ರಾಹುಲ್‌ಗೆ ರಮ್ಯಾ ಮಂಕುಬೂದಿ?
ಕಾಂಗ್ರೆಸ್‌ಗೆ ಅಧಿಕಾರ ಶತಃಸಿದ್ಧ ಎಂದಿದ್ದ ನಟಿ
Team Udayavani, Jun 17, 2019, 5:40 AM IST
ಹೊಸದಿಲ್ಲಿ: “ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಏನಿಲ್ಲವೆಂ ದರೂ, 164ರಿಂದ 184 ಸ್ಥಾನಗಳನ್ನು ಗೆದ್ದೇ ಗೆಲ್ಲುತ್ತೆ. ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಅಧಿಕಾರಕ್ಕೆ ಬರುವುದು ಖಾತ್ರಿ. ನೀವು ನಿಶ್ಚಿಂತರಾಗಿರಿ’ ಎಂದು ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕೂತಲ್ಲಿ, ನಿಂತಲ್ಲಿ ಅವರ ತಲೆಗೆ ತುಂಬುತ್ತಿದ್ದ ಅವರ ಆಪ್ತರಾದ ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥೆ, ನಟಿ ರಮ್ಯಾ (ದಿವ್ಯಸ್ಪಂದನ) ಹಾಗೂ ಪಕ್ಷದ ಚುನಾವಣಾ ತಂತ್ರಗಾರಿಕೆ ಜವಾಬ್ದಾರಿ ಹೊತ್ತಿದ್ದ ಪ್ರವೀಣ್ ಚಕ್ರವರ್ತಿ ಎಂಬುವರು ರಾಹುಲ್ ಅವರಿಂದ ಬರೋಬ್ಬರಿ 30 ಕೋಟಿ ರೂ. ಪಡೆದಿದ್ದಾರೆ ಎಂದು ಮೂಲಗಳು ಹೇಳಿವೆ.
“ದ ಗಾರ್ಡಿಯನ್’ ನೀಡಿರುವ ವರದಿ ಆಧರಿಸಿ “ಟೈಮ್ಸ್ ನೌ’ ಪ್ರಕಟಿಸಿರುವ ವರದಿಯಲ್ಲಿ ಈ ವಿಷಯ ಹೇಳಲಾಗಿದ್ದು, ರಮ್ಯಾ, ಪ್ರವೀಣ್ ಮಾತನ್ನು ಬಲವಾಗಿ ನಂಬಿದ್ದ ರಾಹುಲ್, ಚುನಾವಣೆ ಮುಗಿದ ಕೂಡಲೇ ಯುಪಿಎ ಮಿತ್ರಪಕ್ಷಗಳ ನಾಯಕರಿಗೆ ಫೋನಾಯಿಸಿ, ಸಂಪುಟಕ್ಕೆ ಸೇರ್ಪಡೆಗೊಳ್ಳುವ ಸಚಿವರ ಬಗ್ಗೆ ಮಾತುಕತೆ ನಡೆಸಿದ್ದರು. ಮತ್ತೂಂದೆಡೆ, ಫಲಿತಾಂಶ ಬಂದ ದಿನ ರಾಷ್ಟ್ರಪತಿ ಬಳಿ ಸರಕಾರ ರಚಿಸಲು ಹಕ್ಕೊತ್ತಾಯ ಮಂಡಿಸುವ ಕಾನೂನಾತ್ಮಕ ಪ್ರತಿಗಳನ್ನು ಸಿದ್ಧಪಡಿಸಿದ್ದರು!
