ಅಡಕೆ ಮರ ಹತ್ತಲು ಬೇಕು ಕೌಶಲ್ಯ

•ಬಿಎ, ಬಿಕಾಂ ಓದಿದವರೂ ಇನ್ನು ಕೊನೆಗೌಡ್ರು!•ಅಡಕೆ ಕೊಯ್ಲಿಗೆ ಕೌಶಲ್ಯ ಪಡೆ ಸಿದ್ಧ

Team Udayavani, Jun 15, 2019, 11:35 AM IST

uk-tdy-3..

ಶಿರಸಿ: ಅಡಕೆ ಮರ ಏರುವುದು ಕಲಿತ ಕೌಶಲ್ಯ ಪಡೆ.

ಶಿರಸಿ: ಒಂದು ಕಾಲಕ್ಕೆ ಶಿರಸಿ ಸೀಮೆಗೆ ಭಟ್ಕಳ, ಹೊನ್ನಾವರ ಭಾಗದಿಂದ ಅಡಕೆ ಕೊನೇ ಗೌಡರು ಬರುತ್ತಿದ್ದರು. ಮಳೆಗಾಲದಲ್ಲಿ ಪಸೆಯಿಂದ ಜಾರುವ ಅಡಕೆ ಮರ ಏರುವ ಕೌಶಲಿಗರು ಮಲೆನಾಡಲ್ಲಿ ಕಡಿಮೆಯೇ.

ಮಳೆಗಾಲದಲ್ಲಿ ಮೂರ್‍ನಾಲ್ಕು ತಿಂಗಳು ಘಟ್ಟ ಏರುತ್ತಿದ್ದ ಕೊನೇಗೌಡರು ಮರ ಏರಿ ಊರಿಗೆ ವಾಪಸ್‌ ಹೋಗುವಾಗ ಮುಂದಿನ ಬದುಕಿಗೆ, ಕುಟುಂಬಕ್ಕೆ ಹಣ ಮಾಡಿಕೊಂಡು ಹೋಗುತ್ತಿದ್ದರು. ಮತ್ತೆ ದೀಪಾವಳಿಗೆ ಕೊನೆ ಕೋಯ್ಲಿಗೆ ಬರುತ್ತಿದ್ದರು.

ಕೊರತೆಯಾಯ್ತು: ಆದರೆ, ಅಲ್ಲಿನ ಹೊಸ ತಲೆಮಾರು ಕೊನೆ ಕೋಯ್ಲಿಗೆ ಬಾರದೇ ಬೇರೆ ಬೇರೆ ಉದ್ಯೋಗದ ದಾರಿ ಹಿಡಿದಿದ್ದರಿಂದ ಕೊನೇಗೌಡರ ಸಮಸ್ಯೆ ಉಂಟಾಗತೊಡಗಿತು. ಶಿರಸಿ ಸೀಮೆಯಲ್ಲಿ ಇನ್ನು ಕೊನೆ ಕೋಯ್ಲು, ಮದ್ದು ಸಿಂಪರಣೆ ಕಷ್ಟ ಎಂಬ ಕಾಲಕ್ಕೆ ಕೆಲ ಯುವಕರು, ಓದದೇ ಕೃಷಿ ಕೂಲಿ ಮಾಡುತ್ತ ಮರ ಏರುವ ಕೌಶಲ್ಯ ಪಡೆದುಕೊಂಡರು. ಅಲ್ಪ ಸ್ವಲ್ಪ ಓದಿದವರು ಊರು ಬಿಟ್ಟರು.

ಆದರೂ 29 ಸಾವಿರ ಹೆಕ್ಟೇರ್‌ ಪ್ರದೇಶ ಇರುವ ಅಡಕೆ ತೋಟದಲ್ಲಿ ಮದ್ದು ಹೊಡೆ ಯುವ ಕುಶಲಕರ್ಮಿಗಳ ಕೊರತೆ ಇದೆ. ಕೆಲವಡೆ ಇಡೀ ಊರಿಗೆ ಒಬ್ಬ ಕೊನೆಗಾರ ಇರುವುದೂ ಇದೆ. ಇದರಿಂದ ಔಷಧ ಸಿಂಪರಣೆ ಕಷ್ಟವೇ ಆಗುತ್ತಿದೆ. ಬೆಳೆಗಾರರ ಬದುಕಿಗೆ ಅತಿ ಮಳೆ ಹಾಗೂ ಕುಶಲಕರ್ಮಿಗಳ ಕೊರತೆ ಕಾಡುವಂತಾಗಿದೆ.

