ನವಜಾತ ಶಿಶುಗಳ ಶ್ರವಣ ಪರೀಕ್ಷೆ
Team Udayavani, Jun 16, 2019, 5:26 AM IST
ಶ್ರವಣ ಶಕ್ತಿ, ಅಂದರೆ ಕಿವಿ ಕೇಳಿಸುವಿಕೆ ಇದು ಮೂಲ ಸಂವೇದನೆಗಳಲ್ಲೂ ಬಹಳ ವಿಶೇಷವಾದುದು ಮತ್ತು ಹೆಚ್ಚು ಅನಾದಿಯಾದುದು. ಕಿವಿ ಕೇಳಿಸುವ ಪ್ರಕ್ರಿಯೆಯನ್ನು, ತನ್ನ ಸುತ್ತಮುತ್ತಲಿನ ಹೆಚ್ಚಿನ ಶಬ್ದಗಳನ್ನು ಗ್ರಹಿಸುವ ಮನುಷ್ಯನ ಸಾಮರ್ಥ್ಯ ಎಂಬುದಾಗಿ ವಿವರಿಸಬಹುದು. ಸಾಕಷ್ಟು ಮಾತು ಮತ್ತು ಭಾಷಾ ಕೌಶಲಗಳನ್ನು ಗಳಿಸಬೇಕಾದರೆ ಶ್ರವಣ ಶಕ್ತಿಯು ಸಹಜವಾಗಿರಬೇಕಾದುದು ಅತ್ಯಂತ ಆವಶ್ಯಕ. ಒಬ್ಬ ವ್ಯಕ್ತಿಯಲ್ಲಿ ಶಬ್ದಗಳನ್ನು ಕೇಳಿಸಿಕೊಳ್ಳಲು ಯಾವುದೇ ಮಟ್ಟದಲ್ಲಿ ಇರುವ ಅಸಾಮರ್ಥ್ಯಕ್ಕೆ ಶ್ರವಣ ನಷ್ಟ ಅಥವಾ ಕಿವುಡುತನ ಎಂದು ಹೇಳುತ್ತಾರೆ. ವ್ಯಕ್ತಿಯ ಸಂವಹನ ಮತ್ತು ಸಾಮಾಜಿಕ ಜೀವನದ ಮೇಲೆ ಕಿವುಡುತನವು ವ್ಯತಿರಿಕ್ತ ಪರಿಣಾಮಗಳನ್ನು ಉಂಟು ಮಾಡಬಹುದು.
ನವಜಾತ ಶಿಶುಗಳ ಶ್ರವಣ ಪರೀಕ್ಷೆ ಅನ್ನುವುದು ನಿಮ್ಮ ಮಗುವಿಗೆ ಸರಿಯಾಗಿ ಕಿ ವಿ ಕೇಳಿಸುತ್ತಿದೆಯೇ ಇಲ್ಲವೇ ಅನ್ನುವುದನ್ನು ದೃಢಪಡಿಸುವ ಒಂದು ತಪಾಸಣಾ ವಿಧಾನ. ಯೂನಿವರ್ಸಲ್ ನಿಯೋನೇಟಲ್ ಹಿಯರಿಂಗ್ ಸ್ಕ್ರೀನಿಂಗ್ (UNHs) ಎಂಬುದು ಮಕ್ಕಳಲ್ಲಿನ ಜನ್ಮಜಾತ ಕಿವುಡುತನವನ್ನು ಆರಂಭದಲ್ಲೇ ಪತ್ತೆ ಮಾಡುವ ಒಂದು ಕಾರ್ಯ ವಿಧಾನ. ಮಗುವಿನ ಕಿವಿಯ ಒಂದು ನಿರ್ದಿಷ್ಟ ಕ್ಷೇತ್ರದ ಶ್ರವಣಶಕ್ತಿಯನ್ನು ಪರೀಕ್ಷಿಸಲು ಬಳಸುವ ಅಬೆjಕ್ಟಿವ್ ವಿಧಾನಗಳನ್ನು (ಸಾಮಾನ್ಯವಾಗಿ ಓಟೋ ಅಕೌಸ್ಟಿಕ್ ಎಮಿಷನ್, OAE ಅಥವಾ ಆಡಿಟರಿ ಬ್ರೆ„ನ್ಸೆಮ್ ರೆಸ್ಪಾನ್ಸಸ್, ABR) ಅದು ವಿವರಿಸುತ್ತದೆ. ನುರಿತ ಶ್ರವಣ ತಜ್ಞರು ಈ ಪರೀಕ್ಷೆಯನ್ನು ನಡೆಸುತ್ತಾರೆ.
