ಇಂದಿರಾ ಕ್ಯಾಂಟೀನ್‌ಗಿಲ್ಲ ಜಾಗ

ನಿವೇಶನ ಗುರುತಿಸುವಲ್ಲಿ ಸ್ಥಳೀಯ ಸಂಸ್ಥೆಗಳ ವಿಳಂಬ ಧೋರಣೆ

Team Udayavani, Jun 18, 2019, 12:01 PM IST

kolar-tdy-1..

ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ ಜಿಪಂ ಎಇಇ ಕಚೇರಿ ಬಳಿ ಇಂದಿರಾ ಕ್ಯಾಂಟೀನ್‌ಗೆ ಜಾಗ ನೀಡಿರುವುದು.

ಕೋಲಾರ: ಬಡವರ ಹೊಟ್ಟೆ ತುಂಬಿಸುವ ಇಂದಿರಾ ಕ್ಯಾಂಟೀನ್‌ ಆರಂಭಕ್ಕೆ ಜಾಗ ಗುರುತಿಸುವಲ್ಲಿ ಸ್ಥಳೀಯ ಸಂಸ್ಥೆಗಳ ವಿಳಂಬ ಧೋರಣೆಯಿಂದಾಗಿ ಮಾಲೂರು ಹಾಗೂ ಕೋಲಾರದಲ್ಲಿ ಮತ್ತೂಂದು ಕ್ಯಾಂಟೀನ್‌ ಆರಂಭಕ್ಕೆ ನಿವೇಶನ ಸಮಸ್ಯೆ ಕಾಡುತ್ತಿದೆ.

ಸರ್ಕಾರದಿಂದ ಜಿಲ್ಲೆಗೆ ಮಂಜೂರಾಗಿರುವ ಇಂದಿರಾ ಕ್ಯಾಂಟೀನ್‌ ಪೈಕಿ ಮುಳಬಾಗಿಲಿನಲ್ಲಿ ಕಟ್ಟಡ ಅಡಿಪಾಯದ ಹಂತದಲ್ಲಿದ್ದರೆ, ಮಾಲೂರು ಹಾಗೂ ಕೋಲಾರದಲ್ಲಿ ಮತ್ತೂಂದು ಕ್ಯಾಂಟೀನ್‌ಗೆ ನಿವೇಶನವನ್ನೇ ಸೂಚಿಸದ ಕಾರಣ ನನೆಗುದಿಗೆ ಬಿದ್ದಿದೆ.

ಪ್ರಸ್ತಾವನೆ: ಬಡವರು ಹಸಿದ ಹೊಟ್ಟೆಯಲ್ಲಿರಬಾರದು ಎಂಬ ಕಾರಣಕ್ಕೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಬೆಳಗಿನ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟವನ್ನು ಕಡಿಮೆ ದರಕ್ಕೆ ಒದಗಿಸುವ ಉದ್ದೇಶದಿಂದ ಇಂದಿರಾ ಕ್ಯಾಂಟೀನ್‌ ಅನ್ನು ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಿಗೆ ವಿಸ್ತರಿಸಿತ್ತು. ಅದರಂತೆ ಜಿಲ್ಲಾ ಕೇಂದ್ರ ಸ್ಥಾನದಲ್ಲಿ 2 ಕ್ಯಾಂಟೀನ್‌, ತಾಲೂಕು ಕೇಂದ್ರಗಳಲ್ಲಿ ತಲಾ 1 ಕ್ಯಾಂಟೀನ್‌ನಂತೆ ಒಟ್ಟು 6 ಜಿಲ್ಲೆಗೆ ಮಂಜೂರಾಗಿತ್ತು. ಕೆಜಿಎಫ್‌ ಹೊಸ ತಾಲೂಕು ರಚನೆಯಾಗಿರುವುದರಿಂದ ಕ್ಯಾಂಟೀನ್‌ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕ್ಯಾಂಟೀನ್‌ಗೆ ಅವಶ್ಯವಿರುವ 50/80 ಅಳತೆಯ ನಿವೇಶನವನ್ನು ಆಯಾ ಸ್ಥಳೀಯ ಸಂಸ್ಥೆಗಳು ಒದಗಿಸಬೇಕಿದೆ.

