ಯಾಗ, ಯಜ್ಞಗಳಿಂದ ಕಲುಷಿತ ವಾತಾವರಣ ನಿರ್ಮಲ: ವಿಷ್ಣು ಆಸ್ರ
Team Udayavani, Jun 19, 2019, 6:10 AM IST
ಕಾಸರಗೋಡು: ಪರಮ ಶಿವನ ಸಂಪ್ರೀತಿಗಾಗಿ ನಡೆಸುವ ಅತಿರುದ್ರ ಮಹಾಯಾಗದ ಮೂಲಕ ಕಲುಷಿತ ಗೊಂಡಿರುವ ಪರಿಸರ, ವಾತಾವರಣ ನಿರ್ಮಲಗೊಳ್ಳುವುದೆಂದು ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರು ಅಭಿಪ್ರಾಯಪಟ್ಟರು.
ರಾಮದಾಸನಗರದ ಗಂಗೆ ದೇವರ ಗುಡ್ಡೆ ಶ್ರೀ ಶೈಲ ಮಹಾದೇವ ಕ್ಷೇತ್ರದಲ್ಲಿ 2020ರ ಫೆ. 26ರಿಂದ ಮಾ.1ರ ತನಕ ಜರಗುವ ಅತಿರುದ್ರ ಮಹಾಯಾಗದ ಮುನ್ನುಡಿಯಾಗಿ ಕ್ಷೇತ್ರ ಸಭಾಂಗಣದಲ್ಲಿ ನಡೆದ ಬೃಹತ್ ಮಾತೃಶಕ್ತಿ ಮತ್ತು ಯುವ ಶಕ್ತಿ ಸಂಗಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಭೆಯಲ್ಲಿ ಮಾಣಿಲ ಶ್ರೀ ಧಾಮದ ಕೌಸ್ತುಭ ಶ್ರೀ ಮೋಹನದಾಸ ಪರಮ ಹಂಸ ಸ್ವಾಮೀಜಿ ಮತ್ತು ಉಪ್ಪಳ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಯವರು ಆಶೀ ರ್ವಚನ ನೀಡಿದರು. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಅಧಿಕಾರಿಣಿ ಚೇತನಾ ಅವರು ವಿಶೇಷ ಉಪನ್ಯಾಸ ನೀಡಿದರು. ಪುತ್ತೂರಿನ ಉದ್ಯಮಿ ಸಂತೋಷ್ ಕುಮಾರ್ ಅಧ್ಯಕ್ಷತೆ ವಹಿಸಿದರು.
ಔಷಧೀಯ ಗಿಡಗಳ ವಿತರಣೆಯನ್ನು ಕಾಸರಗೋಡು ಅರಣ್ಯಾಧಿಕಾರಿ ಪಿ.ಯು. ಬಿಜು ಅವರು ಸಮಾರಂಭ ಅಧ್ಯಕ್ಷ ಸಂತೋಷ್ ಕುಮಾರ್ ಅವರಿಗೆ ನೀಡಿ ಉದ್ಘಾಟಿಸಿದರು. ಬಳಿಕ ಸುಮಾರು ಸಾವಿರ ಮಂದಿಗೆ ಔಷಧ ಸಸ್ಯಗಳನ್ನು ವಿತರಿಸಲಾಯಿತು.
ಸಮಾರಂಭದಲ್ಲಿ ನೀಟ್ ಪರೀಕ್ಷೆ ಯಲ್ಲಿ ರಾಜ್ಯಕ್ಕೆ ದ್ವಿತೀಯ ರ್‍ಯಾಂಕ್ ಹಾಗೂ ರಾಷ್ಟ್ರ ಮಟ್ಟದಲ್ಲಿ 31 ನೇ ರ್‍ಯಾಂಕ್ ಗಳಿಸಿದ ಮನ್ನಿಪ್ಪಾಡಿ ವಿವೇಕಾ ನಂದ ನಗರದ ಹೃದ್ಯಾಲಕ್ಷಿ$¾ ಬೋಸ್ ಅವರನ್ನು ಸಮ್ಮಾನಿಸಿ ಅಭಿನಂದಿಸ ಲಾಯಿತು. ಸಮಾರಂಭಕ್ಕೆ ಮುನ್ನ ನಾಡಿನ ಜನರ ಆರೋಗ್ಯ ಸಂರಕ್ಷಣೆಗಾಗಿ ಧನ್ವಂತರಿ ಹವನ ಯಜ್ಞವನ್ನು ಕ್ಷೇತ್ರ ತಂತ್ರಿವರ್ಯರಾದ ಉಳಿಯತ್ತಾಯ ವಿಷ್ಣು ಆಸ್ರ ಅವರ ಮುಂದಾಳುತ್ವದಲ್ಲಿ ನೆರವೇರಿಸಲಾಯಿತು.