ಈ ಸ್ಕ್ರೀನಿಂಗ್ ಪರೀಕ್ಷೆಯಲ್ಲಿ ಮಕ್ಕಳನ್ನು ಎರಡು ವರ್ಗಗಳಾಗಿ ವಿಂಗಡಿಸಲಾಗುತ್ತದೆ. ಅಂದರೆ ಅಧಿಕ ಸೂಚ್ಯಂಕದ ಸಂದೇಹಾಸ್ಪದ ಗುಂಪಿನ ಮಕ್ಕಳು ಮತ್ತು ಕಡಿಮೆ ಸೂಚ್ಯಂಕದ ಸಂದೇಹಾಸ್ಪದ ಗುಂಪಿನ ಮಕ್ಕಳು. ಅಧಿಕ ಸೂಚ್ಯಂಕದ ಸಂದೇಹಾಸ್ಪದ ಗುಂಪಿನ ಮಕ್ಕಳನ್ನು ತಪಾಸಣ ಪರೀಕ್ಷೆಗಳಿಗೆ ಶಿಫಾರಸು ಮಾಡಲಾಗುತ್ತದೆ.
ಒಂದು ವೇಳೆ ಮಗುವು ಶ್ರವಣ ಪರೀಕ್ಷೆಯಲ್ಲಿ ಪಾಸ್ ಆಗದಿದ್ದರೆ, ಆ ಮಗುವನ್ನು ಅನುಸರಣಾ ಪರೀಕ್ಷೆಗಳಿಗೆ ಶಿಫಾರಸು ಮಾಡುತ್ತಾರೆ. ಆದರೆ ನಾವು ತಿಳಿದಿರಬೇಕಾದ ಸಂಗತಿ ಅಂದರೆ, ಒಟ್ಟು ಮಕ್ಕಳಲ್ಲಿ ಶ್ರವಣ ನಷ್ಟ ಇರುವುದು ಕೇವಲ ಶೇ. 1ರಷ್ಟು ಮಕ್ಕಳಿಗೆ ಆದರೂ ಸುಮಾರು ಶೇ. 10ರಷ್ಟು ಮಕ್ಕಳೂ ಸ್ಕ್ರೀನಿಂಗ್ ಪರೀಕ್ಷೆಯಲ್ಲಿ ಪಾಸ್ ಆಗುವುದಿಲ್ಲ. ನವಜಾತ ಶಿಶುಗಳ ಶ್ರವಣ ಪರೀಕ್ಷೆಯಲ್ಲಿ ಪಾಸ್ ಆಗದೆ ಇರಲು ಇರುವ ಪ್ರಮುಖ ಕಾರಣ ಅಂದರೆ, ಕಿವಿಯ ನಾಳಗಳಲ್ಲಿ ಕೊಳೆ ತುಂಬಿರುವುದು, ಮಧ್ಯ ಕಿವಿಯಲ್ಲಿ ದ್ರವ ತುಂಬಿರುವುದು ಅಥವಾ ಪರೀಕ್ಷೆಯ ಸಮಯದಲ್ಲಿ ಮಗುವು ಅತ್ತಿತ್ತ ಅಲುಗಾಡುವುದು/ಮಗುವು ಅಳುತ್ತಾ ಇರುವುದು.
ಆದರೆ ಹೆಚ್ಚಿನ ಮಕ್ಕಳು ಮುಂದಿನ ಹಂತದ ಅನುಸರಣಾ ಪರೀಕ್ಷೆಯಲ್ಲಿ ಪಾಸ್ ಆಗುತ್ತಾರೆ. ಆದರೆ ಈ ಪರೀಕ್ಷೆಗೆ ಮಗುವನ್ನು ಒಳಪಡಿಸುವುದು ಬಹಳ ಆವಶ್ಯಕ ಯಾಕೆಂದರೆ, ಮಗುವಿನ ಕೇಳುವಿಕೆಯ ಮಟ್ಟ ಹೇಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಇರುವುದು ಇದೊಂದೇ ವಿಧಾನ.
ಕೆಲವು ಮಕ್ಕಳಲ್ಲಿ ಹುಟ್ಟುವಾಗ ಕಿವಿ ಕೇಳುವಿಕೆಯು ಸಹಜವಾಗಿದ್ದು, ಆ ಬಳಿಕ ಅಂದರೆ ನವಜಾತ ಶಿಶು ವಿನ ಹಂತದ ಅನಂತರ ಕಿವಿ ಕೇಳಿಸದಿರುವ ತೊಂದರೆ ಕಾಣಿಸಿಕೊಳ್ಳ ಬಹುದು. ವಿವಿಧ ಅಸ್ವಸ್ಥತೆಗಳು ಅಥವಾ ಆನುವಂಶಿಕ ಕಾರಣಗಳಿಂದಾಗಿ ಈ ಪರಿಸ್ಥಿತಿ ಬರಬಹುದು. ಮಾತ್ರವಲ್ಲದೆ, ಏಟುಗಳು ಅಥವಾ ಕಾಯಿಲೆಗಳಿಗಾಗಿ ಬಳಸುವ ಕೆಲವು ಔಷಧಿಗಳಿಂದಾಗಿ ನವಜಾತ ಶಿಶುವಿನ ಹಂತದ ಅನಂತರ ಶ್ರವಣ ನಷ್ಟ ಕಾಣಿಸಿಕೊಳ್ಳಬಹುದು. ಈ ಕಾರಣಕ್ಕಾಗಿ ಮಗು ವಿನ ಕೇಳುವಿಕೆಯ ಮಟ್ಟ ಹೇಗಿದೆ ಎಂಬುದನ್ನು ಗಮನಿಸಲು ಮತ್ತು ಮಗು ವಿನ ಕೇಳುವ ನಡವಳಿಕೆಯನ್ನು (ಆಡಿಟರಿ ಬಿಹೇ ವಿಯರ್ಸ್) ಅಂದರೆ ವಿವಿಧ ಶಬ್ದಗಳಿಗೆ ಮಗುವು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ವಿವರವಾಗಿ ವಿಶ್ಲೇ ಷಿಸಲು ನಿಯ ಮಿತ ಆಡಿಯೋಲಾಜಿಕಲ್ ಪರೀಕ್ಷೆಗೆ (ಶ್ರವಣ ಪರೀಕ್ಷೆ) ಶಿಫಾರಸು ಮಾಡಲಾಗುತ್ತದೆ.
