ಯಾರಿಗಿಲ್ಲ ಕೃಷಿ ವಿವಿ ಗೌರವ ಡಾಕ್ಟರೆಟ್

|ನಾಳೆ ಘಟಿಕೋತ್ಸವ |1029 ಮಂದಿಗೆ ಪದವಿ |ಸಾಧಕರಿಗೆ 43 ಚಿನ್ನದ ಪದಕ |76 ಜನರಿಗೆ ಪಿಎಚ್‌ಡಿ

Team Udayavani, Jun 16, 2019, 9:06 AM IST

hubali-tdy-1..

ಧಾರವಾಡ: ಕೃಷಿ ವಿವಿಯಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಕುಲಪತಿ ಡಾ| ಮಹಾದೇವ ಚೆಟ್ಟಿ ಮಾತನಾಡಿದರು.

ಧಾರವಾಡ: ಇಲ್ಲಿನ ಕೃಷಿ ವಿವಿ 32ನೇ ಘಟಿಕೋತ್ಸವ ಜೂ. 17ರಂದು ಬೆಳಗ್ಗೆ 11:30 ಗಂಟೆಗೆ ರೈತ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಜರುಗಲಿದೆ ಎಂದು ಕುಲಪತಿ ಡಾ| ಮಹಾದೇವ ಚೆಟ್ಟಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿ ಸಚಿವ ಎನ್‌.ಎಚ್. ಶಿವಶಂಕರ ರೆಡ್ಡಿ ಅಧ್ಯಕ್ಷತೆ ವಹಿಸಿ ಪದವಿ ಮತ್ತು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ನವದೆಹಲಿಯ ಕೃಷಿ ಅನುಸಂಧಾನ ಪರಿಷತ್‌ ಮಹಾನಿರ್ದೇಶಕ ಡಾ| ತ್ರಿಲೋಚನ ಮಹಾಪಾತ್ರ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಈ ಸಲ ಯಾರಿಗೂ ಗೌರವ ಡಾಕ್ಟರೇಟ್ ಪ್ರದಾನ ಮಾಡುತ್ತಿಲ್ಲ ಎಂದು ತಿಳಿಸಿದರು.

ಘಟಿಕೋತ್ಸವದಲ್ಲಿ 1029 ಅಭ್ಯರ್ಥಿಗಳಿಗೆ ವಿವಿಧ ಪದವಿ ಪ್ರದಾನ ಮಾಡಲಿದ್ದು, ಈ ಪೈಕಿ 793 ಅಭ್ಯರ್ಥಿಗಳು ಹಾಜರಾಗಿ ಪದವಿ ಸ್ವೀಕರಿಸಲಿದ್ದಾರೆ. ಒಟ್ಟು 43 ಬಂಗಾರದ ಪದಕಗಳು ಹಾಗೂ 9 ನಗದು ಬಹುಮಾನಗಳನ್ನು ಅರ್ಹ ಅಭ್ಯರ್ಥಿಗಳಿಗೆ ನೀಡಲಾಗುವುದು. 76 ಅಭ್ಯರ್ಥಿಗಳಿಗೆ ಪಿಎಚ್‌ಡಿ ಪ್ರದಾನ ಮಾಡುತ್ತಿದ್ದು, ಈ ಪೈಕಿ 64 ಅಭ್ಯರ್ಥಿಗಳು ಹಾಜರಾಗಿ ಪದವಿ ಸ್ವೀಕರಿಸಲಿದ್ದಾರೆ ಎಂದು ಡಾ| ಚೆಟ್ಟಿ ಹೇಳಿದರು.

ಸ್ನಾತಕ ಪದವಿ: ಧಾರವಾಡದ ಕೃಷಿ ಮಹಾ ವಿದ್ಯಾಲಯದ ಸಿದ್ದು ಚಿಂದಿ 2 ಚಿನ್ನದ ಪಡೆಯಲಿದ್ದು, 4 ವರ್ಷದ ಕೃಷಿ ಪದವಿಯಲ್ಲಿ 9.17 ಸಿಜಿಪಿಎ ಗಳಿಸಿ ವಿವಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಹನುಮನಮಟ್ಟಿಯ ಕೃಷಿ ಮಹಾವಿದ್ಯಾಲಯದ ಬಿಎಸ್‌ಸಿ ಕೃಷಿ ವಿದ್ಯಾರ್ಥಿ ಅಜಯಕುಮಾರ ಎಚ್. ಅವರಿಗೆ 2 ಚಿನ್ನದ ಪದಕ ಹಾಗೂ ಒಂದು ನಗದು ಬಹುಮಾನ ಪ್ರದಾನ ಮಾಡಲಾಗುವುದು. ಧಾರವಾಡದ ಕೃಷಿ ಮಹಾವಿದ್ಯಾಲಯದ ನಿಖೀತಾ ಭೋವಿ (ಕೃಷಿ ಮಾರುಕಟ್ಟೆ ಹಾಗೂ ಸಹಕಾರ), ವಿಜಯಪುರದ ಕೃಷಿ ಮಹಾವಿದ್ಯಾಲಯದ ಹರೀಶ ಟಿ. (ಬಿಎಸ್‌ಸಿ-ಕೃಷಿ), ಶಿರಸಿಯ ಅರಣ್ಯ ಮಹಾವಿದ್ಯಾಲಯದ ವರುಣ ಅರಸ್‌ ಎಂ.ಎನ್‌. (ಬಿಎಸ್‌ಸಿ-ಅರಣ್ಯ), ಧಾರವಾಡದ ಸಮುದಾಯ ವಿಜ್ಞಾನ ಮಹಾವಿದ್ಯಾಲಯದ ಅನುಷಾ ಕೆ.ಜೆ. (ಬಿ.ಟೆಕ್‌-ಆಹಾರ ತಾಂತ್ರಿಕತೆ) ಅವರು ತಲಾ ಒಂದು ಬಂಗಾರ ಪದಕ ಸ್ವೀಕರಿಸಲಿದ್ದಾರೆ ಎಂದು ತಿಳಿಸಿದರು.

