ಶಿಕ್ಷಕಿಯನ್ನು ಗುಂಡಿಟ್ಟು ಕೊಂದು ಆತ್ಮಹತ್ಯೆ
Team Udayavani, Jun 15, 2019, 3:00 AM IST
ಗೋಣಿಕೊಪ್ಪಲು: ಶಿಕ್ಷಕಿಗೆ ಗುಂಡು ಹಾರಿಸಿ ಕೊಲೆಗೈದು, ಬಳಿಕ ಆರೋ ಪಿಯೂ ಅದೇ ಕೋವಿಯಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪೊನ್ನಂಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಬಾಳೆಲೆ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಬಾಳೆಲೆ ನಿವಾಸಿ, ಗೋಣಿಕೊಪ್ಪಲು ಲಯನ್ಸ್ ಶಾಲೆ ಶಿಕ್ಷಕಿ ಆದೇಂಗಡ ಆಶಾ ಕಾವೇರಮ್ಮ (45) ಕೊಲೆಯಾದವರು. ಮಾಚಿಮಾಡ ಜಗದೀಶ್ (55) ಆರೋಪಿ. ಬಾಳೆಲೆ ಪೊಲೀಸ್ ಉಪಠಾಣೆ ಮುಂಭಾಗದಲ್ಲೇ ಘಟನೆ ನಡೆದಿದೆ.
ಆಶಾ ಅವರು ಶುಕ್ರವಾರ ಬೆಳಗ್ಗೆ 8:15ಕ್ಕೆ ಶಾಲೆಯ ಬಸ್ಸಿಗಾಗಿ ಕಾಯುತ್ತಿದ್ದಾಗ ಕಾಫಿ ತೋಟದಿಂದ ದುಷ್ಕರ್ಮಿ ಒಂಟಿ ನಳಿಕೆಯ ಕೋವಿಯಿಂದ ಗುಂಡು ಹಾರಿಸಿದ್ದಾನೆ. ಪರಿಣಾಮ ಶಿಕ್ಷ ಕಿ ಸ್ಥಳದಲ್ಲೇ ಮೃತಪಟ್ಟರು. ಬಳಿಕ ಆರೋ ಪಿ ಆಶಾ ಮೃತಪಟ್ಟ ಸ್ಥಳದಿಂದ 20 ಅಡಿ ದೂರದ ಕಾಫಿ ತೋಟದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಶಿಕ್ಷಕಿಯನ್ನು ರಕ್ಷಿಸಲು ಮುಂದಾದ ದ್ವಿತೀಯ ಪಿಯು ವಿದ್ಯಾರ್ಥಿ ವೈ.ಕೆ. ದಿನೇಶ್ ಹಾಗೂ ತೋಟದ ಕಾರ್ಮಿಕ ಪಿ.ಬಿ. ಪೆಮ್ಮಿ ಅವರ ಮೇಲೂ ಆರೋಪಿ ಗುಂಡು ಹಾರಿಸಿದ್ದು, ಅವರಿಬ್ಬರೂ ಗಾಯಗೊಂಡಿದ್ದಾರೆ.
ಬೆಳಗ್ಗಿನಿಂದಲೇ ಕಾದು ಕುಳಿತಿದ್ದ!: ಶಿಕ್ಷಕಿಯನ್ನು ಕೊಲ್ಲಲು ಆರೋ ಪಿಯು ಆಕೆಯ ಮನೆಯ ಸಮೀಪ ಬೆಳಗ್ಗಿನಿಂದಲೇ ಕಾದು ಕುಳಿತಿದ್ದ. ಆಶಾ ಕಾವೇರಮ್ಮ ಮನೆಯಿಂದ ಹೊರಬಂದ ಕೂಡಲೇ ಗುಂಡು ಹಾರಿಸಿದ್ದರೂ ಅದು ಗುರಿ ತಪ್ಪಿತ್ತು. ಬಳಿಕ ಆಕೆ ಯ ನ್ನು ಮನೆಯಿಂದ 100 ಮೀ. ದೂರದ ಮುಖ್ಯ ರಸ್ತೆಯ ಬದಿಯಲ್ಲಿರುವ ಕೊಡವ ಸಮಾಜದ ಸಮೀಪ ಕೊಲೆ ಮಾಡಿದ್ದಾನೆ.
