ಕಮರೊಟ್ಟು ಚೆಕ್‌ಪೋಸ್ಟ್‌ನಲ್ಲಿ 25ನೇ ಸಂಭ್ರಮ
Team Udayavani, Jun 19, 2019, 3:00 AM IST
ಸಸ್ಪೆನ್ಸ್ ಥ್ರಿಲ್ಲರ್ ಜೊತೆಗೆ ಹಾರರ್ ಕಥಾಹಂದರ ಹೊಂದಿದ “ಕಮರೊಟ್ಟು ಚೆಕ್‌ಪೋಸ್ಟ್’ ಚಿತ್ರ ಈಗ ಯಶಸ್ವಿ 25 ದಿನಗಳತ್ತ ದಾಪುಗಾಲು ಇಟ್ಟಿದೆ. ಇದೇ ಖುಷಿಯಲ್ಲಿ ಚಿತ್ರತಂಡ ಸೆಲೆಬ್ರಿಟಿ ಶೋ ಏರ್ಪಡಿಸುವ ಮೂಲಕ ಮತ್ತಷ್ಟು ಮೆಚ್ಚುಗೆ ಪಡೆದಿದೆ.
ಯಶವಂತಪುರದಲ್ಲಿರುವ ವೈಷ್ಣವಿ ಮಾಲ್‌ನಲ್ಲಿ ಆಯೋಜಿಸಿದ್ದ ಸೆಲೆಬ್ರಿಟಿ ಶೋನಲ್ಲಿ, ನಟರಾದ ನೆನಪಿರಲಿ ಪ್ರೇಮ್, ಪ್ರಥಮ್, ರಾಕೇಶ್ ಅಡಿಗ, ಮಯೂರಿ, ಕವಿರಾಜ್, ಜೆಕೆ, ದಯಾಳ್, ನಾಗೇಂದ್ರಅರಸ್, ಪ್ರಥಮ್, ಆಶಿಕಾ ರಂಗನಾಥ್, ವಿಕ್ಕಿ, ಅನೂಷಾ, ಗಾಯಕಿ ಶಮಿತಾ ಮಲ್ನಾಡ್, ಸಂಗೀತ ನಿರ್ದೇಶಕ ಡಾ.ಕಿರಣ್, ಖಳನಟ ಸುಧಿ, ಪ್ರಿಯಾಂಕ, ಆ್ಯಂಡಿ, ಸೇರಿದಂತೆ ಸಿನಿಮಾರಂಗದ ಗಣ್ಯರು ಚಿತ್ರ ವೀಕ್ಷಿಸಿ, ಚಿತ್ರದಲ್ಲಿರುವ ತಾಂತ್ರಿಕತೆ ಹಾಗು ಕಲಾವಿದರ ಶ್ರಮ ಮತ್ತು ತಂಡದ ಪ್ರಯತ್ನಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
ಬಿಡುಗಡೆಯಾದ ವಾರದಿಂದ ಮೆಚ್ಚುಗೆ ಪಡೆದ ಚಿತ್ರ, ಈಗ ನಾಲ್ಕನೇ ವಾರವೂ ಅದೇ ಮೆಚ್ಚುಗೆ ಪಡೆದುಕೊಂಡಿದೆ. ಚಿತ್ರದ ಗಳಿಕೆ ಹಾಗು ಕೇಳಿಬಂದ ಮಾತುಗಳಿಂದಾಗಿ ವಿತರಕ ಜಯಣ್ಣ ಅವರು ಸ್ವತಃ ಚಿತ್ರದ ಬಗ್ಗೆ ಕಾಳಜಿ ವಹಿಸಿ, ರಾಜ್ಯದ ಹಲವು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಸಹಕರಿಸಿದ್ದಾರೆ ಎಂಬುದು ನಿರ್ದೇಶಕ ಪರಮೇಶ್ ಅವರ ಮಾತು.
ಆರಂಭದಲ್ಲಿ ಚಿತ್ರ ಕಡಿಮೆ ಚಿತ್ರಮಂದಿರಗಳಲ್ಲೇ ತೆರೆಕಂಡಿತ್ತು. ಆ ನಂತರದ ದಿನಗಳಲ್ಲಿ ಚಿತ್ರಕ್ಕೆ ಬಂದ ಒಳ್ಳೆಯ ಪ್ರತಿಕ್ರಿಯೆಯಿಂದ ವಾರಕ್ಕೆ ಹತ್ತು ಚಿತ್ರಮಂದಿರಗಳು ಹೆಚ್ಚಿಗೆಯಾಗಿ ಈಗ ಮಲ್ಟಿಪ್ಲೆಕ್ಸ್ ಸೇರಿದಂತೆ ಸುಮಾರು 60 ಚಿತ್ರಮಂದಿರಗಳಲ್ಲಿ “ಕಮರೊಟ್ಟು ಚೆಕ್‌ಪೋಸ್ಟ್’ ಪ್ರದರ್ಶನವಾಗುತ್ತಿದೆ ಎಂಬುದು ನಿರ್ದೇಶಕರ ಹೇಳಿಕೆ.
ಚಿತ್ರಕ್ಕೆ ಚೇತನ್‌ರಾಜ್ ನಿರ್ಮಾಪಕರಾಗಿದ್ದು, ಎ.ಟಿ.ರವೀಶ್ ಸಂಗೀತವಿದೆ. ಚಿತ್ರದಲ್ಲಿ ನಾಯಕ, ನಾಯಕಿಯರಾಗಿ ಉತ್ಪಲ್, ಸತನ್, ಸ್ವಾತಿಕೊಂಡೆ, ಅಹಲ್ಯಾ ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್
Kannada Cinema: ‘ರುದ್ರಾಭಿಷೇಕಂ’ನಲ್ಲಿ ವಿಜಯ್ ರಾಘವೇಂದ್ರ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್‌ಗಳು-ಕಡಲಾಮೆಗೆ ಅಪಾಯ!
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
BBK11: ಧರ್ಮ ಬಿಗ್ ಬಾಸ್ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್ ಹೀರೋʼ ಎಡವಿದ್ದೆಲ್ಲಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.