ಹಿಯರಿಂಗ್ ಸ್ಕ್ರೀನಿಂಗ್ ಅಥವಾ ಶ್ರವಣ ಪರೀಕ್ಷೆ ಎನ್ನುವುದು ಸರಳ, ಸುರಕ್ಷಿತ ಮತ್ತು ನೋವು ರಹಿತ ಪರೀಕ್ಷೆ ಆಗಿದ್ದು, ಎಲ್ಲಾ ನವಜಾತ ಶಿಶುಗಳಿಗೂ ಈ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಲೇಬೇಕು ಯಾಕೆಂದರೆ ಈ ಪರೀಕ್ಷೆಯು ಮಗುವಿನ ಶ್ರವಣ ನಷ್ಟವನ್ನು ಆರಂಭದಲ್ಲೇ ಪತ್ತೆ ಮಾಡುವ ಮೂಲಕ ಮಗುವಿನ ಭವಿಷ್ಯವನ್ನು ಬದಲಾಯಿಸುತ್ತದೆ.
ಯೂನಿವರ್ಸಲ್ ನಿಯೋನೇಟಲ್ ಹಿಯರಿಂಗ್ ಸ್ಕ್ರೀನಿಂಗ್‌ನ ಉದ್ದೇಶಗಳನ್ನು ಸಂಕ್ಷಿಪ್ತವಾಗಿ, 1-3-6 ಉದ್ದೇಶಗಳಾಗಿ ವಿವರಿಸಲಾಗಿದೆ
1 ತಿಂಗಳ ವಯಸ್ಸಿನಲ್ಲಿ ಸ್ಕ್ರೀನ್ ಮಾಡಬೇಕಾ
ಗಿರುವ ಮಕ್ಕಳು.
3 ತಿಂಗಳ ವಯಸ್ಸಿನಲ್ಲಿ ಪೂರ್ಣ ಮಾಡಬೇಕಾಗಿರುವ ಆಡೊಯಾಲಾಜಿಕಲ್ ವಿಶ್ಲೇಷಣೆಗಳು.
6 ತಿಂಗಳ ಪ್ರಾಯದಲ್ಲಿ ಆರಂಭಿಸುವ ಸೂಕ್ತ ವೈದ್ಯಕೀಯ ಮತ್ತು ಆಡಿಯೋಲಾಜಿಕಲ್ ಸೇವೆಗಳು, ಆರಂಭಿಕ ಪರಿಹಾರೋಪಾಯಗಳ ಬಗ್ಗೆ ಅರಿವು ನೀಡುವ ಸೇವೆಗಳು.
-ಡಾ| ಅರ್ಚನಾ ಜಿ.,
ಶ್ರವಣ ತಜ್ಞರು, ಸ್ಪೀಚ್ ಎಂಡ್ ಹಿಯರಿಂಗ್ ವಿಭಾಗ, ಡಾ| ಟಿ ಎಂ ಎ ಪೈ ಆಸ್ಪತ್ರೆ ಉಡುಪಿ ಮತ್ತು SOAHS, ಮಣಿಪಾಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Lupus Nephritis: ಲೂಪಸ್ ನೆಫ್ರೈಟಿಸ್ ರೋಗಿಗಳಿಗೆ ಒಂದು ಮಾರ್ಗದರ್ಶಿ
Naturopathy: ಉತ್ತಮ ಆರೋಗ್ಯಕ್ಕಾಗಿ ಪ್ರಕೃತಿ ಚಿಕಿತ್ಸೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Nikhil Kumarswamy: ಸೋತ ನಿಖಿಲ್‌ಗೆ ಜಿಲೆಯ ಪಕ್ಷ ಸಂಘಟನೆ ಹೊಣೆ
ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ
Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ
Mandya: ಬಹುಮಾನ ಗೆದ್ದ ಹಳ್ಳಿಕಾರ್ ತಳಿಯ ಎತ್ತು ದಾಖಲೆಯ 13 ಲಕ್ಷ ರೂ.ಗೆ ಮಾರಾಟ!
Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.