ಆಧಾರ್‌ಗಾಗಿ ನಿತ್ಯ ಜಾಗರಣೆ
•ಗಂಟೆಗಟ್ಟಲೇ ಕಾಯ್ದರೂ ಬಾರದ ಪಾಳೆ•ಬುತ್ತಿ ಕಟಕೊಂಡು ಬರ್ತಾರೆ
Team Udayavani, Jun 16, 2019, 10:20 AM IST
ಗುಳೇದಗುಡ್ಡ: ತಹಶೀಲ್ದಾರ್ ಕಚೇರಿಯಲ್ಲಿ ಆಧಾರ್ ಕಾರ್ಡ್ ಮಾಡಿಸಲು ಸರದಿ ಸಾಲಿನಲ್ಲಿ ನಿಂತ ಜನರು.
ಗುಳೇದಗುಡ್ಡ: ಒಂದೆಡೆ ಬುತ್ತಿ ಕಟ್ಟಿಕೊಂಡು ಬಂದು ಊಟ ಮಾಡುತ್ತಿರುವ ತಾಯಿ- ಮಕ್ಕಳು, ಇನ್ನೊಂದೆಡೆ ನನ್ನ ಪಾಳಿ ಯಾವಾಗ್ ಬರುತ್ರಿ ಅಂತಾ ಕೇಳ್ಳೋ ವೃದ್ಧರು, ಇದರ ಮಧ್ಯೆ ಆಗಾಗ ಕೈಕೊಡೋ ವಿದ್ಯುತ್, ಇನ್ನೇನು ವಿದ್ಯುತ್ ಬಂತು ಎನ್ನುವಷ್ಟರಲ್ಲೇ ಥಟ್ಟನೆ ಕೈ ಕೊಡುವ ಸರ್ವರ್.
ಇವೆಲ್ಲ ದೃಶ್ಯ ಕಂಡು ಬರುತ್ತಿರುವುದು ಗುಳೇದಗುಡ್ಡ ತಹಶೀಲ್ದಾರ್ ಕಚೇರಿಯಲ್ಲಿ. ಆಧಾರ್ ಕಾರ್ಡ್ ತಿದ್ದುಪಡಿಗಾಗಿ ಗುಳೇದಗುಡ್ಡ ಸೇರಿದಂತೆ ಪರ್ವತಿ, ಖಾನಾಪುರ, ಚಿಮ್ಮಲಗಿ, ಲಾಯದಗುಂದಿ, ಹಳದೂರ, ಮುರುಡಿ, ತೋಗುಣಶಿ, ಕೆಲವಡಿ, ತೆಗ್ಗಿ, ಲಿಂಗಾಪೂರ, ಪಾದನ ಕಟ್ಟಿ ಸೇರಿದಂತೆ ತಾಲೂಕಿನ ಎಲ್ಲ ಗ್ರಾಮಗಳ ಜನರು ನಿತ್ಯವೂ ಪರದಾಡುವಂತಾಗಿದೆ.
