ಸ್ವಚ್ಛ ಭಾರತದ ಮೂಕ ರಾಯಭಾರಿ
Team Udayavani, Jun 19, 2019, 5:00 AM IST
ಸ್ವಚ್ಛ ಭಾರತದ ಕೂಗು ಎಲ್ಲೆಡೆ ಎದ್ದಿರುವುದು ಗೊತ್ತೇ ಇದೆ. ಪ್ರಧಾನಿಯವರೇ ಪೊರಕೆ ಹಿಡಿದು ರಸ್ತೆಗಿಳಿದ ಮೇಲಂತೂ, ಎಲ್ಲರೂ ಸ್ವಚ್ಛತೆಯ ಜಪ ಮಾಡುತ್ತಿದ್ದಾರೆ. ಅವರೆಲ್ಲರ ಮಧ್ಯೆ, ಮೌನವಾಗಿ ಸ್ವತ್ಛತೆಯ ಕೆಲಸ ಮಾಡುತ್ತಿರೋ ವಿಜಯಲಕ್ಷ್ಮಿ ಅವರನ್ನು ಗುರುತಿಸಲೇಬೇಕು.
ವಿಜಯಪುರದ ಶಿಕರಖಾನೆ ಗಾಂಧಿನಗರ ನಿವಾಸಿ ವಿಜಯಲಕ್ಷ್ಮೀ ಅವರಿಗೆ ಹುಟ್ಟಿನಿಂದಲೂ ಮಾತು ಬರುವುದಿಲ್ಲ. 16ನೇ ವಯಸ್ಸಿನಲ್ಲೇ ಕೈಗೆ ಪೊರಕೆ ಹಿಡಿದ ವಿಜಯಲಕ್ಷ್ಮಿ, ಅವತ್ತಿನಿಂದ ಇಂದಿನವರೆಗೂ ನಗರದ ಲಾಲ್ ಬಹದ್ದೂರ್ ಶಾಸ್ತ್ರಿ ಮಾರುಕಟ್ಟೆಯಲ್ಲಿ ಕಸ ಗುಡಿಸುವ ಕೆಲಸ ಮಾಡುತ್ತಿದ್ದಾರೆ. ಮುಂಜಾನೆ 5 ಗಂಟೆಯಿಂದ ಮಧ್ಯಾಹ್ನ 1ರವರೆಗೆ ಇವರ ಮೌನ ಕಾಯಕಕ್ಕೆ ಆ ಮಾರುಕಟ್ಟೆ ಸಾಕ್ಷಿಯಾಗುತ್ತದೆ.
ಬೆಳಗಿನ ಜಾವ ಪೊರಕೆ ಮತ್ತು ಬುಟ್ಟಿ ಹಿಡಿದು ಕೆಲಸಕ್ಕೆ ಬರುವ ವಿಜಯಲಕ್ಷ್ಮಿ ಅವರಿಗೆ, ಸಮವಸ್ತ್ರದ ವ್ಯವಸ್ಥೆಯೂ ಇಲ್ಲ. ಪ್ರಾಂಗಣದ ಕಸ ಗುಡಿಸಿ, ಅದನ್ನು ವಿಂಗಡಿಸಿ, ಪ್ಲಾಸ್ಟಿಕ್‌ನಂಥ ಕಸ-ಕಡ್ಡಿಗಳನ್ನು ಬೇರ್ಪಡಿಸಿ, ವಿಲೇವಾರಿ ಮಾಡುವುದು ಇವರ ಕೆಲಸ. ತಂದೆ ಚನ್ನಬಸಪ್ಪ ಅವರ ಜೊತೆ ವಾಸಿಸುತ್ತಿರುವ ವಿಜಯಲಕ್ಷ್ಮಿಯವರ ದುಡಿಮೆ ಕುಟುಂಬಕ್ಕೆ ಮಹತ್ವದ್ದು. ದಿನಗೂಲಿ ನೌಕರರಾಗಿದ್ದರೂ, ಸಂಬಳ ಕೈಗೆ ಬರುವುದು ಮೂರೋ, ಆರೋ ತಿಂಗಳಿಗೊಮ್ಮೆ. ಆದರೂ, ಕೆಲಸದೆಡೆಗೆ ಇವರಿಗಿರುವ ಶ್ರದ್ಧೆಯಲ್ಲಿ ಒಂದಿನಿತೂ ವ್ಯತ್ಯಾಸವಾಗಿಲ್ಲ. ಇವರ ನಿತ್ಯದ ದುಡಿಮೆಯಿಂದ ಮನೆಯಲ್ಲಿ ಇರುವವರಿಗೆ ಅಂಬಲಿ ಸಿಗುತ್ತದೆ. ಈ ಶ್ರಮಜೀವಿಗೆ ಪೌರ ಕಾರ್ಮಿಕರ ಪ್ರಶಸ್ತಿ ಅಥವಾ ಬಿರುದು ಬಾವಲಿಗಳು ಸಿಕ್ಕಿದ್ದಾವಾ ಅಂದಿರಾ? ಇಷ್ಟು ವರ್ಷವಾದರೂ ಅವರ ನೌಕರಿ ಕಾಯಂ ಆಗಿಲ್ಲ ಎನ್ನುವುದೇ ವಿಷಾದದ ಸಂಗತಿ.
“ಮಾತು ಬಾರದಿದ್ದರೇನಂತೆ, ಕುಟುಂಬಕ್ಕಾಗಿ ಆಕೆ ದುಡಿಯುತ್ತಲೇ ಇದ್ದಾಳೆ. ಆಕೆ ಮೂಗಿ ಎಂಬ ಕಾರಣಕ್ಕೆ ಬಹಳಷ್ಟು ಸಲ ಕಿಡಿಗೇಡಿಗಳು ಚುಡಾಯಿಸಿದ್ದರೂ. ಆದರೂ, ಆಕೆ ಒಂದು ದಿನವೂ ಕೆಲಸ ತಪ್ಪಿಸುವುದಿಲ್ಲ. ಬೆಳಗಿನ ಜಾವದಲ್ಲೇ ಎದ್ದು ಕೆಲಸಕ್ಕೆ ಬರುಳ್ತಾಳೆ’
-ವಿಜಯಲಕ್ಷ್ಮಿಯ ಸಹೋದರಿ
ಭುವನೇಶ್ವರಿ ಪ. ನಿಡೋಣಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Mohammed Siraj: ಬಿಟೌನ್‌ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ
Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.