ಕೊಳೆ ರೋಗಕ್ಕೆ 9.52 ಕೋ.ರೂ. ಪರಿಹಾರ ಪಾವತಿ: ಐವನ್‌

Team Udayavani, Jun 16, 2019, 9:25 AM IST

z-32

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಲ್ಲಿ ಕೊಳೆ ರೋಗದಿಂದ ಸಂತ್ರಸ್ತರಾಗಿರುವ ಕೃಷಿಕರಿಗೆ ಈವರೆಗೆ 9.52 ಕೋಟಿ ರೂ. ಅನುದಾನ ಪಾವತಿಸಲಾಗಿದೆ ಎಂದು ಕಂದಾಯ ಇಲಾಖೆ ಸಚಿವರ ಸಂಸದೀಯ ಕಾರ್ಯದರ್ಶಿ ಐವನ್‌ ಡಿ’ಸೋಜಾ ತಿಳಿಸಿದರು. ಬೆಳ್ತಂಗಡಿ ಮಿನಿ ವಿಧಾನಸೌಧದಲ್ಲಿ ಶನಿವಾರ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನೆ ಹಾಗೂ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.

ತಹಶೀಲ್ದಾರ್‌ ಅವರಲ್ಲಿ ವಿವರ ಪಡೆದ ಅವರು, ತಾಲೂಕಿನಲ್ಲಿ ಕೊಳೆ ರೋಗ ದಿಂದ ಸಂತ್ರಸ್ತರಾಗಿರುವ 19,112 ಕೃಷಿಕರಿಂದ ಅರ್ಜಿ ಬಂದಿದ್ದು, 16,971 ಮಂದಿಗೆ ಸಹಕಾರಿ ಸಂಘಗಳಲ್ಲಿ ಹಾಗೂ 999 ಮಂದಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಈವರೆಗೆ 9.52 ಕೋಟಿ ರೂ. ಅನುದಾನ ನೇರವಾಗಿ ಅವರ ಖಾತೆಗೆ ಜಮೆ ಮಾಡಲಾಗಿದೆ ಎಂದು ತಿಳಿಸಿದರು.

63,075 ಎಕ್ರೆ ಕೃಷಿಭೂಮಿ ಮಂಜೂರು
ಅಕ್ರಮ – ಸಕ್ರಮ ಯೋಜನೆಗಳಲ್ಲಿ ಈಗಾಗಲೇ 18,124 ಮಂದಿ ಕೃಷಿಕರಿಗೆ 63,075 ಎಕ್ರೆ ಕೃಷಿಭೂಮಿ ನೀಡಲಾಗಿದೆ. ಹೊಸದಾಗಿ ಅರ್ಜಿನಮೂನೆ 57ರಲ್ಲಿ 31,123 ಅರ್ಜಿಗಳು ಬಂದಿದ್ದು, ಪರಿಶೀಲನೆಯಲ್ಲಿವೆ. 94ಸಿಯಲ್ಲಿ 33,354 ಅರ್ಜಿ ಬಂದಿದ್ದು, 14,132 ಮಂಜೂರಾಗಿ, 13,269 ತಿರಸ್ಕೃತಗೊಂಡಿವೆ. 5,953 ಪರಿಶೀಲನೆಯಲ್ಲಿದೆ. 94ಸಿಸಿಯಲ್ಲಿ 738 ಅರ್ಜಿಗಳಲ್ಲಿ 268 ಪರಿಶೀಲನೆಯಲ್ಲಿದೆ ಎಂದು ತಹಶೀಲ್ದಾರ್‌ ಗಣಪತಿ ಶಾಸ್ತ್ರಿ ತಿಳಿಸಿದರು. ಉಳಿದಿರುವ ಅರ್ಜಿ ಪರಿಶೀಲಿಸಿ ಶೀಘ್ರ ಮಂಜೂರು ಮಾಡು ವಂತೆ ಐವನ್‌ ಸೂಚಿಸಿದರು.