ಸ್ನಾತಕೋತ್ತರ ಪದವಿ: ಅನುವಂಶಿಕತೆ ಹಾಗೂ ಸಸ್ಯ ತಳಿ ಶಾಸ್ತ್ರ (ಕೃಷಿ) ವಿಭಾಗದಲ್ಲಿ ಗಣೇಶಪ್ರಸಾದ ಎರಡು ಬಂಗಾರದ ಪದಕ, ನಗದು ಬಹುಮಾನ ಪಡೆದಿದ್ದರೆ ಕೃಷಿ ಅರ್ಥಶಾಸ್ತ್ರದಲ್ಲಿ ಹರ್ಷಿತಾ ವೈ.ಆರ್‌., ಬೆಳೆ ಶರೀರ ಕ್ರಿಯಾ ಶಾಸ್ತ್ರದಲ್ಲಿ ವೈಷ್ಣವಿ ಸಂಗಮ್‌, ಕೃಷಿ ವಿಸ್ತರಣಾ ಶಿಕ್ಷಣದಲ್ಲಿ ಚಿತ್ರಾ ದಾಸ್‌ ತಲಾ ಎರಡು ಚಿನ್ನದ ಪದಕ ಪಡೆದಿದ್ದಾರೆ. ಸಸ್ಯರೋಗ ಶಾಸ್ತ್ರದಲ್ಲಿ ಅಪರ್ಣಾ ಕೆ. ಗೋಕುಲ, ಬೇಸಾಯ ಶಾಸ್ತ್ರ ವಿಭಾಗದಲ್ಲಿ ಶಹಾನಾ ಬೇಗಮ್‌, ಮಣ್ಣು ವಿಜ್ಞಾನದಲ್ಲಿ ವನಿತಾ ಟಿ. ತಲಾ ಒಂದು ಚಿನ್ನದ ಪದಕ ಹಾಗೂ ನಗದು ಬಹುಮಾನ ಸ್ವೀಕರಿಸಲಿದ್ದಾರೆ ಎಂದರು.

ಬೀಜ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸೀಮಾ ದೊಡ್ಡಮನಿ, ಕೃಷಿ ಸಂಖ್ಯಾಶಾಸ್ತ್ರದಲ್ಲಿ ವೇಣುಗೋಪಾಲ ವಿ., ಕೃಷಿ ಕೀಟಶಾಸ್ತ್ರದಲ್ಲಿ ನೀನು ಅಗಸ್ಟಿನ್‌, ಆಹಾರ ತಂತ್ರಜ್ಞಾನದಲ್ಲಿ ಆಲ್ಫೋನ್ಸಾ ಜೇಮ್ಸ್‌, ಅಗ್ರಿ ಬಿಸಿನೆಸ್‌ ಮ್ಯಾನೇಜ್‌ಮೆಂಟ್‌ನಲ್ಲಿ ಪೋತನೂರು ಸಂತೋಷಕುಮಾರ, ಗೃಹ ವಿಜ್ಞಾನ ವಿಸ್ತರಣೆ ಮತ್ತು ಸಂವಹನ ನಿರ್ವಹಣೆಯಲ್ಲಿ ದೇವಿಕಾ ಹಿರೇಮಠ, ಆಹಾರ ವಿಜ್ಞಾನ ಮತ್ತು ಪೋಷಣೆಯಲ್ಲಿ ವಿಜಯಕುಮಾರ ಪಾಟೀಲ, ಸಿಲ್ವಿಕಲ್ಚರ್‌ ಮತ್ತು ಅಗ್ರೋ ಫಾರೆಸ್ಟ್ರಿ (ಅರಣ್ಯ)ಯಲ್ಲಿ ಪ್ರಿಯಾದರ್ಶಿನಿ ಸಾಹು, ಫಾರೆಸ್ಟ್‌ ಬಯೋಲೋಜಿ ಮತ್ತು ಟ್ರಿ ಇಂಪ್ರೂವ್‌ಮೆಂಟ್ (ಅರಣ್ಯ)ದಲ್ಲಿ ಕೃಷ್ಣ, ನ್ಯಾಚುರಲ್ ರಿಸೋರ್ಸ್‌ ಮ್ಯಾನೇಜ್‌ಮೆಂಟ್ (ಅರಣ್ಯ)ದಲ್ಲಿ ರೌನಕ್‌ ಕೀರ್ತಿ ತಲಾ ಒಂದು ಚಿನ್ನದ ಪದಕ ಪಡೆದಿದ್ದಾರೆ ಎಂದು ಡಾ| ಚೆಟ್ಟಿ ತಿಳಿಸಿದರು.