ಆದರೆ, ಫಲಿತಾಂಶ ಹೊರಬಿದ್ದಾಗಲೇ ರಾಹುಲ್‌ಗೆ ವಾಸ್ತವದ ಅರಿವಾಯಿತು. ಅಷ್ಟರಲ್ಲಿ ರಮ್ಯಾ ಹಾಗೂ ಪ್ರವೀಣ್‌ಚಕ್ರವರ್ತಿ ಹಲವಾರು ಸಮೀಕ್ಷೆಗಳನ್ನು ನಡೆಸಿರುವುದಾಗಿ ಹೇಳಿ ರಾಹುಲ್ ಅವರಿಂದ ಅಪಾರ ಹಣವನ್ನು ಶುಲ್ಕದ ರೂಪದಲ್ಲಿ ಪಡೆದಿದ್ದರು. ರಮ್ಯಾ 8 ಕೋಟಿ ರೂ. ಪಡೆದಿದ್ದರೆ, ಪ್ರವೀಣ್ 24 ಕೋಟಿ ರೂ. ಪಡೆದಿದ್ದರು ಎಂದು ಹೇಳಲಾಗಿದೆ.
ರಮ್ಯಾ ನಾಪತ್ತೆ: ಚುನಾವಣಾ ಫಲಿತಾಂಶ ಬಂದ ನಂತರ ಕೆಲವೇ ದಿನಗಳಲ್ಲಿ ರಮ್ಯಾ ಅವರು ತಮ್ಮ ಟ್ವಿಟರ್ ಖಾತೆಯನ್ನು ಡಿಲೀಟ್ ಮಾಡಿ ಏಕಾಏಕಿ ನಾಪತ್ತೆಯಾಗಿ ದ್ದಾರೆ. ಕೇಂದ್ರದಲ್ಲಿ ಮೋದಿ ಸರಕಾರ ಅಧಿಕಾರ ಸ್ವೀಕರಿಸಿದ ಅನಂತರ, ಹಣಕಾಸು ಸಚಿವೆಯಾದ ನಿರ್ಮಲಾ ಸೀತಾರಾಮನ್ ಅವರಿಗೆ, ನೀವು ದೇಶದ ಮೊದಲ ಹಣಕಾಸು ಸಚಿವೆಯಲ್ಲ. ಇಂದಿರಾಜೀ ನಂತರ 2ನೇ ಹಣಕಾಸು ಸಚಿವೆ. ನಿಮಗೆ ಶುಭವಾಗಲಿ ಎಂದು ಟ್ವೀಟ್ ಮಾಡಿದ್ದ ರಮ್ಯಾ ಆನಂತರ ಏಕಾಏಕಿ ಟ್ವಿಟರ್ ಖಾತೆಯನ್ನೇ ಡಿಲೀಟ್ ಮಾಡಿದ್ದರು.
ವಿಪಕ್ಷ ನಾಯಕ ಯಾರು?
ಸಂಸತ್ತಿನಲ್ಲಿ ಬಜೆಟ್ ಅಧಿವೇಶನ ಆರಂಭಗೊಳ್ಳಲು ದಿನಗಣನೆ ಆರಂಭವಾಗಿದ್ದರೂ ಲೋಕಸಭೆಯಲ್ಲಿ ವಿರೋಧ ಪಕ್ಷಗಳ ನಾಯಕ ಇನ್ನೂ ಯಾರು ಎಂಬುದು ನಿರ್ಧಾರವಾಗದಿರುವುದು ಸೋಜಿಗವೆನಿಸಿದೆ. ಈ ಬಗ್ಗೆ ವಿಪಕ್ಷಗಳಲ್ಲಿನ್ನೂ ಒಮ್ಮತ ರೂಪುಗೊಂಡಿಲ್ಲ ಎನ್ನಲಾಗಿದೆ. ಆದರೆ, ಒಮ್ಮತದ ಅಭಿಪ್ರಾಯ ರೂಪಿಸಲು ಸಭೆಯನ್ನೂ ನಿಗದಿಗೊಳಿಸಿಲ್ಲ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಡಿ. 26: ಶಬರಿಮಲೆಯಲ್ಲಿ ಮಂಡಲ ಪೂಜೆ
BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ
Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ
Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ
NIA; ಪ್ರವೀಣ್ ನೆಟ್ಟಾರು ಹ*ತ್ಯೆ ಪ್ರಕರಣದ ಆರೋಪಿ ವಿಮಾನ ನಿಲ್ದಾಣದಲ್ಲೇ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.