ಉಪ್ಪಿ ಮೊಗದಲ್ಲಿ ನಗು ತಂದ “ಐ ಲವ್‌ ಯು’

ಸಕ್ಸಸ್‌ಮೀಟ್‌ ನಡೆಸಿ ಖುಷಿಯನ್ನು ಹಂಚಿಕೊಂಡ ಚಿತ್ರತಂಡ

Team Udayavani, Jun 16, 2019, 3:01 AM IST

ilu

ಉಪೇಂದ್ರ ಮತ್ತೆ ಬಾ ಚಿತ್ರದ ನಂತರ ಉಪ್ಪಿ ಸಿನಿಮಾಕ್ಕಿಂತ ಪ್ರಜಾಕೀಯದಲ್ಲೇ ಹೆಚ್ಚು ಸುದ್ದಿಯಾದ ಕಾರಣ ಅವರ ಯಾವುದೇ ಚಿತ್ರಗಳು ತೆರೆಗೆ ಬಂದಿರಲಿಲ್ಲ. ಹೀಗಾಗಿ ಉಪ್ಪಿ ಅವರನ್ನ ಮತ್ತೆ ತೆರೆಮೇಲೆ ನೋಡೋದು ಯಾವಾಗ ಎಂದು ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಈ ಬಾರಿ ಉಪ್ಪಿ ಸ್ಪೆಷಲ್‌ ಸರ್‌ಪ್ರೈಸ್‌ ನೀಡಿದ್ದಾರೆ.

ಹೌದು, ಸುಮಾರು ಎರಡು ವರ್ಷಗಳಿಂದ ತೆರೆಮೇಲೆ ಮಿಸ್‌ ಮಾಡಿಕೊಂಡಿದ್ದ ಅಭಿಮಾನಿಗಳಿಗೆ ಉಪ್ಪಿ ಐ ಲವ್‌ ಯು ಎನ್ನುತ್ತ ಮತ್ತೆ ಗ್ರ್ಯಾಂಡ್‌ ಎಂಟ್ರಿ ನೀಡಿದ್ದಾರೆ. ಉಪೇಂದ್ರ ಅಭಿನಯದ ಬಹುನಿರೀಕ್ಷಿತ ಚಿತ್ರ ಐ ಲವ್‌ ಯು ಇದೇ ಜೂ.14 ರಂದು ಅದ್ಧೂರಿಯಾಗಿ ತೆರೆಗೆ ಬಂದಿದೆ. ಬಹು ಕಾಲದ ನಂತರ ಥಿಯೇಟರ್‌ಗೆ ಬಂದಿರುವ ಉಪ್ಪಿಯನ್ನು ಫ್ಯಾನ್ಸ್‌ ಕೂಡ ಅತ್ಯಂತ ಅಭಿಮಾನದಿಂದ ಸ್ವಾಗತಿಸುತ್ತಿದ್ದಾರೆ.

ಇದೇ ಖುಷಿಯನ್ನು ಹಂಚಿಕೊಳ್ಳಲು ಐ ಲವ್‌ ಯು ಚಿತ್ರತಂಡ, ತೆರೆಕಂಡ ಮರುದಿನವೇ ಮಾಧ್ಯಮಗಳ ಮುಂದೆ ಬಂದು ಸಕ್ಸಸ್‌ಮೀಟ್‌ ಕೂಡ ನಡೆಸಿತು. ಸಕ್ಸಸ್‌ಮೀಟ್‌ನಲ್ಲಿ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಕಂ ನಿರ್ಮಾಪಕ ಆರ್‌. ಚಂದ್ರು, ಐ ಲವ್‌ ಯು ಚಿತ್ರವನ್ನು ವಿತರಕರು ಉತ್ತಮ ಮೊತ್ತಕ್ಕೆ ಕೊಂಡುಕೊಂಡಿದ್ದಾರೆ.

