ಟೀ ಕಪ್ ನಿಮ್ಗೆ, ವರ್ಲ್ಡ್ ಕಪ್ ನಮ್ಗೆ …
ಪಾಕ್‌ಗೆ ಪಾರುಲ್ ಟಾಂಗ್
Team Udayavani, Jun 18, 2019, 3:00 AM IST
ಕೆಲ ದಿನಗಳ ಹಿಂದೆ ಪಾಕಿಸ್ತಾನದ ಟಿವಿ ಮಾಧ್ಯಮವೊಂದು ಭಾರತವನ್ನು ಅವಹೇಳನ ಮಾಡುವಂತ ಜಾಹೀರಾತೊಂದನ್ನು ಪ್ರಸಾರ ಮಾಡಿತ್ತು. ಪುಲ್ವಾಮ ದಾಳಿಗೆ ಪ್ರತಿಕಾರವಾಗಿ ಬಾಲಾಕೋಟ್‌ನಲ್ಲಿ ಏರ್‌ಸ್ಟ್ರೈಕ್ ನಡೆಸಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಹೋಲುವ ವ್ಯಕ್ತಿಯನ್ನು ಬಳಸಿಕೊಂಡು, ಭಾರತವನ್ನು ಹೀಯಾಳಿಸುವ ರೀತಿ ಜಾಹೀರಾತಿನಲ್ಲಿ ಬಿಂಬಿಸಲಾಗಿತ್ತು.
ಇದು ಭಾರತಕ್ಕೆ ಮತ್ತು ವೀರ ಯೋಧ ಅಭಿನಂದನ್ ವರ್ಧಮಾನ್ ಅವರಿಗೆ ಮಾಡಿದ ಅವಮಾನ ಎಂದು ಭಾರತೀಯರ ಕೆಂಗಣ್ಣಿಗೆ ಗುರಿಯಾಗಿತ್ತು. ಈಗ ಪಾಕ್ ಮಾಡಿದ ಅವಮಾನಕ್ಕೆ ಸರಿಯಾದ ಉತ್ತರ ಎನ್ನುವಂತೆ ನಟಿ ಪಾರುಲ್ ತಮ್ಮದೇ ಸ್ಟೈಲ್‌ನಲ್ಲಿ ಪಂಚ್ ನೀಡಿದ್ದಾರೆ. ಹೌದು, ಸೋಮವಾರ ನಡೆದ ಕ್ರಿಕೆಟ್ ವರ್ಲ್ಡ್ ಕಪ್‌ನ ಹೈ ವೋಲ್ಟೆಜ್ ಪಂದ್ಯದಲ್ಲಿ ಭಾರತ, ಪಾಕಿಸ್ತಾನದ ವಿರುದ್ದ ಭರ್ಜರಿ ಜಯ ಸಾಧಿಸಿದೆ.
When the rain came calling… idle minds!! #IndiaVsPakistan #ICCWC2019 #AbhinandanVarthaman pic.twitter.com/pwfOjUE9h9
— Parul Yadav (@TheParulYadav) June 16, 2019
ಇನ್ನು ತಮ್ಮ ಸ್ನೇಹಿತರ ಜೊತೆ ಗೂಡಿ ಈ ಪಂದ್ಯವನ್ನು ತುಂಬಾ ಎಂಜಾಯ್ ಮಾಡಿದ ನಟಿ ಪಾರುಲ್‌ಗೆ ಪಾಕ್ ವಿರುದ್ದ ಭಾರತ ಗೆದ್ದಿದ್ದು ಅವರಿಗೆ ತುಂಬ ಖುಷಿ ನೀಡಿದೆ. ಈ ವಿಜಯೋತ್ಸವದಲ್ಲಿ ನಟಿ ಪಾರುಲ್, “ಟೀ ಕಪ್ ನೀವೆ ಇಟ್ಟುಕೊಳ್ಳಿ, ನಾವು ವರ್ಲ್ಡ್ಕಪ್ ಗೆಲ್ಲುತ್ತೇವೆ’ ಎಂದು ಅಭಿನಂದನ್ ಅವರ ರೀತಿಯ ಮೀಸೆ ಧರಿಸಿ ಅದೇ ಜಾಹೀರಾತಿನ ಮೂಲಕ ಪಾಕಿಸ್ತಾನದ ಕಾಲೆಳೆದಿದ್ದಾರೆ.
ಸದ್ಯ ಪಾಕ್‌ಗೆ ಪಾರುಲ್ ಕೊಟ್ಟಿರುವ ಟಾಂಗ್ ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್ ಆಗಿದ್ದು, ಅನೇಕರು ಪಾರುಲ್ ಕೆಲಸಕ್ಕೆ ಭೇಷ್ ಎಂದಿದ್ದಾರೆ.
Two years back I was at the Oval when we didn’t win a single over.. the game today has been more than revenge!! #INDVPAK #ICCCricketWorldCup2019 pic.twitter.com/et9GN7QT8B
— Parul Yadav (@TheParulYadav) June 16, 2019
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Nikhil Kumarswamy: ಸೋತ ನಿಖಿಲ್‌ಗೆ ಜಿಲೆಯ ಪಕ್ಷ ಸಂಘಟನೆ ಹೊಣೆ
ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ
Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ
Mandya: ಬಹುಮಾನ ಗೆದ್ದ ಹಳ್ಳಿಕಾರ್ ತಳಿಯ ಎತ್ತು ದಾಖಲೆಯ 13 ಲಕ್ಷ ರೂ.ಗೆ ಮಾರಾಟ!
Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.