ವೈದ್ಯರ ಮೇಲೆ ಹಲ್ಲೆ: ಖಾಸಗಿ ಆಸ್ಪತ್ರೆಗಳು ಬಂದ್‌

•ಕೊಲ್ಕತ್ತದಲ್ಲಿ ನಡೆದ ಘಟನೆ ಖಂಡಿಸಿ ಜಿಲ್ಲಾದ್ಯಂತ ಎಲ್ಲ ಖಾಸಗಿ ವೈದ್ಯರ ಸೇವೆ ಸ್ಥಗಿತ•ಚಿಕಿತ್ಸೆ ಸಿಗದೆ ಪರದಾಡಿದ ರೋಗಿಗಳು

Team Udayavani, Jun 18, 2019, 8:30 AM IST

uk-tdy-1..

ಅಂಕೋಲಾ: ವೈದ್ಯರ ಮೇಲೆ ಆಗುತ್ತಿರುವ ಹಲ್ಲೆ ಖಂಡಿಸಿ ತಾಲೂಕಿನ ವೈದ್ಯರು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಶಿರಸಿ: ಕಲ್ಕತ್ತದಲ್ಲಿ ವೈದ್ಯರ ಮೇಲೆ ನಡೆದ ಹಲ್ಲೆ ಆರೋಪಿಗಳನ್ನು ಬಂಧಿಸದೇ ಇರುವುದನ್ನು ಆಕ್ಷೇಪಿಸಿ ಇಲ್ಲಿನ ಭಾರತೀಯ ವೈದ್ಯಕೀಯ ಸಂಘದ ಪದಾಧಿಕಾರಿಗಳು, ಸದಸ್ಯರು ದವಾಖಾನೆ, ಆಸ್ಪತ್ರೆಗಳ ಬಾಗಿಲು ತೆರೆಯದೇ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.

ಪ್ರಮುಖರಾದ ಡಾ| ತನುಶ್ರೀ ಹೆಗಡೆ, ಡಾ| ದಿನೇಶ ಹೆಗಡೆ, ಡಾ| ಶಿವರಾಮ ಕೆ.ವಿ., ಡಾ| ಕೃಷ್ಣಮೂರ್ತಿ ರಾಯಸದ, ಡಾ| ಡಿ.ಎಂ. ಹೆಗಡೆ ಇತರರು ಮಾತನಾಡಿ ಜನಪ್ರತಿನಿಧಿಗಳು, ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಮಾಜದ ಸ್ವಾಸ್ಥ್ಯ, ರೋಗಿಯ ಆರೋಗ್ಯಕ್ಕೆ ಪ್ರಾಮಾಣಿಕವಾಗಿ ಕಾರ್ಯ ಮಾಡುತ್ತಿರುವ ವೈದ್ಯರ ವಿರುದ್ಧ ಇಂಥ ಘಟನೆಗಳು ಪದೇಪದೇ ಆಗುತ್ತಿದೆ. ವೈದ್ಯರ ರಕ್ಷಣೆಗೆ ಯಾವುದೇ ಕಾನೂನು ಇಲ್ಲವಾಗಿದೆ. ಇದರಿಂದ ಅಸುರಕ್ಷತೆ ವಾತಾವರಣದಲ್ಲಿ ವೈದ್ಯರಿದ್ದಾರೆ. ಈಗಾಗಲೇ ಕೇಂದ್ರ ಸರಕಾರಕ್ಕೆ ಈ ಬಗ್ಗೆ ಬಿಗಿಯಾದ ಕಾಯಿದೆ ಅನುಷ್ಠಾನಕ್ಕೆ ತಂದು ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ಆಗಬೇಕು ಎಂದೂ ಆಗ್ರಹಿಸಿದರು. ಉತ್ತರ ಕನ್ನಡದಲ್ಲಿ ಕೂಡ ಸಾಕಷ್ಟು ಸಲ ವೈದ್ಯರ ಮೇಲೆ ಹಲ್ಲೆಯಾಗಿದೆ.

ಒಳ ರೋಗಿಗಳ ವಿಭಾಗದಲ್ಲಿ ತುರ್ತು ಸ್ಥಿತಿಯಲ್ಲಿ, ಡಿಲೆವರಿ ಸಂದರ್ಭದಲ್ಲಿ, ಅಪಘಾತದಲ್ಲಿ ಕೆಲವು ಅನಿರೀಕ್ಷಿತ ಘಟನೆಗಳು ಆಗುತ್ತವೆ. ವೈದ್ಯರು ಪ್ರಾಮಾಣಿಕವಾಗಿ ಕಾರ್ಯ ಮಾಡಿದರೂ ಚಿಕಿತ್ಸೆ ಸ್ಪಂದಿಸದೇ ಇದ್ದಾಗ ಏನು ಮಾಡಬೇಕು ಎಂದೂ ಕೇಳಿದ ಅವರು, 2009 ಕಾಯಿದೆ ಬಂದಿದ್ದರೂ ಪ್ರಯೋಜನ ಆಗಿಲ್ಲ ಎಂದೂ ಹೇಳಿದರು.

