ಗಯಾ: ಬಿಸಿಲ ಝಳಕ್ಕೆ 12 ಮಂದಿ ಸಾವು ;ಹಲವರಿಗೆ ಚಿಕಿತ್ಸೆ
Team Udayavani, Jun 16, 2019, 10:32 AM IST
ಗಯಾ: ಬಿಹಾರದ ಮುಜಾಫರಪುರದಲ್ಲಿ ಮಿದುಳು ಜ್ವರದಿಂದ ಸಾವನ್ನಪ್ಪಿರುವ ಮಕ್ಕಳ ಸಂಖ್ಯೆ ಭಾನುವಾರ 100 ದಾಟಿದ್ದು ಇನ್ನೊಂದೆಡೆ ಗಯಾದಲ್ಲಿ ವಿಪರೀತ ಬಿಸಿಲಿನ ಹೊಡೆತಕ್ಕೆ ಸಿಲುಕಿ 12 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ.
ಗಯಾದಲ್ಲಿ ವಿಪರೀತ ತಾಪಮನಾ ದಾಖಲಾಗಿದ್ದು,ಜನರು ಮನೆಗಳಿಂದ ಹೊರಬರುವುದು ಕಷ್ಟವಾಗಿದೆ. ಭೂಮಿ ಕಾದ ಕೆಂಡದಂತಾಗಿದೆ.
ಗಯಾದ ಅನುರಾಗ್ ನಾರಾಯಣ ಮಾಗಧ್ ಮೆಡಿಕಲ್ ಕಾಲೇಜಿನಲ್ಲಿಚಿಕಿತ್ಸೆಗೆ ದಾಖಲಾಗಿದ್ದ 12 ಮಂದಿ ಸಾವನ್ನಪ್ಪಿದ್ದಾರೆ. ಆ ಪೈಕಿ 7 ಮಂದಿ ಗಯಾದವರಾಗಿದ್ದು, ಇಬ್ಬರು ಔರಂಗಾಬಾದ್ ಮತ್ತುತಲಾ ಓರ್ವ ರು ಶೇಖ್‌ಪುರ ಮತ್ತು ಚಾತ್ರಾದವರಾಗಿದ್ದಾರೆ.
25 ಮಂದಿ ಅಸ್ವಸ್ಥಗೊಂಡು ಆಸ್ಪತ್ರೆಗಳಿಗೆ ದಾಖಲಾಗಿದ್ದು ಚಿಕಿತ್ಸೆ ನೀಡಿ ಅವರನ್ನು ಸಹಜತೆಗೆ ತರಲು ವೈದ್ಯರು ಪ್ರಯತ್ನ ಮುಂದುವರಿಸಿದ್ದಾರೆ.
ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಜನರು ಆದಷ್ಟು ಮನೆಗಳಿಂದ ಹೊರಗೆ ಬರಬಾರದು. ಅತೀಯಾದ ಉಷ್ಣತೆಯಿಂದಾಗಿ ಮಿದುಳಿನ ಮೇಲೆ ಪರಿಣಾಮ ಬೀರಿ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ಜನರಲ್ಲಿ ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kerala: ಆ್ಯಂಬುಲೆನ್ಸ್ ಓಡಾಟಕ್ಕೆ ಅಡ್ಡಿ: ಕಾರು ಮಾಲೀಕನ ಲೈಸೆನ್ಸ್ ರದ್ದು!
Anmol Bishnoi: ಅಮೆರಿಕದಲ್ಲಿ ಲಾರೆನ್ಸ್ ಬಿಷ್ಣೋಯ್ ಸಹೋದರ ಅನ್ಮೋಲ್ ಬಿಷ್ಣೋಯ್ ಬಂಧನ
Manipur issue: ಶಾ ಸಭೆಯ ಬಳಿಕ ಮಣಿಪುರಕ್ಕೆ ಹೆಚ್ಚುವರಿ ಪಡೆಗಳನ್ನು ಕಳುಹಿಸಿದ ಕೇಂದ್ರ
ಹೋಮ್ ವರ್ಕ್ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ
AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ ಕೇಜ್ರಿವಾಲ್ ಆಪ್ತ ಕೈಲಾಶ್ ಗೆಹ್ಲೋಟ್!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.