ಕುಖ್ಯಾತ ರೌಡಿ ಅಸ್ಗರ್ ಅಲಿ ಬಂಧನ
3 ಕೊಲೆ ಪ್ರಕರಣಗಳ ಆರೋಪಿ, ಭೂಗತ ಪಾತಕಿ
Team Udayavani, Jun 16, 2019, 10:17 AM IST
ಮಂಗಳೂರು: ಮೂರು ಕೊಲೆ ಪ್ರಕರಣಗಳ ಆರೋಪಿ, 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಭೂಗತ ಪಾತಕಿ ಉಳ್ಳಾಲ ನಿವಾಸಿ ಅಸ್ಗರ್ ಆಲಿ (42) ಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಅಸ್ಗರ್ ನಿಗೆ ನಕಲಿ ಪಾರ್ಸ್‌ಪೋರ್ಟ್ ನೀಡಿ ಸಹಕರಿಸಿದ ನವಾಝ್ ಮತ್ತು ರಶೀದ್ ಅವರನ್ನು ಕೂಡ ಬಂಧಿಸಲಾಗಿದೆ.
ಅಸ್ಗರ್ ಆಲಿ ಮೇಲೆ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ 3 ಕೊಲೆ ಪ್ರಕರಣ ಸಹಿತ ಕೊಲೆ ಬೆದರಿಕೆ, ಸುಲಿಗೆ, ದರೋಡೆ ಸಹಿತ 9 ಪ್ರಕರಣಗಳಿವೆ. ಆರೋಪಿ 2007ರಲ್ಲಿ ನಕಲಿ ಪಾಸ್‌ಪೋರ್ಟ್ ಬಳಸಿ ದುಬಾೖಗೆ ಪರಾರಿಯಾಗಿದ್ದ.
ಅಸ್ಗರ್ ಆಲಿ ದುಬಾೖಯಿಂದ ಕಳೆದ ಮಾರ್ಚ್‌ನಲ್ಲಿ ಮುಂಬಯಿಗೆ ಬಂದ ಬಳಿಕ ಉಪ್ಪಳದಲ್ಲಿ ತಲೆಮರೆಸಿದ್ದ. ಈ ಬಗ್ಗೆ ಖಚಿತ ಮಾಹಿತಿ ನಗರ ಪೊಲೀಸರಿಗೆ ದೊರೆತಿದ್ದು, ಕಂಕನಾಡಿ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಜಗದೀಶ್ ಮತ್ತು ಸಿಸಿಆರ್‌ಬಿ ಇನ್ಸ್‌ಪೆಕ್ಟರ್ ಶ್ಯಾಮಸುಂದರ್ ಒಳಗೊಂಡ ವಿಶೇಷ ತಂಡ ಈತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಮೂರನೇ ಕೊಲೆ ಪ್ರಕರಣ
ಟಾರ್ಗೆಟ್ ಇಲ್ಯಾಸ್, ಅನಂತು ಕೊಲೆ ಪ್ರಕರಣದ ಆರೋಪಿ ಅಸ್ಗರ್ ಆಲಿ ಮೇಲೆ ಉಳ್ಳಾಲ ಯುವತಿ ಶಕಿನಾ ಕೊಲೆ ಪ್ರಕರಣದ ಆರೋಪವೂ ಇದೆ. ಯುವತಿಯ ಬಗ್ಗೆ ಉಳ್ಳಾಲ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಆದರೆ ಪಾತಕಿ ಮಾಡೂರು ಇಸುಬು ಬಂಧನ ವೇಳೆ ಯುವತಿ ಶಕಿನಾ ಕೊಲೆಯಾಗಿರುವ ಬಗ್ಗೆ ಮತ್ತು ಇದರಲ್ಲಿ ಅಸ್ಗರ್ ಆಲಿ ಶಾಮೀಲಾಗಿರುವ ಬಗ್ಗೆ ಬಾಯ್ಬಿಟ್ಟಿದ್ದ. ಹಾಗಾಗಿ ನಗರದಲ್ಲಿ ಅಸ್ಗರ್ ಮೇಲೆ 3 ಕೊಲೆ ಪ್ರಕರಣಗಳಿವೆ.