ಹೊಸ ಪಡೆ: ಇದೀಗ ಕದಂಬ ಮಾರ್ಕೇಟಿಂಗ್‌, ಕೃಷಿ ವಿಜ್ಞಾನ ಕೇಂದ್ರ ಹಾಗೂ ಇತರ ಸಹಕಾರಿ ಸಂಘಟನೆಗಳು ಜಂಟಿಯಾಗಿ ಅಡಕೆ ಕೌಶಲ್ಯ ಪಡೆ ಸಿದ್ಧಗೊಳಿಸಲು ಯೋಜಿಸಿತು. ದಕ್ಷಿಣ ಕನ್ನಡ, ತೀರ್ಥಹಳ್ಳಿಯಲ್ಲಿ ನಡೆಸಲಾಗಿದ್ದ ತರಬೇತಿ ಶಿರಸಿಗೂ ವಿಸ್ತಾರಗೊಂಡಿತು. ಸ್ವತಃ ಹಸಿ ಅಡಕೆ ಟೆಂಡರ್‌, ಅಡಕೆ ಕೊನೆಕೊಯ್ಲು ನಡೆಸುವ ಕದಂಬ ಸಂಸ್ಥೆಗೆ ಇಂಥದೊಂದು ಪಡೆಯನ್ನು ಊರೂರಲ್ಲಿ ಸೃಷ್ಟಿಸುವ ಅಗತ್ಯ ಅರಿವಾಗಿತ್ತು. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿಶ್ವೇಶ್ವರ ಭಟ್ಟ ಕೋಟೆಮನೆ, ಕೃಷಿ ವಿಜ್ಞಾನಿ ಮಂಜು ಎಂ.ಜೆ ತಂಡ ಇದಕ್ಕೊಂದು ನೀಲನಕ್ಷೆ ಸಿದ್ಧಗೊಳಿಸಿತು.

ಕಳೆದ ನಾಲ್ಕು ದಿನಗಳಿಂದ 25 ವರ್ಷದ ಆಸು ಪಾಸಿನ ಆಸಕ್ತ ವಿದ್ಯಾರ್ಥಿಗಳಿಗೆ ವಸತಿ ಸಹಿತ ಶಿಬಿರದಲ್ಲಿ ದಿನಕ್ಕೆ 500 ರೂ., ರಕ್ಷಣಾ ಬೆಲ್ಟಾ, ಕ್ಯಾಪ್‌ಗ್ಳನ್ನೂ ನೀಡಿ ತರಬೇತಿ ನೀಡಿತು. ಇದರಲ್ಲಿ ಬಿಎ, ಬಿಕಾಂ ಓದಿದವರೂ ಬಂದಿದ್ದಾರೆ.

ಕೊನೆ ಕೋಯ್ಲಿಗೂ: ತರಬೇತಿ ಶನಿವಾರ ಮುಗಿಯಲಿದೆ. ಮುಂದೆ ಸಪ್ಟೆಂಬರ್‌ನಲ್ಲೂ ಕೊನೆ ಕೋಯ್ಲಿಗೆ ಎರಡು ದಿನದ ತರಬೇತಿ ನೀಡಲು ತೀರ್ಮಾನಿಸಲಾಗಿದೆ ಎನ್ನುತ್ತಾರೆ ಸಂಘಟಕರು. ಶಿಬಿರದಲ್ಲೂ ಮುಂಜಾನೆ ಯೋಗ, ನೈತಿಕತೆ, ಆರೋಗ್ಯ ಕಾಪಾಡಿಕೊಳ್ಳುವ ಬಗೆ, ದುಶ್ಚಟಗಳ ಪರಿಣಾಮವನ್ನೂ ತಿಳಿಸಲಾಗಿದೆ. ತಜ್ಞರು ಉಪನ್ಯಾಸ ನೀಡಿದ್ದಾರೆ.

ಈ ಮಧ್ಯೆ ಅಡಕೆ ಕೃಷಿ ಮಾಹಿತಿ, ಬೋರ್ಡೋ ದ್ರಾವಣ ಸಿಂಪರಣೆ, ತುರ್ತು ಸಂದರ್ಭದಲ್ಲಿ ನಿರ್ವಹಣೆ, ಮರ ಏರುವ ಮರದ ಆಯ್ಕೆ ಕುರಿತೂ ತಿಳಿವಳಿಕೆ ನೀಡಲಾಗಿದೆ. ಹಾರೂಗಾರಿನ ಹಳೆತೋಟದಲ್ಲಿ ಅಡಕೆ ಮರ ಏರುವ ಕುರಿತು ತರಬೇತಿ ನೀಡಲಾಯಿತು. ಈ ವೇಳೆ ಸ್ಥಳೀಯ ಕೃಷಿಕರೂ ಆಸಕ್ತಿಯಿಂದ ಪಾಲ್ಗೊಂಡಿದ್ದು ಖುಷಿ ಆಗಿದೆ ಎನ್ನುತ್ತಾರೆ ಸಹಕಾರಿ ಗುರುಪಾದ ಹೆಗಡೆ ಬೊಮ್ಮನಳ್ಳಿ.

