“ಆಧುನಿಕ ಪದ್ಧತಿಯ ಅನುಕರಣೆಯಿಂದ ಕೃಷಿ ಲಾಭದಾಯಕ’
Team Udayavani, Jun 18, 2019, 5:58 AM IST
ಕಾಪು: ಕೃಷಿಕರು ನಾವು ಅನುಸರಿಸಿದ ಕ್ರಮಗಳೇ ಸರಿ ಎಂದು ತಿಳಿದು ಅದೇ ಪದ್ಧತಿಗಳನ್ನು ಮುಂದುವರಿಸುವ ಬದಲು ಪ್ರಗತಿಪರ ರೈತರು, ಕೃಷಿ ವಿಜ್ಞಾನಿಗಳ ಸಲಹೆ ಪಡೆದು ಕೃಷಿ ವಿಧಾನಗಳಲ್ಲಿ ಮುಂದುವರಿದರೆ ಕೃಷಿ ಲಾಭದಾಯಕವಾಗಿ ಮೂಡಿಬರಲು ಸಾಧ್ಯವಿದೆ ಎಂದು ಪ್ರಗತಿಪರ ಕೃಷಿಕ ಸುಬ್ರಹ್ಮಣ್ಯ ತಂತ್ರಿ ಪಾದೂರು ಹೇಳಿದರು.
ಉಡುಪಿ ಜಿಲ್ಲಾ ಕೃ‚ಷಿಕ ಸಂಘದ ವತಿಯಿಂದ ಪಾದೂರು ಗ್ರಾಮದ ಕುರಾಲು ರೈಸ್ ಮಿಲ್ ಬಳಿಯ ಸರೋಜ ತಂತ್ರಿಯವರ ಮನೆ ವಠಾರದಲ್ಲಿ ನಡೆದ ತೆಂಗು ಕೃಷಿ ಮಾಹಿತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತೆಂಗಿನ ತೋಟದ ತ್ಯಾಜ್ಯವನ್ನು ಬಿಸಾಡದೆ ತೆಂಗಿನ ಮರದ ಬುಡಕ್ಕೆ ಹರಡಿದರೆ ಬೇಸಿಗೆಯಲ್ಲಿ ನೀರಿನ ಪ್ರಮಾಣ ಕಡಿಮೆ ಇದ್ದಾಗ ಕೂಡ ತೋಟ ಹಾಳಾಗುವುದಿಲ್ಲ. ಉಡುಪಿ ಜಿಲ್ಲಾ ಕೃಷಿಕ ಸಂಘವು ನೀಡಿದ ಮಾಹಿತಿಯಂತೆ ಕಳೆದ 20 ವರ್ಷಗಳಿಂದ ತೆಂಗಿನ ಮರಗಳಿಗೆ ಕಟ್ಟೆ ಕಟ್ಟದೆ ಪ್ರಯೋಗದ ಕೃಷಿ ಮಾಡಿ ಸಾವಿರಾರು ಕೂಲಿ ಹಣ ಉಳಿಸಿರುವುದಲ್ಲದೇ, ಸಮƒದ್ಧ ಫಸಲಿನೊಂದಿಗೆ ಲಾಭ ಗಳಿಸುವಲ್ಲಿಯೂ ಯಶಸ್ವಿಯಾಗಿದ್ದೇನೆ ಎಂದರು.
ಮಜೂರು ಗ್ರಾಮ ಪಂಚಾಯತ್ ಅಧ್ಯಕ್ಷ ಸಂದೀಪ್ ರಾವ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ, ಬಂಟಕಲ್ಲು ವೇಣುಗೋಪಾಲ ಎಂ. ಪಡುಕಳತ್ತೂರು ತೆಂಗು ಕೃಷಿಯ ಸಮಗ್ರ ಮಾಹಿತಿ ನೀಡಿದರು. ವಿಠಲ ತಂತ್ರಿ, ರಘುಪತಿ ತಂತ್ರಿ, ಶಂಕರ ಶೆಟ್ಟಿಗಾರ್, ಸರೋಜ ತಂತ್ರಿ ಮೊದಲಾದವರು ಉಪಸ್ಥಿತರಿದ್ದರು.
ಮಜೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸಹನಾ ತಂತ್ರಿ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಹರಿಕೃಷ್ಣ ಐತಾಳ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Question paper leak ಶಂಕೆ: ಪಿಡಿಒ ಪರೀಕ್ಷೆ ಬಹಿಷ್ಕರಿಸಿ ಪ್ರತಿಭಟನೆ
Kanakadasa Jayanthi ಇಂದು; ಕನಕದಾಸರ ತಣ್ತೀಗಳು ಹಿಂದೆಂದಿಗಿಂತ ಇಂದಿಗೆ ಹೆಚ್ಚು ಪ್ರಸ್ತುತ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.