ಸಭೆಯಲ್ಲಿ ಅತಿರುದ್ರ ಮಹಾಯಾಗದ ಪ್ರಧಾನ ಪುರೋಹಿತರಾದ ಶ್ಯಾಂ ಭಟ್, ಮಂಜೇಶ್ವರ ಶ್ರೀ ಮದನಂತೇಶ್ವರ ದೇವಸ್ಥಾನದ ಆಡಳಿತ ಟ್ರಿಸ್ಟಿಯವರಾದ ಡಾ|ಅನಂತ ಕಾಮತ್, ಸುಕನ್ಯಾ ಆಸ್ರ, ಮೀನಾಕ್ಷಿ ಅನಂತ್ ಕಾಮತ್, ಆಶಾ ಉಪಾಧ್ಯಾಯ, ರಾಜಕೀಯ ನೇತಾರ ಪ್ರಮೀಳಾ ಸಿ.ನಾೖಕ್, ನಾರಾಯಣ ಸೂರ್ಲು, ಚಂದ್ರಮೋಹನ್, ಅಜಿತ್ ರೈ, ಧನುಷ್ ಕನ್ನಿಗುಡ್ಡೆ, ದಿನೇಶ್ ಶಿವಶಕ್ತಿನಗರ, ರಾಜೇಂದ್ರನ್, ರಮೇಶ್ ರೈ, ಗಣೇಶ್ ಮೀಪುಗುರಿ, ವಾರ್ಡ್ ಸದಸ್ಯ ವೆಂಕಟ್ರಮಣ ಅಡಿಗ ಸಹಿತ ಊರಿನ ನಾನಾ ಸಂಘ ಸಂಸ್ಥೆಗಳ ಹಾಗೂ ಭಜನ ಮಂಡಳಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸ್ಥಳೀಯ ಬಾಲಗೋಕುಲದ ಮಕ್ಕಳು ಪ್ರಾರ್ಥನೆ ಹಾಗೂ ದೀಪ ಸ್ತುತಿ ಹಾಡಿದರು. ದೇವರಗುಡ್ಡೆ ಕ್ಷೇತ್ರದ ಶ್ರೀ ಮಹಾದೇವ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಸತೀಶ್ ಕೋಟೆಕಣಿ ಸ್ವಾಗತಿಸಿದರು.
ಉದಯ ಕುಮಾರ್ ಮನ್ನಿಪ್ಪಾಡಿ ಪ್ರಾಸ್ತಾವಿಕ ನುಡಿದರು. ಸುಬ್ಬಣ್ಣ ಆಳ್ವ ಕುಚ್ಚಿಕ್ಕಾಡು ಕಾರ್ಯಕ್ರಮ ನಿರೂಪಿಸಿದರು. ಗಣೇಶ್ ಗಟ್ಟಿ ಅತಿರುದ್ರ ಮಹಾಯಾಗದ ಯಶಸ್ಸಿಗೆ ರೂಪೀಕರಿಸಿದ ಸಮಿತಿಯ ಪದಾಧಿಕಾರಿಗಳ ಹೆಸರನ್ನು ಪ್ರಕಟಿಸಿದರು. ಸೇವಾ ಟ್ರಸ್ಟ್‌ನ ಅಧ್ಯಕ್ಷ ಡಾ| ಜಯಪ್ರಕಾಶ್ ನಾೖಕ್ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್
Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್ ಗೆದ್ದ ವಿಜ್ಞಾನಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.