ಡಿ.ಸಿ. ಮನ್ನಾ ಜಮೀನು: ವಿಶೇಷ ಸಭೆ
ಜಿಲ್ಲೆಯಲ್ಲಿರುವ ಡಿ.ಸಿ. ಮನ್ನಾ ಜಮೀನಿನ ಸಮಸ್ಯೆಗೆ ಪರಿಹಾರ ಕಾಣುವಂತೆ ದಲಿತ ಮುಖಂಡರು ಬೇಡಿಕೆ ಮುಂದಿಟ್ಟಾಗ, ಬೆಳ್ತಂಗಡಿಯಲ್ಲಿ 61 ಎಕ್ರೆ ಜಮೀನು ಮಾತ್ರ ಲಭ್ಯವಿದ್ದು, ಅದನ್ನು ಅರ್ಹರಿಗೆ ಹಂಚಲು ಅರ್ಜಿ ಕರೆಯಲಾಗಿದೆ. 398 ಅರ್ಜಿಗಳು ಬಂದಿದ್ದು, ಅದನ್ನು ಪರಿಶೀಲಿಸಲಾಗುತ್ತಿದೆ. 570 ಎಕ್ರೆ ಡಿ.ಸಿ. ಮನ್ನಾ ಜಮೀನು ಬೇರೆ ಉದ್ದೇಶಗಳಿಗೆ ಹಂಚಿಕೆಯಾಗಿದೆ ಹಾಗೂ 410 ಎಕ್ರೆ ಜಮೀನು ಅತಿಕ್ರಮಣವಾಗಿದೆ ಎಂದು ತಿಳಿಸಿದರು.

ಅತಿಕ್ರಮಣವಾಗಿರುವ ಹಾಗೂ ಇತರ ಉದ್ದೇಶಗಳಿಗೆ ಹಂಚಿಕೆಯಾಗಿರುವ ಜಮೀನನ್ನು ಕೂಡಲೇ ವಶಪಡಿಸಿ ದಲಿತರಿಗೆ ಹಂಚಬೇಕು ಎಂದು ದಲಿತ ಮುಖಂಡರು ಆಗ್ರಹಿಸಿದರು. ಈ ಬಗ್ಗೆ ಪರಿಶೀಲನೆ ನಡೆಸಲು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ವರ್ಗ, ವಿವಿಧ ತಾ| ಮಟ್ಟದ ಅಧಿಕಾರಿಗಳ, ದಲಿತ ಮುಖಂಡರೊಂದಿಗೆ ಜಿಲ್ಲಾಮಟ್ಟದಲ್ಲಿ ವಿಶೇಷ ಸಭೆ ಕರೆದು ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಈ ಬಗ್ಗೆ ಜಿಲ್ಲಾಧಿಕಾರಿಯವರಿಗೆ ಕೂಡಲೇ ಸಭೆ ಕರೆಯುವಂತೆ ಸೂಚಿಸುತ್ತೇನೆ ಎಂದು ಆಶ್ವಾಸನೆ ನೀಡಿದರು.

ಹಕ್ಕುಪತ್ರ: ಮನವಿ
ಕಾಟಾಜೆ ಪ್ರದೇಶದಲ್ಲಿ ಸುಮಾರು 40 ಆದಿವಾಸಿ ಕುಟುಂಬಗಳು 1992ರಲ್ಲಿ ಅರ್ಜಿ ಸಲ್ಲಿಸಿದಾಗ, ಸರ್ವೇ ನಡೆದು ಕಂದಾಯ ಭೂಮಿಯೆಂದು ಗುರುತಿಸಲಾಗಿದ್ದರೂ ಹಕ್ಕುಪತ್ರ ನೀಡಲು ಅರಣ್ಯ ಇಲಾಖೆ ಅಡ್ಡಿಪಡಿಸುತ್ತಿದೆ ಎಂದು ದೂರುದಾರರು ಗಮನ ಸೆಳೆದರು. ಇನ್ನುಳಿದಂತೆ ತಣ್ಣೀರುಪಂಥ ಪಾಲೇದು ಎಂಬಲ್ಲಿ ಅಂಬೇಡ್ಕರ್‌ಭವನಕ್ಕೆ 2 ವರ್ಷಗಳ ಹಿಂದೆ ಅನುದಾನ ಮಂಜೂರುಗೊಂಡಿದ್ದರೂ ಕಟ್ಟಡ ಕಾಮಗಾರಿಗೆ ಅರಣ್ಯ ಇಲಾಖೆ ಅಡ್ಡಿಪಡಿಸುತ್ತಿದೆ ಎಂದು ಮನವಿ ಸಲ್ಲಿಸಿ ದರು. ಈ ಬಗ್ಗೆ ತಹಶೀಲ್ದಾರ್‌ ಬಳಿ ವರದಿ ತರಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಐವನ್‌ ಭರವಸೆ ನೀಡಿದರು.

