ಗುತ್ತಿಗೆದಾರರ ನಿರ್ಲಕ್ಷ್ಯ: ಸಮಸ್ಯೆಯಾದ ಅಭಿವೃದ್ಧಿ ಕಾಮಗಾರಿ
Team Udayavani, Jun 20, 2019, 5:00 AM IST
ಪುಂಜಾಲಕಟ್ಟೆ: ಬಿ.ಸಿ. ರೋಡ್ – ಪುಂಜಾಲಕಟ್ಟೆ ಸಂಪರ್ಕದ ರಾ.ಹೆ. 73ರಲ್ಲಿ ದ್ವಿಪಥ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಮಳೆಗಾಲ ಆರಂಭದಲ್ಲಿ ಕಾಮಗಾರಿಯಿಂದ ರಸ್ತೆ ಬದಿಯ ಮನೆ, ಅಂಗಡಿ ಮುಂಗಟ್ಟುಗಳು ಸಮಸ್ಯೆ ಎದುರಿಸುತ್ತಿವೆ. ಕಳೆದ ಒಂದು ವರ್ಷದಿಂದ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಕೆಲವೊಂದು ತೊಂದರೆ ಗಳು ಸ್ಥಳೀಯ ನಿವಾಸಿಗಳನ್ನು ಕಾಡಲಾರಂಭಿಸಿದೆ. ಕಾಮಗಾರಿ ಚುರುಕು ಪಡೆಯು ತ್ತಿದ್ದಂತೆಯೇ ಮಳೆಯೂ ಆರಂಭ ವಾಗಿರುವುದರಿಂದ ಸ್ಥಳೀಯರಿಗೆ ಸಮಸ್ಯೆ ತಂದೊಡ್ಡಿದೆ. ಗುತ್ತಿಗೆ ಕಂಪೆನಿಗೆ ರಸ್ತೆ ಕಾಮಗಾರಿ ಜತೆಗೆ ಈ ಸಮಸ್ಯೆ ಗಳಿಗೂ ಸ್ಪಂದಿಸಬೇಕಾಗಿದೆ.
ಬಿ.ಸಿ. ರೋಡ್‌ನಿಂದ ಪುಂಜಾಲಕಟ್ಟೆ ಯವರೆಗೆ ರಸ್ತೆ ವಿಸ್ತರಣೆ ಕಾಮಗಾರಿ ಹಿನ್ನಲೆಯಲ್ಲಿ ಹೆದ್ದಾರಿ ಇಲಾಖೆಯ ವಿನ್ಯಾಸದ ಪ್ರಕಾರ ಹಲವೆಡೆ ರಸ್ತೆಯನ್ನು ಮಣ್ಣು ಹಾಕಿ ಎತ್ತರಿಸಲಾಗಿದೆ. ಕೆಲವೆಡೆ ರಸ್ತೆ ಬದಿಯ ಗುಡ್ಡಗಳನ್ನು ಜೆಸಿಬಿ ಮೂಲಕ ಅಗೆದು ಇಳಿಜಾರು ಹಾಗೂ ತಗ್ಗು ಪ್ರದೇಶಗಳಿಗೆ ತುಂಬಲಾಗುತ್ತಿದೆ. ಇದೀಗ ಸುರಿಯುತ್ತಿರುವ ಮಳೆಗೆ ರಸ್ತೆ ಪಕ್ಕ ಹಾಕಿರುವ ಮಣ್ಣು ಇಳಿಜಾರು ಮೂಲಕ ಕೆಳ ಭಾಗದಲ್ಲಿರುವ ಮನೆ ಅಂಗಳಕ್ಕೆ ಜಾರಿದ್ದು, ದೂರು ಗಳು ಕೇಳಿ ಬರುತ್ತಿವೆ. ಮನೆಗೆ ಸಂಪರ್ಕಿಸುವ ದಾರಿಯಲ್ಲಿ ಮಣ್ಣು ತುಂಬಿಕೊಂಡು ಸಂಪರ್ಕ ಕಡಿತಗೊಂಡಿದೆ. ತಮ್ಮ ವಾಹನಗಳನ್ನು ಮನೆಯಂಗಳಕ್ಕೆ ಕೊಂಡೊಯ್ಯಲು ಸಾಧ್ಯ ವಾಗದೆ ಎಲ್ಲೆಲ್ಲೋ ಇಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಕೆಲವೆಡೆ ರಸ್ತೆ ಪಕ್ಕದ ತೋಟಗಳಿಗೂ ಮಣ್ಣು ಕುಸಿದಿದೆ. ಭಾರೀ ಮಳೆ ಬಂದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸ ಬಹುದು ಎನ್ನುವುದು ಸ್ಥಳೀಯರ ದೂರು.
