ತುಂಗಭದ್ರಾ ಡ್ಯಾಂ ಹೂಳು ಸಮಸ್ಯೆಗೆ ಸಿಗುವುದೇ ಪರ್ಯಾಯ ಪರಿಹಾರ?
•ಇಂದು ಬೆಂಗಳೂರಿನಲ್ಲಿ ಮೂರು ಜಿಲ್ಲೆಗಳ ಸಂಸದರು-ಶಾಸಕರ ಸಭೆ
Team Udayavani, Jun 15, 2019, 1:13 PM IST
ತುಂಗಭದ್ರ ಜಲಾಶಯ (ಸಂಗ್ರಹ ಚಿತ್ರ)
ಹುಬ್ಬಳ್ಳಿ: ತುಂಗಭದ್ರಾ ಜಲಾಶಯದ ಹೂಳು ಸಮಸ್ಯೆಗೆ ಪರ್ಯಾಯವಾಗಿ ಸಮಾನಾಂತರ ಜಲಾಶಯ ಹಾಗೂ ಪಶ್ಚಿಮ ನದಿಗಳ ಜೋಡಣೆ ವಿಷಯವಾಗಿ, ಜೂ. 15ರಂದು ಬೆಂಗಳೂರಿನಲ್ಲಿ ಸಭೆ ನಡೆಯಲಿದ್ದು, ಆಶಾದಾಯಕ ನಿರ್ಣಯದ ನಿರೀಕ್ಷೆ ಹೆಚ್ಚಿದೆ.
ತುಂಗಭದ್ರಾ ಜಲಾಶಯದಲ್ಲಿ ವರ್ಷದಿಂದ ವರ್ಷಕ್ಕೆ ಹೂಳು ಪ್ರಮಾಣ ಹೆಚ್ಚುತ್ತಿದ್ದು, ನೀರು ಸಂಗ್ರಹ ಪ್ರಮಾಣ ಕಡಿಮೆ ಆಗುತ್ತಿದೆ. ಈ ಹಿಂದೆ ಎರಡು ಬೆಳೆಗಳಿಗೆ ದೊರೆಯುತ್ತಿದ್ದ ನೀರು, ಇದೀಗ ಒಂದು ಬೆಳೆಗೂ ಸಮರ್ಪಕ ರೀತಿಯಲ್ಲಿ ನೀಡದಂತಹ ಸ್ಥಿತಿ ನಿರ್ಮಾಣಗೊಂಡಿದೆ. ಇದಕ್ಕೆ ಪರ್ಯಾಯವಾಗಿ ಸಮಾನಾಂತರ ಜಲಾಶಯ, ಫ್ಲಡ್‌ಫ್ಲೋ ಕೆನಾಲ್ ನಿರ್ಮಾಣ ಯೋಜನೆ ಪ್ರಸ್ತಾಪ ಹಂತದಲ್ಲೇ ಸಾಗುತ್ತಿದೆ.
ಹೂಳು ಸಮಸ್ಯೆ ಹಾಗೂ ನೀರಿನ ಕೊರತೆಗೆ ಪರ್ಯಾಯ ರೂಪವಾಗಿ ನವಲಿ ಬಳಿ ಸಮಾನಾಂತರ ಜಲಾಶಯ, ಪಶ್ಚಿಮದ ನದಿಗಳ ಜೋಡಣೆ ಕುರಿತಾಗಿ ಸಚಿವ ಹಾಗೂ ತುಂಗಭದ್ರಾ ಯೋಜನೆ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ವೆಂಕಟರಾವ್ ನಾಡಗೌಡ ಅವರ ನೇತೃತ್ವದಲ್ಲಿ ತುಂಗಭದ್ರಾ ಜಲಾಶಯ ವ್ಯಾಪ್ತಿಯ ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಯ ಸಂಸದರು, ಶಾಸಕರ ಸಭೆಯನ್ನು ವಿಧಾನಸೌಧದಲ್ಲಿ ಕರೆಯಲಾಗಿದೆ.
ಹೂಳು ಸಮಸ್ಯೆ: 1860ರಲ್ಲಿಯೇ ಪ್ರಸ್ತಾಪಗೊಂಡು ನಂತರ 1953ರಲ್ಲಿ ಪೂರ್ಣಗೊಂಡಿರುವ ತುಂಗಭದ್ರಾ ಜಲಾಶಯ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯದ ಹಲವು ಭಾಗಗಳಿಗೆ ನೀರಾವರಿ, ಕುಡಿಯುವ ನೀರಿಗೆ ಪ್ರಮುಖ ಆಸರೆಯಾಗಿದೆ.
