ಕಸ ಎಸೆದವರ ವಿರುದ್ಧ ಪ್ರಕರಣ: ಪುನೀತ್‌ ಗಾಂವ್ಕರ್‌

ಬಜಪೆ ಗ್ರಾಮ ಸಭೆ

Team Udayavani, Jun 16, 2019, 6:14 AM IST

1506BAJ

ಬಜಪೆ: ಇಲ್ಲಿನ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಪೊರ್ಕೋಡಿ ದ್ವಾರದ ಬಳಿ ಶುಕ್ರವಾರ ಕಸ ಬಿಸಾಡುವ ವೇಳೆ ವಾಹನವನ್ನು ಬಜಪೆ ಹಾಗೂ ಮಳವೂರು ಗ್ರಾ.ಪಂ. ಸದಸ್ಯರು ಹಿಡಿದು ಬಜಪೆ ಪೊಲೀಸ್‌ರಿಗೆ ಹಸ್ತಾಂತರಿಸಿದ ಪ್ರಕರಣಕ್ಕೆ ಸಂಬಂಧಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಿಧಿಸಲಾ ಗುವುದು ಎಂದು ಬಜಪೆ ಠಾಣೆಯ ಪ್ರೊಬೆಷನರಿ ಪೊಲೀಸ್‌ ಅಧಿಕಾರಿ ಪುನೀತ್‌ ಗಾಂವ್ಕರ್‌ ತಿಳಿಸಿದರು.

ಬಜಪೆ ಗ್ರಾ.ಪಂ. ಅಧ್ಯಕ್ಷೆ ರೋಝಿ ಮಥಾಯಸ್‌ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಭವನದಲ್ಲಿ ನಡೆದ ಗ್ರಾ.ಪಂ. ವ್ಯಾಪ್ತಿಯ 2019- 20ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯಲ್ಲಿ ಮಾತನಾಡಿದ ಅವರು, ಕಸ ಬಿಸಾಡುವ ಪ್ರಕರಣಗಳು ನಡೆಯದಂತೆ ಗ್ರಾಮಸ್ಥರು ಎಚ್ಚರ ವಹಿಸಬೇಕು ಎಂದರು.

ಮಳೆಗಾಲದಲ್ಲಿ ಹೆಚ್ಚು ಅಪಘಾತಗಳು ಸಂಭವಿಸುತ್ತದೆ. ಹೀಗಾಗಿ ಸುರಕ್ಷಿತವಾಗಿ ವಾಹನ ಚಲಾಯಿಸಿ ಎಂದು ತಿಳಿಸಿದರು.

ಮುರನಗರ ಹಿರಿಯ ನಾಗರಿಕ ಉದ್ಯಾನವನದಲ್ಲಿ ರಾತ್ರಿ ಗಾಂಜಾ, ಮದ್ಯ ಸೇವನೆ ಚಟುವಟಿಕೆ ನಡೆಯುತ್ತಿದೆ. ಈ ಬಗ್ಗೆ ಪೊಲೀಸರು ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ ಎಂದು ಪುನೀತ್‌ ಗಾಂವ್ಕರ್‌ ತಿಳಿಸಿದರು.

ಇಲಾಖೆಯಿಂದ 110 ಕಾಳು ಮೆಣಸು ಗಿಡ, ಜೈವಿಕ ಗೊಬ್ಬರ ಉಚಿತವಾಗಿ ಹಾಗೂ ಅಣಬೆ ಘಟಕಕ್ಕೆ ಸಹಾಯಧನ 5 ಲಕ್ಷ ರೂ. ನೀಡಲಾಗುತ್ತದೆ ಎಂದು ತೋಟಗಾರಿಕಾ ಇಲಾಖೆಯ ಅಧಿಕಾರಿ ಯುಗೇಂದ್ರ ತಿಳಿಸಿದರು.

ಮಕ್ಕಳ ಸಂಖ್ಯೆ ಇಳಿಕೆ
ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಹೆತ್ತವರು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಸೇರಿಸ ಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಅಶ್ವಿ‌ನಿ ತಿಳಿಸಿದರು.

