ಸಿಸಿಬಿ ಆಪರೇಶನ್ “ಯಾಬಾ’ ಡ್ರಗ್ಸ್ ವಶ
Team Udayavani, Jun 16, 2019, 3:02 AM IST
ಬೆಂಗಳೂರು: ಮಯನ್ಮಾರ್ ದೇಶದಲ್ಲಿ ಅತಿಹೆಚ್ಚು ಮಾರಾಟವಾಗುವ “ಯಾಬಾ’ ಹೆಸರಿನ ಡ್ರಗ್ಸ್ ಮಾತ್ರೆಗಳು ಬೆಂಗಳೂರಿನಲ್ಲಿಯೂ ಮಾರಾಟವಾಗುತ್ತಿರುವ ಸಂಗತಿ ಬಯಲಾಗಿದೆ.
ಪಶ್ಚಿಮ ಬಂಗಾಳದಿಂದ “ಯಾಬಾ’ ಮಾತ್ರೆಗಳನ್ನು ರೈಲುಪ್ರಯಾಣದ ಮೂಲಕ ನಗರಕ್ಕೆ ತಂದು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿ 10 ಲಕ್ಷ ರೂ. ಮೌಲ್ಯದ “ಯಾಬಾ’ ಮಾತ್ರೆಗಳನ್ನು ಜಪ್ತಿ ಮಾಡುವಲ್ಲಿ ಕೇಂದ್ರ ಅಪರಾಧ ಘಟಕ (ಸಿಸಿಬಿ)ಪೊಲೀಸರು ಯಶಸ್ವಿಯಾಗಿದ್ದಾರೆ. ಜಹಂಗೀರ್ (27) ಬಂಧಿತ ಆರೋಪಿ.
ಆರೋಪಿ ಜಹಂಗೀರ್ ಯಾಬಾ ಮಾತ್ರೆ ಮಾರಾಟ ಜಾಲದಲ್ಲಿ ತೊಡಗಿಸಿಕೊಂಡಿದ್ದ ಬಗ್ಗೆ ಖಚಿತ ಮಾಹಿತಿ ಆಧರಿಸಿ ಮಹಿಳೆ ಮತ್ತು ಮಾದಕ ವಸ್ತು ವಿಭಾಗದ ಸಹಾಯಕ ಪೊಲೀಸ್ ಆಯುಕ್ತೆ (ಎಸಿಪಿ)ಶೋಭಾ ಎಸ್ ಕಟಾವ್ಕರ್ , ಇನ್ಸ್‌ಪೆಕ್ಟರ್ ಕೆ. ನಾರಾಯಣಗೌಡ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಿದೆ.
ಒಂದು ಮಾತ್ರೆಗೆ 600-800 ರೂ.: ಮೂಲತಃ ಪಶ್ಚಿಮ ಬಂಗಾಳದ 12 ಪರಗಣ ಜಿಲ್ಲೆಯ ಜಹಂಗೀರ್ ಪರಪ್ಪನ ಅಗ್ರಹಾರದ ಈಶ್ವರಪ್ಪ ರೆಡ್ಡಿ ಲೇಔಟ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದಾನೆ. ಈ ಹಿಂದೆ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದು, ಆರು ತಿಂಗಳಿನಿಂದ “ಯಾಬಾ’ಡ್ರಗ್ಸ್ ಮಾತ್ರೆ ಮಾರಾಟ ಜಾಲದಲ್ಲಿ ಸಕ್ರಿಯನಾಗಿದ್ದಾನೆ.
ರೈಲು ಪ್ರಯಾಣದ ಮೂಲದ ಪಶ್ಚಿಮ ಬಂಗಾಳದಿಂದ ಮಾತ್ರೆಗಳನ್ನು ತರಿಸಿಕೊಂಡು ಪರಿಚಯಸ್ಥ ಗ್ರಾಹಕರಿಗೆ ಒಂದು ಮಾತ್ರೆಗೆ 600 ರಿಂದ 800 ರೂ.ಗಳವರೆಗೆ ಮಾರಾಟ ಮಾಡುತ್ತಿದ್ದ ಎಂಬ ವಿಚಾರ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದವರಿಗೆ ಹೆಚ್ಚು ಮಾರಾಟ: “ಯಾಬಾ’ ಮಾತ್ರೆ ಮಯನ್ಮಾರ್ ಹಾಗೂ ಬಾಂಗ್ಲಾದೇಶದಲ್ಲಿ ವ್ಯಾಪಕವಾಗಿ ಮಾರಾಟವಾಗುತ್ತದೆ. ಅಲ್ಲಿಂದ ಡೀಲರ್‌ಗಳ ಮೂಲಕ ಪಶ್ಚಿಮಬಂಗಾಳಕ್ಕೆ ತಲುಪುತ್ತದೆ. ಅಲ್ಲಿಂದ ತರಿಸಿಕೊಳ್ಳುವ ಆರೋಪಿ ಜಹಂಗೀರ್, ಪರಿಚಯಸ್ಥ ಪಶ್ಚಿಮಬಂಗಾಳ ಗ್ರಾಹಕರಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿರುವುದು ಗೊತ್ತಾಗಿದೆ.
ಗ್ರಾಹಕರು ಮೊದಲೇ ಬುಕ್ ಮಾಡಿದರೆ. ಅವರಿಗೆ ತಲುಪಿಸುತ್ತಿದೆ ಎಂದು ಆರೋಪಿ ವಿಚಾರಣೆ ವೇಳೆ ತಿಳಿಸಿದ್ದು, ಈತನ ಜತೆ ಜಾಲದಲ್ಲಿ ತೊಡಗಿಸಿಕೊಂಡಿದ್ದವರ ಬಂಧನಕ್ಕೆ ಕ್ರಮವಹಿಸಿದ್ದು ತನಿಖೆ ಮುಂದುವರಿಸಲಾಗಿದೆ ಎಂದು ಅಧಿಕಾರಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ
Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು
Metro: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದು ಸಿಕ್ಕಿಬಿದ್ದ ಆಯುರ್ವೇದಿಕ್ ವೈದ್ಯ
Bengaluru:ಬೈಕ್ ಶೋರೂಂನಲ್ಲಿ ಬೆಂಕಿ ಅವಘಡ; ಸುಟ್ಟು ಹೋದ 50ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು
New Year: ಎಂ.ಜಿ.ರಸ್ತೆ ಸುತ್ತ 15 ಮೆ.ಟನ್ ಕಸ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.