ಸಹೋದರರ ಪಕ್ಷಿ ಪ್ರೇಮ : ದಾಖಲಾಗಿದೆ ಪಕ್ಷಿ ವೈವಿಧ್ಯ

ಕಾಸರಗೋಡಿನ ಉದಯೋನ್ಮುಖ ಪುಟಾಣಿ ಪಕ್ಷಿ ಪ್ರೇಮಿಗಳು

Team Udayavani, Jun 19, 2019, 5:30 AM IST

birds

ಕಾಸರಗೋಡು: ಮಾನವನ ಹವ್ಯಾಸಗಳೇ ಹಾಗೆ. ಒಂದಲ್ಲ ಮತ್ತೂಂದು ಅಭಿರುಚಿಯಿಂದ ತನ್ನ ಬಿಡುವಿನ ಸಮಯವನ್ನು ಕಳೆಯಲು ಬಯಸುವುದು ಮನುಷ್ಯನ ಸಹಜ ಗುಣ. ಭಾರತದಲ್ಲಿ ಪಕ್ಷಿ ನಿರೀಕ್ಷಣೆಯ ಹವ್ಯಾಸದಲ್ಲಿ ತೊಡಗಿರುವವರ ಸಂಖ್ಯೆ ಅತ್ಯಲ್ಪವೇ. ಯಾಕೆಂದರೆ ಅಮೆರಿಕ, ಕೆನಡಾ ಮುಂತಾದ ದೇಶಗಳಲ್ಲಿ ಕುಟುಂಬ ಸದಸ್ಯರೆಲ್ಲರೂ ಪಕ್ಷಿ ನಿರೀಕ್ಷಕರೇ. ಆದರೆ ಇಲ್ಲೊಂದು ಅಪರೂಪದ ಸಹೋದರರ ಜೋಡಿಯೊಂದು ಬಾನಾಡಿಗಳನ್ನು ನಿರೀಕ್ಷಿಸುತ್ತಾ ಅವುಗಳ ಚಲನವಲನಗಳನ್ನು ದಾಖಲಿಸಿದೆ. ಮಾತ್ರವಲ್ಲದೆ ಒಂದು ವರುಷದ ಸತತ ಪ್ರಯತ್ನವು ಇಂದು ಕೇರಳದ ಪಕ್ಷಿ ಭೂಪಟದಲ್ಲಿ ಸ್ಥಾನಗಿಟ್ಟಿಸುವಂತೆ ಮಾಡಿದೆ.

ಪುತ್ತಿಗೆ ಗ್ರಾಮ ಪಂಚಾಯತ್‌ಗೆ ಒಳಪಟ್ಟ ಕಾಮನಬೈಲು. ಮಧುವಾಹಿನಿ ಹೊಳೆಯ ನಿರಂತರವಾದ ಹರಿವು, ಕಾಮನಬೈಲು ಹೊಳೆಯ ಸೌಂದರ್ಯ, ಅಡಿಕೆ-ತೆಂಗಿನ ತೋಟ, ವಿಶಾಲವಾದ ಭತ್ತದ ಗದ್ದೆಗಳು, ವಿವಿಧ ತರಕಾರಿ ಕೃಷಿ, ಮುರಕಲ್ಲಿನ ಪಾರೆ ಪ್ರದೇಶ ಹಾಗೂ ಕಿರು ಅರಣ್ಯ ಪ್ರದೇಶವನ್ನೊಳಗೊಂಡು ಜೈವ ವೈವಿಧ್ಯತೆಯ ತಾಣವಾಗಿರುವುದು ಧಾರಾಳ ಪಕ್ಷಿಗಳು ಕಂಡು ಬರಲು ಕಾರಣವಾಗಿದೆ.

ಇದೇ ಗ್ರಾಮದ ಮಕ್ಕಳಾದ ರಾಕೇಶ್‌ ನೀರ್ಚಾಲ್‌ವುತ್ತು ಆತನ ತಮ್ಮ ರೋಹನ್‌ ಕಾಮನಬೈಲಿನ ಪಕ್ಷಿ ವೈವಿಧ್ಯವನ್ನು ದಾಖಲಿಸಿದವರು .

