ್ಜಗಿಯ ಕಾರಹುಣ್ಣಿಮೆ ಮಹೋತ್ಸವ ಜಿಲ್ಲೆಯಲ್ಲಿ ಅತ್ಯಂತ ಖ್ಯಾತಿ ಪಡೆದ ಮಹೋತ್ಸವವಾಗಿದೆ. ಮೂರು ದಿನಗಳ ಈ ಉತ್ಸವದಲ್ಲಿ ಜೂ. 18ರಂದು ಹೊನ್ನುಗ್ಗಿ, ಜೂ. 19ರಂದು ದೊಡ್ಡಬಂಡಿ ಉತ್ಸವ, ಜೂ. 20ರಂದು ಕರಕ್ಕಿ ಬಂಡಿ ಉತ್ಸವ ವಿಶಿಷ್ಟವಾಗಿ ನಡೆಯುತ್ತದೆ.

ಪ್ರತಿ ವರ್ಷ ಕಾರಹುಣ್ಣಿಮೆಯ ನಂತರ ಬರುವ ಮಂಗಳವಾರದಿಂದ ಹೊನ್ನುಗ್ಗಿಯೊಂದಿಗೆ ಕಾರಹುಣ್ಣಿಮೆ ವೈಭವ ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ಹೊಸ ಮಳೆ ಪ್ರಾರಂಭವಾಗಿರುವುದರಿಂದ ಬಿತ್ತನೆಗೆ ಸಕಾಲವಾಗಿರುತ್ತದೆ. ಅಂದು ನೇಗಿಲು ಮತ್ತು ವ್ಯವಸಾಯಕ್ಕೆ ಬಳಸುವ ಎಲ್ಲ ಸಾಮಗ್ರಿಗಳನ್ನು ಶೃಂಗರಿಸಿ ಪೂಜೆ ಮಾಡುತ್ತಾರೆ. ಮನೆಯಲ್ಲಿ ಕರಿ ಕಂಬಳಿಯ ಗದ್ದುಗೆ ಮಾಡಿ ಎತ್ತನ್ನು ಪೂರ್ವಕ್ಕೆ ಮುಖ ಮಾಡಿ ನಿಲ್ಲಿಸಿ ಅದರ ಪಾದಕ್ಕೆ ಈ ವರ್ಷ ಮಳೆ-ಬೆಳೆ ಬಂಗಾರದಂತೆ ಬರಲಿ ಎಂದು ಹೊನ್ನು(ಬಂಗಾರ) ಮುಟ್ಟಿಸುತ್ತಾರೆ. ಇದಾದ ನಂತರ ಎತ್ತಿಗೆ ಹುಗ್ಗಿಯ ಪ್ರಸಾದ ತಿನ್ನಿಸಿ ಹೊನ್ನುಗ್ಗಿ ಆಚರಿಸಲಾಗುತ್ತದೆ.

ದೊಡ್ಡಬಂಡಿ: ಎರಡನೇ ದಿನವಾದ ಜೂ. 18ರಂದು ಬಂಡಿ ಓಟಕ್ಕಾಗಿ ರೈತರು ಬೆಳಗ್ಗೆಯಿಂದಲೇ ಎತ್ತು ಹಾಗೂ ಬಂಡಿಗಳಿಗೆ ಶೃಂಗರಿಸಿ ಸಿದ್ಧತೆ ಮಾಡಿಕೊಂಡಿರುತ್ತಾರೆ. ಮಧ್ಯಾಹ್ನ 3 ಗಂಟೆಗೆ ಆರಂಭವಾದ ಬಂಡಿ ಓಟ ರಾತ್ರಿ 8 ಗಂಟೆಯವರೆಗೂ ನಡೆಯುತ್ತದೆ. ವಿಶಿಷ್ಟ ವೇಷಗಳ ಮೂಲಕ ಗಮನಸೆಳೆದ ವೀರಗಾರರು, ಬಂಡಿಗಳನ್ನೇರಿ ಬಂಡಿ ಓಟಕ್ಕೆ ರಂಗು ಮೂಡಿಸುತ್ತಾರೆ.

