ಎಂಡೋಸಲ್ಫಾನ್ : ಸಂತ್ರಸ್ತರ ಪಟ್ಟಿಗೆ ಹೆಚ್ಚುವರಿ 511 ಮಂದಿ ಸೇರ್ಪಡೆ
Team Udayavani, Jun 17, 2019, 5:27 AM IST
ಕಾಸರಗೋಡು: ಎಂಡೋಸಲ್ಫಾನ್ ಸಂತ್ರಸ್ತರ ಪಟ್ಟಿಯಲ್ಲಿ ಹೆಚ್ಚುವರಿ 511 ಮಂದಿಯನ್ನು ಸೇರ್ಪಡೆಗೊಳಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿ ಕಿರು ಸಭಾಂಗಣದಲ್ಲಿ ಶನಿವಾರ ನಡೆದ ಎಂಡೋಸಲ್ಫಾನ್ ಜಿಲ್ಲಾ ಮಟ್ಟದ ಘಟಕ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ರಾಜ್ಯ ಕಂದಾಯ ಸಚಿವ ಇ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿದ್ದರು.
1981 ಮಂದಿಯ ಪಟ್ಟಿ ಈ ಹಿಂದೆ ಅಂಗೀಕರಿಸಿ, ಅವರಿಗೆ ಸೌಲಭ್ಯ ಒದಗಿಸಲಾಗುತ್ತಿದೆ. ಇದಲ್ಲದೆ 18 ವರ್ಷಕ್ಕಿಂತ ಕಳೆಗಿನವರನ್ನು ಈಗ ಸೇರಿಸಲಾಗಿದೆ. ಇವರಿಗೆ ಸರಕಾರ ಘೋಷಿಸಿರುವ ಎಲ್ಲ ಸೌಲಭ್ಯಗಳೂ ಲಭಿಸಲಿವೆ. ಈ ಪಟ್ಟಿಗೆ ಅರ್ಹರಾದವರನ್ನು ಪತ್ತೆ ಮಾಡುವ ನಿಟ್ಟಿನಲ್ಲಿ ಜೂ.25ರಿಂದ ಜುಲೈ 9 ರ ವರೆಗೆ ವಿವಿಧ ಪಂಚಾಯತ್‌ಗಳಲ್ಲಿ ಶಿಬಿರ ನಡೆಯಲಿದೆ. ಈ ಹಿಂದಿನ ಶಿಬಿರಗಳಲ್ಲಿ ಭಾಗವಹಿಸಲು ಸಾಧ್ಯವಾಗದೇ ಇರುವ ಸಂತ್ರಸ್ತರು ಈ ಶಿಬಿರದಲ್ಲಿ ಭಾಗವಹಿಸಬಹುದು. ಸಂತ್ರಸ್ತರ ಚಿಕಿತ್ಸೆಯ ಎಲ್ಲ ವೆಚ್ಚಗಳನ್ನೂ ಸರಕಾರ ವಹಿಸಿಕೊಳ್ಳಲಿದೆ. ಇದಕ್ಕೆ ಮಿತಿಯನ್ನು ಇನ್ನೂ ನಿಗದಿಪಡಿಸಿಲ್ಲ ಎಂದು ಸಚಿವ ತಿಳಿಸಿದರು.
ಪುನರ್ವಸತಿ ಗ್ರಾಮ ನಿರ್ಮಾಣಕ್ಕಾಗಿ 68 ಕೋಟಿ ರೂ. ನ ಸಮಗ್ರ ಯೋಜನೆ¿ ಅಳವಡಿಸಿ ಯೋಜನೆ ಜಾರಿಗೊಳಿಸಲು ಸರಕಾರ ಉದ್ದೇಶಿಸಿದೆ. ಪುನರ್ವತಿ ಯೋಜನೆ ತ್ವರಿತವಾಗಿಲ್ಲ ಎಂಬ ಆರೋಪವನ್ನು ಗಂಭಿರವಾಗಿ ಪರಿಶೀಲಿಸುತ್ತಿದೆ. ಸಂತ್ರಸ್ತರ 3 ಲಕ್ಷ ರೂ. ವರೆಗಿನ ಸಾಲಗಳನ್ನು ಮನ್ನಾ ಮಾಡುವ ಕ್ರಮ ಕೈಗೊಂಡಿದೆ. ಇದಕ್ಕೆ ಚೆಕ್ ಗಳನ್ನು ಖಜಾನೆಗೆ ಸಲ್ಲಿಸಿರುವುದಾಗಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ಶಿಲಾನ್ಯಾಸ ನಡೆಸಿ 6 ವರ್ಷ
