ಜೆಡಿಎಸ್-ಬಿಜೆಪಿ ನಡುವೆ ವಾಗ್ಯುದ್ಧ
ಗೌರಿಶಂಕರ್‌ರ ವಿರುದ್ಧದ ಆರೋಪಕ್ಕೆ ಸುರೇಶ್‌ಗೌಡರಿಗೆ ಜೆಡಿಎಸ್ ಕಾರ್ಯಕರ್ತರ ಮುತ್ತಿಗೆ
Team Udayavani, Jun 19, 2019, 1:11 PM IST
ತುಮಕೂರು ನಗರದ ಬಿ.ಎಚ್.ರಸ್ತೆಯ ಹೊಯ್ಸಳ ಹೋಟೆಲ್ನಲ್ಲಿ ಜೆಡಿಎಸ್ ಗ್ರಾಮಾಂತರ ಕ್ಷೇತ್ರದ ಅಧ್ಯಕ್ಷ ಹಾಲನೂರು ಅನಂತ ಕುಮಾರ್ ನೇತೃತ್ವದಲ್ಲಿ ಮಾಜಿ ಶಾಸಕ ಬಿ. ಸುರೇಶ್‌ಗೌಡರಿಗೆ ಮುತ್ತಿಗೆ ಹಾಕಿರುವುದು.
ತುಮಕೂರು: ಮಾಜಿ ಶಾಸಕ ಬಿ.ಸುರೇಶ್‌ಗೌಡರಿಗೆ ಜೆಡಿಎಸ್ ಕಾರ್ಯಕರ್ತರು ಮುತ್ತಿಗೆ ಹಾಕಿದ್ದ ವೇಳೆ ಯಲ್ಲಿ ಜೆಡಿಎಸ್ ಬಿಜೆಪಿ ಕಾರ್ಯಕರ್ತರ ನಡುವೆ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿ ತಳ್ಳಾಟ ನೂಕಾಟದಲ್ಲಿ ಹೋಟೆಲ್ನ ಪೀಠೊ ಪಕರಣಗಳಿಗೆ ಹಾನಿಯಾಗಿರುವ ಘಟನೆ ಮಂಗಳವಾರ ನಗರದಲ್ಲಿ ನಡೆದಿದೆ.
ನಗರದ ಬಿ.ಎಚ್.ರಸ್ತೆಯ ಹೊಯ್ಸಳ ಹೋಟೆಲ್ನಲ್ಲಿ ಮಾಜಿ ಶಾಸಕ ಬಿ.ಸುರೇಶ್‌ಗೌಡ ಪತ್ರಿಕಾಗೋಷ್ಠಿ ಏರ್ಪಡಿಸಿದ್ದರು. ಸುರೇಶ್‌ಗೌಡ ಬರುವುದಕ್ಕೂ ಮುಂಚೆಯೇ ಹೋಟಲ್ಗೆ ಆಗಮಿಸಿದ್ದ ಗ್ರಾಮಾಂತರ ಜೆಡಿಎಸ್ ಅಧ್ಯಕ್ಷ ಹಾಲನೂರು ಅನಂತಕುಮಾರ್, ಯುವ ಘಟಕದ ಅಧ್ಯಕ್ಷರಾದ ಹಿರೇಹಳ್ಳಿ ಮಹೇಶ್, ಬೆಳಗುಂಬ ವೆಂಕಟೇಶ್ ಮತ್ತಿತರರು ಪತ್ರಿಕಾಗೋಷ್ಠಿ ಆಗುವವರೆಗೆ ಹೋಟೆಲನಲ್ಲಿಯೇ ಇದ್ದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಸುರೇಶ್‌ಗೌಡ ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ. ಗೌರಿಶಂಕರ್ ವಿರುದ್ಧ ಆರೋಪ ಮಾಡಿದ್ದರು.
ಸುರೇಶ್‌ಗೌಡರ ಪ್ರಶ್ನೆ:‘ಗ್ರಾಮಾಂತರ ಕ್ಷೇತ್ರದಲ್ಲಿ ಕಳೆದ 6 ತಿಂಗಳಿನಿಂದ ಕಳ್ಳತನ ನಡೆದಿದ್ದು, ಎಲ್ಲದರಲ್ಲೂ ವಂತಿಕೆ ರೂಪದಲ್ಲಿ ಪ್ರತಿ ಕ್ರೈಂನಲ್ಲಿಯೂ, ಪ್ರತಿ ಕೇಸಿನಲ್ಲಿಯೂ ಶಾಸಕರು ಹಣ ಪಡೆಯುತ್ತಿದ್ದಾರೆ. ಹಸು ಕಳ್ಳತನದಲ್ಲಿ ಇಷ್ಟು, ಒಡವೆ ಕಳ್ಳತನದಲ್ಲಿ ಇಷ್ಟು, ಗಾಡಿ ಹಿಡಿದ ಕೇಸಿಗೆ ಇಷ್ಟು, ಟ್ರ್ಯಾಕ್ಟರ್ ಹಿಡಿದರೆ ಇಷ್ಟು, ಮರಳು ಲಾರಿ ಹಿಡಿದರೆ ಇಷ್ಟು, ಗಣಿ ಕಲ್ಲು ತುಂಬಿದ ಲಾರಿ ಹಿಡಿದರೆ ಇಷ್ಟು, ಕೆಐಎಡಿಬಿ ಜಮೀನಿಗೆ ಇಷ್ಟು, ಜಮೀನು ವಿವಾದಕ್ಕೆ ಇಷ್ಟು, ಅಪಘಾತಕ್ಕೆ ಇಷ್ಟು ಎಂಬಂತೆ ಶಾಸಕರ ಕೆಲವು ಬೆಂಬಲಿಗರ ಮೂಲಕ ಶಾಸಕರು ವಸೂಲಿಗೆ ಇಳಿದಿರುವುದು ಪ್ರಜಾ ಪ್ರಭುತ್ವವನ್ನು ಅಣಕಿಸು ವಂತಿದೆ. ಮತ ನೀಡುವ ಜನತೆಗೆ ನೀಡುವ ನ್ಯಾಯ ಇದೇನಾ ಸ್ವಾಮಿ’ ಎಂದು ಪ್ರಶ್ನಿಸಿದ್ದರು.