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಕಡೆ ಕ್ಯಾಂಟೀನ್‌ ಆರಂಭಿಸಬೇಕೆಂದು ಸರ್ಕಾರ ನಿರ್ದೇಶನ ನೀಡಿದ್ದು, ಸೂಕ್ತ ಸ್ಥಳವನ್ನು ಸಕಾಲದಲ್ಲಿ ಗುರುತಿಸಿ ನೀಡುವಲ್ಲಿ ಸ್ಥಳೀಯ ಸಂಸ್ಥೆಗಳ ವಿಳಂಬ ಧೋರಣೆಯಿಂದ ಮುಳಬಾಗಿಲು ಮತ್ತು ಮಾಲೂರಿನ ಜನತೆ ಇಂದಿರಾ ಕ್ಯಾಂಟೀನ್‌ ಊಟದ ಭಾಗ್ಯದಿಂದ ವಂಚಿತರಾಗಿದ್ದಾರೆ. ಜಿಲ್ಲೆಗೆ ಮಂಜೂರಾಗಿರುವ 6 ಇಂದಿರಾ ಕ್ಯಾಂಟೀನ್‌ಗಳು 2018ರ ನವೆಂಬರ್‌ ತಿಂಗಳಲ್ಲೇ ಪೂರ್ಣಗೊಂಡು ಲೋಕಾರ್ಪಣೆಗೊಳ್ಳ¸ೇಕಿತ್ತು. ಆದರೆ, ಇನ್ನೂ ಎರಡು ಕ್ಯಾಂಟೀನ್‌ಗೆ ಜಾಗದ್ದೇ ಸಮಸ್ಯೆಯಾಗಿದೆ.

ಅಡಿಪಾಯದಲ್ಲೇ ಕಟ್ಟಡ: ಮುಳಬಾಗಿಲು ಪಟ್ಟಣದಲ್ಲಿ ನೆಹರು ಪಾರ್ಕ್‌ ಸಮೀಪ ಗುರುತಿಸಿದ್ದ ಜಾಗಕ್ಕೆ ಆಕ್ಷೇಪ ವ್ಯಕ್ತವಾದ್ದರಿಂದ ಪ್ರಸ್ತುತ ಜಿಪಂ ಎಇಇ ಕಚೇರಿ ಸಮೀಪ ಕ್ಯಾಂಟೀನ್‌ ನಿರ್ಮಾಣಕ್ಕೆ ನಿವೇಶನ ನೀಡಲಾಗಿದೆ. ಲೋಕಸಮರಕ್ಕೂ ಮುನ್ನವೇ ಕಾಮಗಾರಿ ಆರಂಭಿಸಿದ ಗುತ್ತಿಗೆದಾರರು ಅಡಿಪಾಯದ ಕೆಲಸ ಮುಗಿಸಿ 2 ತಿಂಗಳು ಕಳೆ ದಿದ್ದು, ಉಳಿಕೆ ಕಾಮಗಾರಿ ಮುಂದುವರಿಸಿಲ್ಲ.

ನೂತನ ಅಧ್ಯಕ್ಷರ ಮೇಲೆ ಹೊಣೆ: ಮಾಲೂರಿನಲ್ಲಿ ಪಶುಪಾಲನಾ ಆಸ್ಪತ್ರೆ ಬಳಿ ಪುರಸಭೆ ಗುರುತಿಸಿರುವ ಜಾಗಕ್ಕೆ ತಾಪಂ. ಆಕ್ಷೇಪ ವ್ಯಕ್ತಪಡಿಸಿದ್ದು, ಕೋರ್ಟ್‌ ಸಮೀಪ ಜಾಗ ಗುರುತಿಸುವ ಕೆಲಸ ನಡೆದಿದೆ. ಈ ದಿಸೆಯಲ್ಲಿ ಪುರಸಭೆಗೆ ಆಯ್ಕೆಯಾಗಲಿರುವ ನೂತನ ಅಧ್ಯಕ್ಷರ ಮೇಲೆ ಗುರುತರ ಜವಾಬ್ದಾರಿ ಇದೆ.

ಮತ್ತೂಂದು ಜಾಗ ಗುರುತಿಸಿಲ್ಲ: ಕೋಲಾರದಲ್ಲಿ ಮತ್ತೂಂದು ಕ್ಯಾಂಟೀನ್‌ಗೆ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣ ಬಳಿ ಗುರುತಿಸಿದ ಜಾಗಕ್ಕೆ ನಿಗಮ ನಿರಪೇಕ್ಷಣಾ ಪತ್ರ ನೀಡದ್ದರಿಂದ ಆ ಸ್ಥಳ ಕೈ ಬಿಡಲಾಗಿದ್ದು, ಬೇರೆಡೆ ಜಾಗ ನೀಡುವಲ್ಲಿ ನಗರಸಭೆ ವಿಫಲವಾಗಿದೆ.