ಸಹೋದರರ ಪಕ್ಷಿ ಪ್ರೇಮ
ಹೈಸ್ಕೂಲ್‌ ವಿದ್ಯಾರ್ಥಿಗಳಾದ ಸಹೋದರ ರಾದ ರಾಕೇಶ್‌ ನೀರ್ಚಾಲ್‌ ಕುಂಬಳೆ ಹೋಲಿ ಫ್ಯಾಮಿಲಿ ಶಾಲೆಯಲ್ಲಿ ಎಸ್‌.ಎಸ್‌.ಎಲ್‌.ಸಿ ಯಾದರೆ ತಮ್ಮ ರೋಹನ್‌ ಅದೇ ಶಾಲೆಯ ಒಂಬತ್ತನೇ ತರಗತಿಯಲ್ಲಿ ಕಲಿಯುತ್ತಿದ್ದಾನೆ. ಕುಂಬಳೆ ಹೋಲಿ ಫ್ಯಾಮಿಲಿ ಶಾಲೆ‌ ಪಕ್ಷಿಪ್ರೇಮಿ ಅಧ್ಯಾಪಕ ರಾಜು ಕಿದೂರು ಅವರೊಂದಿಗಿನ ಒಡನಾಟದಿಂದ ಪಕ್ಷಿ ನಿರೀಕ್ಷಣೆ ಆರಂಭಿಸಿದ ಇವರು ಇಂದು ಉತ್ತಮ ವಿದ್ಯಾರ್ಥಿ ಪಕ್ಷಿ ನಿರೀಕ್ಷಕರಾಗಿ ಹೊರ ಹೊಮ್ಮಿದ್ದಾರೆೆ.

ಹಕ್ಕಿ ಗಣತಿ ಕಾರ್ಯದಲ್ಲಿ ಭಾಗಿ
ಕೇರಳ ಪಕ್ಷಿ ಭೂಪಟ ತಯಾರಿಗಾಗಿ ತೇಕ್ಕಡಿ ವನ್ಯಮೃಗ ಸಂರಕ್ಷಣ ಕೇಂದ್ರದಲ್ಲಿ ನಡೆದ ಹಕ್ಕಿ ಗಣತಿ ಕಾರ್ಯದಲ್ಲಿ ಇವರು ಭಾಗವಹಿಸಿರುವರು. ಇತ್ತೀಚಿಗೆ ತೃಶ್ಶೂರಿನಲ್ಲಿ ಜರಗಿದ ಕೇರಳ ರಾಜ್ಯ ಪಕ್ಷಿ ನಿರೀಕ್ಷಣಾ ತಂಡದ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆೆ. ಹಲವು ಪರಿಸರ ಅಧ್ಯಯನ ಶಿಬಿರಗಳಲ್ಲಿ ಭಾಗವಹಿಸಿದ ಈ ವಿದ್ಯಾರ್ಥಿಗಳು ಇದೀಗ ಕಾಮನಬೈಲು ಪಕ್ಷಿ ಪ್ರೇಮಿ ತಂಡವನ್ನು ರಚಿಸಿಕೊಂಡು ಬಿಡು ಅವಧಿಯಲ್ಲಿ ಬಾನಾಡಿಗಳ ಹುಡುಕಾಟಕ್ಕೆ ತೆರಳುತ್ತಾರೆ.