ಶಿರಸಿ ಐಎಂಎ ಅನೇಕ ಕಾರ್ಯ ಮಾಡುತ್ತಿದೆ. ಸರಕಾರದ ಜೊತೆಗೆ ಕೂಡ ಅನೇಕ ಪಬ್ಲಿಕ್‌ ಪ್ರೈವೇಟ್ ಪಾಟ್ನರ್‌ ಶಿಪ್‌ ಜೊತೆ ಕೆಲಸ ಮಾಡುತ್ತಿದೆ. ಬ್ಲಿಡ್‌ ಬ್ಯಾಂಕ್‌, ನವಜಾತ ಶಿಶು ವಿಭಾಗಗಳನ್ನೂ ಪಂಡಿತ್‌ ಆಸ್ಪತ್ರೆಯಲ್ಲಿ ನಡೆಸಲಾಗುತ್ತಿದೆ. ಶಿರಸಿ ಸಿಟಿಸ್ಕ್ಯಾನ್‌ನಲ್ಲಿ ರವಿವಾರ ಕೂಡ ತಜ್ಞರು ಪಾಳಿ ಪ್ರಕಾರ ಕೆಲಸ ಮಾಡುತ್ತಿದ್ದೇವೆ. ನಮ್ಮಿಂದಾದ ಎಲ್ಲ ಬಗೆಯ ಸೇವೆಗಳನ್ನೂ ಒದಗಿಸಲಾಗುತ್ತಿದೆ ಎಂದೂ ಹೇಳಿದರು.

ಐಎಂಎ ತೀರ್ಮಾನಕ್ಕೆ ದಂತ ವೈದ್ಯರ ಸಂಘ ಕೂಡ ಬೆಂಬಲ ಕೊಡುತ್ತದೆ ಎಂದು ಜಿಲ್ಲಾ ಘಟಕದ ಪ್ರಮುಖರಾದ ಡಾ| ಅರ್ಪಣಾ ಹೆಗಡೆ ತಿಳಿಸಿದರು.

ಡಾ| ರವಿಕಿರಣ ಪಟವರ್ಧನ್‌, ಡಾ| ಧರ್ಮಶಾಲಾ, ಡಾ| ರಮೇಶ ಹೆಗಡೆ, ಡಾ| ಕೈಲಾಶ ಪೈ, ಡಾ| ಎನ್‌.ಆರ್‌. ಹೆಗಡೆ, ಡಾ| ಮಧುಕೇಶ್ವರ ಜಿ.ವಿ., ಡಾ| ಸುಮನ್‌ ಹೆಗಡೆ ಇತರರು ಇದ್ದರು.