•ಸರದಿ ಬರದೇ ನಿರಾಶೆಯಿಂದ ಮನೆಗೆ ಮರಳುವ ಸ್ಥಿತಿ
•ಬೆಳಿಗ್ಗೆ 4ಕ್ಕೆ ಬಂದು ನಿಲ್ತಾರೆ
ತಹಶೀಲ್ದಾರ್ ಕಚೇರಿಯಲ್ಲಿ ಒಮ್ಮೆ ವಿದ್ಯುತ್ ಕೈಕೊಟ್ಟರೆ, ಇನ್ನೊಮ್ಮೆ ನೆಟ್ವರ್ಕ್ ಸಮಸ್ಯೆಯಾಗುತ್ತದೆ. ಹೀಗಾಗಿ ದಿನವಿಡೀ ಕಾಯುವುದು ಬೇಸರವಾಗಿ ನಿತ್ಯ ಬೆಳಗಿನ ಜಾವ 4 ಗಂಟೆಯಿಂದಲೇ ಸರದಿಯಲ್ಲಿ ನಿಲ್ಲುವಂತಾಗಿದೆ. ಕೆಲವೊಮ್ಮೆ ಗಂಟೆಗಟ್ಟಲೇ ಕಾಯ್ದುರೂ ತಮ್ಮ ಸರದಿ ಬರದೇ ಕೊನೆಗೆ ಸಂಜೆ ವೇಳೆ ನಿರಾಶೆಯಿಂದ ಮನೆಗೆ ಹೋಗುವಂತಾಗಿದೆ. ಇಷ್ಟೆಲ್ಲ ಸಮಸ್ಯೆ ಇದ್ದರೂ ಯಾರೊಬ್ಬರು ಸಮಸ್ಯೆ ಬಗೆಹರಿಸುತ್ತಿಲ್ಲವಾಗಿದೆ ಎಂದು ಸಾರ್ಜಜನಿಕರು ದೂರಿದ್ದಾರೆ.
ಜನರೇಟರ್ ಸ್ಥಳಾಂತರ ಆಗಿಲ್ಲ: ವಿದ್ಯುತ್ ಕೈಕೊಟ್ಟರೆ ಜನರೇಟರ್ ಆದರೂ ಇರಬೇಕು. ಅದು ಹಳೇ ತಹಸೀಲ್ದಾರ್ ಕಚೇರಿ ಮುಂದಿದೆ. ಆದರೆ ಅದನ್ನು ಹೊಸ ತಹಸೀಲ್ದಾರ್ ಕಚೇರಿಗೆ ಸ್ಥಳಾಂತರ ಮಾಡಿಲ್ಲ. ಹೀಗಾಗಿ ಇಲ್ಲಿ ಕರೆಂಟ್ ಸಮಸ್ಯೆ ಕಾಡುತ್ತಿದೆ. ಕಚೇರಿ ಸ್ಥಳಾಂತರಗೊಂಡು ತಿಂಗಳುಗಳು ಕಳೆದರೂ ಜನರೇಟರ್ ಸ್ಥಳಾಂತರಿಸುವ ಕೆಲಸ ಆಗಿಲ್ಲವೆಂದು ಸಾರ್ವಜನಿಕರು ದೂರಿದ್ದಾರೆ.
ಬುತ್ತಿ ಕಟ್ಟಿಕೊಂಡು ಬರ್ತಾರೆ ಜನ: ಆಧಾರ್ ಕಾರ್ಡ್ ಮಾಡಿಸಲು ಗಂಟೆಗಟ್ಟಲೆ ಕಾಯುವ ಸ್ಥಿತಿ ಇರುವುದರಿಂದ ಸುತ್ತಮುತ್ತಲಿನ ಗ್ರಾಮಗಳ ಜನರು ಬುತ್ತಿ ಕಟ್ಟಿಕೊಂಡು ಬರುತ್ತಾರೆ, ಪಾಳೆ ಬಂದರೆ ಒಳಿತು ಇಲ್ಲವಾದರೆ ಕಟ್ಟಿಕೊಂಡು ಬಂದ ಬುತ್ತಿ ಬಿಚ್ಚಿಕೊಂಡು ಊಟ ಮಾಡಿ ಮತ್ತೇ ಪಾಳೆಗೆ ನಿಲ್ಲುತ್ತಾರೆ. ಇನ್ನು ಕೆಲವರು ಪಕ್ಕದ ಹೋಟೆಲ್ಗಳತ್ತ ಮುಖ ಮಾಡುತ್ತಾರೆ.
•ಮಲ್ಲಿಕಾರ್ಜುನ ಕಲಕೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಧೋಳ: ಹಲಗಲಿಯಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಸಾಥ್
Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
70 ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯ; ಮೂತ್ರ ವಿಸರ್ಜನೆಗೆ ಬಯಲೇ ಗತಿ
Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.