ಹಾಲಾಡಿಯಿಂದ ಉಡುಪಿಗೆ ನೀರಿನ ತಡೆ ತೆರವು

Team Udayavani, Jun 19, 2019, 5:21 AM IST

varahi

ಕುಂದಾಪುರ: ಕುಡಿಯುವ ನೀರಿನ ಸಮಸ್ಯೆ ಯಿಂದ ಕಂಗೆಟ್ಟಿರುವ ಉಡುಪಿಗೆ ಹಾಲಾಡಿಯಿಂದ ನೀರು ಕೊಂಡೊಯ್ಯಲು ಮಾಡಿರುವ ಪ್ರಯತ್ನಗಳು ಇನ್ನೂ ಕೈಗೂಡಿಲ್ಲ. ಟೆಂಡರ್‌ ಪ್ರಕ್ರಿಯೆಯೇ 1 ವರ್ಷದಿಂದ ಬಾಕಿ ಯಾಗಿದೆ. ಪೈಪ್‌ಲೈನ್‌ ಹಾದುಹೋಗುವ ಗ್ರಾ.ಪಂ.ಗಳಿಗೆ ಶುದ್ಧ ನೀರು ಕೊಡಬೇಕೆನ್ನುವ ಬೇಡಿಕೆ ವಿಧಾನಪರಿಷತ್‌ ಅರ್ಜಿ ಸಮಿತಿಯಲ್ಲಿ ಇತ್ಯರ್ಥವಾಗಿದೆ. ಹೊಸದಾಗಿ ಡಿಪಿಆರ್‌ ಮಾಡಿ ಟೆಂಡರ್‌ ಕರೆಯುವ ಪ್ರಕ್ರಿಯೆ ನಡೆಯಬೇಕಿದೆ.

ಯೋಜನೆ ವಿವರ

ಉಡುಪಿ ನಗರಕ್ಕೆ ನೀರುಣಿಸುವ ಸ್ವರ್ಣಾ ನದಿಯ ನೀರು ವರ್ಷದ 8 ತಿಂಗಳು ಮಾತ್ರ ಸಾಲುತ್ತಿದ್ದು, ಉಳಿದ 4 ತಿಂಗಳಿಗೆ ವಾರಾಹಿ ನದಿಯಿಂದ ನೀರು ಒದಗಿಸುವುದು ಯೋಜನೆ. ಇದಕ್ಕಾಗಿ ಅಮೃತ್‌ (ಅಟಲ್ ಮಿಶನ್‌ ರೆಜು ವನೇಶನ್‌ ಆ್ಯಂಡ್‌ ಅರ್ಬನ್‌ ಟ್ರಾನ್ಸ್‌ಫಾರ್ಮೇಶನ್‌) ಯೋಜನೆಯಲ್ಲಿ 122.5 ಕೋ.ರೂ. ವೆಚ್ಚದಲ್ಲಿ ಡಿಪಿಆರ್‌ ಮಾಡಲಾಗಿದೆ. ಹಾಲಾಡಿಯ ಭರತ್ಕಲ್ನಿಂದ 864 ಎಂಎಂ ಗಾತ್ರದ ಪೈಪಿನಲ್ಲಿ 38.5 ಕಿ.ಮೀ. ದೂರದ ಬಜೆ ಅಣೆಕಟ್ಟಿಗೆ ನೀರು ತಂದು ಅಲ್ಲಿ ಶುದ್ಧೀಕರಿಸಿ ಉಡುಪಿಗೆ ಒದಗಿಸುವುದು ಯೋಜನೆ.

