ಅಷ್ಟಾಂಗ ಯೋಗದಿಂದ ಆರೋಗ್ಯ ವೃದ್ಧಿ
ಮೈತುಂಬಾ ಕೆಲಸ-ಹೊಟ್ಟೆ ತುಂಬಾ ಊಟ-ಕಣ್ತುಂಬ ನಿದ್ರೆ ಆರೋಗ್ಯಕರ ಜೀವನ ಶೈಲಿ: ಡಾ| ಇತ್ಲಿ
Team Udayavani, Jun 17, 2019, 11:26 AM IST
ಮಸ್ಕಿ: ವೀರಶೈವ ವಿದ್ಯಾವರ್ಧಕ ಸಂಘದ ಶಾಲಾ ಆವರಣದಲ್ಲಿ ನಡೆದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಿಬಿರಾರ್ಥಿಗಳು.
ಮಸ್ಕಿ: ಜೀವಾತ್ಮ ಮತ್ತು ಪರಮಾತ್ಮನಲ್ಲಿ ಏಕೀಕರಣಗೊಳ್ಳುವುದಕ್ಕೆ ಯೋಗ ಎನ್ನುತ್ತಾರೆ. ಆರೋಗ್ಯಕರ ಜೀವನಕ್ಕಾಗಿ ಋಷಿಮುನಿಗಳು ಅಷ್ಟಾಂಗ ಯೋಗ ಪದ್ಧತಿ ಕಲಿಸಿದ್ದಾರೆ. ಇವುಗಳನ್ನು ಪಾಲಿಸಿದರೆ ಮನುಷ್ಯ ಆರೋಗ್ಯಕರ ಜೀವನ ಸಾಗಿಸಬಹುದು ಎಂದು ಗಚ್ಚಿನ ಹಿರೇಮಠದ ಶ್ರೀ ವರರುದ್ರಮುನಿ ಶಿವಾಚಾರ್ಯರು ಹೇಳಿದರು.
ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ರವಿವಾರ ಪಟ್ಟಣದ ವೀರಶೈವ ವಿದ್ಯಾವರ್ಧಕ ಸಂಘದ ಶಾರದಾ ಪ್ರಾಥಮಿಕ, ಪ್ರೌಢಶಾಲೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಷ್ಟಾಂಗ ಯೋಗದಲ್ಲಿ ತೊಡಗಿದರೆ ಶಾರೀರಿಕ, ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ. ಆರೋಗ್ಯಕರ ಮತ್ತು ನೆಮ್ಮದಿಯ ಜೀವನ ನಡೆಸಬಹುದು. ಆಸ್ಪತ್ರೆಗೆ ಹೋಗುವ ಪ್ರಮೇಯವೇ ಬರುವುದಿಲ್ಲ ಎಂದರು.
ಡಾ| ಶಿವಶರಣಪ್ಪ ಇತ್ಲಿ ಮಾತನಾಡಿ, ಮನುಷ್ಯ ಆರೋಗ್ಯವಾಗಿರಬೇಕಾದರೆ ಮೈತುಂಬ ಕೆಲಸವಿರಬೇಕು. ಹೊಟ್ಟೆ ತುಂಬ ಊಟ ಮಾಡಬೇಕು ಮತ್ತು ಕಣ್ತುಂಬ ನಿದ್ದೆ ಮಾಡಿದರೆ ಸಾಕು ಆರೋಗ್ಯವಾಗಿರುತ್ತಾನೆ ಎಂದರು.
ಆಯುರ್ವೇದ ವೈದ್ಯ ಪ್ರವೀಣ ಸಾನಬಾಳ ಮಾತನಾಡಿ, ಭಾರತದಲ್ಲಿ ಅಸ್ತಿತ್ವಕ್ಕೆ ಬಂದ ಯೋಗ ವಿದ್ಯೆ ಇದು ಪ್ರಪಂಚದ ಎಲ್ಲ ಕಡೆ ಪ್ರಾಮುಖ್ಯತೆ ಪಡೆದಿದೆ. ಆರೋಗ್ಯದ ಗುಟ್ಟನ್ನು ನಮ್ಮ ಋಷಿಮುನಿಗಳು ಯೋಗದಲ್ಲಿ ಕಂಡುಕೊಂಡಿದ್ದು ಅವುಗಳ ಬಳಕೆ ಕುರಿತು ತಿಳಿ ಹೇಳಿದ್ದಾರೆ ಎಂದರು.
ಡಾ| ಬಿ.ಎಚ್.ದಿವಟರ, ಯೋಗಾಚಾರ್ಯ ಆನಂದ ಪತ್ತಾರ, ಮಹಾಂತೇಶ ಬ್ಯಾಳಿ ಮಾತನಾಡಿದರು.
ಪ್ರಕಾಶ ಧಾರಿವಾಲ, ಪತಂಜಲಿ ಸಮಿತಿ ಅಧ್ಯಕ್ಷ ಸುಕುಮುನಿಯಪ್ಪ ನಾಯಕ, ಮಹಿಳಾ ಘಟಕದ ಅಧ್ಯಕ್ಷೆ ಚಂದ್ರಕಲಾ ದೇಶಮುಖ, ಕಸ್ತೂರಿ ಇತ್ಲಿ, ಲಯನ್ಸ್ ಕ್ಲಬ್ ಅಧ್ಯಕ್ಷ ನಾಗರಾಜ ಕಂಬಾರ, ವರ್ತಕ ಶಶಿಕಾಂತ ಬ್ಯಾಳಿ, ಡಾ| ಮಲ್ಲಿಕಾರ್ಜುನ ಇತ್ಲಿ, ಡಾ| ಶಿವಪ್ರಸಾದ ಪತ್ತಾರ, ಡಾ| ಮಲ್ಲಿಕಾರ್ಜುನ ಶೆಟ್ಟಿ, ಶಿವರಾಜ ಯಂಬಲದ ಇದ್ದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಅತಿಥಿಗಳಿಗೆ ಸಸಿ ವಿತರಿಸಲಾಯಿತು. ಸುಮಾರು 200 ಜನ ಶಿಬಿರಾರ್ಥಿಗಳು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
ಕಡಬ, ಬೆಳ್ತಂಗಡಿ ಸೇರಿದಂತೆ ಹಲವೆಡೆ ಮಾದಕವಸ್ತು, ಅಕ್ರಮ ಮದ್ಯ ಮಾರಾಟ ವಿರುದ್ಧ ಕಾರ್ಯಾಚರಣೆ
Bidar: ವಕ್ಫ್ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್‌ಗಳು-ಕಡಲಾಮೆಗೆ ಅಪಾಯ!
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
BBK11: ಧರ್ಮ ಬಿಗ್ ಬಾಸ್ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್ ಹೀರೋʼ ಎಡವಿದ್ದೆಲ್ಲಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.