ಬಿಡುಗಡೆಗೂ ಮೊದಲೇ ಹೂಡಿದ ಹಣ ವಾಪಾಸ್‌ ಬಂದಿದೆ. ಬಿಡುಗಡೆಯಾದ ಎಲ್ಲಾ ಕೇಂದ್ರಗಳಲ್ಲಿ ಚಿತ್ರ ಹೌಸ್‌ಫ‌ುಲ್‌ ಕಲೆಕ್ಷನ್ಸ್‌ ಪಡೆದುಕೊಳ್ಳುತ್ತಿದೆ. ಚಿತ್ರವನ್ನು ನೋಡಿ ಎಲ್ಲರೂ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಚಿತ್ರವನ್ನು ಕೊಂಡುಕೊಂಡಿರುವುದಕ್ಕೆ ವಿತರಕರು ಕೂಡ ಖುಷಿಯಾಗಿದ್ದಾರೆ.

ಸದ್ಯ ಉಪೇಂದ್ರ ಬೇರೆ ಚಿತ್ರಗಳಲ್ಲಿ ಬ್ಯುಸಿಯಾಗುತ್ತಿರುವುದರಿಂದ, ಅವರ ಸಮಯ ನೋಡಿಕೊಂಡು ಬಿಡುಗಡೆಯಾದ ಮರುದಿನವೇ ಸಕ್ಸಸ್‌ಮೀಟ್‌ ಆಯೋಜಿಸಲಾಯಿತು. ಚಿತ್ರದ ಇಂಥದ್ದೊಂದು ಯಶಸ್ಸಿಗೆ ಕಾರಣವಾದವರಿಗೆ ಧನ್ಯವಾದಗಳು ಎಂದರು.

ಚಿತ್ರದ ಬಿಡುಗಡೆಯ ನಂತರದ ಬೆಳವಣಿಗೆಗಳ ಬಗ್ಗೆ ಮಾತನಾಡಿದ ನಟ ಉಪೇಂದ್ರ, ನಾನು ಕೂಡ ಡಬ್ಬಿಂಗ್‌ ಆದ ಮೇಲೆ ಐ ಲವ್‌ ಯು ಸಿನಿಮಾ ನೋಡಿರಲಿಲ್ಲ. ರಿಲೀಸ್‌ ಆದ ಮೇಲೆ ಎಲ್ಲರ ಜೊತೆ ನೋಡಿದೆ. ಆಡಿಯನ್ಸ್‌ ಕಡೆಯಿಂದ ಬರುತ್ತಿರುವ ರೆಸ್ಪಾನ್ಸ್‌ ನೋಡಿ ಖುಷಿಯಾಯ್ತು. ಯಾವ ಸಿನಿಮಾ ಗೆಲ್ಲುತ್ತೆ, ಯಾವುದು ಗೆಲ್ಲೋದಿಲ್ಲ ಅಂತ ಯಾರಿಗೂ ಹೇಳ್ಳೋಕೆ ಆಗೋದಿಲ್ಲ.

ಅಣ್ಣಾವ್ರು ಹೇಳುತ್ತಿದ್ದಂತೆ ಸಕ್ಸಸ್‌ ಅನ್ನೋದು ಚಿದಂಬರ ರಹಸ್ಯ. ಆದ್ರೆ ಒಂದು ಒಳ್ಳೆಯ ಸಿನಿಮಾ ಆಗೋದಕ್ಕೆ, ಸಕ್ಸಸ್‌ ಆಗೋದಕ್ಕೆ ಎಲ್ಲರ ಪರಿಶ್ರಮ ಅಂತೂ ಇದ್ದೇ ಇರುತ್ತದೆ. ಐ ಲವ್‌ ಯು ಸಿನಿಮಾದ ಸಬ್ಜೆಕ್ಟ್ ಮೇಲೆ ನಂಬಿಕೆ ಇತ್ತು. ಹಾಗಾಗಿ ಎಲ್ಲರೂ ಅದರ ಮೇಲೆ ನಂಬಿಕೆ ಇಟ್ಟು ಕೆಲಸ ಮಾಡಿದ್ದಾರೆ. ಈಗ ಎಲ್ಲರ ಪರಿಶ್ರಮಕ್ಕೆ ಫ‌ಲ ಸಿಗುತ್ತಿದೆ ಎಂದರು.

