ಸಮರ್ಪಕ ನೀರು ಪೂರೈಕೆಗೆ ಕ್ರಮ
Team Udayavani, Jun 15, 2019, 3:42 PM IST
ಮಾಗಡಿ ಪಟ್ಟಣದಲ್ಲಿ ಹಳೇ ಪಂಪ್ ಹೌಸ್‌ನಲ್ಲಿನ ಬಾವಿಗೆ ಪಂಪ್ ಅಳವಡಿಸಿ, ಕುಡಿಯವ ನೀರಿನ ಪೂರೈಕೆಗೆ ಶಾಸಕ ಎ.ಮಂಜುನಾಥ ಚಾಲನೆ ನೀಡಿದರು.
ಮಾಗಡಿ: ಪಟ್ಟಣದ 16, 17 ಮತ್ತು 18ನೇ ವಾರ್ಡ್‌ನ ನಾಗರಿಕರ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಪುರಸಭೆಯ ಹಳೇ ಪಂಪ್ ಹೌಸ್‌ನಲ್ಲಿರುವ ಬಾವಿಗೆ ಮೋಟರ್ ಅಳವಡಿಸಿ ಸಮರ್ಪಕವಾಗಿ ಕುಡಿವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕ ಎ.ಮಂಜುನಾಥ ತಿಳಿಸಿದರು.
ಪಟ್ಟಣಕ್ಕೆ ಮಂಚನಬೆಲೆ ಜಲಾಶಯದಿಂದ ನೀರು ಪೂರೈಕೆಯಾಗುತ್ತಿದ್ದರೂ ಬಹುತೇಕ ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಇದಕ್ಕೆ ಪರ್ಯಾಯವಾಗಿ ಹಳೇ ಪಂಪ್ ಹೌಸ್‌ನಲ್ಲಿನ ಗುಂಡಯ್ಯನ ಬಾವಿಗೆ ಮೋಟರ್ ಪಂಪ್ ಅಳವಡಿಸಿ, ನೀರಿನ ಸಮಸ್ಯೆ ನಿವಾರಣೆ ಮಾಡಲಾಗಿದೆ. ಮಂಚನಬೆಲೆ ಜಲಾಶಯದ ನೀರನ್ನು ಶುದ್ಧೀಕರಣ ಕೇಂದ್ರವನ್ನು ದುರಸ್ಥಿಪಡಿಸಿ, ಪಟ್ಟಣಕ್ಕೆ ನೀರು ಪೂರೈಕೆ ಮಾಡಲಾಗುವುದು. ಹೆಚ್ಚುವರಿಯಾಗಿ ಶುದ್ಧೀಕರಣ ಘಟಕವನ್ನು ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ಪಟ್ಟಣದ ಬಿಕೆ ಮುಖ್ಯ ರಸ್ತೆ ತುಂಬ ಗುಂಡಿಗಳು ಬಿದ್ದಿರುವುದರಿಂದ ಗುಂಡಿಗಳನ್ನು ಮುಚ್ಚುವ ಕೆಲಸ ನಡೆಯುತ್ತಿದೆ. ಪುರಸಭೆ ವ್ಯಾಪ್ತಿಯಲ್ಲಿ ಗಿಡಗಳನ್ನು ನೆಟ್ಟು ಸುಂದರವಾದ ಪರಿಸರ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಪಟ್ಟಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಕೃಷ್ಣಮೂರ್ತಿ, ಪುರಸಭಾ ಮಾಜಿ ಸದಸ್ಯರಾದ ಎಂ.ಎನ್.ಮಂಜುನಾಥ್, ಕೆ.ವಿ.ಬಾಲು, ಮಹೇಶ್, ನಯಾಜ್, ಶಿವಕುಮಾರ್, ತಾಲೂಕು ಜೆಡಿಎಸ್ ಅಧ್ಯಕ್ಷ ಪೊಲೀಸ್ ರಾಮಣ್ಣ, ಬೋರ್‌ವೆಲ್ ನರಸಿಂಹಯ್ಯ, ಕುಮಾರ್, ನವೀನ್, ವೆಂಕಟೇಶ್ ಹಾಜರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.