ಸ್ಮಾರ್ಟ್ ನಗರಿಗೂ ಬರಲಿ ಡ್ರೈನೇಜ್ ನೆಟ್
Team Udayavani, Jun 16, 2019, 5:25 AM IST
ಜಗತ್ತಿನಲ್ಲಿ ಮನಷ್ಯರಿಗಿಂತಲೂ ಜಾಸ್ತಿ ತ್ಯಾಜ್ಯಗಳು ಉತ್ಪತ್ತಿಯಾಗುತ್ತಿವೆ. ಇದರಿಂದ ಮನಷ್ಯನಿಗೆ ತ್ಯಾಜ್ಯದ ನಿರ್ವಹಣೆ ಕೂಡ ಕಷ್ಟವಾಗುತ್ತಿದೆ. ತ್ಯಾಜ್ಯಗಳ ಸೂಕ್ತ ನಿರ್ವಹಣೆ ಇಲ್ಲದೇ ಪ್ಲಾಸ್ಟಿಕ್, ಕಲುಷಿತ ನೀರು ಮೊದಲಾದ ತ್ಯಾಜ್ಯಗಳು ಸ್ವಚ್ಛ ನೀರಿಗೆ ಸೇರಿ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಶುದ್ಧ ನೀರಿಗೆ ತ್ಯಾಜ್ಯಗಳು ಸೇರುತ್ತಿರುವುದರಿಂದ ಕುಡಿಯಲು ಯೋಗ್ಯವಲ್ಲದ ನೀರು ಎಲ್ಲೆಡೆ ಸೃಷ್ಟಿಯಾಗುತ್ತಿದೆ. ಇಂತಹ ಸಮಸ್ಯೆಗಳಲ್ಲಿ ಒಂದು ಕೊಳಚೆ ನೀರಿಗೆ ತ್ಯಾಜ್ಯಗಳ ಸೇರ್ಪಡೆ.
ಪ್ಲಾಸ್ಟಿಕ್, ಎಲೆಗಳು ಮೊದಲಾದ ವಸ್ತುಗಳು ಕೊಳಚೆ ನೀರಿಗೆ ಸೇರಿ ಕೊಳಜೆ ನೀರನ್ನು ಇನ್ನಷ್ಟು ಕಲುಷಿತಗೊಳಿಸುತ್ತಿರುವುದು ಇಂದಿನ ಬಹುದೊಡ್ಡ ಸಮಸ್ಯೆ. ಕೊಳಚೆ ನೀರು ಹಾಗೂ ತ್ಯಾಜ್ಯಗಳನ್ನು ಬೇರ್ಪಡಿಸುವುದೇ ಸವಾಲಾಗಿ ಮಾರ್ಪಟ್ಟಿದೆ. ಒಳಚರಂಡಿಗಳಲ್ಲಿ ನೀರಿನೊಂದಿಗೆ ತ್ಯಾಜ್ಯಗಳು ಕೂಡ ಸೇರುವುದರಿಂದ ಕೊಳಚೆ ನೀರು ಸರಾಗವಾಗಿ ಸಾಗದೇ ರಸ್ತೆಯ ಮೇಲೆ ಬರುತ್ತಿರುವ ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿವೆ.
ನಗರದ ಒಳಚರಂಡಿಗಳು ನಾವೇನಾದರೂ ಸುತ್ತ ನೋಡಲು ಹೊರಟರೆ ನಗರದ ವಾಸ್ತವ ದರ್ಶನ ನಮಗಾಗುತ್ತದೆ. ಎಷ್ಟೋ ಪ್ರಮಾಣದ ಕೊಳಚೆ ನೀರಿನ ಜೊತೆಗೆ ಪ್ಲಾಸ್ಟಿಕ್, ಕಸ, ವಿಷಕಾರಿ ಪದಾರ್ಥಗಳು ಸಾಲು ಸಾಲಾಗಿ ಸಮುದ್ರ, ನದಿ ದಡವನ್ನು ಸೇರುತ್ತವೆ. ಈ ಸಮಸ್ಯೆ ಜಲಚರ ಜೀವಿಗಳ ಸಾವಿಗೆ ಕಾರಣವಾಗುತ್ತಿದೆ ಹಾಗೂ ನದಿ, ಸಮುದ್ರಗಳನ್ನು ಕಲುಷಿತಗೊಳುತ್ತಿವೆ.
ಕೊಳಚೆ ನೀರಿನಿಂದ ತ್ಯಾಜ್ಯವನ್ನು ಬೇರ್ಪಡಿಸಲು ಆಸ್ಟ್ರೇಲಿಯದ ಕಿನ್ವಾನ್ ನಗರವು ಒಂದು ಉತ್ತಮ ಯೋಜನೆಯನ್ನು ಜಾರಿಗೊಳಿಸಿದ್ದು, ಇದರಿಂದ ಸಾಕಷ್ಟು ಪ್ರಯೋಜನವನ್ನು ಕೂಡ ಆ ನಗರ ಪಡೆಯುತ್ತಿದೆ.