ಟಾಪ್ ನ್ಯೂಸ್

16-roopa

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ… ನಕ್ಸಲ್‌ ಎನ್‌ಕೌಂಟರ್‌ ಬಗ್ಗೆ ಡಿಐಜಿ ಹೇಳಿದ್ದೇನು ?

14-sky

Subramanya: ಕುಕ್ಕೆಗೆ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ದಂಪತಿ ಭೇಟಿ

Hospital: ಭಾನುವಾರ ಉದ್ಘಾಟನೆಗೊಂಡ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಸೋಮವಾರವೇ ಬಿತ್ತು ಬೀಗ

Surat: ಭಾನುವಾರ ಉದ್ಘಾಟನೆಗೊಂಡ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಸೋಮವಾರವೇ ಬಿತ್ತು ಬೀಗ

13-thirthahalli

Thirthahalli: ಪಾದರಕ್ಷೆ, ಮೊಬೈಲ್ ನದಿ ದಡದಲ್ಲಿ ಬಿಟ್ಟು ವ್ಯಕ್ತಿ ನದಿಗೆ; ಶಂಕೆ

Tollywood: ʼಪುಷ್ಪ-2ʼ ಟ್ರೇಲರ್‌ನಲ್ಲಿ ಕಾಣುವ ಅರ್ಧ ತಲೆ ಬೋಳಿಸಿರುವ ಈ ನಟ ಯಾರು?

Tollywood: ʼಪುಷ್ಪ-2ʼ ಟ್ರೇಲರ್‌ನಲ್ಲಿ ಕಾಣುವ ಅರ್ಧ ತಲೆ ಬೋಳಿಸಿರುವ ಈ ನಟ ಯಾರು?

9-mng

Mangaluru: ಕಾರು ಢಿಕ್ಕಿಯಾಗಿ ಮಹಿಳೆ ಸಾವು

Canada: ವಾಲ್‌ಮಾರ್ಟ್ ಓವನ್‌ನಲ್ಲಿ ಭಾರತೀಯ ಮೂಲದ ಯುವತಿಯ ಶವ: ಕೆನಡಾ ಪೊಲೀಸರು ಹೇಳಿದ್ದೇನು?

Canada: ವಾಲ್‌ಮಾರ್ಟ್ ಓವನ್‌ನಲ್ಲಿ ಭಾರತೀಯ ಮೂಲದ ಯುವತಿಯ ಶವ: ಕೆನಡಾ ಪೊಲೀಸರು ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10

Gujjar Kere: ಕೆರೆ ಪರಿಸರದ ರಕ್ಷಣೆಗೆ ಆದ್ಯತೆ ಅಗತ್ಯ; ತಹಶೀಲ್ದಾರ್‌ಗೆ ಮರು ಮನವಿ

10-dandeli

Dandeli:ತುಂಡಾಗಿ ಬಿದ್ದಿದ್ದ ಕೇಬಲ್ ವೈರ್ ಸುತ್ತಿ ದ್ವಿಚಕ್ರ ವಾಹನ ಸ್ಕಿಡ್: ಸವಾರನಿಗೆ ಗಾಯ

1-dandeli

Dandeli; ಆತ್ಮಹ*ತ್ಯೆಗೆ ಯತ್ನಿಸಿದ ವೃದ್ಧನ ರಕ್ಷಣೆ

10

Dandeli: ಅಂಬೇವಾಡಿಯ ಬಿಸಿಎಂ ವಸತಿ ನಿಲಯದಲ್ಲಿ ವಿದ್ಯಾರ್ಥಿ ಸಾವು

7-

Dandeli: ವಿವಾಹಿತ ವ್ಯಕ್ತಿ ಆತ್ಮಹತ್ಯೆ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

16-roopa

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ… ನಕ್ಸಲ್‌ ಎನ್‌ಕೌಂಟರ್‌ ಬಗ್ಗೆ ಡಿಐಜಿ ಹೇಳಿದ್ದೇನು ?

13(2)

Udupi: ಈಶ್ವರನಗರ-ಪರ್ಕಳ ರಸ್ತೆಯ ಹೊಂಡಗಳಿಗೆ ಕೊನೆಗೂ ತೇಪೆ

12

Udupi: ವಿಸಿಲ್‌ ಹೊಡೆದು, ಕೈ ಸನ್ನೆಯಲ್ಲೇ ಟ್ರಾಫಿಕ್‌ ನಿರ್ವಹಣೆ!

15-uv-fusion

Paddana-Tulu folk songs: ಮರೆಯಾಗದಿರಲಿ ಪಾಡ್ದನನವೆಂಬ ಸಂಸ್ಕೃತಿಯ ಸಂಪರ್ಕ ಕೊಂಡಿ

11

Padubidri: ನಿಧಾನವಾಗಿ ಚಲಿಸಿ, ಹೆದ್ದಾರಿ ಕಾಮಗಾರಿ ನಡೆಯುತ್ತಿದೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.