ತುಂಗಭದ್ರಾ ಜಲಾಶಯ ಸುಮಾರು 133 ಟಿಂಎಂಸಿ ಅಡಿಯಷ್ಟು ನೀರು ಸಂಗ್ರಹ ಸಾಮರ್ಥ್ಯ ಹೊಂದಿದ್ದರೂ, ಸುಮಾರು 33-34 ಟಿಎಂಸಿ ಅಡಿಯಷ್ಟು ಹೂಳು ಸಂಗ್ರಹದಿಂದಾಗಿ ನೀರು ಸಂಗ್ರಹ ಸಾಮರ್ಥ್ಯ 100 ಟಿಎಂಸಿ ಅಡಿಗೆ ಸೀಮಿತವಾಗುವಂತಾಗಿದೆ. ಪ್ರತಿವರ್ಷ ಸುಮಾರು 0.5ದಿಂದ 0.6ಟಿಎಂಸಿ ಅಡಿಯಷ್ಟು ಹೂಳು ಸಂಗ್ರಹವಾಗುತ್ತಿದೆ.
ತುಂಗಭದ್ರಾ ಜಲಾಶಯ ಎಡ-ಬಲದಂಡೆ ನಾಲೆ, ವಿಜಯನಗರ ಕಾಲುವೆಗಳ ಮೂಲಕ ಲಕ್ಷಾಂತರ ಹೆಕ್ಟೇರ್ ಭೂಮಿ ನೀರಾವರಿ ಸೌಲಭ್ಯ ಪಡೆದಿದೆ. ಆಂಧ್ರಪ್ರದೇಶದ ಹಲವು ಜಿಲ್ಲೆಗಳು ಇದೇ ಜಲಾಶಯದ ನೀರು ಅವಲಂಬಿಸಿವೆ. ತುಂಗಭದ್ರಾ ಜಲಾಶಯ ನೀರನ್ನು ವಿಶೇಷವಾಗಿ ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳು ಅವಲಂಬಿಸಿವೆ. ಹೇಳಿಕೊಳ್ಳುವುದಕ್ಕೆ, ಕರ ಪಾವತಿಗೆ ನೀರಾವರಿ ಜಮೀನು. ಆದರೆ ಹನಿ ನೀರು ಹೊಲಕ್ಕೆ ಹರಿಯದ ಸ್ಥಿತಿಯನ್ನು ಕೊನೆ ಭಾಗದ ರೈತರು ಹಲವು ವರ್ಷಗಳಿಂದ ಅನುಭವಿಸುತ್ತಿದ್ದು, ಇದೀಗ ಮಧ್ಯ ಭಾಗದ ರೈತರಿಗೂ ನೀರಿನ ಕೊರತೆ ಉಂಟಾಗುವಂತಾಗಿದೆ.
ಬೇಡಿಕೆಗೆ ಸಮರ್ಥ ಕ್ರಮವಿಲ್ಲ: ತುಂಗಭದ್ರಾ ಜಲಾಶಯದಲ್ಲಿ ಹೂಳು ಪ್ರಮಾಣ ಹೆಚ್ಚಳ, ನೀರು ಸಂಗ್ರಹ ಕಡಿಮೆಯಾಗುತ್ತಿರುವುದನ್ನು ಕಂಡು 80ರ ದಶಕದಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಟಿ. ರಾಮರಾವ್ ಅವರು ಸಮಾನಾಂತರ ಜಲಾಶಯ, ಫ್ಲಡ್‌ಫ್ಲೋ ಕೆನಾಲ್ ಪ್ರಸ್ತಾಪವನ್ನು ರಾಜ್ಯದ ಮುಂದಿರಿಸಿದ್ದರು. ರಾಜ್ಯ ಸರಕಾರ ಅತ್ತ ಆಸಕ್ತಿ ತೋರಿರಲಿಲ್ಲ.
ಜಲಾಶಯದಲ್ಲಿ ಸಂಗ್ರಹಗೊಂಡ ಸುಮಾರು 33-34 ಟಿಎಂಸಿ ಅಡಿ ಹೂಳು ತೆಗೆಯಲು ಕನಿಷ್ಟ 15-20 ಸಾವಿರ ಕೋಟಿ ಬೇಕಾಗಿದ್ದು, ತೆಗೆದು ಹೂಳು ಸಂಗ್ರಹಕ್ಕೆ 66 ಸಾವಿರ ಎಕರೆ ಭೂಮಿ ಬೇಕಾಗಿದೆ. ಅದೂ ಅಂದಾಜು 15 ಅಡಿ ಎತ್ತರಷ್ಟು ಹೂಳು ಸಂಗ್ರಹಗೊಳ್ಳಲಿದೆಯಂತೆ.