ಪಿಎಚ್‌ಡಿ ಪದವಿ: ಸಸ್ಯ ರೋಗ ಶಾಸ್ತ್ರದಲ್ಲಿ ಬಸಮ್ಮಾ ಹಾದಿಮನಿ ಚಿನ್ನದ ಪದಕ, ಸ್ಮಾರಕ ನಗದು ಬಹುಮಾನ ಪಡೆದಿದ್ದಾರೆ. ಬೇಸಾಯ ಶಾಸ್ತ್ರದಲ್ಲಿ ಶಿಲ್ಪಾ ಚೋಗಟಾಪುರ, ಬೀಜ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಕರ್ತೂರಿ ಸಾಯಿ ಸಂತೋಷ, ಅನುವಂಶೀಯತೆ ಮತ್ತು ಸಸ್ಯ ತಳಿ ಅಭಿವೃದ್ಧಿ ಶಾಸ್ತ್ರದಲ್ಲಿ ವೃಂದಾ ಜೋಶಿ, ಕೃಷಿ ಅರ್ಥಶಾಸ್ತ್ರದಲ್ಲಿ ರಾಧಿಕಾ ವಿ.ಎಸ್‌., ಕೃಷಿ ಕೀಟಶಾಸ್ತ್ರದಲ್ಲಿ ಮಧುರೀಮಾ ವಿನೋದ್‌, ಅಗ್ರಿ ಬಿಜಿನೆಸ್‌ ಮ್ಯಾನೇಜ್‌ಮೆಂಟ್‌ನಲ್ಲಿ ನೀಲಮ್ಮ ಕೋಲಗೇರಿ, ತೋಟಗಾರಿಕೆಯಲ್ಲಿ ಹರ್ಷವರ್ಧನಗೌಡ ವಿ. ತಲಾ, ಕುಟುಂಬ ಸಂಪನ್ಮೂಲ ನಿರ್ವಹಣೆ ವಿಜ್ಞಾನದಲ್ಲಿ ಶೋಭಾ ಹುಯಿಲಗೋಳ, ಗೃಹ ವಿಜ್ಞಾನ ವಿಸ್ತರಣೆ ಮತ್ತು ಸಂವಹನ ನಿರ್ವಹಣೆಯಲ್ಲಿ ಸುಪ್ರಿಯಾ ಪಾಟೀಲ, ಮಾನವ ಅಭಿವೃದ್ಧಿ ಮತ್ತು ಕುಟುಂಬ ಅಧ್ಯಯನ ಶಾಸ್ತ್ರದಲ್ಲಿ ಪವಿತ್ರಾ ಭಟ್‌ಗೆ ತಲಾ ಒಂದು ಚಿನ್ನದ ಪದಕ ಲಭಿಸಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಿಸ್ತರಣಾ ನಿರ್ದೇಶಕ ಎಚ್. ವೆಂಕಟೇಶ, ಈಶ್ವರಚಂದ್ರ ಹೊಸಮನಿ ಇದ್ದರು.

ಟಾಪ್ ನ್ಯೂಸ್

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

ಬೈಡೆನ್‌ “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್‌ ವಿರುದ್ಧ ತಾಬ್ಡೆ 100 ಕೋಟಿ ದಾವೆ!

Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್‌ ವಿರುದ್ಧ ತಾಬ್ಡೆ 100 ಕೋಟಿ ದಾವೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vijayendra

Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್‌ ಕಾರ್ಡ್‌ ರದ್ದು: ವಿಜಯೇಂದ್ರ ಆರೋಪ

ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು

ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು

ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ

ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ

Hubli: Sri Shivlingeshwar Swamiji of Advisiddeswar Mutt passed away

Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ

Hubli: Bankrupt govt cutting BPL card: Prahlada Joshi

Hubli: ದಿವಾಳಿಯಾದ ಸರ್ಕಾರ ಬಿಪಿಎಲ್‌ ಕಾರ್ಡ್‌ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

BPL card ಕೇಂದ್ರ ಸರಕಾರವೇ ರದ್ದು ಮಾಡಿದೆ: ಸಿಎಂ ಸಿದ್ದರಾಮಯ್ಯ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

1-dp

Datta peeta; ಸರಕಾರ ನೇಮಕ ಮಾಡಿದ್ದ ಅರ್ಚಕ ರಾಜೀನಾಮೆ

DK SHI NEW

DCM; ಸಂಪನ್ಮೂಲ ಕ್ರೋಡೀಕರಣ ಸಮಿತಿ ಜತೆ ಸಭೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.