ಅಂಗಡಿಗಳಿಗೆ ಮಳೆನೀರು
ಎನ್.ಸಿ. ರೋಡ್‌ನಲ್ಲಿ ರಸ್ತೆ ವಿಸ್ತರಣೆಗೊಂಡಿದ್ದು, ಸರಿ ಯಾದ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆ ಮತ್ತು ಅಂಗಡಿಗಳಿಗೆ ನೀರು ನುಗ್ಗು ತ್ತಿದೆ. ಮಳೆಗಾಲದಲ್ಲಿ ಇಂತಹ ಸಮಸ್ಯೆ ತಲೆದೋರುವ ಬಗ್ಗೆ ಉದಯವಾಣಿ ಮಳೆಗಾಲ ಆರಂಭಕ್ಕೆ ಮುನ್ನ ಎಚ್ಚರಿಸಿತ್ತು.
ವಿದ್ಯುತ್ ಕಂಬ ಸ್ಥಳಾಂತರ
ಪುಂಜಾಲಕಟ್ಟೆ ಮೊದಲಾಡೆಗಳಲ್ಲಿ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ. ಕೆಲವೆಡೆ ಹೊಸ ಹಾಗೂ ಎತ್ತರದ ಕಂಬಗಳನ್ನು ಅಳವಡಿಸಲಾಗುತ್ತಿದೆ. ಪುಂಜಾಲಕಟ್ಟೆ ಯ ದೈಕಿನಕಟ್ಟೆ ಬಳಿ ರಸ್ತೆಯನ್ನು ತುಂಬಾ ಎತ್ತರಿಸಲಾಗಿದ್ದು, ಮನೆ ಅಂಗಳದ ಮುಂದಕ್ಕೆ ರಸ್ತೆ ಹಾದು ಹೋಗುತ್ತದೆ. ರಸ್ತೆ ಪಕ್ಕ ಹಾಕಿರುವ ಮಣ್ಣುಗಳು ಕುಸಿಯದಂತೆ ಕಾಂಕ್ರೀಟ್ ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಆದರೂ ಮನೆ ಮಂದಿಯಲ್ಲಿ ಭಯ ಮನೆ ಮಾಡಿದೆ.
ರಾಷ್ಟ್ರೀಯ ಹೆದ್ದಾರಿಯ ಸ್ಥಳ ಕಾಯ್ದಿರಿಸುವಿಕೆ ಪ್ರಕಾರ ರಸ್ತೆಗೆ ಅಗತ್ಯವಿರುವಷ್ಟು ಸ್ಥಳವನ್ನು ಬಳಸಿಕೊಳ್ಳಲಾಗಿದೆ. ಕೆಲವೆಡೆ ತಿರುವುಗಳನ್ನು ಸರಿಪಡಿಸಲು ಸ್ಥಳದ ಸಮಸ್ಯೆ ಪರಿಹಾರಕ್ಕೆ ಸಾರ್ವಜನಿಕರು ಸಹಕರಿಸುತ್ತಿಲ್ಲ ಎಂದು ಕಾಮಗಾರಿ ನಿರ್ವಹಿಸುವ ಗುತ್ತಿಗೆ ಕಂಪೆನಿಯ ಸಿಬಂದಿ ತಿಳಿಸಿದ್ದಾರೆ.
ಅಪಾಯ ಆಹ್ವಾನಿಸುತ್ತಿವೆ ಮರಗಳು
ಬಡಗುಂಡಿ ಮೊದಲಾದ ಕಡೆಗಳಲ್ಲಿ ರಸ್ತೆ ಬದಿಯ ಗುಡ್ಡಗಳನ್ನು ಜೆಸಿಬಿ ಮೂಲಕ ಅಗೆದು ತಗ್ಗು ಪ್ರದೇಶಗಳಲ್ಲಿ ರಸ್ತೆ ಇಕ್ಕೆಲಗಳಿಗೆ ತುಂಬಲಾಗುತ್ತಿದೆ. ಅವೈಜ್ಞಾನಿಕ ವಾಗಿ ಮಣ್ಣು ಅಗೆದಿರುವುದರಿಂದ ಮಣ್ಣು ತೆರವುಗೊಳಿಸಿದ ಎತ್ತರದ ಸ್ಥಳದಲ್ಲಿ ಮರಗಳು ಅಪಾಯಕಾರಿ ಸ್ಥಿತಿಯಲ್ಲಿದ್ದು, ರಸ್ತೆಗೆ ಉರುಳಿ ಬೀಳಬಹುದಾದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಕೆಳಭಾಗ ದಲ್ಲಿ ವಿದ್ಯುತ್ ತಂತಿಗಳು ಹಾದು ಹೋಗಿದ್ದು, ಅಪಾಯ ಆಹ್ವಾನಿಸುತ್ತಿದೆ.
ರತ್ನದೇವ್ ಪುಂಜಾಲಕಟ್ಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
Canada-India: ಕಾನ್ಸುಲರ್ ಕ್ಯಾಂಪ್ ರದ್ದು; ಕೆನಡಾಗೆ ಭಾರತ ತಿರುಗೇಟು
Electricity Price: ರಾಜ್ಯದ ಜನತೆಗೆ ಈ ಬಾರಿಯೂ ವಿದ್ಯುತ್ ದರ ಏರಿಕೆ ಶಾಕ್?
Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ರಾಜ್ಯ ಭೇಟಿ: ಕಾಂಗ್ರೆಸ್ ಕೆಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.