ಬಂಡಿ ಓಟದ ಮುನ್ನ ಗ್ರಾಮದ ಆರಾಧ್ಯ ಬ್ರಹ್ಮಲಿಂಗೇಶ್ವರ ದೇವರಿಗೆ ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸುತ್ತಾರೆ. ಬಳಿಕ ಸಿಂಗರಿಸಿದ ಎತ್ತುಗಳಿಗೆ ಹೂಡಿದ ಬಂಡಿಗಳನ್ನು ಗ್ರಾಮ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ. ನಂತರ ನಡೆಯುವ ಬಂಡಿಯ ಓಟ ನೆರದ ಜನರನ್ನು ರೋಮಾಂಚಗೊಳಿಸುತ್ತದೆ.

ಗ್ರಾಮದ ವೀರಶೈವ ಸಮುದಾಯಕ್ಕೆ ಸೇರಿದ ಹೊಸಮನಿ ಹಾಗೂ ಕಾಮಣ್ಣನವರ ಕುಟುಂಬದಲ್ಲಿನ ತಲಾ ಏಳು ಜನ ಪುರುಷರು ಬಂಡಿ ಏರುತ್ತಾರೆ. ಹೀಗೆ ಬಂಡಿ ಏರುವ ಪುರುಷರು ವಿವಾಹಿತರಾಗಿರಬೇಕು. ಅಂಗವಿಕಲರಿರಬಾರದು, ವಿಧುರರಿರಬಾರದು ಎಂಬ ನಿಯಮ ಇದೆ. ಹೀಗೆ ಈ ಎರಡು ಕುಟುಂಬದ 14 ಸದಸ್ಯರು ಉಪವಾಸ ವ್ರತಾಚರಣೆ ಮಾಡಿದ ವೀರಗಾರರು ಸಂಪ್ರದಾಯದ ಉಡುಗೆ ತೊಟ್ಟು, ಮೈಗೆ ಗಂಧ ಲೇಪಿಸಿಕೊಂಡು, ಕೇದಿಗೆ ಬಾಸಿಂಗ್‌ ಕಟ್ಟಿಕೊಂಡು ಗ್ರಾಮದ ಬ್ರಹ್ಮ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಬಂಡಿ ಓಟದಲ್ಲಿ ಪಾಲ್ಗೊಳ್ಳುತ್ತಾರೆ. ಈ ವೀರಗಾರರ ಕರ್ತವ್ಯ ಮಾತ್ರ ವಂಶ ಪರಂಪರಗತವಾಗಿದೆ.

ಕರಕ್ಕಿ ಬಂಡಿ: ಇದಾದ ನಂತರ ಮೂರನೇ ದಿನ ಜೂ. 20ರಂದು ಕರಕ್ಕಿ ಬಂಡಿ ಹಬ್ಬ ನಡೆಯುತ್ತದೆ. ಈ ಬಂಡಿಗೆ ಬುಧವಾರ ಹುಟ್ಟಿದ ಕರುವನ್ನು ಹೂಡುವುದು ಇಲ್ಲಿನ ವಿಶೇಷ. ಈ ಕಾರ್ಯಕ್ರಮ ಅಂದು ಬೆಳಗ್ಗೆ 10ಗಂಟೆಗೆ ಪ್ರಾರಂಭವಾಗಿ ಸಂಜೆ 6 ಗಂಟೆ ವರೆಗೂ ನಡೆಯುತ್ತದೆ. ಒಟ್ಟಾರೆ ಕರ್ಜಗಿ ಗ್ರಾಮದಲ್ಲಿ ನಡೆಯುವ ಕಾರ ಹುಣ್ಣಿಮೆ ವೈಶಿಷ್ಟ್ಯ ಪೂರ್ಣವಾಗಿ ಆಚರಿಸಲಾಗುತ್ತದೆ.

