ಜನರಿಗೆ ಉಚಿತ ನೀರು; ಸಾರ್ಥಕ ಸೇವೆ
Team Udayavani, Jun 19, 2019, 2:17 PM IST
ಹುಬ್ಬಳ್ಳಿ: ಕೊಯಿನ್ ರಸ್ತೆಯ ಹುಬ್ಬಳ್ಳಿ ಕೋ ಆಪರೇಟಿವ್ ಆಸ್ಪತ್ರೆ ಮುಂಭಾಗದಲ್ಲಿ ದೇಸಾಯಿ ಎಂಟರ್‌ಪ್ರೈಸಸ್‌ನವರು ಸಾರ್ವಜನಿಕರಿಗೆ ಉಚಿತ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ.
ಹುಬ್ಬಳ್ಳಿ: ಇಲ್ಲಿನ ಕೊಯಿನ್ ರಸ್ತೆಯ ಹುಬ್ಬಳ್ಳಿ ಕೋ ಆಪರೇಟಿವ್ ಆಸ್ಪತ್ರೆ ಮುಂಭಾಗದಲ್ಲಿ ಮೂರು ವರ್ಷಗಳಿಂದ ಯಾವುದೇ ಫಲಾಪೇಕ್ಷೆ ಇಲ್ಲದೆ ದೇಸಾಯಿ ಎಂಟರ್‌ಪ್ರೈಸಸ್‌ನವರು ಸಾರ್ವಜನಿಕರಿಗೆ ಉಚಿತ ಕುಡಿಯುವ ನೀರು ನೀಡುತ್ತಿದ್ದಾರೆ.
ನಗರದ ಮಹಾನಗರ ಪಾಲಿಕೆ ಈಜುಕೊಳ ಬಳಿಯಲ್ಲಿರುವ ಸಂಸ್ಥೆಯಿಂದ ನೀರಿನ ಸೇವೆ ನಡೆದಿದ್ದು, ಕೊಯಿನ್ ರಸ್ತೆ ಹಾಗೂ ಈಜುಕೊಳ ಕಟ್ಟಡದ ಬಳಿ ಸಾರ್ವಜನಿಕರಿಗೆ ಇಡೀ ವರ್ಷ ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತಿದ್ದಾರೆ.
ಕೊಯಿನ್ ರಸ್ತೆಯಲ್ಲಿ ಆಸ್ಪತ್ರೆ, ಚಿತ್ರಮಂದಿರಗಳು, ವಾಣಿಜ್ಯ ಮಳಿಗೆಗಳು ಹೆಚ್ಚಾಗಿದ್ದು, ಜನದಟ್ಟಣೆಯಿಂದ ಕೂಡಿರುತ್ತದೆ. ಇಂತಹ ಸ್ಥಳದಲ್ಲಿ ನೀರಿನ ಸೇವೆ ನೀಡುವ ಮೂಲಕ ದೇಸಾಯಿ ಎಂಟರ್‌ಪ್ರೈಸಸ್‌ನವರು ಅಳಿಲು ಸೇವೆ ಸಲ್ಲಿಸುತ್ತಿದ್ದಾರೆ. ಇದಕ್ಕಾಗಿ ತಾಜ್‌ನಗರದ ನಿವಾಸಿ ರಾಮಪ್ಪ ಬಡಿಗೇರ ಎನ್ನುವವರಿಗೆ ವೇತನ ನೀಡಿ ಸಾರ್ವಜನಿಕರಿಗೆ ನೀರು ನೀಡಲು ನೇಮಕ ಮಾಡಿದ್ದಾರೆ. ಪ್ರತಿದಿನ ಬೇಸಿಗೆಯಲ್ಲಿ ಸುಮಾರು 50ರಿಂದ 60 ಕೊಡ ಕುಡಿಯುವ ನೀರು ಬೇಕಾದರೆ, ಚಳಿಗಾಲ-ಮಳೆಗಾಲದಲ್ಲಿ ಸುಮಾರು 20-30 ಕೊಡ ನೀರು ಬೇಕಾಗುತ್ತದೆ. ಇದಕ್ಕಾಗಿ ದೇಸಾಯಿ ಎಂಟರ್‌ಪ್ರೈಸಸ್‌ನವರು ಹಣ ಸಂದಾಯ ಮಾಡುವ ಮೂಲಕ ಪಕ್ಕದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕದಿಂದ ವ್ಯವಸ್ಥೆ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ
Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.
Ullala: ದೇರಳಕಟ್ಟೆ: ರಸ್ತೆಯನ್ನು ಅತಿಕ್ರಮಿಸಿದ್ದ ಕಟ್ಟಡಗಳ ತೆರವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.