ಸಕ್ಸಸ್‌ಮೀಟ್‌ನಲ್ಲಿ ಐ ಲವ್‌ ಯು ಚಿತ್ರದ ಹಂಚಿಕೆದಾರರಾದ ಮೋಹನ್‌, ಮೋಹನ್‌ ದಾಸ್‌ ಪೈ, ಛಾಯಾಗ್ರಹಕ ಸುಜ್ಞಾನ್‌, ಸಂಗೀತ ನಿರ್ದೇಶಕ ಕಿರಣ್‌, ನಿರ್ಮಾಪಕ ಕೆ.ಪಿ ಶ್ರೀಕಾಂತ್‌ ಮೊದಲಾದವರು ಹಾಜರಿದ್ದು, ಚಿತ್ರದ ಬಗ್ಗೆ ತಮ್ಮ ಅನಿಸಿಕೆ, ಅನುಭವಗಳನ್ನು ಹಂಚಿಕೊಂಡರು. ಇದೇ ವೇಳೆ ಚಿತ್ರತಂಡ ಕೇಕ್‌ ಕತ್ತರಿಸಿ ಐ ಲವ್‌ ಯು ಚಿತ್ರದ ಸಕ್ಸಸ್‌ ಖುಷಿಯನ್ನು ಹಂಚಿಕೊಂಡಿತು.

ಟಾಪ್ ನ್ಯೂಸ್

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

1-chali

Dakshina Kannada and Udupi: ಮುಂಜಾನೆ ಚುಮುಚುಮು ಚಳಿ

1-deee

Udupi; ಪೊಲೀಸ್‌ ಇಲಾಖೆ ವಿರುದ್ಧ ಹಿಂದೂ ಸಂಘಟನೆಗಳ ಪ್ರತಿಭಟನೆ

Shiralakoppa: ಹೋರಿ ತಿವಿದು ಬೈಕ್‌ ಸವಾರ ಸಾವು

Shiralakoppa: ಹೋರಿ ತಿವಿದು ಬೈಕ್‌ ಸವಾರ ಸಾವು

Kamsale-kumaraswami

Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kiran raj’s Megha movie

‌Megha Movie: ನಾನು ಎಂಟು ಸಾರಿ ಕೇಳಿದ ಕಥೆಯಿದು…: ಕಿರಣ್‌ ರಾಜ್

Sudeep: ‘Max’ release date fixed: Production company wakes up to Kichchan’s anger

Sudeep: ʼಮ್ಯಾಕ್ಸ್‌ʼ ರಿಲೀಸ್‌ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

Vijay Raghavendra is in Rudrabhishekam Movie

Kannada Cinema: ‘ರುದ್ರಾಭಿಷೇಕಂ’ನಲ್ಲಿ ವಿಜಯ್‌ ರಾಘವೇಂದ್ರ

Shivaraj-Kumar

Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

UTK

Speaker ಯು.ಟಿ.ಖಾದರ್‌ ವ್ಯಾಟಿಕನ್‌ ಸಿಟಿಗೆ

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

1-chali

Dakshina Kannada and Udupi: ಮುಂಜಾನೆ ಚುಮುಚುಮು ಚಳಿ

1-deee

Udupi; ಪೊಲೀಸ್‌ ಇಲಾಖೆ ವಿರುದ್ಧ ಹಿಂದೂ ಸಂಘಟನೆಗಳ ಪ್ರತಿಭಟನೆ

Shikaripur: ಊಟ ಮಾಡುತ್ತಿದ್ದ ತಂದೆಯ ಕೊಂದ ಮಗ

Shikaripur: ಊಟ ಮಾಡುತ್ತಿದ್ದ ತಂದೆಯ ಕೊಂದ ಮಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.