ತೊಕ್ಕೊಟ್ಟು ಜಂಕ್ಷನ್‌ಗೆ ಬೇಕಿದೆ ಕಾಯಕಲ್ಪ
ಅವ್ಯವಸ್ಥೆ ಪರಿಹರಿಸಿದರೆ ಸಮಸ್ಯೆ ಪರಿಹಾರ
Team Udayavani, Jun 16, 2019, 5:31 AM IST
ಉಳ್ಳಾಲ: ರಾಷ್ಟ್ರೀಯ ಹೆದ್ದಾರಿ 66ರ ತೊಕ್ಕೊಟ್ಟು ಮೇಲ್ಸೇತುವೆ ಉದ್ಘಾಟನೆಯಿಂದ ತೊಕ್ಕೊಟ್ಟು ಜಂಕ್ಷನ್‌ನಲ್ಲಿ ವಾಹನಗಳ ದಟ್ಟಣೆ ಕಡಿಮೆಯಾಗಿದೆ. ಆದರೆ ಜಂಕ್ಷನ್‌ನ ಸಮಸ್ಯೆಗಳಿಗೆ ಪರಿಹಾರ ಮಾತ್ರ ಸಿಕ್ಕಿಲ್ಲ.
ತೊಕ್ಕೊಟ್ಟು ಮೇಲ್ಸೇತುವೆಯ ಅಂಡರ್‌ಪಾಸ್‌ನಲ್ಲಿ ಏಕಮುಖ ಸಂಚಾರವಿತ್ತು. ಈಗ ದ್ವಿಮುಖ ಸಂಚಾರಕ್ಕೆ ಅವಕಾಶವಿದ್ದರೂ ಕಾಮಗಾರಿ ಸಂದರ್ಭ ಹಾಕಲಾಗಿರುವ ಶೀಟ್‌ಗಳ ತೆರವು, ಅಂಡರ್‌ಪಾಸ್‌ನ ಕೆಳಗಡೆ ಇರುವ ವ್ಯಾಪಾರಿಗಳನ್ನು ಸ್ಥಳಾಂತರಿಸುವ ಕಾರ್ಯ ನಡೆದರೆ ಸುಗಮ ಸಂಚಾರ ಸಾಧ್ಯ. ಪ್ರಸ್ತುತ ವಾಹನಗಳು ಸಂಚರಿಸುವ ನಡುವೆಯೇ ಪಾದಚಾರಿಗಳು ಓಡಾಡುತ್ತಿದ್ದು, ಅಂಡರ್‌ಪಾಸ್ ತೆರವು ಕಾರ್ಯನಡೆಸಿಬೇಕಿದೆ.
ವಿವಿ ರಸ್ತೆ ಸಂಪರ್ಕಿಸುವ
ಜಂಕ್ಷನ್ ವಿಸ್ತರಣೆ
ಮಂಗಳೂರು ಕಡೆಯಿಂದ ತೊಕ್ಕೊಟ್ಟು ಜಂಕ್ಷನ್ ಬಳಿ ದೇರಳಕಟ್ಟೆ, ಕೊಣಾಜೆ ಸಂಪರ್ಕಿಸುವ ವಿವಿ ರಸ್ತೆಯ ಜಂಕ್ಷನ್‌ನ ಕ್ರಾಸ್ ರಸ್ತೆ ವಿಸ್ತರಣೆಗೊಳ್ಳಬೇಕಿದೆ.
ಈಗಾಗಲೇ ಪಿಡಬ್ಲ್ಯುಡಿ ಮತ್ತು ನಗರಸಭೆ ವ್ಯಾಪ್ತಿಗೆ ಬರುವ ಈ ಕ್ರಾಸ್ ಸ್ಥಳದಲ್ಲಿ ಚರಂಡಿ ನಿರ್ಮಾಣ ಮಾಡಿ ಶೀಟ್ ಅಡ್ಡ ಇಟ್ಟಿದ್ದು, ಶೀಟ್ ತೆರವುಗೊಳಿಸಿ ವಿಸ್ತರಿಸಿದರೆ ದೇರಳಕಟ್ಟೆ ಕಡೆ ಸಂಚರಿಸುವ ವಾಹನಗಳಿಗೆ ಅನುಕೂಲವಾಗುತ್ತದೆ.
ವಿದ್ಯುತ್ ಕಂಬ ತೆರವುಗೊಳಿಸಿ
ವಿ.ವಿ. ರಸ್ತೆಯ ದೇರಳಕಟ್ಟೆ ಕಡೆಯಿಂದ ತಲಪಾಡಿ ಕಡೆ ಹೆದ್ದಾರಿಗೆ ತಿರುಗುವ ತೊಕ್ಕೊಟ್ಟು ಜಂಕ್ಷನ್‌ನ ಕ್ರಾಸ್‌ರಸ್ತೆಯನ್ನು ವಿಸ್ತರಿಸಬೇಕಿದೆ.