ಪ್ರತಿಗ್ರಾಮಗಳಲ್ಲಿ ರುದ್ರಭೂಮಿ ಅಗತ್ಯ ವಾಗಿ ಇರಬೇಕು ಎಂಬುದು ಸರಕಾರದ ಸೂಚನೆಯಿದ್ದು, ಅದಕ್ಕೆ ಅಗತ್ಯ ಜಾಗ ಮೀಸಲಿಸಬೇಕು. ಮನೆ ನಿವೇಶನಗಳಿಗೆ ಸಾಕಷ್ಟು ಅರ್ಜಿಗಳು ಕಾಯುತ್ತಿದ್ದು, ಸರಕಾರಿ ಜಾಗಗಳನ್ನು ಮೀಸಲಿರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಹಕ್ಕುಪತ್ರಗಳನ್ನು ಹಾಗೂ ವಿವಿಧ ಯೋಜನೆ ಫಲಾನುಭವಿಗಳಿಗೆ ಪಿಂಚಣಿ ಗಳನ್ನು ವಿತರಿಸಲಾಯಿತು.

ವಿಧಾನ ಪರಿಷತ್‌ ಸದಸ್ಯ ಹರೀಶ್‌ ಕುಮಾರ್‌, ಮಾಜಿ ಶಾಸಕ ಕೆ. ವಸಂತಬಂಗೇರ, ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ, ತಹಶೀಲ್ದಾರ್‌ ಗಣಪತಿ ಶಾಸ್ತ್ರಿ, ಜಿಲ್ಲಾ ಪಂಚಾಯತ್‌, ತಾಲೂಕು ಪಂಚಾಯತ್‌ ಸದಸ್ಯರು, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಪ್ರಕೃತಿ ವಿಕೋಪ ನಿಧಿಯ ಕುರಿತು ಅಧಿಕಾರಿಗಳೊಂದಿಗೆ ಕಂದಾಯ ಇಲಾಖೆ ಸಚಿವರ ಸಂಸದೀಯ ಕಾರ್ಯದರ್ಶಿ ಐವನ್‌ ಡಿ’ಸೋಜಾ ಚರ್ಚಿಸಿ, ತಾಲೂಕಿನಲ್ಲಿ 24 ಲಕ್ಷ ರೂ. ಅನುದಾನ ಲಭ್ಯವಿದೆ. ಮಳೆಯಿಂದ ಹಾನಿಗೊಳಗಾದ ಮನೆ ಸಹಿತ ಇತರ ಭಾಗಶಃಹಾನಿಗೊಳಗಾಗಿದ್ದಲ್ಲಿ ಗರಿಷ್ಠ ಪರಿಹಾರ ಒದಗಿಸಲು ಪ್ರಯತ್ನಿಸಿ. ಹಾನಿ ಸಂದರ್ಭ ಜನಪ್ರತಿನಿಧಿಗಳ ಆಗಮನಕ್ಕೆ ನಿರೀಕ್ಷಿಸದೆ ಅಧಿಕಾರಿಗಳೇ ಹಾನಿ ಪ್ರದೇಶಕ್ಕೆ ಶೀಘ್ರ ಭೇಟಿ ನೀಡಿ ವರದಿ ಸಿದ್ಧಪಡಿಸುವಂತೆ ಸಲಹೆ ನೀಡಿದರು.

