ಹೆದ್ದಾರಿ ನಿರ್ಮಾಣಕ್ಕೆ ಅಪಾರ ಗಿಡ ನಾಶ
Team Udayavani, Jun 16, 2019, 2:10 PM IST
ಗದಗ: ಸಾವಿರ ಮರ ಬೆಳೆಸಬೇಕು ಎಂದು ಒತ್ತಾಯಿಸಿ ಹುಲಕೋಟಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಗದಗ: ತಾಲೂಕಿನ ಹುಲಕೋಟಿ ಹಾಗೂ ಗದಗ ಮಾರ್ಗವಾಗಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ-63 ನಿರ್ಮಾಣಕ್ಕಾಗಿ ಅಸಂಖ್ಯಾತ ಗಿಡಗಳನ್ನು ನಾಶ ಮಾಡಲಾಗಿದೆ. ಅದಕ್ಕೆ ಪರಿಹಾರವಾಗಿ ಕನಿಷ್ಠ ಒಂದು ಸಾವಿರ ಸಸಿಗಳನ್ನು ಬೆಳೆಸಬೇಕು ಎಂದು ಒತ್ತಾಯಿಸಿ ಗ್ರಾಮದ ಯುವಕರು ಹುಲಕೋಟಿಯಲ್ಲಿ ಪ್ರತಿಭಟನೆ ನಡೆಸಿದರು.
ಗ್ರಾಮದ ಬಸ್ ನಿಲ್ದಾಣದ ಬಳಿ ಪ್ರಗತಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ತಡೆದು, ಪರಿಸರ ಜಾಗೃತಿಗಾಗಿ ಜಾಥಾ ನಡೆಸಿ ಕೆಲಕಾಲ ಘೋಷಣೆ ಕೂಗಿದರು. ರಸ್ತೆ ನಿರ್ಮಾಣದ ಗುತ್ತಿಗೆ ಪಡೆದಿರುವ ಕೆ.ಎನ್.ಆರ್. ಕಂಪನಿ ರಸ್ತೆ ಅಗಲೀಕರಣಕ್ಕಾಗಿ ಈ ಭಾಗದಲ್ಲಿನ ಅಸಂಖ್ಯಾತ ಮರಗಳನ್ನು ನಾಶ ಮಾಡಿವೆ. ಇವರು ಬೃಹತ್ ಮರ ಕಡಿದಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈಗಾಗಲೇ ಕಾಂಗ್ರೆಸ್‌ನ ಯುವ ನಾಯಕ ಸಚಿನ್ ಪಾಟೀಲರು ಪಕ್ಷದ ಕಾರ್ಯಕರ್ತರು, ಬೆಂಬಲಿಗರಿಗಷ್ಟೇ ಕನಿಷ್ಠ 500 ಮರಗಳನ್ನು ನೆಡುವಂತೆ ಕರೆ ನೀಡಿದ್ದಾರೆ. ಅದರೊಂದಿಗೆ ಸರಕಾರದಿಂದ ಕನಿಷ್ಠ 1000 ಮರಗಳನ್ನು ಬೆಳೆಸಲು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ರಮೇಶ್ ಹೊನ್ನಿನಯಕರ, ರಮೇಶ್ ಕರಿಕಟ್ಟಿ, ಮುದಾಸೀರ್ ಬಾಳೆಕುಂದ್ರಿ, ಇಮಾಮ್ ತಹಶೀಲ್ದಾರ್, ಈರಣ್ಣ ಹಂಪನ್ನವರ್, ಮಂಜು ಹಂಗಂಕಟ್ಟಿ, ಮಂಜು ಗೋಣಿ, ಶಿವು ಎಲಿಶೆಟ್ಟರ್, ಸುರೇಶ್ ಕರಿಕಟ್ಟಿ, ರಾಘು ಹಾದಿಮನಿ, ಹಾಲೇಶ್ ಕೆಂಬಾವಿಮಠ, ಮಂಜು ತಿರಲಾಪುರ್, ಮಂಜು ಬಳಗಾನೂರ್ ಇನ್ನಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ
Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ
Gadaga: ಎಸ್ಪಿ ಬಿ.ಎಸ್.ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು ವಂಚನೆಗೆ ಯತ್ನ
Gadaga: ನರಗುಂದ ಬಳಿ ಭೀಕರ ಅಪಘಾತ: ಕಾರಿಗೆ ಲಾರಿ ಡಿಕ್ಕಿ ಹೊಡೆದು ದಂಪತಿ ಸ್ಥಳದಲ್ಲೇ ಸಾವು
MUST WATCH
ಹೊಸ ಸೇರ್ಪಡೆ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Re Release: ದರ್ಶನ್ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.