ಟೆಂಡರ್‌ಗೆ ತಡೆ

2018 ಮಾ. 27ರಂದು ಟೆಂಡರ್‌ ಕರೆಯಲು ಸಿದ್ಧತೆ ನಡೆದಿತ್ತು. ಪೈಪ್‌ಲೈನ್‌ ಹಾದುಹೋಗುವ ವ್ಯಾಪ್ತಿಯ 10 ಪಂಚಾಯತ್‌ಗಳು 2018 ಮಾ. 6ರಂದು ವಿಶೇಷ ಸಾಮಾನ್ಯ ಸಭೆಯಲ್ಲಿ ತಮಗೂ ಶುದ್ಧ ಕುಡಿಯುವ ನೀರು ಒದಗಿಸ ಬೇಕು, ಈಗಿನ ಟೆಂಡರ್‌ ರದ್ದುಪಡಿಸಬೇಕು, ಹೊಸದಾಗಿ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ತಯಾರಿಸಬೇಕು. ಇಲ್ಲದಿದ್ದರೆ ಕೋರ್ಟ್‌ ಮೊರೆ ಹೋಗಲಾಗುವುದೆಂದು ನಿರ್ಣಯಿಸಿ ಸರಕಾರಕ್ಕೆ ನಿರ್ಣಯವನ್ನು ಕಳುಹಿಸಿದ್ದವು. ಪ್ರಯೋಜನ ಕಾಣದಿದ್ದಾಗ ವಿಧಾನಪರಿಷತ್‌ ಸದಸ್ಯರಾಗಿದ್ದ ಪ್ರತಾಪ್‌ಚಂದ್ರ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಹಾಲಾಡಿ ಗ್ರಾ.ಪಂ. ಹಾಗೂ ಉಡುಪಿ ಜಿಲ್ಲಾ ರೈತ ಸಂಘ ವಿಧಾನಪರಿಷತ್‌ ಅರ್ಜಿ ಸಮಿತಿ ಮೊರೆ ಹೋಗಿತ್ತು. ಆದ್ದರಿಂದ ಟೆಂಡರ್‌ ಪ್ರಕ್ರಿಯೆ ನಡೆಯಲಿಲ್ಲ.

ನೀರು ಕೊಡಲು ಆದೇಶ

ವಿಧಾನಪರಿಷತ್‌ ಅರ್ಜಿ ಸಮಿತಿಯಲ್ಲಿ ಪಂಚಾಯತ್‌ಗಳಿಗೆ 40 ಎಂಎಲ್ಡಿ ನೀರು ಹಾಲಾಡಿಯಿಂದ ತೆಗೆದು ಶುದ್ಧೀಕರಿಸಿ ಕೊಡಲು ಆದೇಶಿಸಲಾಗಿದೆ. ಹಾಲಾಡಿ ಕಾಲುವೆ ದುರಸ್ತಿ ಇದ್ದಾಗ ಮಾತ್ರ ನೇರ ನೀರು ಕೊಡಬಹುದು ಎಂದು ಸೂಚಿಸಲಾಗಿದೆ. ಅರ್ಜಿ ಸಮಿತಿಯಲ್ಲಿ ಪ್ರಕರಣ ಇತ್ಯರ್ಥವಾಗದೇ ಟೆಂಡರ್‌ ಕರೆಯುವಂತಿರಲಿಲ್ಲ. ಅರ್ಜಿ ಸಮಿತಿ ತೀರ್ಮಾನದಿಂದಾಗಿ ಹೊಸ ಡಿಪಿಆರ್‌ ಮಾಡದೇ ಹಳೆ ಟೆಂಡರ್‌ ಕರೆವಂತಿಲ್ಲ.

