ಹಟ್ಟಿಯಂಗಡಿ: ಸರಕಾರಿ ಆಸ್ಪತ್ರೆಗೆ ಇಸಿಜಿ ಯಂತ್ರ ಕೊಡುಗೆ
Team Udayavani, Jun 15, 2019, 5:05 AM IST
ಕುಂದಾಪುರ: ಹಟ್ಟಿಯಂಗಡಿ ಸರಕಾರಿ ಆಸ್ಪತ್ರೆಗೆ ಕೆಎಂಸಿಯ ಹೃದ್ರೋಗ ವಿಭಾಗ ಮುಖ್ಯಸ್ಥ ಡಾ| ಪದ್ಮನಾಭ ಕಾಮತ್ ಅವರ ಸಿಎಡಿ (ಕಾರ್ಡಿಯೋಲಜಿ ಆರ್ ಡೋರ್ ಸ್ಟೆಪ್) ಯೋಜನೆ ಮೂಲಕ ಕಾಯಕಲ್ಪ ವಾಟ್ಸ್ಯಾಪ್ ಗ್ರೂಪ್‌ನಿಂದ ಇಸಿಜಿ ಯಂತ್ರ ನೀಡಲಾಗಿದೆ.
ಸರಕಾರಿ ಆಸ್ಪತ್ರೆ, ಜನೌಷಧಿ ಕೇಂದ್ರ ಹಾಗೂ ಹಳ್ಳಿಗಳ ಕ್ಲಿನಿಕ್‌ಗಳಿಗೆ ಈ ಯಂತ್ರಗಳನ್ನು ದಾನಿಗಳ ಮೂಲಕ ಅನುದಾನ ಸಂಗ್ರಹಿಸಿ ನೀಡಲಾಗುತ್ತಿದ್ದು ಹಟ್ಟಿಯಂಗಡಿಗೆ ನೀಡಿದ ಯಂತ್ರ 150ನೇ ಯಂತ್ರವಾಗಿದೆ. ಇದೇ ದಿನ ಭಟ್ಕಳದಲ್ಲಿ ಜನೌಷಧಿ ಕೇಂದ್ರಕ್ಕೆ ಇಸಿಜಿ ಯಂತ್ರ ನೀಡಲಾಗಿದೆ.
ಉಚಿತವಾಗಿ ಇಸಿಜಿ ಯಂತ್ರಗಳನ್ನು ನೀಡುವ ಮೂಲಕ ಹಳ್ಳಿ ಪ್ರದೇಶ ಹಾಗೂ ಸೌಕರ್ಯಗಳಿಲ್ಲದ ಕಡೆಗಳಲ್ಲಿ ಹೃದ್ರೋಗಿಗಳಿಗೆ ಆಗುವ ತೊಂದರೆ ತಪ್ಪಿಸಲು ನೆರವಾಗಲಾಗುತ್ತಿದೆ. ಈಗಾಗಲೇ ಸಾವಿರಾರು ಮಂದಿ ಇದರ ಪ್ರಯೋಜನ ಪಡೆದಿದ್ದಾರೆ.
ಹೃದ್ರೋಗ ವೈದ್ಯರು ಇಲ್ಲದಿದ್ದರೂ ಹೃದಯಬೇನೆ ಅಥವಾ ಹೃದಯಕ್ಕೆ ಸಂಬಂಧಿಸಿದ ತೊಂದರೆ ಕಾಣಿಸಿದಾಗ ತುರ್ತಾಗಿ ಇಸಿಜಿ ಮಾಡಿಸಿಕೊಂಡು ಪ್ರಥಮ ಚಿಕಿತ್ಸೆ ಪಡೆದು ನಂತರ ಯಾವುದೇ ಹೃದ್ರೋಗ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯಬಹುದು. ಇದರಿಂದಾಗಿ ಪ್ರಾಣಹಾನಿ ತಪ್ಪುತ್ತದೆ. ಹಾಗೂ ಮೊದಲೇ ಇಸಿಜಿ ಮಾಡಿಸಿರುವ ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆ ವಿಳಂಬವಾಗುವುದು ತಪ್ಪುತ್ತದೆ. ರೋಗಿಯ ಸ್ಥಿತಿಯ ಕುರಿತು ವೈದ್ಯರಿಗೆ ತಿಳಿಸಿದರೆ ಸೂಕ್ತ ಚಿಕಿತ್ಸೆಗೆ ಸಿದ್ಧವಾಗಿರಲು ಅನುವಾಗುತ್ತದೆ. ಹಟ್ಟಿಯಂಗಡಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ರಂಗನಾಥ್ ಅವರು ಇಸಿಜಿ ಯಂತ್ರ ಸ್ವೀಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ
ಕೆರೆ ಬತ್ತುವ ಮೊದಲೇ ಎಚ್ಚರಿಕೆ ಅಗತ್ಯ; ಜೀವ ಸೆಲೆಯಾಗಿರುವ ಕೆರೆಗಳ ನಿರ್ವಹಣೆಯೇ ಆಗುತ್ತಿಲ್ಲ
Yakshagana: ಇಂದು ನೀಲಾವರ ಮೇಳ ತಿರುಗಾಟಕ್ಕೆ ಚಾಲನೆ
ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ
Udupi: ಗೀತಾರ್ಥ ಚಿಂತನೆ-106; ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.