ಈ ತ್ಯಾಜ್ಯ ಮಿಶ್ರಿತ ಕೊಳಚೆ ನೀರಿನಿಂದಾಗುವ ಸಮಸ್ಯೆಯನ್ನು ಮನಗಂಡ ಕಿನ್ವಾನ ನಗರ ವರ್ಷದ ಆರಂಭದಲ್ಲಿ ಡ್ರೈನೇಜ್ ನೆಟ್ ಎಂಬ ನೂತನ ಯೋಜನೆಯನ್ನು ಜಾರಿಗೊಳಿಸಿತು. ಈ ಸಮಸ್ಯೆ ಇರುವ ನಗರದ ಪ್ರಮುಖ 2 ಸ್ಥಳಗಳಲ್ಲಿ ಕೊಳಚೆ ನೀರು ಸೇರುವಲ್ಲಿ ಪೈಪ್‌ಗ್ಳಿಗೆ ದೊಡ್ಡದಾದ ನೆಟ್ ಅಳವಡಿಸಿ ನೀರಿನಿಂದ ತ್ಯಾಜ್ಯಗಳನ್ನು ಬೇರ್ಪಡಿಸುವ ಕೆಲಸವನ್ನು ಆರಂಭಿಸಿರುವ ಅಲ್ಲಿನ ಸರಕಾರ ಇಂದು ಇಡೀ ಜಗತ್ತಿಗೆ ಮಾದರಿಯಾಗಿ ನಿಂತಿದೆ.
ಏನಿದು ಡ್ರೈನೇಜ್ ನೆಟ್?
ವಸತಿ ಗೃಹಗಳು, ಕಾರ್ಖಾನೆ ಹೀಗೆ ಮೊದಲಾದವುಗಳಿಂದ ದೊಡ್ಡ ಪ್ರಮಾಣದಲ್ಲಿ ಹರಿದು ಬರುವ ಕೊಳಚೆ ನೀರು ಸೇರುವ ಜಾಗದಲ್ಲಿ ಆ ನೀರಿಗೆ ಮಿಶ್ರಿತವಾದ ತ್ಯಾಜ್ಯವನ್ನು ಬೇರ್ಪಡಿಸುವ ಸಲುವಾಗಿ ದೊಡ್ಡದಾದ ಬಲೆಯಲ್ಲಿ (ಡ್ರೈನೇಜ್ ನೆಟ್) ಕಟ್ಟುವುದು. ಆಗ ತ್ಯಾಜ್ಯ, ನೀರು ಬೇರ್ಪಡುತ್ತದೆ. ತ್ಯಾಜ್ಯವೆಲ್ಲ ಒಂದೆಡೆ ಸಂಗ್ರಹವಾದರೆ, ನೀರು ಮುಂದೆ ಹರಿದು ಇನ್ನೊಂದೆಡೆ ಸಂಗ್ರಹವಾಗುತ್ತದೆ. ಕೊಳಚೆ ನೀರಿನಿಂದ ತ್ಯಾಜ್ಯ ಬೇರ್ಪಟ್ಟ
ಕಾರಣ ಆ ನೀರನ್ನು ಪುನರ್‌ಬಳಕೆಗೆ ಯೋಗ್ಯವಾಗುವಂತೆ ಮಾಡಲು ಸುಲಭವಾಗುತ್ತದೆ.
ಮಂಗಳೂರಿಗೂ ಬರಲಿ
ಮಂಗಳೂರಿನ ಕೆಲವೊಂದು ಪ್ರದೇಶಗಳಲ್ಲಿರುವ ಕೊಳಚೆ ನೀರಿನ ಮಾರ್ಗಗಳನ್ನು ಕಂಡಾಗ ಈ ಕ್ರಮಗಳನ್ನು ಕೈಗೊಳ್ಳಲು ಸೂಕ್ತ ಎಂದು ತೋರುತ್ತದೆ. ಸ್ವಚ್ಛ ಮಂಗಳೂರಿನ ಕಡೆಗೆ ಮತ್ತು ಮಂಗಳೂರಿನ ಸೌಂದರ್ಯ ಉಳಿಸುವ ಪಾತ್ರದ ಕಡೆಗೆ ಇಂತಹ ವಿದೇಶಿ ಕ್ರಮಗಳನ್ನು ಸರಿಯಾಗಿ ಜೋಡಿಸಿದರೆ ಮಂಗಳೂರಿನ ಜನರು ಹೊರಗಿನ ಜನರಿಗೆ ಪ್ರಬುದ್ಧರು ಎಂದೆನಿಸುಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ.
-ವಿಶ್ವಾಸ್ ಅಡ್ಯಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.