ವಲಸೆ, ಮೃತಪಟ್ಟಮತದಾರ ಹೆಸರು ತೆಗೆಯಿರಿ
ಮತದಾರ ಪಟ್ಟಿಯಲ್ಲಿ ವಲಸೆ ಹಾಗೂ ಮೃತಪಟ್ಟಿರುವವರ ಸಂಖ್ಯೆ ಜಾಸ್ತಿ ಇದೆ.ಇದರಿಂದ ಪೊಲಿಂಗ್‌ ಬೂತಗಳು ಹೆಚ್ಚುವರಿ ಮಾಡಬೇಕಾಗುತ್ತದೆ. 18 ವರ್ಷ ಪೂರ್ತಿಯಾದವರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿ. ಪ್ರಕೃತಿ ವಿಕೋಪದ ಬಗ್ಗೆ ಕಂದಾಯ ಇಲಾಖೆಯ ಗಮನಕ್ಕೆ ತನ್ನಿ. ತಾಲೂಕಿನಲ್ಲಿನ ಸಹಾಯ ಕೇಂದ್ರಕ್ಕೆ ಫೋನ್‌ ಮಾಡಿ, ಅರ್ಜಿ ನೀಡಿ. 48 ತಾಸುಗಳೊಳಗೆ ಪರಿಹಾರ ನೀಡಲಾಗುತ್ತದೆ ಎಂದು ಬಜಪೆ ಗ್ರಾಮ ಕರಣಿಕ ಜಗದೀಶ್‌ ಶೆಟ್ಟಿ ತಿಳಿಸಿದರು.

ಸಿಬಂದಿ ಕೊರತೆ
ಬಜಪೆ ಪ್ರಾ. ಆರೋಗ್ಯ ಕೇಂದ್ರದಲ್ಲಿ ಸಿಬಂದಿ ಕೊರತೆ ಇದೆ. ಹೊರ ರಾಜ್ಯದ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆರೋಗ್ಯ ಕೇಂದ್ರದಲ್ಲಿ ಸೇವೆ ನೀಡುವ ಸಿಬಂದಿಯನ್ನು ಇಲ್ಲಿಯೇ ಸೇವೆ ನೀಡು ವಂತಾಗಬೇಕು. ಈ ಬಗ್ಗೆ ಪಂ. ನಿರ್ಣ ಯಕೈಗೊಂಡು ಇಲಾಖೆಗೆ ಮನವಿ ಮಾಡಬೇಕು ಎಂದು ಗ್ರಾಮಸ್ಥರು ತಿಳಿಸಿದರು.

ಲೈನ್‌ಮೆನ್‌ಗಳ ಸೇವೆಬೇಕು
ಮಳೆಗಾಲದಲ್ಲಿ ಗಾಳಿ ಮಳೆಗೆ ತಂತಿ ಕಡಿದು ಲೈನ್‌ಗಳು ಟ್ರಿಪ್‌ ಅಗುತ್ತದೆ. ತಂತಿ ಕಡಿದು ಬಿದ್ದರೆ ಮುಟ್ಟಲು ಹೋಗಬೇಡಿ. ನಮಗೆ ತಿಳಿಸಿ. ಗ್ರಾಮೀಣ ಪ್ರದೇಶದಲ್ಲಿ ರಾತ್ರಿ ಸೇವೆ ಇಲ್ಲ. 6 ಗ್ರಾ.ಪಂ. ನಮ್ಮ ವ್ಯಾಪ್ತಿಯಲ್ಲಿ ಬರುತ್ತದೆ. ಸಂಜೆ 6 ಗಂಟೆ ಅನಂತರ ಲೈನ್‌ಮೆನ್‌ಗಳಿಂದ ಕೆಲಸ ಮಾಡಿಸುವಂತಿಲ್ಲ. ರಾತ್ರಿ ವೇಳೆಯಲ್ಲಿ ಗಸ್ತು ತಿರುಗಲು ಜೀಪು, 2 ಲೈನ್‌ಮೆನ್‌ಗಳುಬೇಕು ಎಂದು ಬಜಪೆ ಮೆಸ್ಕಾಂನ ಅಧಿಕಾರಿ ಅರುಣ್‌ ಹೇಳಿದರು.

