ಕುತ್ತಿಕೋಲ್: ನವೀಕರಣಕ್ಕೆ ಸಿದ್ಧವಾಗಿರುವ ಪೊಟ್ಟಂಕೆರೆ
Team Udayavani, Jun 16, 2019, 6:10 AM IST
ಕಾಸರಗೋಡು: ಸಾರ್ವಜನಿಕರ ಅನೇಕ ಕಾಲದ ಆಗ್ರಹ ನೆರವೇರಿಸುವ ನಿಟ್ಟಿನಲ್ಲಿ ಕುತ್ತಿಕೋಲ್ ಗ್ರಾಮ ಪಂಚಾಯತ್‌ನ ಪೊಟ್ಟಂಕೆರೆ ಪುನಶ್ಚೇತನಕ್ಕೆ ಸಿದ್ಧವಾಗಿದೆ.
ಜಿಲ್ಲಾ ಪಂಚಾಯತ್‌ನ 5 ಲಕ್ಷ ರೂ., ಕಾರಡ್ಕ ಬ್ಲಾಕ್ ಪಂಚಾಯತ್‌ನ ಏಳೂವರೆ ಲಕ್ಷ ರೂ.ನಂತೆ 12.5 ಲಕ್ಷ ರೂ. ವೆಚ್ಚದಲ್ಲಿ ಪೊಟ್ಟಂ ಕೆರೆ ಪುನರ್ ನಿರ್ಮಾಣಗೊಳ್ಳಲಿದೆ.
ಇದರ ಕಾಮಗಾರಿಯ ಉದ್ಘಾಟನೆ ಶೀಘ್ರದಲ್ಲೇ ನಡೆಯಲಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.
ಕುತ್ತಿಕೋಲ್ ಗ್ರಾಮ ಪಂಚಾಯತ್‌ನ 16ನೇ ವಾಡ್ ಆಗಿರುವ ಇಡಕ್ಕಾಡ್ ಎಂಬ ಪ್ರದೇಶದಲ್ಲಿ ಈ ಪೊಟ್ಟಂಕೆರೆ ಇದೆ.
ಈ ಪ್ರದೇಶದ ಬಹುತೇಕ ಮಂದಿ ಕೃಷಿಕರಾಗಿದ್ದಾರೆ. ಹಿಂದೆ ಈ ಕೆರೆಯ ನೀರನ್ನು ಇಲ್ಲಿನ ಜನ ನಿತ್ಯೋಪಯೋಗಕ್ಕೆ ಬಳಸುತ್ತಿದ್ದರು.
ಇಂದು ಕೆರೆಯ ಆವರಣ ತುಂಬ ಕಾಡುಪೊದೆ ಬೆಳೆದು, ನೀರು ಹಾಳಾಗಿದೆ. ಕೆರೆಯ ನವೀಕರಣದೊಂದಿಗೆ ಇಲ್ಲಿನ ಎಕ್ರೆ ಗಟ್ಟಲೆ ಕೃಷಿ ಜಾಗಕ್ಕೆ ನೀರಾವರಿ ಒದಗಲಿದೆ.
ಭೂಗರ್ಭ ಜಲದ ಸಂರಕ್ಷಣೆ ಮತ್ತು ಪ್ರಕೃತಿ ಸಂರಕ್ಷಣೆಯೂ ನಡೆಯಲಿದೆ ಎಂದು ಪಂಚಾಯತ್ ಪದಾ ಧಿಕಾರಿಗಳು ಅಭಿಪ್ರಾಯಪಡುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalidas Samman: ವರ್ಣಚಿತ್ರಕಾರ ರಘುಪತಿ ಭಟ್ ಅವರಿಗೆ ರಾಷ್ಟ್ರೀಯ ಕಾಳಿದಾಸ್ ಪ್ರಶಸ್ತಿ
Hockey: ವನಿತಾ ಏಷ್ಯಾ ಚಾಂಪಿಯನ್ಸ್ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್ ಎದುರಾಳಿ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.