ಬೆನ್ನುಮೂಳೆಯ ವಕ್ರತೆ: ಬೆಂಡಾಯಿತು ಬದುಕು
ಚಿಕಿತ್ಸೆಗೆ ಬೇಕಿದೆ 4 ಲ.ರೂ.: ದಾನಿಗಳಿಗೆ ಅಮೃತಾ ಹೆತ್ತವರ ಮನವಿ
Team Udayavani, Jun 18, 2019, 5:00 AM IST
ಥೋರೋಸಕ್ ಸ್ಕೊಲಿಯೋಸಿಕ್ ಕಾಯಿಲೆಗೆ ತುತ್ತಾಗಿರುವ ಅಮೃತಾ.
ಗುತ್ತಿಗಾರು: ಎಲ್ಲವೂ ಸರಿಯಿದ್ದರೆ ಈಕೆ ಎಲ್ಲರಂತೆ ಆಟವಾಡುತ್ತ ಬೆಳೆಯುತ್ತಿದ್ದಳು. ಆದರೆ, ವಿಧಿ ಈಕೆಯ ಬಾಳಲ್ಲಿ ಆಟವಾಡುತ್ತಿದೆ. ಥೋರೋಸಕ್ ಸ್ಕೊಲಿಯೋಸಿಕ್ (ಬೆನ್ನುಮೂಳೆಯ ವಕ್ರತೆ) ಎನ್ನುವ ವಿರಳವಾದ ಕಾಯಿಲೆಯಿಂದ ಬಳಲುತ್ತಿರುವ ಮಾವಿನಕಟ್ಟೆ ಹಿ.ಪ್ರಾ. ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ ಅಮೃತಾಳ ಬದುಕು ಬೆಂಡಾಗಿದೆ. ದೇವಚಳ್ಳ ಗ್ರಾಮದ ತಳೂರು ಮೆತ್ತಡ್ಕ ನಿವಾಸಿ ಸತೀಶ್ ನಾಯ್ಕ ಮತ್ತು ಗಾಯತ್ರಿ ಅವರ ಮೂವರು ಪುತ್ರಿಯರಲ್ಲಿ ಎರಡನೆಯವಳು. ಆರು ತಿಂಗಳಿನಿಂದ ಬೆನ್ನು ನೋವು ಆರಂಭವಾಗಿ ಕ್ರಮೇಣ ಬೆನ್ನು ಬಾಗಿ ಹೋಗಿದೆ.
ಗುಣಪಡಿಸುವ ಭರವಸೆ
ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರೂ ಪ್ರಯೋಜನವಾಗಿಲ್ಲ. ಮಂಗಳೂರಿನ ಯೇನೆಪೊಯ ಆಸ್ಪತ್ರೆಯ ವೈದ್ಯರು ಸರಿಪಡಿಸುವ ಭರವಸೆ ನೀಡಿದ್ದಾರೆ. ಇದಕ್ಕೆ 4 ಲಕ್ಷ ರೂ. ಖರ್ಚು ತಗಲಬಹುದು ಎಂದು ತಿಳಿಸಿದ್ದಾರೆ. ಆದರೆ ತೀರಾ ಬಡತನದಲ್ಲಿರುವ ಆಕೆಯ ಹೆತ್ತವರಿಗೆ ಚಿಕಿತ್ಸಾ ವೆಚ್ಚ ಭರಿಸುವುದು ಅಸಾಧ್ಯವಾಗಿದೆ.
ಎರಗಿದ ಬರಸಿಡಿಲು
ಕೂಲಿ ಮಾಡಿ ಜೀವನ ಸಾಗಿಸುತ್ತಿರುವ ಹೆತ್ತವರಿಗೆ ಅಮೃತಾಳ ಅಸೌಖ್ಯದಿಂದ ಬರಸಿಡಿಲು ಎರಗಿದಂತಾಗಿದೆ. ಕೈಯಲ್ಲಿದ್ದ ಅಲ್ಪಸ್ವಲ್ಪ ಹಣವನ್ನು ಚಿಕಿತ್ಸೆಗೆ ವ್ಯಯಿಸಲಾಗಿದ್ದು, ಇದೀಗ ಸಹೃದಯರಲ್ಲಿ ಅಂಗಲಾಚುತ್ತಿದ್ದಾರೆ. ಅಮೃತಾ ಎಲ್ಲ ಮಕ್ಕಳಂತೆ ನಲಿದಾಡಲು ಸಹೃದಯೀ ದಾನಿಗಳ ಸಹಾಯ ಬೇಕಾಗಿದೆ. ಅಮೃತಾಳ ಬದುಕಿಗೆ ದಾರಿದೀಪವಾಗಬೇಕು ಎನ್ನುವವರು ಆಕೆಯ ಅಜ್ಜಿ ಜಾನಕಿ, ಮೆತ್ತಡ್ಕ ಮನೆ ಅವರ ಸಿಂಡಿಕೇಟ್ ಬ್ಯಾಂಕ್ ಗುತ್ತಿಗಾರು ಶಾಖೆಯ ಖಾತೆ ಸಂಖ್ಯೆ: 01642200045005, ಐಎಫ್ಎಸ್‌ಸಿ ಸಂಖ್ಯೆ ಎಸ್‌ವೈಎನ್‌ಬಿ0000164 ಇದಕ್ಕೆ ಧನ ಸಹಾಯ ಮಾಡಬಹುದು.
ಥೋರೋಸಕ್ ಸ್ಕೊಲಿಯೋಸಿಕ್ (ಬೆನ್ನುಮೂಳೆಯ ವಕ್ರತೆ) ಎನ್ನುವ ವಿರಳವಾದ ಕಾಯಿಲೆಯಿಂದ ಬಳಲುತ್ತಿರುವ ಮಾವಿನಕಟ್ಟೆ ಹಿ.ಪ್ರಾ. ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ ಅಮೃತಾಗೆ ಚಿಕಿತ್ಸೆ ನೀಡಲು 4 ಲಕ್ಷ ರೂ.ಗಳಿಗೂ ಅಧಿಕ ವೆಚ್ಚ ತಗಲುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್: ಫೋಟೋ ಸಾಕ್ಷ್ಯ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.