ಪತ್ರಿಕಾಗೋಷ್ಠಿ ಮುಗಿಸಿ ಹೊರಬರುತ್ತಿದ್ದಂತೆ ಜೆಡಿಎಸ್ ಮುಖಂಡ ಹಾಲನೂರು ಅನಂತ ಕುಮಾರ್ ಮಾಜಿ ಶಾಸಕರನ್ನು ತಮ್ಮ ಬೆಂಬಲಿಗ ರೊಂದಿಗೆ ಅಡ್ಡ ಹಾಕಿ ಪತ್ರಿಕಾಹೇಳಿಕೆಯನ್ನು ಹಿಡಿದು ಕೊಂಡು ನೀವು ಈ ರೀತಿ ಯಾವ ಆಧಾರದಿಂದ ಹೇಳುತ್ತೀರಾ ಎಂದು ಆಕ್ರೋಶದಲ್ಲಿ ಪ್ರಶ್ನಿಸಿದರು.
ಮಾಜಿ ಶಾಸಕರಿಗೆ ಮುತ್ತಿಗೆ ಹಾಕುತ್ತಲೆ ಬಿಜೆಪಿ ಗ್ರಾಮಾಂತರ ಕ್ಷೇತ್ರದ ಕಾರ್ಯಕರ್ತರು, ಸುರೇಶ ಗೌಡರಿಗೆ ಸುತ್ತುವರಿದು ನಿಂತರು. ಈ ವೇಳೆ ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ನೂಕಾ- ತಳ್ಳಾಟ ನಡೆಯಿತು. ಒಂದು ಹಂತಕ್ಕೆ ಕೈ ಕೈ ಮಿಲಾಯಿ ಸುವವರೆಗೂ ಹೋಗಿತ್ತು. ಆದರೆ ಮಾಜಿ ಶಾಸಕರು ತಮ್ಮ ಕಾರ್ಯಕರ್ತರನ್ನು ಸಮಾಧಾನ ಪಡಿಸಿ ಹೊರನಡೆದರು.
ಹೋಟೆಲ್ನಲ್ಲಿದ್ದವರಿಗೆ ಗಾಬರಿ ಮೂಡಿಸಿತು. ಈ ನೂಕಾಟ ತಳ್ಳಾಟದಲ್ಲಿ ಹೋಟೆಲ್ನ ಪೀಠೊಪ ಕರಣಗಳು ಹಾಳಾದವು. ಘಟನೆ ನಡೆದು ಅರ್ಧ ಗಂಟೆಗೆ ನಗರದ ಡಿವೈಎಸ್‌ಪಿ ಸೇರಿ ಹಲವು ಪೊಲೀಸರು ಹೋಟೆಲ್ಗೆ ಆಗಮಿಸಿ ಪರಿಶೀಲನೆ ನಡೆಸಿದರು. ಮಾಜಿ ಶಾಸಕ ಸುರೇಶ್‌ಗೌಡ ನೇತೃತ್ವ ದಲ್ಲಿ ಬಿಜೆಪಿ ಕಾರ್ಯಕರ್ತರು ಎಸ್ಪಿ ಕಚೇರಿಗೆ ತೆರಳಿ ಗ್ರಾಮಾಂತರ ಕ್ಷೇತ್ರದಲ್ಲಿ ಕಳ್ಳತನ ಮಾಡುವ ಕಳ್ಳರನ್ನು ಹಿಡಿಯಬೇಕೆಂದು ಮನವಿ ಮಾಡಿದರು.
ಮಾಜಿ ಶಾಸಕರು ಪತ್ರಿಕಾಗೋಷ್ಠಿ ನಡೆಸಿ ಹೊರಬರುವ ವೇಳೆ ಜೆಡಿಎಸ್ ಕಾರ್ಯಕರ್ತರು ಮುತ್ತಿಗೆ ಹಾಕಿರುವುದನ್ನು ಬಿಜೆಪಿ ಮುಖಂಡರು ಖಂಡಿಸಿದರು. ಏನೇ ಆರೋಪವಿದ್ದರೂ ಪತ್ರಿಕಾಗೋಷ್ಠಿಯಲ್ಲಿ ತಿಳಿಸಬಹುದಿತ್ತು. ಅದನ್ನು ಬಿಟ್ಟು 2 ಬಾರಿ ಗ್ರಾಮಾಂತರ ಕ್ಷೇತ್ರದಲ್ಲಿ ಗೆದ್ದಿರುವ ಮಾಜಿ ಶಾಸಕರ ಮೇಲೆ ಈ ರೀತಿಯ ದೌರ್ಜನ್ಯ ಸರಿಯಲ್ಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pavagada: ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ
Huliyar; ಕೆಮ್ಮಿನ ಔಷಧವೆಂದು ಭಾವಿಸಿ ಕೀಟನಾಶಕ ಸೇವಿಸಿದ ರೈತ ಸಾ*ವು
ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Darshan; ಶೂಟಿಂಗ್ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.