ಪ್ರತಿ ತಾಲೂಕುಗಳಲ್ಲಿ ಸರಕಾರದ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳ ಹಾಗೂ ಅಧಿಕಾರಿಗಳ ಸಭೆಯನ್ನು ಕರೆದು ಪಿಂಚಣಿ ವಿತರಣೆಯಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಪರಿಶೀಲಿಸಿ ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಕಾರ್ಯವನ್ನು ಮಾಡಲಾಗುವುದು ಎಂದು ಸಂಸದೀಯ ಕಾರ್ಯದರ್ಶಿ ಐವನ್‌ ಡಿ’ಸೋಜಾ ಭರವಸೆ ನೀಡಿದರು.

ಪ್ರಕೃತಿ ವಿಕೋಪ: ಗರಿಷ್ಠ ಪರಿಹಾರ

ಪಿಂಚಣಿದಾರರೊಂದಿಗೆ ಸಭೆ

ಪ್ರತಿ ತಾಲೂಕುಗಳಲ್ಲಿ ಸರಕಾರದ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳ ಹಾಗೂ ಅಧಿಕಾರಿಗಳ ಸಭೆಯನ್ನು ಕರೆದು ಪಿಂಚಣಿ ವಿತರಣೆಯಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಪರಿಶೀಲಿಸಿ ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಕಾರ್ಯವನ್ನು ಮಾಡಲಾಗುವುದು ಎಂದು ಸಂಸದೀಯ ಕಾರ್ಯದರ್ಶಿ ಐವನ್‌ ಡಿ’ಸೋಜಾ ಭರವಸೆ ನೀಡಿದರು.

ಟಾಪ್ ನ್ಯೂಸ್

Belagavi ಅಧಿವೇಶನದಲ್ಲಿ ಸರಕಾರದ ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Belagavi ಅಧಿವೇಶನದಲ್ಲಿ ಸರಕಾರದ ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Vidhana-Soudha-CM

Constitution Day: ಜನಾಶೀರ್ವಾದ ಇರುವ ತನಕ ನಾನು ಜಗ್ಗುವುದಿಲ್ಲ: ಸಿಎಂ ಸಿದ್ದರಾಮಯ್ಯ

Karnataka Govt.,: ಸಂಪುಟ ಸರ್ಜರಿ ಸನ್ನಿಹಿತ: ಡಿಸಿಎಂ ಡಿಕೆಶಿ ಸುಳಿವು!

Karnataka Govt.,: ಸಂಪುಟ ಸರ್ಜರಿ ಸನ್ನಿಹಿತ: ಡಿಸಿಎಂ ಡಿಕೆಶಿ ಸುಳಿವು!

We are investigating Rahul’s British citizenship: Government to High Court!

ರಾಹುಲ್‌ ಬ್ರಿಟನ್‌ ಪೌರತ್ವದ ಬಗ್ಗೆ ಪರಿಶೀಲಿಸುತ್ತಿದ್ದೇವೆ: ಹೈಕೋರ್ಟ್‌ಗೆ ಸರ್ಕಾರ!

ಬಿಟ್ಕಾಯಿನ್‌ ಇದ್ದ ಹಾಡ್‌ಡಿಸ್ಕ್ ಎಸೆದ ಪ್ರೇಯಸಿ, ಪರದಾಟ

Hard Disk: ಬಿಟ್ಕಾಯಿನ್‌ ಇದ್ದ ಹಾಡ್‌ಡಿಸ್ಕ್ ಎಸೆದ ಪ್ರೇಯಸಿ, ಪರದಾಟ

MahaKumbh 2025: ಕುಂಭಮೇಳದಲ್ಲಿ ಬೆಂಕಿ ನಂದಿಸಲು ರೊಬೋಟ್‌!

