ಯೋಗ ತಾಲೀಮಿನಲ್ಲಿ 4 ಸಾವಿರಕ್ಕೂ ಹೆಚ್ಚು ಮಂದಿ ಭಾಗಿ


Team Udayavani, Jun 17, 2019, 3:00 AM IST

yaoga-tal

ಮೈಸೂರು: ಜೂನ್‌ 21ರಂದು ನಡೆಯಲಿರುವ ಐದನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಭಾನುವಾರ ಮುಂಜಾನೆ ಸಾವಿರಾರು ಮಂದಿ ಪೂರ್ವಭ್ಯಾಸ ನಡೆಸಿದರು.

ಪ್ರತಿ ವರ್ಷದಂತೆ ಈ ಸಲವೂ ಮೈಸೂರು ರೇಸ್‌ ಕೋರ್ಸ್‌ನಲ್ಲಿ ಯೋಗ ತಾಲೀಮು ನಡೆಯಿತು. ಕಾರ್ಯಕ್ರಮಕ್ಕೆ ಮೇಯರ್‌ ಪುಷ್ಪಲತಾ ಜಗನ್ನಾಥ್‌ ದೀಪ ಬೆಳಗಿ ಚಾಲನೆ ನೀಡಿದರೆ, ಸಚಿವರಾದ ಜಿ.ಟಿ. ದೇವೇಗೌಡ, ಸಾ.ರಾ. ಮಹೇಶ್‌, ಶಾಸಕ ಎಸ್‌.ಎ. ರಾಮದಾಸ್‌ ಸಾಥ್‌ ನೀಡಿದರು.

ಹಳದಿ, ಬಿಳಿ ವಸ್ತ್ರ ವಿತರಣೆ: ಬೆಳಗ್ಗೆಯೇ ಯೋಗ ಮ್ಯಾಟ್‌, ಜಮಾಖಾನಗಳ ಸಮೇತ ಸ್ಥಳಕ್ಕೆ ಆಗಮಿಸಿದ್ದ ಸುಮಾರು 4 ಸಾವಿರಕ್ಕೂ ಹೆಚ್ಚು ಮಂದಿ ಯೋಗಪಟುಗಳು ಯೋಗಾಭ್ಯಾಸದಲ್ಲಿ ತೊಡಗಿದರು. ಈ ಸಂದರ್ಭ ಅಂತಾರಾಷ್ಟ್ರೀಯ ಯೋಗಪಟು ಕು. ಖುಷಿ ಯೋಗಾಭ್ಯಾಸವನ್ನು ಹೇಳಿಕೊಟ್ಟರು. ಇತರೆ ಯೋಗ ಗುರುಗಳು ಕೈಜೋಡಿಸಿ ಯೋಗಪಟುಗಳನ್ನ ಹುರಿದುಂಬಿಸಿದರು. ಬಂದವರಿಗೆ ಹಳದಿ ಮತ್ತು ಬಿಳಿ ವಸ್ತ್ರವನ್ನು ನೀಡಲಾಯಿತು.

ಯೋಗ ಗುರುಗಳ ಮಾರ್ಗದರ್ಶನ: ಯೋಗಪಟುಗಳು ಸೂರ್ಯ ನಮಸ್ಕಾರ, ತ್ರಿಕೋನಾಸನ, ಪಾರ್ಶ್ವಕೋನಾಸನ, ಪೂರ್ವೋತ್ತಾನಾಸನ, ಪಶ್ಚಿಮೋತ್ತಾನಾಸನ, ಶಲಭಾಸನ, ಭುಜಂಗಾಸನ, ಮಕರಾಸನ, ಮೌನಾಸನ, ಶವಾಸನ ಸೇರಿದಂತೆ ಮತ್ತಿರ ಆಸನಗಳನ್ನು ಯೋಗ ಗುರುಗಳ ಮಾರ್ಗದರ್ಶನದಲ್ಲಿ ಪ್ರದರ್ಶಿಸಿದರು. ಯೋಗ ಗುರುಗಳ ಮಾರ್ಗದರ್ಶನ ಪಾಲಿಸಲು ಧ್ವನಿವರ್ಧಕದ ಅಳವಡಿಸಲಾಗಿತ್ತು.

ಈ ವೇಳೆ ಪಾಲಿಕೆ ಆಯುಕ್ತೆ ಶಿಲ್ಪಾನಾಗ್‌, ಯೋಗ ಗುರು ಶ್ರೀಹರಿ, ರವೀಂದ್ರಸ್ವಾಮಿ, ಬಿ.ಎಸ್‌. ಪ್ರಶಾಂತ್‌, ಡಿ. ರವಿಕುಮಾರ್‌ ಸೇರಿದಂತೆ ಯೋಗಾಸಕ್ತರು, ವಿದ್ಯಾರ್ಥಿಗಳು, ಯೋಗಬಂಧುಗಳು, ಸಾರ್ವಜನಿಕರು, ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳ ನೌಕರರು ಪಾಲ್ಗೊಂಡಿದ್ದರು.