ಒಟ್ಟಾರೆ ಮೂರು ದಿನಗಳ ಕಾಲ ಕರ್ಜಗಿ ಗ್ರಾಮದಲ್ಲಿ ಕಾರ ಹುಣ್ಣಿಮೆ ಮಹೋತ್ಸವನ್ನು ಅದ್ಧೂರಿಯಾಗಿ, ಸಂಪ್ರದಾಯಗಳೊಂದಿಗೆ ಆಚರಿಸುತ್ತಾರೆ. ಜಿಲ್ಲೆಯ ವಿವಿಧೆಡೆಗಳಿಂದ ಜನರು ಈ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.

•ಎಚ್.ಕೆ. ನಟರಾಜ

ಟಾಪ್ ನ್ಯೂಸ್

Gold price drops again: Rs 77240 per 10 grams!

Gold Rate: ಚಿನ್ನದ ಬೆಲೆ ಮತ್ತೆ ಇಳಿಕೆ: 10 ಗ್ರಾಂಗೆ 77240 ರೂ!

12-sirsi

Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

11-sirsi

Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ

1

India: 68 ಮಿಲಿಯನ್‌ ಟನ್‌ ಆಹಾರ ಪೋಲು…ದೇಶದ ಅಭಿವೃದ್ಧಿ, ಜನರ ಸಾವು, ಆಹಾರ ಭದ್ರತೆಗೂ ಮಾರಕ

Vijayapura: Unnatural assault on 6-year-old boy: Convict sentenced to 20 years in prison

Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು

The day will come when our team member will become CM: Yatnal

Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಿರ್ಲಕ್ಷ್ಯಕ್ಕೊಳಗಾದ ರಾಣಿ ಬೆನ್ನೂರ ಕೆರೆ-ಸ್ಥಳೀಯರ ಆಕ್ರೋಶ

ನಿರ್ಲಕ್ಷ್ಯಕ್ಕೊಳಗಾದ ರಾಣಿ ಬೆನ್ನೂರ ಕೆರೆ-ಸ್ಥಳೀಯರ ಆಕ್ರೋಶ

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

8

Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್‌ ಗೆಲುವು: ಬೊಮ್ಮಾಯಿ ಆರೋಪ

Haveri: ಮಾಜಿ ಸಚಿವ ಮನೋಹರ ತಹಶೀಲ್ದಾರ ವಿಧಿವಶ

Haveri: ಮಾಜಿ ಸಚಿವ ಮನೋಹರ ತಹಶೀಲ್ದಾರ ವಿಧಿವಶ

1-bbb

Shiggaon; ಉಪಚುನಾವಣೆ ಮತದಾನಕ್ಕೆ ಗೈರಾದ ಗಾಯಕ ಹನುಮಂತ ಲಮಾಣಿ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Chhattisgarh: 20 coaches of goods train derail

Chhattisgarh: ಹಳಿ ತಪ್ಪಿದ  ಗೂಡ್ಸ್‌ ರೈಲಿನ 20 ಬೋಗಿಗಳು

accident

Bantwal: ಕೆಎಸ್‌ಆರ್‌ಟಿಸಿ ಬಸ್‌-ಬೈಕ್‌ ಢಿಕ್ಕಿ; ದಂಪತಿಗೆ ಗಾಯ

Gold price drops again: Rs 77240 per 10 grams!

Gold Rate: ಚಿನ್ನದ ಬೆಲೆ ಮತ್ತೆ ಇಳಿಕೆ: 10 ಗ್ರಾಂಗೆ 77240 ರೂ!

Mangaluru: ಭಾರತ ಬಲಿಷ್ಠವಾಗಲು ಕೌಶಲಯುತ ಶಿಕ್ಷಣ ಅಗತ್ಯ: ಡಾ| ನಿರ್ಮಲಾನಂದನಾಥ ಸ್ವಾಮೀಜಿ

Mangaluru: ಭಾರತ ಬಲಿಷ್ಠವಾಗಲು ಕೌಶಲಯುತ ಶಿಕ್ಷಣ ಅಗತ್ಯ: ಡಾ| ನಿರ್ಮಲಾನಂದನಾಥ ಸ್ವಾಮೀಜಿ

14-uv-fusion

Bamboo: ಬಿದಿರು ಎಂದು ಮೂಗು ಮುರಿಯದಿರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.