MahaKumbh 2025: ಕುಂಭಮೇಳದಲ್ಲಿ ಬೆಂಕಿ ನಂದಿಸಲು ರೊಬೋಟ್‌!

ಬೆಳೆ ಕನ್ನಡ: ಕನ್ನಡದ ಕೆಲಸ ಬರೀ ಸರಕಾರದ್ದಲ್ಲ, ನಮ್ಮದು ಕೂಡ!

ಬೆಳೆ ಕನ್ನಡ: ಕನ್ನಡದ ಕೆಲಸ ಬರೀ ಸರಕಾರದ್ದಲ್ಲ, ನಮ್ಮದು ಕೂಡ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

NH Highway works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

NH Highway Works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

Dharmasthala: ಭಕ್ತರ ಭಕ್ತಿಯ ಪ್ರೀತಿಗೆ ಶರಣಾಗಿರುವೆ: ಡಾ| ಹೆಗ್ಗಡೆ

Dharmasthala: ಭಕ್ತರ ಭಕ್ತಿಯ ಪ್ರೀತಿಗೆ ಶರಣಾಗಿರುವೆ: ಡಾ| ಹೆಗ್ಗಡೆ

ವಿಷಸೇವಿಸಿ ಆತ್ಯಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ,ಚಿಕಿತ್ಸೆಗೆ ಸ್ಪಂದಿಸದೆ ಸಾವು

ವಿಷಸೇವಿಸಿ ಆತ್ಯಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ,ಚಿಕಿತ್ಸೆಗೆ ಸ್ಪಂದಿಸದೆ ಸಾವು

accident

Vitla: ರಿಕ್ಷಾ- ಬೈಕ್‌ ಢಿಕ್ಕಿ; ಮೂವರಿಗೆ ಗಾಯ

Sullia: ಕನಕಮಜಲು; ಅಂಗಡಿ, ಹೊಟೇಲ್‌ನಿಂದ ಕಳವು

Sullia: ಕನಕಮಜಲು; ಅಂಗಡಿ, ಹೊಟೇಲ್‌ನಿಂದ ಕಳವು

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Belagavi ಅಧಿವೇಶನದಲ್ಲಿ ಸರಕಾರದ ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Belagavi ಅಧಿವೇಶನದಲ್ಲಿ ಸರಕಾರದ ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Vidhana-Soudha-CM

Constitution Day: ಜನಾಶೀರ್ವಾದ ಇರುವ ತನಕ ನಾನು ಜಗ್ಗುವುದಿಲ್ಲ: ಸಿಎಂ ಸಿದ್ದರಾಮಯ್ಯ

Karnataka Govt.,: ಸಂಪುಟ ಸರ್ಜರಿ ಸನ್ನಿಹಿತ: ಡಿಸಿಎಂ ಡಿಕೆಶಿ ಸುಳಿವು!

Karnataka Govt.,: ಸಂಪುಟ ಸರ್ಜರಿ ಸನ್ನಿಹಿತ: ಡಿಸಿಎಂ ಡಿಕೆಶಿ ಸುಳಿವು!

We are investigating Rahul’s British citizenship: Government to High Court!

ರಾಹುಲ್‌ ಬ್ರಿಟನ್‌ ಪೌರತ್ವದ ಬಗ್ಗೆ ಪರಿಶೀಲಿಸುತ್ತಿದ್ದೇವೆ: ಹೈಕೋರ್ಟ್‌ಗೆ ಸರ್ಕಾರ!

ಬಿಟ್ಕಾಯಿನ್‌ ಇದ್ದ ಹಾಡ್‌ಡಿಸ್ಕ್ ಎಸೆದ ಪ್ರೇಯಸಿ, ಪರದಾಟ

Hard Disk: ಬಿಟ್ಕಾಯಿನ್‌ ಇದ್ದ ಹಾಡ್‌ಡಿಸ್ಕ್ ಎಸೆದ ಪ್ರೇಯಸಿ, ಪರದಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.