ಶ್ರೀಕೃಷ್ಣಮಠದಲ್ಲಿ ತಗ್ಗಿದ ನೀರಿನ ಸಮಸ್ಯೆ
Team Udayavani, Jun 15, 2019, 5:23 AM IST
ಉಡುಪಿ: ಶ್ರೀಕೃಷ್ಣಮಠದಲ್ಲಿ ಕಳೆದೊಂದು ತಿಂಗಳಿಂದ ಎದುರಾದ ನೀರಿನ ಸಮಸ್ಯೆ ಬಹುತೇಕ ಬಗೆ ಹರಿದಿದೆ.
ಬುಧವಾರ ಭಾಗೀರಥೀ ಜನ್ಮದಿನದಂದು ಶ್ರೀಕೃಷ್ಣಮಠದಲ್ಲಿ ಉತ್ಸವ ಕೊನೆಗೊಂಡಿದ್ದು ಅದೇ ದಿನ ಭಾರೀ ಮಳೆ ಬಂದು ರಥಬೀದಿಯಲ್ಲಿ ಅರ್ಧ ಅಡಿ ನೀರು ನಿಂತು ಉತ್ಸವ ನಡೆಸಲೂ ತೊಂದರೆಯಾಗಿತ್ತು. ಅದರ ಮರುದಿನವೇ ರಥಬೀದಿಯ ಸುತ್ತಮುತ್ತಲ ಬಾವಿಯಲ್ಲಿ ನೀರಾಗಿದೆ. ಈಗ ರಾಜಾಂಗಣದಲ್ಲಿರುವ ಬಾವಿಯಲ್ಲಿ ನೀರು ಆಗಿದೆ. ಶ್ರೀಕೃಷ್ಣಮಠದ ಒಳಗಿನ ಬಾವಿನಲ್ಲಿ ನೀರು ಇತ್ತು, ಈಗ ಜಾಸ್ತಿಯಾಗುತ್ತಿದೆ. ಪಾರ್ಕಿಂಗ್ ಪ್ರದೇಶದ ಬೋರ್ವೆಲ್ ನೀರಿನ ಬಳಕೆ ಕಡಿಮೆಯಾಗಿದೆ. ನಗರಸಭೆಯಿಂದ ಎರಡು ನೀರಿನ ಮಾರ್ಗಗಳಿದ್ದು ಒಂದು ಮಾರ್ಗದಲ್ಲಿ ನೀರು ಬರಲು ಆರಂಭವಾಗಿದೆ. ಮಧ್ವಸರೋವರದಲ್ಲಿ ಅಪ್ಪಟ ಮಳೆಗಾಲದಲ್ಲಿ ಆಗುವಷ್ಟು ನೀರಾಗದಿದ್ದರೂ ಈಜಾಡುವಷ್ಟು ನೀರಾಗಿದೆ.
ಒಂದೆರಡು ದಿನಗಳಿಂದೀಚೆ ಟ್ಯಾಂಕರ್ ನೀರು ತರಿಸುವುದು ಗಣನೀಯವಾಗಿ ಇಳಿದಿದೆ. ಮೂರ್‍ನಾಲ್ಕು ದಿನಗಳ ಹಿಂದೆ 12,000 ಲೀ. ಸಾಮರ್ಥ್ಯದ 15 ಟ್ಯಾಂಕರ್ ನೀರನ್ನು ತರಿಸಿಕೊಳ್ಳುತ್ತಿದ್ದರೆ, ಶುಕ್ರವಾರ 4 ಟ್ಯಾಂಕರ್ ನೀರನ್ನು ತರಿಸಿಕೊಳ್ಳಲಾಗಿದೆ. ‘ನಮಗೆ ಮುಖ್ಯವಾಗಿ ನೀರು ಬೇಕಾಗುವುದು ಕೈತೊಳೆಯಲು. ಒಂದೆರಡು ದಿನಗಳಲ್ಲಿ ಟ್ಯಾಂಕರ್ ನೀರನ್ನು ನಿಲ್ಲಿಸಲಾಗುವುದು’ ಎಂದು ಶ್ರೀಮಠದ ಅಧಿಕಾರಿ ಹರೀಶ್ ಭಟ್ ‘ಉದಯವಾಣಿ’ಗೆ ತಿಳಿಸಿದರು.
ರಾಜಾಂಗಣದ ಪಾರ್ಕಿಂಗ್ ಪ್ರದೇಶದ ಯಾತ್ರಾರ್ಥಿಗಳ ಶೌಚಾಲಯದಲ್ಲಿ ಎರಡು ತಿಂಗಳಿಂದ ದಿನವೂ ತಲಾ 6,000 ಲೀ. ಸಾಮರ್ಥ್ಯದ ಆರು ಟ್ಯಾಂಕರ್ ನೀರನ್ನು ತರಿಸಲಾಗುತ್ತಿತ್ತು. ಇದು ಶ್ರೀಕೃಷ್ಣಮಠಕ್ಕೆ ಬರುವ ಸಾವಿರಾರು ಯಾತ್ರಾರ್ಥಿಗಳ ಸ್ನಾನ, ಶೌಚಾಲಯದ ಬಳಕೆಗಾಗಿ. ಎರಡು ದಿನಗಳಿಂದ ಸ್ವಂತ ಬಾವಿಯಲ್ಲಿ ನೀರಾಗಿರುವುದರಿಂದ ಟ್ಯಾಂಕರ್ ನೀರನ್ನು ನಿಲ್ಲಿಸಲಾಗಿದೆ ಶ್ರೀಕೃಷ್ಣಮಠ ಪರಿಸರ ಪ್ರತಿಷ್ಠಾನದ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ
Puttur: ಇದು ಅಜಿತರ ಸಾಹಸ : ರಬ್ಬರ್ ತೋಟದಲ್ಲಿ ಕಾಫಿ ಘಮ ಘಮ
Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.