ಜಾಗ ಗುರುತಿಸಿಲ್ಲ

ಹಾಲಾಡಿಯಲ್ಲಿ ಜಲ ಶುದ್ಧೀಕರಣ ಘಟಕ ರಚಿಸಲು ಪಂಚಾಯತ್‌ 5 ಕಡೆ ಗುರುತಿಸಿದೆ. ಕಡತ ಮಂದುವರಿ ಯಲಿಲ್ಲ. ಯೋಜನೆ ವತಿಯಿಂದ ನಿರ್ದಿಷ್ಟ ಜಾಗ ಗುರುತಿಸಿಲ್ಲ. ಮಂದಾರ್ತಿ, ಕೊಕ್ಕರ್ಣೆ ಭಾಗದಲ್ಲಿ 5 ಎಕರೆ ಜಾಗಕ್ಕಾಗಿ ಪ್ರಕಟನೆ ಹೊರಡಿಸಿದ್ದು ಅಲ್ಲಿ ಘಟಕ ಮಾಡಿದರೆ ಹಾಲಾಡಿಗೆ ಮತ್ತೆ ನೀರು ತರಬೇಕಾಗುತ್ತದೆ. ನದಿ ನೀರು ಹೋಗಲು, ಶುದ್ಧ ನೀರು ಬರಲು ಎಂದು ಎರಡು ಪ್ರತ್ಯೇಕ ಪೈಪ್‌ಲೈನ್‌ ಮಾಡಬೇಕಾಗುತ್ತದೆ.

ಉಡುಪಿ ಶಾಸಕರ ಭೇಟಿ

ಉಡುಪಿ ಶಾಸಕ ರಘುಪತಿ ಭಟ್ ಅವರು ಸೋಮವಾರ ಭರತ್ಕಲ್ಗೆ ಭೇಟಿ ನೀಡಿದ್ದು ಸ್ಥಳೀಯರಿಗೆ, ಪಂಚಾಯತ್‌ಗೆ ಮಾಹಿತಿ ನೀಡಿಲ್ಲ ಎನ್ನುವ ಆಕ್ಷೇಪ ಕೇಳಿ ಬಂದಿದೆ.

ಟಾಪ್ ನ್ಯೂಸ್

Child-care

Child Care: ಶಿಶು ಮರಣ ತಗ್ಗಿಸಲು ಮನೆಮಟ್ಟದ ಎಳೆ ಮಕ್ಕಳ ಆರೈಕೆ!

ರಾಜ್ಯದಲ್ಲಿ ಕೇರಳದ ಅಸುರಕ್ಷಿತ ಕುರುಕಲು ತಿಂಡಿ ಮಾರಾಟ

ರಾಜ್ಯದಲ್ಲಿ ಕೇರಳದ ಅಸುರಕ್ಷಿತ ಕುರುಕಲು ತಿಂಡಿ ಮಾರಾಟ

NIA: ರಾಮೇಶ್ವರಂ ಕೆಫೆ ಸ್ಫೋಟ ಉಗ್ರ ಪಾಕ್‌ನಲ್ಲಿ: ಎನ್‌ಐಎಗೆ ಸುಳಿವು

NIA: ರಾಮೇಶ್ವರಂ ಕೆಫೆ ಸ್ಫೋಟ ಉಗ್ರ ಪಾಕ್‌ನಲ್ಲಿ: ಎನ್‌ಐಎಗೆ ಸುಳಿವು

Sukhu

Himachal Pradesh; ಸಿಎಂಗೆ ತಂದಿದ್ದ ಸಮೋಸಾ ಮಾಯ: ಸಿಐಡಿ ತನಿಖೆ?