ಶ್ರೀನಿವಾಸಪುರ ವೃತ್ತದ ಆಸುಪಾಸು ಜಾಗ ನೀಡುವ ಬಗ್ಗೆ ಮಾತು ಕೇಳಿಬಂದಿತ್ತಾದರೂ ಅಂತಿಮಗೊಂಡಿಲ್ಲ. ಪ್ರಸ್ತುತ ಕೌನ್ಸಿಲ್ ಅವಧಿ ಮುಗಿದಿದ್ದು, ಗಮನಹರಿಸುವವರೂ ಇಲ್ಲವಾಗಿದೆ. ಒಟ್ಟಾರೆ ಕ್ಯಾಂಟೀನ್‌ ಆರಂಭಕ್ಕೆ ನಿಗದಿಪಡಿಸಿದ್ದ ಗಡುವು ಮುಗಿದು 6 ತಿಂಗಳು ಕಳೆದರೂ ಇನ್ನೂ 3 ಕ್ಯಾಂಟೀನ್‌ ಸ್ಥಾಪನೆಯಾಗಿಲ್ಲ. ಕ್ಷೇತ್ರದ ಶಾಸಕರಾದರೂ ಮಧ್ಯ ಪ್ರವೇಶಿಸಿ ಮುಳಬಾಗಿಲಿನಲ್ಲಿ ಆರಂಭಿಸಿರುವ ಕಾಮಗಾರಿ ಶೀಘ್ರ ಮುಗಿಸಲು ಹಾಗೂ ಇನ್ನು ಎರಡು ಕಡೆ ಆದಷ್ಟು ಬೇಗ ಜಾಗ ಗುರುತಿಸಿ ನೀಡುವಲ್ಲಿ ಕಾಳಜಿ ತೋರುವರೇ ಎಂಬುದನ್ನು ಕಾದು ನೋಡಬೇಕಷ್ಟೆ.

ಟಾಪ್ ನ್ಯೂಸ್

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

1-CJI-BG

Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ

BSY-Ballari

By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್‌.ಯಡಿಯೂರಪ್ಪ ಭವಿಷ್ಯ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Stock-market-Exchange

NSE, BSE; ಷೇರು ಮಾರುಕಟ್ಟೆಗೆ ನವೆಂಬರ್‌ 20 ರಂದು ರಜೆ ಘೋಷಣೆ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Women-Mesure

Proposes: ಪುರುಷ ಟೈಲರ್‌ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೆಲ ಕಾರಣಗಳಿಂದ ಯೋಗೇಶ್ವರ್‌ಗೆ ನೋವಾಗಿದೆ: ಅಶ್ವತ್ಥನಾರಾಯಣ

C. N. Ashwath Narayan: ಕೆಲ ಕಾರಣಗಳಿಂದ ಯೋಗೇಶ್ವರ್‌ಗೆ ನೋವಾಗಿದೆ

Kolar: ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪೋಷಕರು ಪರಾರಿ

Kolar: ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪೋಷಕರು ಪರಾರಿ

0528

Bangarapet: ಗ್ರಾಪಂಗಳಲ್ಲಿ ಇಲ್ಲ ಅಧಿಕಾರಿ-ಸಿಬ್ಬಂದಿ; ಸಮಸ್ಯೆ

Kolar

Air Force Emergency: ಬಂಗಾರಪೇಟೆ ಬಳಿ ವಾಯುಪಡೆ ಹೆಲಿಕಾಪ್ಟರ್‌ ತುರ್ತು ಭೂ ಸ್ಪರ್ಶ

0447

World Tourism Day: ಜಿಲ್ಲೆ ಪ್ರವಾಸೋದ್ಯಮ ಹೆಚ್ಚಳಕ್ಕೆ ಪ್ರಚಾರ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

4

Mangaluru: ಗಾಂಜಾ ಮಾರಾಟ; ಇಬ್ಬರು ಯುವಕರ ಬಂಧನ

3

Uppinangady: ಕಬ್ಬಿಣದ ರಾಡಿನಿಂದ ಹಲ್ಲೆ; ದೂರು ದಾಖಲು

1-CJI-BG

Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ

BSY-Ballari

By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್‌.ಯಡಿಯೂರಪ್ಪ ಭವಿಷ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.