1992ರಲ್ಲಿ ಮೊದಲ ಫೈಟ್
Team Udayavani, Jun 16, 2019, 5:34 AM IST
ಭಾರತದ ಸಾಮರ್ಥ್ಯ ಎಷ್ಟರ ಮಟ್ಟಿಗೆ ಅನಾವರಣಗೊಂಡಿದೆಯೆಂದರೆ, 1992ರಲ್ಲಿ ಪಾಕಿಸ್ಥಾನ ವಿಶ್ವ ಚಾಂಪಿಯನ್ ಆದಾಗಲೂ ಭಾರತ ಲೀಗ್ ಹಂತದಲ್ಲಿ ಇಮ್ರಾನ್ ಪಡೆಯನ್ನು ಕೆಡವಿತ್ತು. ಸಿಡ್ನಿಯ ಈ ಮುಖಾಮುಖೀಯೇ ಭಾರತ-ಪಾಕಿಸ್ಥಾನ ತಂಡಗಳ ನಡುವಿನ ಮೊದಲ ವಿಶ್ವಕಪ್ ಪಂದ್ಯವೆಂಬುದು ಉಲ್ಲೇಖನೀಯ. ಮೊದಲ 4 ವಿಶ್ವಕಪ್ ಪಂದ್ಯಗಳಲ್ಲಿ ಭಾರತ-ಪಾಕಿಸ್ಥಾನ ತಂಡಗಳಿಗೆ ಪರಸ್ಪರ ಎದುರಾಗುವ ಅವಕಾಶವೇ ಸಿಕ್ಕಿರಲಿಲ್ಲ. ಇಂಗ್ಲೆಂಡ್‌ನಲ್ಲಿ ನಡೆದ ಮೊದಲ 3 ಕೂಟಗಳಲ್ಲಿ ಭಾರತ-ಪಾಕಿಸ್ಥಾನ ಬೇರೆ ಬೇರೆ ಗ್ರೂಪ್‌ಗ್ಳಲ್ಲಿದ್ದವು. 1983ರಲ್ಲಿ ಭಾರತ ಚಾಂಪಿಯನ್ ಆದರೂ ಪಾಕ್ ಸವಾಲನ್ನು ಎದುರಿಸಿರಲಿಲ್ಲ.
1987ರಲ್ಲಿ ಭಾರತ-ಪಾಕ್ ಕೂಟದ ಜಂಟಿ ಆತಿಥ್ಯ ವಹಿಸಿದ್ದವು. ಈ ತಂಡಗಳೇ ಫೇವರಿಟ್ ಆಗಿದ್ದವು. ಫೈನಲ್‌ನಲ್ಲಿ ಎದುರಾಗಬಹುದೆಂಬ ನಿರೀಕ್ಷೆ ಬಲವಾಗಿತ್ತು. ಆದರೆ ಎರಡೂ ತಂಡಗಳು ಸೆಮಿಫೈನಲ್‌ನಲ್ಲೇ ಉದುರಿ ಹೋದವು. ಮುಂದಿನದು ಇತಿಹಾಸ.1992ರ ಬಳಿಕ 2007ರ ವೆಸ್ಟ್ ಇಂಡೀಸ್ ವಿಶ್ವಕಪ್‌ನಲ್ಲಷ್ಟೇ ಭಾರತ-ಪಾಕಿಸ್ಥಾನ ಎದುರಾಗಿರಲಿಲ್ಲ. ಅಲ್ಲಿ ಈ ತಂಡಗಳೆರಡೂ ಲೀಗ್ ಹಂತದಲ್ಲೇ ನಿರ್ಗಮಿಸಿದ್ದವು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.