ಸೀಟ್‌ ಬ್ಲಾಕಿಂಗ್‌ ದಂಧೆ ವಿರುದ್ಧ ಕ್ರಿಮಿನಲ್‌ ಕೇಸ್‌ ಅಸ್ತ್ರ : ಸಚಿವ

Minister Sudhakar: ಸೀಟ್‌ ಬ್ಲಾಕಿಂಗ್‌ ದಂಧೆ ವಿರುದ್ಧ ಕ್ರಿಮಿನಲ್‌ ಕೇಸ್‌ ಅಸ್ತ್ರ

Donald-Trumph

Trump ಗೆಲ್ಲುತ್ತಿದ್ದಂತೆ ಅಮೆರಿಕ ತೊರೆಯಲು ಜನರಿಂದ ಭರದ ಸಿದ್ಧತೆ

Ajit Pawar

Yogi ‘ಬಟೇಂಗೆ’ಹೇಳಿಕೆ ಒಪ್ಪಲ್ಲ ಎಂದ ಅಜಿತ್‌: ಮಹಾಯುತೀಲಿ ಬಿರುಕು?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malpe: ಬೀಚ್‌ನಲ್ಲಿ ಮತ್ತೆ ಆರಂಭವಾಗಿದೆ ಫ್ಲೋಟಿಂಗ್‌ ಬ್ರಿಡ್ಜ್, ಪ್ರವಾಸಿಗರ ಸ್ಪಂದನೆ

Malpe: ಬೀಚ್‌ನಲ್ಲಿ ಮತ್ತೆ ಆರಂಭವಾಗಿದೆ ಫ್ಲೋಟಿಂಗ್‌ ಬ್ರಿಡ್ಜ್, ಪ್ರವಾಸಿಗರ ಸ್ಪಂದನೆ

Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ

Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ

Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್‌ ಶೆಟ್ಟಿ

Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್‌ ಶೆಟ್ಟಿ

Ajekar Case: ನ್ಯಾಯಾಂಗ ಬಂಧನ ವಿಸ್ತರಣೆ

Ajekar Case: ನ್ಯಾಯಾಂಗ ಬಂಧನ ವಿಸ್ತರಣೆ

Karkala Parashurama statue Case: ಶಿಲ್ಪಿ ಕೃಷ್ಣ ನಾಯ್ಕ ಜಾಮೀನು ಅರ್ಜಿ ತಿರಸ್ಕೃತ

Karkala Parashurama statue Case: ಶಿಲ್ಪಿ ಕೃಷ್ಣ ನಾಯ್ಕ ಜಾಮೀನು ಅರ್ಜಿ ತಿರಸ್ಕೃತ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Child-care

Child Care: ಶಿಶು ಮರಣ ತಗ್ಗಿಸಲು ಮನೆಮಟ್ಟದ ಎಳೆ ಮಕ್ಕಳ ಆರೈಕೆ!

ರಾಜ್ಯದಲ್ಲಿ ಕೇರಳದ ಅಸುರಕ್ಷಿತ ಕುರುಕಲು ತಿಂಡಿ ಮಾರಾಟ

ರಾಜ್ಯದಲ್ಲಿ ಕೇರಳದ ಅಸುರಕ್ಷಿತ ಕುರುಕಲು ತಿಂಡಿ ಮಾರಾಟ

NIA: ರಾಮೇಶ್ವರಂ ಕೆಫೆ ಸ್ಫೋಟ ಉಗ್ರ ಪಾಕ್‌ನಲ್ಲಿ: ಎನ್‌ಐಎಗೆ ಸುಳಿವು

NIA: ರಾಮೇಶ್ವರಂ ಕೆಫೆ ಸ್ಫೋಟ ಉಗ್ರ ಪಾಕ್‌ನಲ್ಲಿ: ಎನ್‌ಐಎಗೆ ಸುಳಿವು

Sukhu

Himachal Pradesh; ಸಿಎಂಗೆ ತಂದಿದ್ದ ಸಮೋಸಾ ಮಾಯ: ಸಿಐಡಿ ತನಿಖೆ?

ಸೀಟ್‌ ಬ್ಲಾಕಿಂಗ್‌ ದಂಧೆ ವಿರುದ್ಧ ಕ್ರಿಮಿನಲ್‌ ಕೇಸ್‌ ಅಸ್ತ್ರ : ಸಚಿವ

Minister Sudhakar: ಸೀಟ್‌ ಬ್ಲಾಕಿಂಗ್‌ ದಂಧೆ ವಿರುದ್ಧ ಕ್ರಿಮಿನಲ್‌ ಕೇಸ್‌ ಅಸ್ತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.