ಶಿಲಾನ್ಯಾಸ ನಡೆಸಿ 6 ವರ್ಷ ಕಳೆದರೂ ಕಾಸರಗೋಡು ಮೆಡಿಕಲ್ ಕಾಲೇಜಿನ ಕಾಮಗಾರಿ ಪೂರ್ಣಗೊಳ್ಳದೇ ಉಳಿದಿದೆ. ತುರ್ತು 10ಕೊಟಿ ರೂ. ಸರಕಾರದಿಂದ ಲಭಿಸುವ ಕ್ರಮ ಕೈಗೊಳ್ಳಲಾಗುವುದು. ಸಂಸದರ, ಶಾಸಕರ ನಿಧಿ ಬಳಸಲೂ ಆಲೋಚಿಸಲಾಗುತ್ತಿದೆ. ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಕಿಡ್ಕೋ ಗೆ ಹಸ್ತಾಂತರಿಸಲಾಗಿದ್ದ 1.25 ಕೊಟಿ ರೂ. ಗುತ್ತಿಗೆದಾರರಿಗೆ ನೀಡದೇ ಬೇರೆ ವಿಚಾರಗಳಿಗಾಗಿ ವೆಚ್ಚ ಮಾಡಲಾಗಿದೆ ಎಂಬ ಆರೋಪ ಬಗ್ಗೆ ತನಿಖೆ ನಡೆಸಲಾಗುವುದು. ಎಂಡೋಸಲ್ಫಾನ್ ಸಂತ್ರಸ್ತರಿಂದ ಅಕ್ಷಯ ಕೇಂದ್ರಗಳಲ್ಲಿ 50 ರೂ. ನೋಂದಣಿ ಶುಲ್ಕವಾಗಿ ಪಡೆಯುತ್ತಿರುವ ದೂರುಗಳಿದ್ದು, ಈ ಬಗ್ಗೆ ತನಿಖೆ ನಡೆಸಲಾಗುವುದು. ಎಂದು ಜಿಲ್ಲಾಧಿಕಾರಿ ಸಭೆಯಲ್ಲಿ ತಿಳಿಸಿದರು.
ಶೀಘ್ರದಲ್ಲೇ ಆರಂಭ
ಬಡ್ಸ್ ಶಾಲೆಗಳ ಚಟುವಟಿಕೆಗಳನ್ನು ಶೀಘ್ರದಲ್ಲೇ ಆರಂಭಿಸಲಾಗುವುದು. Í. ಡಯಾಲಿಸಿಸ್ ಅಗತ್ಯವಿರುವ ಎಲ್ಲ ಸಂತ್ರಸ್ತರಿಗೆ ಬೇಕಾದ ಸೌಲಭ್ಯ ಸರಕಾರಿ ಆಸ್ಪತ್ರೆಗಳಲ್ಲಿ ಇಲ್ಲ. ಈ ಹಿನ್ನೆಲೆಯಲ್ಲಿ ಖಾಸಗಿ ಅಸ್ಪತ್ರೆಗಳಲ್ಲೂ ಸೌಲಭ್ಯ ಏರ್ಪಡಿಸಲಾಗುವುದು.
ಸರಕಾರಗಳು ವಿಫಲ
ಸಂತ್ರಸ್ತರಿಗೆ ಕೇಂದ್ರ ಸರಕಾರದಿಂದ, ಎಂಡೋಸಲ್ಫಾನ್ ನಿರ್ಮಾಣ ಸಂಸ್ಥೆಯಿಂದ, ರಾಜ್ಯ ತೋಟ ಗಾರಿಕೆ ನಿಗಮದಿಂದ ಲಭಿಸಬೇಕಾದ ಸಹಾಯ ಗಳನ್ನು ಒದಗಿಸುವಲ್ಲಿ ರಾಜ್ಯದಲ್ಲಿ ಆಡಳಿñ ನಡೆಸಿದ ಸರಕಾರಗಳು ವಿಫಲವಾಗಿವೆ ಎಂಬ ಆರೋಪ ಸಭೆಯಲ್ಲಿ ಕೇಳಿಬಂತು. ಇಂದಿಗೂ ದಾಸ್ತಾನು ಕೇಂದ್ರದಲ್ಲಿರುವ ಕೀಟನಾಶಕ ಹಾಗೆಯೇ ಇದೆ. ಇದು ಅಪಾಯಕ್ಕೆ ಕಾರಣವಾಗಲಿದೆ ಎಂಬ ದೂರುಗಳು ಕೇಳಿಬಂದುವು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಶಾಸಕರಾದ ಎನ್.ಎ.ನೆಲ್ಲಿಕುನ್ನು, ಕೆ.ಕುಂಞಿ ರಾಮನ್, ಹೆಚ್ಚುವರಿ ದಂಡನಾಧಿಕಾರಿ ಸಿ.ಬಿಜು, ಘಟಕ ಸದಸ್ಯರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..
Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್ ಸೊರೇನ್ ನ.28ಕ್ಕೆ ಪದಗ್ರಹಣ
Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.