ದೊರೆಗೆ ಆಶ್ರಯ ಕೊಟ್ಟು ಊರು ಬಿಟ್ಟರು
Team Udayavani, Jun 19, 2019, 9:50 AM IST
ಮುಧೋಳ: ಸಿಎಂ ಗ್ರಾಮ ವಾಸ್ತವ್ಯ ಬಳಿಕವೂ ಅಭಿವೃದ್ಧಿ ಕಾಣದ ಇಂಗಳಗಿ ಗ್ರಾಮದ ರಸ್ತೆಗಳನ್ನು ಕಳೆದ ಎರಡು ವರ್ಷಗಳ ಹಿಂದೆ ಅಭಿವೃದ್ಧಿಪಡಿಸಲಾಗಿದೆ.
ಮಹಾಂತೇಶ ಕರೆಹೊನ್ನ
ಮುಧೋಳ: 2007, ಜ.23ರಂದು ಸಿಎಂ ಕುಮಾರಸ್ವಾಮಿ, ತಾಲೂಕಿನ ಇಂಗಳಗಿಯ ಕುಟುಂಬವೊಂದರ ಮನೆಯಲ್ಲಿ ವಾಸ್ತವ್ಯ ಮಾಡಿದ್ದರು. ಮದ್ದಿಲ್ಲದ ರೋಗ ಹೊಂದಿದ್ದ ಆ ಕುಟುಂಬಕ್ಕೆ ಬದುಕಿಗೆ ಜೀವನಾಧಾರದ ಜತೆಗೆ ಇಡೀ ಗ್ರಾಮದ ಅಭಿವೃದ್ಧಿಗೆ ಅನುದಾನ ಹರಿದು ಬರುತ್ತದೆ ಎಂದು ನಂಬಿದ್ದರು. ಆದರೆ, ಅದೆಲ್ಲ ಆಗಲಿಲ್ಲ. ಮದ್ದಿಲ್ಲದ ರೋಗದ ಕುರಿತು ಊರ ಜನರಿಗೆ ಗೊತ್ತಿರಲಿಲ್ಲ. ಸಿಎಂ ಗ್ರಾಮ ವಾಸ್ತವ್ಯದಿಂದ ಅದು ಜಗತ್ತಿಗೇ ಗೊತ್ತಾಯಿತು. ಹೀಗಾಗಿ ಆ ಕುಟುಂಬ ಮಾನಸಿಕ ಹಿಂಸೆ ಅನುಭವಿಸಿ ಗ್ರಾಮವನ್ನೇ ತೊರೆದು, ಪಕ್ಕದ ಊರಿಗೆ ಹೋಗಿ ನೆಲೆ ಕಂಡುಕೊಂಡಿತು.
ಇಂಗಳಗಿಯ ವಾಸ್ತವ್ಯದ ವೇಳೆ ಮನೆಯ ಮುಖ್ಯಸ್ಥನಿಗೆ ಸರ್ಕಾರಿ ನೌಕರಿ ಕೊಡಿಸುವುದಾಗಿ ಹಾಗೂ ಕುಟುಂಬಕ್ಕೆ ಧನಸಹಾಯ ಮಾಡುವುದಾಗಿ ಹೇಳಿ ಹೋದ ಸಿಎಂ, ಆನಂತರ ಈ ಬಗ್ಗೆ ಕ್ಯಾರೇ ಎನ್ನಲಿಲ್ಲ. ಇದಕ್ಕಾಗಿ ಆ ಕುಟುಂಬ ಬೆಂಗಳೂರಿನ ಮುಖ್ಯಮಂತ್ರಿಗಳ ಕಚೇರಿ, ಮನೆಗೆ ಎಡತಾಕಿದರೂ ಆ ಕುಟುಂಬಕ್ಕೇನೂ ನೆರವು ದೊರೆಯಲಿಲ್ಲ ಎನ್ನುತ್ತಾರೆ ಗ್ರಾಮಸ್ಥರು.
ಗ್ರಾಮದ ಬೇಡಿಕೆಗಳೂ ಈಡೇರಲಿಲ್ಲ: ಗ್ರಾಮದ ಪರವಾಗಿ ಬೇಡಿಕೆ ಇಟ್ಟಿದ್ದ ಆಸ್ಪತ್ರೆ, ಸಮುದಾಯ ಭವನ ಹಾಗೂ ಸರ್ಕಾರಿ ಪಪೂ ಕಾಲೇಜು ಸೇರಿದಂತೆ ಕೆಲವು ಬೇಡಿಕೆಯ ಮನವಿ ಸಿಎಂಗೆ ಕೊಡಲಾಗಿತ್ತು. ಈ ಯಾವ ಬೇಡಿಕೆಗಳೂ ಈಡೇರಿಲ್ಲವೆಂದು ಗ್ರಾಮದ ಪ್ರಮುಖ ಲಕ್ಷ್ಮಣ ಚಿನ್ನಣ್ಣವರ ‘ಉದಯವಾಣಿ’ಗೆ ತಿಳಿಸಿದರು.