ರಾಜೀನಾಮೆ ಅಂಗೀಕಾರದ ನಂತರ ರಾಜ್ಯಾಧ್ಯಕ್ಷರ ಬದಲಾವಣೆ: ಎಚ್‌. ವಿಶ್ವನಾಥ್‌ ಅವರ ರಾಜೀನಾಮೆ ಅಂಗೀಕಾರವಾದ ಮೇಲೆ ಜೆಡಿಎಸ್‌ ರಾಜ್ಯಾಧ್ಯಕ್ಷರ ಬದಲಾವಣೆ ಕುರಿತು ಚರ್ಚಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಸ್ಪಷ್ಟಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುವ ಜೆಡಿಎಸ್‌ ಘಟಕಕ್ಕೆ ನಿಖಿಲ್‌ ಕುಮಾರಸ್ವಾಮಿ ಹೆಸರು ಕೇಳಿ ಬಂದಿದೆಯೇ ಹೊರತು, ರಾಜ್ಯಾಧ್ಯಕ್ಷ ಸ್ಥಾನದ ರೇಸ್‌ನಲ್ಲಿ ಅವರ ಹೆಸರು ಇಲ್ಲ. ಈಗ ವಿಶ್ವನಾಥ್‌ ಅವರು ನೀಡಿರುವ ರಾಜೀನಾಮೆಯೇ ಅಂಗೀಕರವಾಗಿಲ್ಲ.

ಅದು ಅಂಗೀಕಾರಗೊಂಡ ಮೇಲೆ ಬದಲಾವಣೆ ಕುರಿತು ಚರ್ಚಿಸಲಾಗುವುದು. ಅಲ್ಲಿಯವರೆಗೂ ಬದಲಾವಣೆ ಕುರಿತು ಮಾತೇ ಇಲ್ಲ. ಯುವ ಘಟಕಕ್ಕೆ ನಿಖಿಲ್‌ ಹೆಸರು ಪ್ರಸ್ತಾಪವಾಗಿರುವುದರಿಂದ ಈ ಕುರಿತು ಚರ್ಚಿಸಬೇಕಿದೆ ಎಂದು ತಿಳಿಸಿದರು.

ಟಾಪ್ ನ್ಯೂಸ್

1-qwewqeqw

Pro Kabaddi;ಬೆಂಗಳೂರು ಬುಲ್ಸ್‌  ಜಯಭೇರಿ: ತಮಿಳ್‌ ತಲೈವಾಸ್‌ಗೆ 32-36 ಅಂಕಗಳ ಸೋಲು

1-ewewqe

Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡ‌ರ್ ಸ್ಫೋ*ಟ: ಅಪಾರ ಹಾನಿ

Bommai

By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ

CM-Shiggavi

By Election: ಬೊಮ್ಮಾಯಿ 4 ಬಾರಿ ಗೆದ್ರೂ ಕ್ಷೇತ್ರದ ಬಡವರಿಗೆ ಒಂದೂ ಮನೆ ಕಟ್ಟಿಸಿಲ್ಲ: ಸಿಎಂ

Hasanmbe

Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!

1-gopal

Maharashtra polls: ಗೋಪಾಲ್ ಶೆಟ್ಟಿ ನಾಮಪತ್ರ ಹಿಂಪಡೆಯುವಲ್ಲಿ ಯಶಸ್ವಿಯಾದ ಬಿಜೆಪಿ

5

Chocolate ಕೇವಲ ಸಸ್ಯಾಹಾರವೇ? ಸಸ್ಯಾಹಾರಿಗಳೇ ಗಮನಿಸಿ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Waqf

Waqf Issue: ಶ್ರೀರಂಗಪಟ್ಟಣದ ಸರಕಾರಿ ಶಾಲೆ ಮೇಲೂ ವಕ್ಫ್ ವಕ್ರದೃಷ್ಟಿ!

4

Hunsur: ಆಟೋ-ಬೈಕ್ ಡಿಕ್ಕಿ; ಸವಾರ ಸಾವು

ED-Raid

MUDA Case: ಜಾರಿ ನಿರ್ದೇಶನಾಲಯದಿಂದ ನೂರಾರು ಪುಟಗಳ ದಾಖಲೆ ವಶ

JDS

By Election: ಜೆಡಿಎಸ್‌ ಸ್ಟಾರ್‌ ಪ್ರಚಾರಕರ ಪಟ್ಟಿ: ಜಿಟಿಡಿ ಹೆಸರು ಔಟ್‌, ಪುತ್ರ ಎಂಟ್ರಿ 

Hunasuru-Women

Hunasur: ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ತಿಪಟೂರಿನ ಮಹಿಳೆ!

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-qwewqeqw

Pro Kabaddi;ಬೆಂಗಳೂರು ಬುಲ್ಸ್‌  ಜಯಭೇರಿ: ತಮಿಳ್‌ ತಲೈವಾಸ್‌ಗೆ 32-36 ಅಂಕಗಳ ಸೋಲು

1-ewewqe

Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡ‌ರ್ ಸ್ಫೋ*ಟ: ಅಪಾರ ಹಾನಿ

9

Kasaragod: ಪಟಾಕಿ ದುರಂತ ಪ್ರಕರಣ; ಸಾವಿನ ಸಂಖ್ಯೆ 4ಕ್ಕೆ ಏರಿಕೆ

Bommai

By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ

death

Manipal: ಸಾಲದಿಂದ ಬೇಸತ್ತು ಮಹಿಳೆ ಆತ್ಮಹ*ತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.