ಮೆಟ್ರೋ ಕಾಮಗಾರಿ: ಸಂಚಾರ ನಿರ್ಬಂಧ
Team Udayavani, Jun 18, 2019, 3:06 AM IST
ಬೆಂಗಳೂರು: ನಗರದ “ಹಾಟ್ ಸ್ಪಾಟ್’ ಎಂ.ಜಿ.ರಸ್ತೆ ಹಾಗೂ ಅದಕ್ಕೆ ಕೂಡುವ ರಸ್ತೆಗಳ ಆಯ್ದ ಮಾರ್ಗಗಳಲ್ಲಿ ಇನ್ನುಮುಂದೆ ಎಂದಿಗಿಂತ ಹೆಚ್ಚು ವಾಹನದಟ್ಟಣೆ ಸಮಸ್ಯೆ ಉಂಟಾಗಲಿದೆ. ಅದೂ ಒಂದಲ್ಲ, ಎರಡಲ್ಲ; ಮುಂದಿನ ಸುಮಾರು ಮೂರು ವರ್ಷ ಈ ಸಮಸ್ಯೆ ಎದುರಿಸಲು ಸಾರ್ವಜನಿಕರು ಮಾನಸಿಕವಾಗಿ ಸಜ್ಜಾಗಬೇಕಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮವು “ನಮ್ಮ ಮೆಟ್ರೋ’ ಎರಡನೇ ಹಂತದ ಸುರಂಗ ಮಾರ್ಗ ಕಾಮಗಾರಿ ಕೈಗೆತ್ತಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಉದ್ದೇಶಿತ ಎಂ.ಜಿ. ರಸ್ತೆಯ ಹಲವು ಭಾಗಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ. ಹಾಗಾಗಿ, ಪರ್ಯಾಯ ರಸ್ತೆಗಳಲ್ಲಿ ಎಂದಿಗಿಂತ ವಾಹನಗಳ ಸಂಚಾರ ಅಧಿಕವಾಗಲಿದೆ. ಅದರಲ್ಲೂ ಪೀಕ್ ಅವರ್‌ನಲ್ಲಿ ಇದರ ಬಿಸಿ ಜನರಿಗೆ ತುಸು ಜೋರಾಗಿಯೇ ತಟ್ಟಲಿದೆ.
ಏಕಾಏಕಿ ನಿರ್ಬಂಧ ವಿಧಿಸಿದ್ದರಿಂದ ಭಾನುವಾರದಿಂದಲೇ ವಾಹನ ಸವಾರರು ಗೊಂದಲಕ್ಕೀಡಾದರು. ಸೋಮವಾರ ಇದು ಹೆಚ್ಚು ಕಿರಿಕಿರಿ ಉಂಟುಮಾಡಿತು. ವಾರಾಂತ್ಯ ರಜೆ ಮುಗಿಸಿಕೊಂಡು ಎಂದಿನಂತೆ ಕೆಲಸಕ್ಕೆ ಹೊರಟವರಿಗೆ ಮೆಟ್ರೋ ಬ್ಯಾರಿಕೇಡ್‌ಗಳು ಬ್ರೇಕ್ ಹಾಕಿದವು. ಗಲಿಬಿಲಿಗೊಂಡ ವಾಹನ ಸವಾರರಿಗೆ ಸಂಚಾರ ಪೊಲೀಸರು ನೆರವಾದರು. ಪರ್ಯಾಯ ಮಾರ್ಗಗಳನ್ನು ಬಳಸಲು ಸಲಹೆ ನೀಡಿದರು.
ಎರಡನೇ ಹಂತದಲ್ಲಿ ಡೈರಿ ವೃತ್ತದಿಂದ ನಾಗವಾರದವರೆಗೆ ಸುರಂಗ ಮಾರ್ಗ ನಿರ್ಮಾಣ ಆಗಲಿದ್ದು, ಇದು ಎಂ.ಜಿ. ರಸ್ತೆ ಮೂಲಕ ಹಾದುಹೋಗಲಿದೆ. ಎಂ.ಜಿ.ರಸ್ತೆಯ ನೆಲದಡಿಯ ಮೆಟ್ರೊ ನಿಲ್ದಾಣ ಕಾಮಗಾರಿ ಕಾಮರಾಜ ರಸ್ತೆಯಲ್ಲೇ ನಡೆಯಲಿದೆ. ಹಾಗಾಗಿ ಕಾಮರಾಜ ರಸ್ತೆಯಲ್ಲಿ ಎಂ.ಜಿ.ರಸ್ತೆ ಹಾಗೂ ಕಬ್ಬನ್ ರಸ್ತೆ ನಡುವೆ ವಾಹನ ಸಂಚಾರವನ್ನು ಭಾನುವಾರದಿಂದ ನಿರ್ಬಂಧಿಸಲಾಗಿದೆ.
ಬಿಎಂಆರ್‌ಸಿಯು ಈ ಸುರಂಗ ಮಾರ್ಗ ಹಾಗೂ ನೆಲದಡಿಯ ನಿಲ್ದಾಣ ಕಾಮಗಾರಿಗಳನ್ನು 42 ತಿಂಗಳುಗಳಲ್ಲಿ ಪೂರ್ಣಗೊಳಿಸುವ ಗುರಿ ಹೊಂದಿದೆ ಎಂದು ನಿಗಮದ ಅಧಿಕಾರಿಗಳು ಮಾಹಿತಿ ನೀಡಿದರು. ಸುರಂಗ ಮಾರ್ಗದ ಮೆಟ್ರೊ ನಿಲ್ದಾಣಗಳನ್ನು ರಸ್ತೆಯಲ್ಲೇ ನಿರ್ಮಿಸಬೇಕಾದ ಕಡೆ ವಾಹನ ಸಂಚಾರ ಸ್ಥಗಿತಗೊಳಿಸುವುದು ಅನಿವಾರ್ಯ.
ಕಾಮಗಾರಿ ಪೂರ್ಣಗೊಂಡ ಬಳಿಕ ನಿಗಮದಿಂದಲೇ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು ಎಂದೂ ಅಧಿಕಾರಿಗಳು ಸ್ಪಷ್ಟಪಡಿಸಿದರು. ಕಾಮರಾಜ ರಸ್ತೆಗೆ ಬದಲಿಯಾಗಿ ಬಳಸುವ ಎಂ.ಜಿ.ರಸ್ತೆ ಹಾಗೂ ಆಸುಪಾಸಿನ ರಸ್ತೆಗಳಲ್ಲಿ ವಾಹನ ನಿಲ್ಲಿಸುವುದನ್ನೂ ನಿಷೇಧಿಸಲಾಗಿದೆ. ಈ ಹಿಂದೆ 2006-07ರಲ್ಲಿ ಎಂ.ಜಿ. ರಸ್ತೆಯಲ್ಲಿ ಮೆಟ್ರೋ ಎತ್ತರಿಸಿದ ಮಾರ್ಗ ನಿರ್ಮಾಣಕ್ಕಾಗಿ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ
Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು
Metro: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದು ಸಿಕ್ಕಿಬಿದ್ದ ಆಯುರ್ವೇದಿಕ್ ವೈದ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.