ವೈದ್ಯರ ಮುಷ್ಕರ: ರೋಗಿಗಳ ಪರದಾಟ

ಭಟ್ಕಳ: ಕಲ್ಕತ್ತದಲ್ಲಿ ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಐ.ಎಂ.ಎ. ಕರೆ ನೀಡಿದ ದೇಶವ್ಯಾಪಿ ಮುಷ್ಕರದಲ್ಲಿ ಭಟ್ಕಳ ತಾಲೂಕಿನ ವೈದ್ಯರು ಅಧ್ಯಕ್ಷ ಡಾ| ಗಣೇಶ ಪ್ರಭು ನೇತೃತ್ವದಲ್ಲಿ ಸಹಾಯಕ ಕಮಿಷನರ್‌ಗೆ ಮನವಿ ಸಲ್ಲಿಸಿದರು. ಮನವಿಯಲ್ಲಿ ಪಶ್ಚಿಮ ಬಂಗಾಳದ ಎನ್‌ಆರ್‌ಎಸ್‌ ಮೆಡಿಕಲ್ ಕಾಲೇಜಿನ ಡಾ| ಪರಿಭಾ ಮುಖರ್ಜಿ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು ಅವರು ಜೀವನ್ಮರಣ ಹೋರಾಟದಲ್ಲಿದ್ದಾರೆ. ಇಂಡಿಯನ್‌ ಮೆಡಿಕಲ್ ಅಸೋಸಿಯೇಶನ್‌ ಈ ಕುರಿತು ರಾಷ್ಟ್ರೀಯ ಕಾನೂನು ತರಬೇಕೆಂದು ಒತ್ತಾಯಿಸುತ್ತದೆ. ಅಂತಾರಾಷ್ಟ್ರೀಯ ವೈದ್ಯಕೀಯ ಸಂಘವೂ ಕೂಡಾ ವೈದ್ಯರ ಹಾಗೂ ವೈದ್ಯಕೀಯ ಉಪಕರಣದ ಮೇಲೆ ನಡೆಯುವ ದಾಂಧಲೆಯನ್ನು ತೀವ್ರವಾಗಿ ಪರಿಗಣಿಸುವರೇ ಕ್ರಮಕ್ಕೆ ಆಗ್ರಹಿಸಿದೆ. ತಕ್ಷಣ ಆಸ್ಪತ್ರೆ ಮತ್ತು ವೈದ್ಯರ ಹಿತದೃಷ್ಟಿ ಕಾಪಾಡಲು ರಾಷ್ಟ್ರೀಯ ಕಾನೂನು ತುರ್ತಾಗಿ ತರುವುದು ಅವಶ್ಯಕವಾಗಿದೆ ಎಂದೂ ಹೇಳಲಾಗಿದೆ. ಐಎಂಎ ಅಧ್ಯಕ್ಷ ಡಾ| ಗಣೇಶ ಪ್ರಭು ಅವರು ಮನವಿ ಓದಿದರು. ಮಾಜಿ ಅಧ್ಯಕ್ಷ ಡಾ| ಆರ್‌.ವಿ. ಸರಾಫ್‌, ಡಾ| ಪಾಂಡುರಂಗ ನಾಯಕ ಮುಂತಾದವರು ಮಾತನಾಡಿದರು. ಡಾ| ವಿಶ್ವನಾಥ ನಾಯಕ, ಡಾ| ರವಿರಾಜ್‌, ಡಾ| ಗಾಯತ್ರಿ, ಡಾ| ವಾದಿರಾಜ ಭಟ್ಟ, ಡಾ| ಚೇತನ್‌ ಕಲ್ಕೂರ್‌, ಡಾ| ಲಿಂಗಪ್ರಸಾದ್‌, ಡಾ| ಸಮಿ, ಡಾ| ರವಿ ನಾಯ್ಕ, ಡಾ| ವಿನಿತಾ ನಾಯಕ ಮುಂತಾದ ವೈದ್ಯರು ಭಾಗವಹಿಸಿದ್ದರು. ಇಲ್ಲಿನ ಪ್ರವಾಸಿ ಬಂಗಲೆಯಿಂದ ಸಹಾಯಕ ಕಮಿಷನರ್‌ ಕಚೇರಿಗೆ ತೆರಳಿದ ವೈದ್ಯರು ಸಾಜಿದ್‌ ಅಹಮ್ಮದ್‌ ಮುಲ್ಲಾರಿಗೆ ಮನವಿ ಸಲ್ಲಿಸಿದರು.
ಖಾಸಗಿ ವೈದ್ಯರ ಪ್ರತಿಭಟನೆಗೆ ಬೆಂಬಲ

ಅಂಕೋಲಾ: ವೈದ್ಯರ ಮೇಲೆ ಆಗುತ್ತಿರುವ ಹಲ್ಲೆಯನ್ನು ಖಂಡಿಸಿ ದೇಶವ್ಯಾಪಿ ಮುಷ್ಕರಕ್ಕೆ ಕರೆ ಕೊಟ್ಟ ಹಿನ್ನೆಲೆಯಲ್ಲಿ ಎಲ್ಲಾ ವೈದ್ಯರಿಗೆ ರಕ್ಷಣೆ ಹಾಗೂ ಹಲ್ಲೆ ನಡೆಸಿದವರ ಮೇಲೆ ಕಾನೂನು ಕ್ರಮಕ್ಕೆ ಒತ್ತಾಯಿಸಿ ತಾಲೂಕಿನ ವೈದ್ಯರು ಡಾ| ಲತಾ ಮಂಕಾಣಿ ನೇತೃತ್ವದಲ್ಲಿ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ತಾಲೂಕು ದಂಡಾಧಿಕಾರಿ ವಿವೇಕ ಶೇಣ್ವಿ ಮಾತನಾಡಿ, ಮನವಿ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಡಾ| ಅವಿನಾಶ ತಿನೈಕರ, ಡಾ| ಎಸ್‌.ಎಂ. ಶೆಟ್ಟಿ, ಡಾ| ಪಿ.ಟಿ. ಅಬ್ರಾಹಂ, ಡಾ| ಎಂ.ಎಲ್. ಫರ್ನಾಂಡೀಸ್‌, ಡಾ| ಸಾಧನಾ ಭಟ್ಕಳ, ಡಾ| ಮನೀಶ ಸಿಂಘ, ಡಾ| ಮಹೇಂದ್ರ ನಾಯಕ, ಡಾ| ಸಂಜೀವ ನವಲ್ಯಾಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Jammu- Kashmir: ಆಯ್ಕೆಯಾಗಿ 2 ತಿಂಗಳಾದ್ರೂ ಶಾಸಕರಿಗೆ ಮೊದಲ ವೇತನ ಸಿಕ್ಕಿಲ್ಲ!