ಇ ಬರ್ಡ್‌ ಜಾಲತಾಣದಲ್ಲಿ ದಾಖಲೆ
ಅಣ್ಣ ತಮ್ಮಂದಿಬ್ಬರು ಕಳೆದ ಜೂನ್‌ ತಿಂಗಳಿನಿಂದ ಆರಂಭಸಿದ ಪಕ್ಷಿ ನಿರೀಕ್ಷಣೆಯ ದಾಖಲಾತಿಯು ಇದೀಗ ಒಂದು ವರುಷ ಪೂರ್ತಿಗೊಳಿಸಿದೆ. ಎರಡು ತಿಂಗಳಿಗೊಮ್ಮೆ ಎರಡು ಗಂಟೆಗಳ ಕಾಲ ತಮ್ಮ ಮನೆ ಪರಿಸರದ ಚಿತ್ರ ವಿಚಿತ್ರ ಬಾನಾಡಿಗಳ ಬಗ್ಗೆ ಕುತೂಹಲಕಾರಿ ಅಂಶಗಳನ್ನು ದಾಖಲಿಸಿದ ಸಹೋದರರಿಬ್ಬರು ಇಲ್ಲಿಯವರೆಗೆ ಗುರುತಿಸಿದ್ದು ಬರೋಬ್ಬರಿ ತೊಂಬತ್ತೆಂಟು ಪಕ್ಷಿಗಳನ್ನು. ವೈಮಾನಿಕ ರೀತಿಯಲ್ಲಿ ಪಕ್ಷಿ ನಿರೀಕ್ಷಣೆ ಮಾಡಿ ಅವುಗಳ ವೈವಿಧ್ಯತೆಯನ್ನು ಇ ಬರ್ಡ್‌ ಎಂಬ ಜಾಲತಾಣದಲ್ಲಿ ದಾಖಲಿಸಿಕೊಂಡದ್ದು ಇವರ ಸಾಧನೆ.

ಕಾಸರಗೋಡಿನ ಉದಯೋನ್ಮುಖ ಪುಟಾಣಿ ಪಕ್ಷಿ ಪ್ರೇಮಿಗಳಾದ ಇವರು ವಲಸೆ ಬರುವ ವಿದೇಶಿ ಹಕ್ಕಿಗಳು, ಪಶ್ಚಿಮ ಘಟ್ಟಗಳಿಗೆ ಸೀಮಿತವಾಗಿರುವ ಪಕ್ಷಿಗಳು ಹಾಗೂ ಅಂತಾರಾಷ್ಟ್ರೀಯ ಪರಿಸರ ಸಂರಕ್ಷಣ ಒಕ್ಕೂಟ ( ಐಯುಸಿಎನ್‌ ) ಪರಿಗಣಿಸಿರುವ ವಿಶೇಷ ಬಾನಾಡಿಗಳನ್ನೂ ವೀಕ್ಷಿಸಿರುವುದು ಕುತೂಹಲಕಾರಿಯಾಗಿದೆ.

ಕೃಷಿ ಕುಟುಂಬದವರ ಪರಿಸರ ಪ್ರೀತಿ ಹಾಗೂ ಅವರು ತೊಡಗಿಸಿಕೊಂಡಿರುವ ಪರಿಸರ ಸಂರಕ್ಷಣೆಯು ಗ್ರಾಮದ ವಿಶೇಷತೆಯಾಗಿದೆ. ಇದು ಪಕ್ಷಿಗಳಿಗೂ ಪೂರಕ ವಾತಾವರಣವನ್ನು ಸೃಷ್ಟಿಸಿದೆ ಎನ್ನುತ್ತಾರೆ ಊರಿನ ಹಿರಿಯರು.

ಪರಿಸರ ಪ್ರೇಮಿಗಳು
ಕಾಸರಗೋಡು ಪಕ್ಷಿಪ್ರೇಮಿ ತಂಡದ ಸದಸ್ಯರಾಗಿರುವ ಇವರು ಕೇರಳ ಸಾಮಾಜಿಕ ಅರಣ್ಯ ಇಲಾಖೆ ನಡೆಸುವ ಹಲವು ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಪಕ್ಷಿ ಪ್ರೇಮಿ ಜತೆ ಪರಿಸರ ಪ್ರೇಮವೂ ಹೊಂದಿದ್ದಾರೆ. ಪಕ್ಷಿ ವಿಜ್ಞಾನ ವಿಷಯದಲ್ಲಿ ಹೆಚ್ಚಿನ ಸಂಶೋಧನೆ ಮಾಡಬೇಕೆನ್ನುವ ಗುರಿ ಇರಿಸಿರುವ ಇವರಿಗೆ ಹಿರಿಯ ಪಕ್ಷಿ ನಿರೀಕ್ಷಕರಾದ ಪ್ರಶಾಂತ್‌ ಪೊಸಡಿಗುಂಪೆ ಹಾಗೂ ಮ್ಯಾಕ್ಸಿಂ ಕೊಲ್ಲಂಗಾನ ಮಾರ್ಗದರ್ಶನ ನೀಡುತ್ತಿದ್ದಾರೆ.