ಮುಖ್ಯವಾಗಿ ಈ ರಸ್ತೆಯಲ್ಲಿ ತಲಪಾಡಿ, ಕೇರಳ, ಉಳ್ಳಾಲ ಕಡೆ ಸಂಚರಿಸುವ ಎಲ್ಲ ಬಸ್‌ಗಳು ಕೇಂದ್ರ ಬಸ್ ನಿಲ್ದಾಣಕ್ಕೆ ತೆರಳಿ ತಲಪಾಡಿ ಕಡೆ ಸಂಚರಿಸಬೇಕಾದರೆ ಈ ಕ್ರಾಸ್ ರಸ್ತೆಯಲ್ಲಿ ಸಂಚರಿಸಬೇಕಾಗಿದ್ದು, ಕ್ರಾಸ್ ರಸ್ತೆಯಲ್ಲಿ ವಿದ್ಯುತ್ ಕಂಬಗಳು ತೆರವು ಕಾರ್ಯ ಇನ್ನೂ ನಡೆಯಬೇಕಾಗಿದೆ. ಹೆದ್ದಾರಿ ಇಲಾಖೆ ಮೆಸ್ಕಾಂ ಇಲಾಖೆಗೆ ಈ ಕಂಬ ತೆರವಿಗೆ ಆದೇಶ ನೀಡಿ ಈ ರಸ್ತೆಯನ್ನು ವಿಸ್ತರಿಸಿದರೆ ಜಂಕ್ಷನ್ ಹಲವು ಸಮಸ್ಯೆಗಳು ಪರಿಹಾರ ಸಿಗುತ್ತದೆ.
ಮಳೆ ನೀರಿನಿಂದ ಹೊಂಡಮಯವಾದ ರಸ್ತೆ
ಭಟ್ನಗರ ಕಡೆಯಿಂದ ಉಳ್ಳಾಲ ಜಂಕ್ಷನ್‌ವರೆಗೆ ಹೆದ್ದಾರಿ ಕಾಮಗಾರಿ ನಡೆಸಿರುವ ಸಂಸ್ಥೆ ರಚಿಸಿರುವ ಚರಂಡಿ ಸಂಪೂನರ ಕುಸಿದು ಮಣ್ಣು ತುಂಬಿ ಮಳೆ ನೀರು ಸಂಪೂರ್ಣ ರಸ್ತೆಯಲ್ಲೆ ಹರಿದು ಹೊಂಡಮಯವಾಗಿದೆ. ಚರಂಡಿ ನಿರ್ಮಾಣ ನಡೆಸಿ ಪಾದಚಾರಿಗಳಿಗೆ ಸಂಚರಿಸಲು ರಸ್ತೆ ವಿಸ್ತರಿಸಿದರೆ ಸಮಸ್ಯೆ ಬಗೆಹರಿಯಲು ಸಾಧ್ಯ.
ಸಮಸ್ಯೆ ಪರಿಹಾರಕ್ಕೆ ಸೂಚನೆ
ಜಂಕ್ಷನ್ ಸಮಸ್ಯೆ ಪರಿಹಾರಕ್ಕೆ ಗುತ್ತಿಗೆ ವಹಿಸಿಕೊಂಡ ಸಂಸ್ಥೆಗೆ ಸೂಚನೆ ನೀಡಲಾಗಿದೆ.ಚರಂಡಿ,ಸರ್ವೀಸ್ ರಸ್ತೆ ಅಭಿವೃದ್ಧಿ ನಡೆದು ಜನರಿಗೆ ಸುಗಮ ಸಂಚಾರಕ್ಕೆ ತೊಕ್ಕೊಟ್ಟು ಜಂಕ್ಷನ್ ಅಭಿವೃದ್ಧಿಪಡಿಸಲಾಗುವುದು
– ನಳಿನ್ ಕುಮಾರ್
ಕಟೀಲು,ಸಂಸದರು
ಜಂಕ್ಷನ್ ಅಭಿವೃದ್ಧಿಯಾಗಲಿ
ಎರಡು ವರ್ಷಗಳಿಂದ ತೊಕ್ಕೊಟ್ಟು ಜಂಕ್ಷನ್ ಕ್ರಾಸ್‌ನ ಎರಡು ಬದಿಯ ರಸ್ತೆಯನ್ನು ವಿಸ್ತರಣೆಗೆ ಮನವಿ ಮಾಡಿದರೂ ಯಾರು ಗಮನಹರಿಸಿಲ್ಲ. ಮೇಲ್ಸೇತುವೆಯಲ್ಲಿ ವಾಹನ ಸಂಚಾರ ಆರಂಭಿಸಿದ್ದರಿಂದ ಜಂಕ್ಷನ್‌ನಲ್ಲಿ ವಾಹನ ನಿಬಿಡತೆ ಕಡಿಮೆಯಾಗಿದೆ. ಜಂಕ್ಷನ್ ಅಭಿವೃದ್ಧಿಗೆ ಇದು ಸೂಕ್ತ ಸಮಯ.
– ಕೃಷ್ಣ ಶೆಟ್ಟಿ,
ಉದ್ಯ ಮಿ, ತೊಕ್ಕೊಟ್ಟು ಜಂಕ್ಷನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
Editorial: ಪಾಕ್ ಪ್ರೇರಿತ ಉಗ್ರರ ತಂತ್ರಕ್ಕೆ ಸೂಕ್ತ ಪ್ರತಿತಂತ್ರ ಈಗಿನ ತುರ್ತು
Kannada: ಕನ್ನಡನಾಡಲ್ಲಿ ಕನ್ನಡ ಕಲಿಕೆಯ ಹಾಡು-ಪಾಡು
Shimoga; ಜಮೀರ್ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.