ಮುಷ್ಕರ ಹಿಂಪಡೆದ AIIMS ವೈದ್ಯರು; ಆರೋಗ್ಯ ಸಚಿವರ ಭೇಟಿಗೈದ IMA ನಿಯೋಗ
Team Udayavani, Jun 15, 2019, 12:31 PM IST
ಹೊಸದಿಲ್ಲಿ : ಏಮ್ಸ್ ರೆಸಿಡೆಂಟ್ ಡಾಕ್ಟರ್ ಗಳ ಸಂಘ ವೈದ್ಯರ ಮುಷ್ಕರವನ್ನು ಇಂದು ಶನಿವಾರ ಹಿಂಪಡೆದುಕೊಂಡಿದೆ. ಭಾರತೀಯ ವೈದ್ಯಕೀಯ ಸಂಘದ ನಿಯೋಗ ಇಂದು ಮತ್ತೆ ಆರೋಗ್ಯ ಸಚಿವರನ್ನು ಭೇಟಿಯಾಗಿದೆ.
ಈಗಾಗಲೇ ತಾನು ನೀಡಿರುವ 48 ತಾಸುಗಳ ಗಡುವಿನೊಳಗೆ ವೈದ್ಯರ ಬೇಡಿಕೆಯನ್ನು ಈಡೇರಿಸಬೇಕೆಂದು ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಸಂಘವು ಆಗ್ರಹಿಸಿದೆ.
48 ತಾಸೊಳಗೆ ವೈದ್ಯರ ಬೇಡಿಕೆ ಈಡೇರದಿದ್ದರೆ ದಿಲ್ಲಿ ಆಸ್ಪತ್ರೆಯಲ್ಲಿ ಜೂನ್ 17ರ ಸೋಮವಾರದಿಂದ ಅನಿರ್ದಿಷ್ಟಾವಧಿಯ ಮುಷ್ಕರ ನಡೆಸುವುದು ಅನಿವಾರ್ಯವಾದೀತು ಎಂಬ ಎಚ್ಚರಿಕೆಯನ್ನು ಸಂಘ ನೀಡಿದೆ.
“ಎಲ್ಲ ಜೂನಿಯರ್ ಮತ್ತು ಸೀನಿಯರ್ ವೈದ್ಯರು ಇಂದು ಶನಿವಾರ ಕರ್ತವ್ಯಕ್ಕೆ ಮರಳಿದ್ದಾರೆ; ಆದರೂ ನಮ್ಮ ಪ್ರತಿಭಟನೆಯನ್ನು ನಾವು ಕಪ್ಪು ಬ್ಯಾಜ್, ಹೆಲ್ಮೆಟ್ ಮತ್ತು ಬ್ಯಾಂಡಿಟ್ಸ್ ಗಳನ್ನು ತೊಟ್ಟುಕೊಂಡು ಸಾಂಕೇತಿಕವಾಗಿ ಮುಂದುವರಿಸಿದ್ದೇವೆ. ಸಿಎಂ ಮಮತಾ ಬ್ಯಾನರ್ಜಿ ಮತ್ತು ಪಶ್ಚಿಮ ಬಂಗಾಲದ ಆರೋಗ್ಯ ಸಚಿವರಿಗೆ ನಾವು ವೈದ್ಯರ ಬೇಡಿಕೆಗಳನ್ನು 48 ತಾಸೊಳಗೆ ಈಡೇರಿಸಬೇಕೆಂಬ ಗಡುವು ಹಾಕಿದ್ದೇವೆ; ಅದು ಆಗದಿದ್ದಲ್ಲಿ ನಾವು ಜೂನ್ 17ರಿಂದ ಅನಿರ್ದಿಷ್ಟಾವಧಿ ಮುಷ್ಕರವನ್ನು ಆರಂಭಿಸುತ್ತೇವೆ” ಎಂದು ಏಮ್ಸ್ನ ರೆಸಿಡೆಂಟ್ ವೈದ್ಯರ ಸಂಘದ ಅಧ್ಯಕ್ಷ ಅಮರೀಂದರ್ ಸಿಂಗ್ ಮಾಲಿ ಮಾಧ್ಯಮದೊಂದಿಗೆ ಮಾತನಾಡುತ್ತಾ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.