ಪಾಸ್‌ಪೋರ್ಟ್‌ನಲ್ಲಿ ಅಶ್ರಫ್ ಆಲಿ
ಈತ ನಕಲಿ ಪಾಸ್‌ಪೋರ್ಟ್ ಹೊಂದಿದ್ದು, ಅಶ್ರಫ್ ಆಲಿ ಎಂದು ಹೆಸರು ಕೊಟ್ಟಿದ್ದ. ಇದಕ್ಕೆ ನವಾಝ್ ಮತ್ತು ರಶೀದ್ ಸಹಕಾರ ನೀಡಿದ್ದು, ಈ ಹಿನ್ನೆಲೆಯಲ್ಲಿ ಅವರನ್ನು ಕೂಡ ಬಂಧಿಸಲಾಗಿದೆ. ಅವರಿಂದ ಸುಮಾರು 35 ಪಾಸ್‌ಪೋರ್ಟ್ ಗಳನ್ನು ವಶಪಡಿಸಿ ಕೊಳ್ಳಲಾಗಿದ್ದು, ಈ ಬಗ್ಗೆ ತನಿಖೆ ನಡೆಸಿ ಅಸಲಿಯೆಷ್ಟು, ನಕಲಿಯೆಷ್ಟು ಎಂದು ಪತ್ತೆಹಚ್ಚಲಾಗುವುದು. ನಕಲಿ ಪಾಸ್‌ಪೋರ್ಟ್ ಜಾಲದ ಹಿಂದೆ ಇನ್ನಷ್ಟು ಮಂದಿ ಶಾಮೀಲಾಗಿರುವ ಸಾಧ್ಯತೆಯಿದ್ದು, ಅವರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದುಬಾೖಯಲ್ಲಿದ್ದು ಟಾರ್ಗೆಟ್
ಮಾಡೂರು ಇಸುಬು, ರಶೀದ್ ಮಲಬಾರಿಯ ನಿಕಟವರ್ತಿಯಾಗಿರುವ ಅಸYರ್ ಆಲಿ ಮತ್ತು ಟಾರ್ಗೆಟ್ ಗ್ಯಾಂಗ್‌ನ ಇಲ್ಯಾಸ್ ಮಧ್ಯೆ ವೈಮನಸ್ಸಿದ್ದು, ಇಲ್ಯಾಸ್ ಕೊಲೆಗೆ ದುಬಾೖಯಲ್ಲಿದ್ದೇ ಸ್ಕೆಚ್ ಹಾಕಿ ಸುಪಾರಿ ನೀಡಿದ್ದ. ಇಲ್ಯಾಸ್ ಕೊಲೆಯಾದ ಬಳಿಕ ಪ್ರಕರಣದ ಆರೋಪಿಗಳನ್ನು ಮುಂಬಯಿಗೆ ಕರೆಸಿ ಔತಣ ಕೂಟವನ್ನೂ ಏರ್ಪಡಿಸಿದ್ದ ಎಂದು ತನಿಖೆಯಿಂದ ತಿಳಿದು ಬಂದಿದೆ. ದುಬಾೖಯಲ್ಲಿ ದಾವೂದ್ ಮತ್ತು ಇತರರ ಜತೆಗಿದ್ದು, ಕೊಲೆ ಸಂಚು ರೂಪಿಸುತ್ತಿದ್ದ. ಕೊಲೆ ಆರೋಪಿಗಳಿಗೆ ಮುಂಬಯಿಯಲ್ಲಿ ಅಡಗುದಾಣ ವ್ಯವಸ್ಥೆ ಮಾಡುತ್ತಿದ್ದ. ಅಲ್ಲದೆ ಹಫ್ತಾ ಹಣಕ್ಕಾಗಿ ಪೀಡಿಸುತ್ತಿದ್ದ ಎನ್ನಲಾಗಿದೆ. ಬೆಂಗಳೂರು ನಗರದಲ್ಲಿ ನಡೆದ ಶೂಟೌಟ್ ಪ್ರಕರಣವೊಂದರಲ್ಲಿಯೂ ಭಾಗಿಯಾದ ಆರೋಪ ಇವನ ಮೇಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ
Udupi: ಉದ್ಘಾಟನೆ ಕಾಣದ ಸರಕಾರಿ ಕಟ್ಟಡಗಳು
Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ
BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್‌ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.