ಜಿಲ್ಲಾ ಓಂಡ್ಸುಮೆನ್‌ ರಾಮದಾಸ ಗೌಡ ಮಾತನಾಡಿ, ಅಧಿಕಾರಿಗಳ, ಜನಪ್ರತಿ ನಿಧಿಗಳ ಸಮನ್ವಯತೆ ಅಗತ್ಯ. ನರೇಗಾ ಯೋಜನೆ ಮನೆಮನೆಗೆ ತಲುಪಬೇಕು ಎಂದರು. ಈ ಸಂದರ್ಭ ನರೇಗಾ ಯೋಜನೆಯಲ್ಲಿ ವಾರ್ಡ್‌ನಲ್ಲಿ ಹೆಚ್ಚು ಆಸಕ್ತಿ ವಹಿಸಿ, ಗ್ರಾಮಸ್ಥರಿಂದ ದ್ರವ ತ್ಯಾಜ್ಯ ಇಂಗು ಮಾಡಿಸಿದ ಗ್ರಾ.ಪಂ. ಸದಸ್ಯೆ ಆಯಿಷಾರನ್ನು ಅಭಿನಂದಿಸಲಾಯಿತು.

ಕೇಂದ್ರ ಸರಕಾರದ ಸಾಮಾಜಿಕ ಸುರಕ್ಷಾ, ಆಯುಷ್ಮಾನ ಭಾರತ ಬಗ್ಗೆ ಮಾಹಿತಿಯನ್ನು ನಿವೃತ್ತ ಬ್ಯಾಂಕ್‌ ಅಧಿಕಾರಿ ಸತೀಶ್‌ ಅತ್ತಾವರ ನೀಡಿದರು.

ನೋಡೆಲ್ ಅಧಿಕಾರಿಯಾಗಿ ಮಂಗಳೂರು ಉತ್ತರ ಕ್ಷೇತ್ರ ಸಂಯೋಜಕಿ ಪ್ರಭಾ ಅವರು ಆಗಮಿಸಿದ್ದರು. ವಾರ್ಡ್‌ ಒಂದು ಮತ್ತು ಎರಡರ ಸಭೆಯಲ್ಲಿ ಈ ಬಾರಿಯ ನೀರಿನ ನಿರ್ವಹಣೆಗೆ ಗ್ರಾಮಸ್ಥರು ಅಭಿ ನಂದನೆ ಸಲ್ಲಿಸಿದ್ದು, ಈ ಬಗ್ಗೆ ಗ್ರಾಮ ಸಭೆಯಲ್ಲಿ ಓದಿ ಹೇಳಿದಾಗ ಚಪ್ಪಾಳೆಯಿಂದ ಅದನ್ನು ಎಲ್ಲರೂ ಸ್ವಾಗತಿಸಿದರು. ಗಾ. ಪಂ.ಉಪಾಧ್ಯಕ್ಷ ಮಹಮದ್‌ ಶರೀಫ್‌, ಸದಸ್ಯರು, ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು. ಪಿಡಿಒ ಸಾಯೀಶ್‌ ಚೌಟ ನಿರ್ವಹಿಸಿದರು.