Jammu- Kashmir: ಆಯ್ಕೆಯಾಗಿ 2 ತಿಂಗಳಾದ್ರೂ ಶಾಸಕರಿಗೆ ಮೊದಲ ವೇತನ ಸಿಕ್ಕಿಲ್ಲ!

HD-Kumaraswmy

Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್‌.ಡಿ.ಕುಮಾರಸ್ವಾಮಿ

1-koteshwara

Koteshwara: ಟಯರ್‌ಗೆ ಗಾಳಿ ತುಂಬುತ್ತಿದ್ದ ವೇಳೆ ಸ್ಫೋ*ಟಗೊಂಡು ಯುವಕ ಗಂಭೀರ; ಕಾರಣಗಳೇನು?

2nd ODI: ವನಿತಾ ಏಕದಿನ ಸರಣಿ: ಇಂದು ಭಾರತ-ವಿಂಡೀಸ್‌ 2ನೇ ಪಂದ್ಯ

2nd ODI: ವನಿತಾ ಏಕದಿನ ಸರಣಿ: ಇಂದು ಭಾರತ-ವಿಂಡೀಸ್‌ 2ನೇ ಪಂದ್ಯ

Enforcement Directorate: ಕ್ರಿಮಿನಲ್‌ ಪಿತೂರಿಯಡಿ ಮಾತ್ರವೇ ಅಕ್ರಮ ಹಣ ವರ್ಗ ಕೇಸು ಬೇಡ

Enforcement Directorate: ಕ್ರಿಮಿನಲ್‌ ಪಿತೂರಿಯಡಿ ಮಾತ್ರವೇ ಅಕ್ರಮ ಹಣ ವರ್ಗ ಕೇಸು ಬೇಡ

DKS-BGv

Congress Session: ನಾನಿನ್ನೂ ಸತ್ತಿಲ್ಲ, ಅಧ್ಯಕ್ಷನಾಗಿ ಇನ್ನೂ ಬದುಕಿದ್ದೇನೆ: ಡಿಕೆಶಿ

ಶ್ವೇತಭವನ ಎಐ ಹಿರಿಯ ಸಲಹೆಗಾರರಾಗಿ ಭಾರತ ಮೂಲದ ವ್ಯಕ್ತಿ ನೇಮಕ

White House; ಎಐ ಹಿರಿಯ ಸಲಹೆಗಾರರಾಗಿ ಭಾರತ ಮೂಲದ ವ್ಯಕ್ತಿ ನೇಮಕ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ

ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ

Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!

Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!

ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ

ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Jammu- Kashmir: ಆಯ್ಕೆಯಾಗಿ 2 ತಿಂಗಳಾದ್ರೂ ಶಾಸಕರಿಗೆ ಮೊದಲ ವೇತನ ಸಿಕ್ಕಿಲ್ಲ!

Jammu- Kashmir: ಆಯ್ಕೆಯಾಗಿ 2 ತಿಂಗಳಾದ್ರೂ ಶಾಸಕರಿಗೆ ಮೊದಲ ವೇತನ ಸಿಕ್ಕಿಲ್ಲ!

HD-Kumaraswmy

Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್‌.ಡಿ.ಕುಮಾರಸ್ವಾಮಿ

1-koteshwara

Koteshwara: ಟಯರ್‌ಗೆ ಗಾಳಿ ತುಂಬುತ್ತಿದ್ದ ವೇಳೆ ಸ್ಫೋ*ಟಗೊಂಡು ಯುವಕ ಗಂಭೀರ; ಕಾರಣಗಳೇನು?

2nd ODI: ವನಿತಾ ಏಕದಿನ ಸರಣಿ: ಇಂದು ಭಾರತ-ವಿಂಡೀಸ್‌ 2ನೇ ಪಂದ್ಯ

2nd ODI: ವನಿತಾ ಏಕದಿನ ಸರಣಿ: ಇಂದು ಭಾರತ-ವಿಂಡೀಸ್‌ 2ನೇ ಪಂದ್ಯ

Enforcement Directorate: ಕ್ರಿಮಿನಲ್‌ ಪಿತೂರಿಯಡಿ ಮಾತ್ರವೇ ಅಕ್ರಮ ಹಣ ವರ್ಗ ಕೇಸು ಬೇಡ

Enforcement Directorate: ಕ್ರಿಮಿನಲ್‌ ಪಿತೂರಿಯಡಿ ಮಾತ್ರವೇ ಅಕ್ರಮ ಹಣ ವರ್ಗ ಕೇಸು ಬೇಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.