ಅನುಷ್ಠಾನಗೊಳ್ಳಬೇಕಿದೆ ಸಮಾನಾಂತರ ಜಲಾಶಯ: ತುಂಗಭದ್ರಾ ಜಲಾಶಯದಲ್ಲಿನ ಹೂಳು ತಡೆಗೆ ಕೊಪ್ಪಳ ಬಳಿ ಹಿರೇಹಳ್ಳ ಜಲಾಶಯ ನಿರ್ಮಾಣ ಮಾಡಲಾಗಿದೆಯಾದರೂ, ಸಮಸ್ಯೆ ಪರಿಣಾಮಕಾರಿ ತಡೆ ಸಾಧ್ಯವಾಗಿಲ್ಲ. ಇದಕ್ಕಾಗಿಯೇ ರಾಜ್ಯ ಸರಕಾರ ಕೊಪ್ಪಳ ಜಿಲ್ಲೆ ನವಲಿ ಬಳಿ 18 ಸಾವಿರ ಎಕರೆ ಪ್ರದೇಶದಲ್ಲಿ ಸಮಾನಾಂತರ ಜಲಾಶಯ ನಿರ್ಮಾಣ ಯೋಜನೆಗೆ ಮುಂದಾಗಿತ್ತು. ಇಲ್ಲಿ ಅಂದಾಜು 5,600 ಕೋಟಿ ವೆಚ್ಚದಲ್ಲಿ ಸುಮಾರು 35 ಟಿಎಂಸಿ ಅಡಿ ನೀರು ಸಂಗ್ರಹಿಸಬಹುದಾಗಿದೆ. ಯೋಜನೆಯ ಡಿಪಿಆರ್ ಆಗಿದ್ದು, ಸರಕಾರ ಅದಕ್ಕೆ ಅನುಮೋದನೆ ನೀಡಿದ್ದರೂ ಅನುಷ್ಠಾನ ಆರಂಭ ವಿಶ್ವಾಸ ಮೂಡಿಸುವ ಸ್ಥಿತಿಗೆ ಇನ್ನೂ ಬಂದಿಲ್ಲ.
ಇದೀಗ ಜಲಾಶಯಕ್ಕೆ ನೀರಿನ ಕೊರತೆ ಹಿನ್ನೆಲೆಯಲ್ಲಿ ಸಮಾನಾಂತರ ಜಲಾಶಯದ ಜತೆಗೆ ಪಶ್ಚಿಮ ನದಿಗಳ ಜೋಡಣೆ ವಿಚಾರವೂ ಚರ್ಚೆಗೆ ಬಂದಿದೆ. ಇದೇ ವಿಷಯವಾಗಿ ಶನಿವಾರ ಸಚಿವರ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಮೂರು ಜಿಲ್ಲೆಗಳ ಸಂಸದರು, ಶಾಸಕರು ಮಹತ್ವದ ಚರ್ಚೆ ನಡೆಸಲಿದ್ದಾರೆ. ಆದರೆ ನದಿಗಳ ಜೋಡಣೆ ಸುಲಭ ಸಾಧ್ಯವಿಲ್ಲ. ಇದಕ್ಕೆ ಅನೇಕ ತಕರಾರು, ತಾಂತ್ರಿಕ ಅಡ್ಡಿಗಳು ಎದುರಾಗುತ್ತವೆ. ನದಿಗಳ ಜೋಡಣೆ ಚರ್ಚೆಯ ಜತೆಗೆ ಸಮಾನಾಂತರ ಜಲಾಶಯ ನಿರ್ಮಾಣ ಕಾರ್ಯ ತ್ವರಿತ ಕಾರ್ಯಾರಂಭ ನಿಟ್ಟಿನಲ್ಲಿ ಏನೆಲ್ಲಾ ಸಾಧ್ಯವೋ ಆ ಎಲ್ಲ ಕ್ರಮಗಳ ಬಗ್ಗೆ ಸ್ಪಷ್ಟ ನಿಲುವು ಕೈಗೊಳ್ಳುವ ಅನಿವಾರ್ಯತೆ ಇದೆ. ಉತ್ತಮ ಮಳೆ ಬಿದ್ದರೆ ಜಲಾಶಯದಲ್ಲಿ ಹೂಳಿನ ಪರಿಣಾಮ ಸಂಗ್ರಹವಾಗದೇ ಸಮುದ್ರ ಸೇರುವ ನೀರನ್ನಾದರೂ ಸಮನಾಂತರ ಜಲಾಶಯದಲ್ಲಿ ಸಂಗ್ರಹಿಸಿಕೊಳ್ಳಬಹುದಾಗಿದೆ.
•ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Kundapura: ಹತ್ತೂರು ಸೇರುವ ಮುಳ್ಳಿಕಟ್ಟೆಗೆ ಬೇಕು ಬಸ್ ನಿಲ್ದಾಣ
IPL 2024: ನನಗೆ ಪ್ರೀತಿ ಗೌರವ ಕೊಡಿ ಸಾಕು..: ಡೆಲ್ಲಿ ಮಾಲಿಕರ ಮುಂದೆ ರಾಹುಲ್ ಬೇಡಿಕೆ
Tollywood: ಒಂದೇ ದಿನ ವಿವಾಹವಾಗಲಿದ್ದಾರಾ ಅಕ್ಕಿನೇನಿ ಸಹೋದರರು? ನಾಗಾರ್ಜುನ್ ಹೇಳಿದ್ದೇನು?
Video: ಜೈಲಿನಿಂದ ಬಿಡುಗಡೆಯಾದ ಖುಷಿ… ಜೈಲು ಅಧಿಕಾರಿಗಳ ಎದುರೇ ಯುವಕನ ಬ್ರೇಕ್ ಡ್ಯಾನ್ಸ್
Mangaluru: 7 ಕೆರೆ, ಪಾರ್ಕ್ ಅಭಿವೃದ್ಧಿಗೆ ಅಮೃತ 2.0
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.