ಕಾಮನಬೈಲಿನಲ್ಲಿ ಪಕ್ಷಿ ವೈವಿಧ್ಯ
ಮೀನು ಗೂಬೆ(ಬ್ರೌನ್‌ ಫಿಶ್‌ ಅವುಲ್‌)ಕಾಡು ಗೂಬೆ(ನ್ಪೋಟೆಡ್‌ ಅವುಲೆಟ್‌) ಬಿಳಿ ಕತ್ತಿನ ನತ್ತಿಂಗ(ಸವನ್ನಾ ನೈಟ್‌ ಜಾರ್‌) ವಿಶೇಷವಾದವುಗಳು. ರಾಜ ಹಕ್ಕಿ(ಏಶಿಯನ್‌ ಪ್ಯಾರಡೈಸ್‌ ಫ್ಲೆ$ç ಕ್ಯಾಚರ್‌), ಕಂದು ಎದೆಯ ನೊಣ ಹಿಡುಕ(ಏಶಿಯನ್‌ ಬ್ರೌನ್‌ ಫ್ಲೆ$ç ಕ್ಯಾಚರ್‌), ಬಿಳಿ ಸಿಪಿಲೆ(ವೈಟ್‌ ವ್ಯಾಗೆr$çಲ್‌)ಹೊನ್ನಕ್ಕಿ(ಗೋಲ್ಡನ್‌ ಓರಿಯಲ್‌), ಬೂಟು ಕಾಲಿನ ಗಿಡುಗ(ಬೂಟೆಡ್‌ ಈಗಲ್‌), ಕಳಿಂಗ (ಬ್ರೌನ್‌ ಸ್ಟೈಕ್‌) ಮೊದಲಾದ ವಲಸೆ ಹಕ್ಕಿಗಳನ್ನು ವೀಕ್ಷಿಸಿದ್ದಾರೆ.

ವಂಶ ನಾಶ ಭೀತಿಯನ್ನು ಎದುರಿಸುತ್ತಿರುವ ಹೂವಕ್ಕಿ (ಡಾರ್ಟರ್‌) ಹಾಗೂ ಬಿಳಿ ಕೆಂಬರಲು (ಬ್ಲಾಕ್‌ ಹೆಡ್ಡೆಡ್‌ ಐಬಿಸ್‌) ಹಕ್ಕಿಗಳನ್ನು ನದೀ ತೀರದಲ್ಲಿ ಗುರುತಿಸಿದ್ದಾರೆ.

ಪಶ್ಚಿಮ ಘಟ್ಟಕ್ಕೆ ಮಾತ್ರವೇ ಸೀಮಿತವಾಗಿರುವ ಕಂದು ತಲೆಯ ಬುಲ್‌ ಬುಲ್‌(ಗ್ರೇ ಹೆಡ್ಡೆಡ್‌ ಬುಲ್‌ ಬುಲ್‌) ಈ ಎಲ್ಲ ಪಕ್ಷಿಗಳು ಕಾಮನಬೈಲಿನಲ್ಲಿ ಈ ಸಹೋದರರು ಗುರುತಿಸಿದ ಪಕ್ಷಿ ಪ್ರಪಂಚವಾಗಿದೆ.

ಟಾಪ್ ನ್ಯೂಸ್

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

1-nirmala

Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್‌

Kadaba: ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ; ತಪ್ಪಿದ ಅನಾಹುತ

Kadaba: ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ; ತಪ್ಪಿದ ಅನಾಹುತ

Rain; ಕರಾವಳಿಯಲ್ಲಿ ಗುಡುಗು ಸಹಿತ ಭಾರೀ ಮಳೆ

Rain; ಕರಾವಳಿಯಲ್ಲಿ ಗುಡುಗು ಸಹಿತ ಭಾರೀ ಮಳೆ

Mangaluru: ದೇವಸ್ಥಾನಕ್ಕೆ ಹೋಗಿದ್ದ ಮಹಿಳೆ ನಾಪತ್ತೆ

Mangaluru: ದೇವಸ್ಥಾನಕ್ಕೆ ಹೋಗಿದ್ದ ಮಹಿಳೆ ನಾಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ

Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

1-nirmala

Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.