ಮನೆ ನಂಬ್ರ ಹಾಗೂ ವ್ಯಾಪಾರ ಪರವಾನಿಗೆ ಇಲ್ಲದವರ ವಿರುದ್ಧ ಗ್ರಾ. ಪಂ.ಯಾವುದೇ ಕ್ರಮ ಕೈಗೊಂಡಿಲ್ಲ ಯಾಕೆ ಎಂದು ಗ್ರಾಮಸ್ಥರು ಪ್ರಶ್ನಿಸಿದರು. ಇದಕ್ಕೆ ಗ್ರಾ.ಪಂ. ಅಧ್ಯಕ್ಷರು, ಉಪಾ ಧ್ಯಕ್ಷರು ಉತ್ತರ ನೀಡಲು ಹಿಂಜರಿದಾಗ ಪಿಡಿಒ ಸಾಯೀಶ್‌ ಚೌಟ ಪ್ರತಿಕ್ರಿಯಿಸಿ, ಈ ಪ್ರಕರಣ ಪಂ.ರಾಜ್‌ ವ್ಯವಸ್ಥೆ ನ್ಯೂನತೆಗೆ ಉದಾಹರಣೆಯಾಗಿದೆ. ಈ ಬಗ್ಗೆ ಆಡಳಿತ ನಿರ್ಧಾರಕೈಗೊಳ್ಳಬೇಕು. ಈ ಬಗ್ಗೆ ದೂರುಗಳು ಬಂದಿದ್ದು, ಲೋಕಸಭೆ ಚುನಾವಣೆ ನೀತಿ ಸಂಹಿತೆಯಿಂದಾಗಿ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿಲ್ಲ. ಈ ಅರ್ಜಿಗಳನ್ನು ಮೇಲಧಿ ಕಾರಿಗೆ ಸಲ್ಲಿಸಲಾಗಿತ್ತು ಎಂದರು. ತ್ಯಾಜ್ಯ ನೀರಿನ ಬಗ್ಗೆಯೂ ಆರೋಗ್ಯ ಇಲಾಖೆ ಕ್ರಮ ಕೈಗೊಂಡಿಲ್ಲ. ಸೋಮವಾರ ನಡೆಯುವ ಸಭೆ ಯಲ್ಲಿ ನಿರ್ಣಯ ಕೈಗೊಳ್ಳಲಾಗುವುದು ಎಂದರು.

ಪರವಾನಿಗೆ ಇಲ್ಲದವರ ವಿರುದ್ಧ ಕ್ರಮಕ್ಕೆ ಆಗ್ರಹ

ಟಾಪ್ ನ್ಯೂಸ್

Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ

Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ

November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ

November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ

muslim marriage

Marriage registration ಪ್ರಮಾಣಪತ್ರ ನೀಡುವ ಅಧಿಕಾರ ವಕ್ಫ್ ಬೋರ್ಡ್‌ಗೆ ಎಲ್ಲಿದೆ?

1-libbb

Libya; 8 ವರ್ಷಗಳ ಬಳಿಕ ಲಿಬಿಯಾಕ್ಕೆ ತೆರಳಲು ಭಾರತೀಯರಿಗೆ ಅನುಮತಿ

sidda dkshi

CM-DCM ಮಹಾರಾಷ್ಟ್ರ ಚುನಾವಣ ಪ್ರಚಾರದಲ್ಲಿ ಭಾಗಿ

Iran: ಹಿಜಾಬ್‌ ನಿರಾಕರಿಸಿದರೆ ವಿಶೇಷ ಕ್ಲಿನಿಕ್‌: ಇರಾನ್‌ ತೀರ್ಮಾನಕ್ಕೆ ಆಕ್ರೋಶ

Iran: ಹಿಜಾಬ್‌ ನಿರಾಕರಿಸಿದರೆ ವಿಶೇಷ ಕ್ಲಿನಿಕ್‌: ಇರಾನ್‌ ತೀರ್ಮಾನಕ್ಕೆ ಆಕ್ರೋಶ

HDK (3)

Siddaramaiah; ಕೊಳ್ಳೆ ಹೊಡೆಯುತ್ತಿದ್ದರೂ ನಿಮ್ಮನ್ನು ಮುಟ್ಟಬಾರದಾ: ಎಚ್‌ಡಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweqwe

ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು

6

Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ

5

Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ

4(1

Mangaluru: ಪಂಪ್‌ವೆಲ್‌-ಪಡೀಲ್‌ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ

2

Ullal: ತೊಕ್ಕೊಟ್ಟು-ಮುಡಿಪು ರಸ್ತೆಗೆ ತೇಪೆ ಕಾಮಗಾರಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ

Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ

November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ

November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ

muslim marriage

Marriage registration ಪ್ರಮಾಣಪತ್ರ ನೀಡುವ ಅಧಿಕಾರ ವಕ್ಫ್ ಬೋರ್ಡ್‌ಗೆ ಎಲ್ಲಿದೆ?

1-libbb

Libya; 8 ವರ್ಷಗಳ ಬಳಿಕ ಲಿಬಿಯಾಕ್ಕೆ ತೆರಳಲು ಭಾರತೀಯರಿಗೆ ಅನುಮತಿ

sidda dkshi

CM-DCM ಮಹಾರಾಷ್ಟ್ರ ಚುನಾವಣ ಪ್ರಚಾರದಲ್ಲಿ ಭಾಗಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.