ಬಾಳೆ ಹೂವಿನ ರಹಸ್ಯ
Team Udayavani, Jun 19, 2019, 5:00 AM IST
ವರ್ಷದ ಎಲ್ಲಾ ಕಾಲದಲ್ಲೂ ಹೂ ಬಿಟ್ಟು, ಹಣ್ಣು ಕೊಡುವ ಗಿಡವೆಂದರೆ ಅದು ಬಾಳೆಗಿಡ. ತುದಿಯಿಂದ ಬುಡದವರೆಗೆ ಉಪಯೋಗಕ್ಕೆ ಬರುವ ಗಿಡವೂ ಹೌದು. ಬಾಳೆಹಣ್ಣು ಮಾತ್ರವಲ್ಲ; ಬಾಳೆದಿಂಡು, ಬಾಳೆ ಹೂವು, ಬಾಳೆಎಲೆ ಕೂಡಾ ಆರೋಗ್ಯಕ್ಕೆ ಸಹಕಾರಿ. ಬಾಳೆ ಹೂವು ಎ, ಇ, ಸಿ ಜೀವಸತ್ವದಲ್ಲಷ್ಟೇ ಅಲ್ಲದೆ, ಪೊಟ್ಯಾಷಿಯಂ, ಫೈಬರ್, ಕ್ಯಾಲ್ಸಿಯಂ, ಮೆಗ್ನೇಷಿಯಂ ಮುಂತಾದ ಪೋಷಕಾಂಶಗಳಿಂದಲೂ ಶ್ರೀಮಂತವಾಗಿವೆ. ಸ್ತ್ರೀಯರ ಪಾಲಿಗಂತೂ ಬಾಳೆಹೂವು ಸಂಜೀವಿನಿಯೇ ಎನ್ನಬಹುದು. ಆದರೆ, ಎಷ್ಟೋ ಮಂದಿಗೆ ಬಾಳೆ ಹೂವಿನ ಔಷಧೀಯ ಗುಣಗಳೇ ತಿಳಿದಿಲ್ಲ. ಬಾಳೆಹೂವಿನ ಚಟ್ನಿ, ಪಲ್ಯ ಸೇವನೆಯಿಂದ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ?
-ಗರ್ಭಾಶಯಕ್ಕೆ ಶಕ್ತಿ ಕೊಡುತ್ತದೆ.
-ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ಕಡಿಮೆಗೊಳಿಸುತ್ತದೆ.
-ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶವನ್ನು ಹೆಚ್ಚಿಸಿ, ರಕ್ತಹೀನತೆಯನ್ನು ಹೋಗಲಾಡಿಸುತ್ತದೆ.
-ಮೂತ್ರಪಿಂಡದ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.
-ಅಧಿಕ ಋತುಸ್ರಾವವನ್ನು ನಿಯಂತ್ರಿಸಿ, ಋತುಚಕ್ರವನ್ನು ಕ್ರಮಬದ್ಧವಾಗಿಸುತ್ತದೆ.
-ಸ್ತನ್ಯಪಾನ ಮಾಡಿಸುವ ತಾಯಂದಿರಲ್ಲಿ ಎದೆಹಾಲನ್ನು ಹೆಚ್ಚಿಸುತ್ತದೆ.
-ಆಮಶಂಕೆ, ಬಿಳಿಸೆರಗಿನ ಸಮಸ್ಯೆಯಿದ್ದವರು ಬಾಳೆಹೂವಿನ ರಸಕ್ಕೆ ಮಜ್ಜಿಗೆ ಬೆರೆಸಿ ಕುಡಿದರೆ ಒಳ್ಳೆಯದು.
-ಹೊಟ್ಟೆಯೊಳಗೆ ಸೇರಿರುವ ಕಲ್ಮಷಗಳನ್ನು ಹೊರ ಹಾಕುವಲ್ಲಿ ಸಹಕಾರಿ.
– ಗೀತಾ ಎಸ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.