ಉತ್ತೂರಿನ ಶಾಲೆಯಲ್ಲಿ ವಾಸ್ತವ್ಯ: ಇನ್ನು ತಾಲೂಕಿನ ಉತ್ತೂರ ಗ್ರಾಮದಲ್ಲಿ 2006, ಆ.21ರಂದು ಮತ್ತೂಂದು ಗ್ರಾಮ ವಾಸ್ತವ್ಯವನ್ನು ಸಿಎಂ ಕುಮಾರಸ್ವಾಮಿ ಮಾಡಿದ್ದರು. ಮುಧೋಳ ತಾಲೂಕಿನಲ್ಲಿಯೇ ಒಬ್ಬ ಮುಖ್ಯಮಂತ್ರಿ ಎರಡು ಬಾರಿ ಗ್ರಾಮ ವಾಸ್ತವ್ಯ ಮಾಡಿದ್ದು, ರಾಜ್ಯದ ಗಮನ ಸೆಳೆದಿತ್ತು. ಉತ್ತೂರಿನ (ಹಾಲಿ ಸಚಿವ ಆರ್.ಬಿ. ತಿಮ್ಮಾಪುರ ಸ್ವಗ್ರಾಮ) ಸರ್ಕಾರಿ ಶಾಲೆಯಲ್ಲಿ ವಾಸ್ತವ್ಯ ಮಾಡಿ, ಗ್ರಾಮಸ್ಥರ ಅಹವಾಲು ಸ್ವೀಕರಿಸಿದ್ದರು. ಆಗ ಮುಧೋಳ ಶಾಸಕ ಗೋವಿಂದ ಕಾರಜೋಳ ಸಚಿವರಾಗಿದ್ದರು. ಗ್ರಾಮದ ವತಿಯಿಂದ ಸಲ್ಲಿಸಲಾಗಿದ್ದ ಮನವಿಗೆ ಇಲ್ಲಿ ಸ್ಪಂದನೆ ಸಿಕ್ಕಿದೆ.
ಸುವರ್ಣ ಗ್ರಾಮ ಯೋಜನೆಯಡಿ ಉತ್ತೂರ ಆಯ್ಕೆ, ವಾಸ್ತವ್ಯ ಮಾಡಿದ್ದ ಸರ್ಕಾರಿ ಶಾಲೆಯ ಸುತ್ತಲೂ ಕಾಂಪೌಂಡ್ ನಿರ್ಮಾಣ, ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ನಿರ್ಮಾಣ ಮಾಡಲಾಯಿತು. ಇದರ ಜತೆಗೆ ವೃದ್ಧಾಪ್ಯ, ವಿಧವಾ ವೇತನ ಯೋಜನೆಯಡಿ ಹಲವರಿಗೆ ಸ್ಥಳದಲ್ಲೇ ಪ್ರಮಾಣ ಪತ್ರ ವಿತರಿಸಲಾಗಿತ್ತು. ಇದಷ್ಟು ಬಿಟ್ಟರೆ, ಸಿಎಂವೊಬ್ಬರು ಗ್ರಾಮ ವಾಸ್ತವ್ಯ ಮಾಡಿದರ ನೆನಪಿಗಾಗಿ ಅಥವಾ ಇಡೀ ಗ್ರಾಮವನ್ನು ಮಾದರಿ ಗ್ರಾಮ ಮಾಡುವ ಕಲ್ಪನೆಯಾಗಲಿ ಇಲ್ಲಿ ಈಡೇರಿಲ್ಲ.
ಬಿಎಸ್‌ವೈ ಕೂಡ ವಾಸ್ತವ್ಯ ಮಾಡಿದ್ದರು!
ಇನ್ನು ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ತಾಲೂಕಿನ ಶಿರೋಳ ಗ್ರಾಮದ ಸಾವಯವ ಕೃಷಿಕ ಗಣಾಚಾರಿ ಅವರ ತೋಟದಲ್ಲಿ ಒಂದು ಇಡೀ ದಿನ ವಾಸ್ತವ್ಯ ಇದ್ದರು. ಅಂದು ಸಾವಯಕ ಕೃಷಿಕರೊಂದಿಗೆ ಸಂವಾದ, ರೈತ ಬಜೆಟ್‌ಗೆ ಸಲಹೆ ಪಡೆದಿದ್ದರು. ಆಗ ಶಿರೋಳ ಗ್ರಾಮಸ್ಥರು ಸಲ್ಲಿಸಿದ್ದ ಮನವಿಗಳ ಪೈಕಿ ಸರ್ಕಾರಿ ಆಸ್ಪತ್ರೆ, ಗ್ರಾಮದ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ
RBI ಗವರ್ನರ್ ಶಕ್ತಿಕಾಂತ್ ದಾಸ್ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್ ಚಾರ್ಜ್
Mundargi: ಲಾರಿ ಹರಿದು 12 ಕುರಿಗಳು ಸಾವು; 30 ಕುರಿಗಳು ಗಂಭೀರ ಗಾಯ
Belthangady: ಈ ಪುಟ್ಟ ಪೋರನಿಗಿದೆ 300 ವಿದೇಶಿ ಹಣ್ಣಿನ ಗಿಡ ಪರಿಚಯ!
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.