ಹಿಂದೆ ಸ್ನೇಹಿತರಾಗಿದ್ದರು: ಹಲವು ವರ್ಷಗಳಿಂದ ಆಶಾ ಹಾಗೂ ಜಗದೀಶ್ ನಡುವೆ ಗಾಢವಾದ ಸ್ನೇಹವಿದ್ದು, 2 ವರ್ಷದಿಂದ ಸ್ನೇಹದಲ್ಲಿ ಬಿರುಕು ಮೂಡಿತ್ತು. ಲೇವಾದೇವಿ ವಹಿವಾಟಿನಿಂದಾಗಿ ಸ್ನೇಹ ಮುರಿದು ಬಿದ್ದಿತ್ತು ಎನ್ನಲಾಗುತ್ತಿದೆ.
ಬಳಿಕ ಜಗದೀಶ್ ಆಕೆ ಜತೆ ಮರು ಸ್ನೇಹಕ್ಕಾಗಿ ಶಿಕ್ಷಕಿಯ ಫೋಟೋವನ್ನು ನೀಲಿ ಚಿತ್ರ ತಾರೆಯ ಫೋಟೋದೊಂದಿಗೆ ಸೇರಿಸಿ ಬ್ಲ್ಯಾಕ್‌ವೆುಲ್ ಮಾಡುತ್ತಿದ್ದ. ಈ ಬಗ್ಗೆ ಗೋಣಿಕೊಪ್ಪಲು ಠಾಣೆಯಲ್ಲಿ ದೂರು ದಾಖಲಾಗಿ ಜಗದೀಶ್ ಜೈಲುವಾಸ ಅನುಭವಿಸಿದ್ದ. ಇದೇ ಕೋಪದಿಂದ ಹಲವು ಬಾರಿ ಕೊಲೆ ಬೆದರಿಕೆಯೊಡ್ಡಿದ್ದ. ಈ ಬಗ್ಗೆಯೂ ಎಸ್ ಪಿಗೆ ದೂರು ನೀಡಲಾಗಿತ್ತು. ಈತನ ವರ್ತನೆಯಿಂದ ಬೆದರಿದ್ದ ಶಿಕ್ಷಕಿ ಮನೆ ಸುತ್ತ ಸಿ.ಸಿ.ಕ್ಯಾಮರಾ ಅಳವಡಿಸಿದ್ದರು.
ಕ್ರಿಮಿನಲ್ ಹಿನ್ನೆಲೆ: ಜಗದೀಶ್ ಈ ಹಿಂದೆ ಹಲವು ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದು, ಪೊನ್ನಂಪೇಟೆ ಹಾಗೂ ಗೋಣಿಕೊಪ್ಪಲು ಠಾಣೆಯಲ್ಲಿ ದೂರು ದಾಖಲಾಗಿದೆ. ಇದೇ ಕಾರಣದಿಂದ ಸಾರ್ವಜನಿಕರಿಂದಲೂ ಪೆಟ್ಟು ತಿಂದಿದ್ದ ಎನ್ನಲಾಗಿದೆ. ಆಶಾ ಕಾವೇರಮ್ಮ ಇಬ್ಬರು ಪುತ್ರಿಯ ರೊಂದಿಗೆ ಜೀವನ ನಡೆಸುತ್ತಿದ್ದರು. ಓರ್ವ ಪುತ್ರಿ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದು, ಮತ್ತೂಬ್ಬಳು ಅಂತಿಮ ಪದವಿ ವಿದ್ಯಾರ್ಥಿ. ಆಶಾ ಶಾಲೆಯಲ್ಲಿ ಉತ್ತಮ ಶಿಕ್ಷಕಿ ಎಂದು ಹೆಸರು ಗಳಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bagalakote: ಪ್ರೇಯಸಿ ಗೆಳತಿ ಹತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Madhu Bangarappa ; ಟ್ರೋಲ್ ಗಳಿಗೆ ಬಗ್ಗಲ್ಲ.. ಕಿಡಿ ಕಿಡಿಯಾದ ಶಿಕ್ಷಣ ಸಚಿವ!
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.