ಅಭ್ಯಾಸ, ವಿದ್ಯೆಯಿಂದ ಸಹನಶಕ್ತಿ ಹೆಚ್ಚಿಸಿಕೊಳ್ಳಿ : ಎಸ್‌.ಎನ್‌. ಮಯ್ಯ


Team Udayavani, Jun 20, 2019, 5:21 AM IST

19KSDE4

ಮಧೂರು: ಅಭ್ಯಾಸದಿಂದಲೂ ವಿದ್ಯಾಭ್ಯಾಸದಿಂದಲೂ ಸಹನಾ ಶಕ್ತಿಯನ್ನು ಹೆಚ್ಚಿಸಿ ಕೊಳ್ಳಬೇಕು. ಇನ್ನೊಬ್ಬರ ಅಭಿಪ್ರಾಯ ಗಳನ್ನೂ ಆಲಿಸುವುದರಲ್ಲಿ ಆಸಕ್ತಿಯೂ ತಾಳ್ಮೆಯೂ ಇರಬೇಕು ಎಂಬುದಾಗಿ ಕೂಟಮಹಾಜಗತ್ತು ಸಾಲಿಗ್ರಾಮ ಇದರ ಕಾಸರಗೋಡು ಅಂಗಸಂಸ್ಥೆಯ ಅಧ್ಯಕ್ಷ ಎಸ್‌.ಎನ್‌. ಮಯ್ಯ ಬದಿಯಡ್ಕ ಅಭಿಪ್ರಾಯಪಟ್ಟರು.


ಅವರು ಅಂಗಸಂಸ್ಥೆಯ ಸಂಪರ್ಕ ಸಭೆಯಲ್ಲಿ ಎಸೆಸೆಲ್ಸಿ ಹಾಗೂ ಪ್ಲಸ್‌ ಟು ಪರೀಕ್ಷೆಯಲ್ಲಿ ಉತ್ತಮ ಗ್ರೇಡ್‌ಗಳೊಂದಿಗೆ ತೇರ್ಗಡೆಯಾದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಮಾತನಾಡಿದರು.

ಇಲ್ಲಿನ ಕೊಲ್ಯಕ್ಕೆ ಸಮೀಪದ ನರಸಿಂಹ ಮಯ್ಯ ಮಾಸ್ಟರ್‌ ಅವರ ತೋಟ ಮನೆಯಲ್ಲಿ ಜರಗಿದ ಪ್ರಸ್ತುತ ಕಾರ್ಯಕ್ರಮದಲ್ಲಿ ಹಿರಿಯ ಧಾರ್ಮಿಕ ಮುಂದಾಳುಗಳಾದ ವೇ| ಮೂ| ತುಂಗ ಶಂಕರನಾರಾಯಣ ಭಟ್‌ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದು, ಪ್ರಾಮಾಣಿಕತೆ ಹಾಗೂ ಧಾರ್ಮಿಕ ನಡತೆ ಇವೆರಡು ದೊಡ್ಡಗುಣಗಳಾಗಿದ್ದು, ಇವು ಮನುಷ್ಯನನ್ನು ಉದ್ಧಾರಮಾಡಿ ಅವನಿಗೆ ಶಾಶ್ವತ ಸುಖ-ಸಂತೋಷಗಳನ್ನು ನೀಡುವುದು ಎಂದು ಹೇಳಿದರು.

ಹಿರಿಯ ಮುಂದಾಳುಗಳಾದ ರಮೇಶ್‌ ಕಾರಂತ ಬೆದ್ರಡ್ಕ, ಪ್ಲಸ್‌ ಟು ನಿವೃತ್ತ ಅಧ್ಯಾಪಕ ನಾರಾಯಣ ರಾವ್‌ ಮುಂತಾದವರು ಶುಭವನ್ನು ಹಾರೈಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಎಸೆಸೆಲ್ಸಿ ಹಾಗೂ ಪ್ಲಸ್‌ ಟು ತರಗತಿಗಳಲ್ಲಿ ಉತ್ತಮ ಗ್ರೇಡುಗಳೊಂದಿಗೆ ತೇರ್ಗಡೆಯಾದ ಸಿಂಧು ಪಿ.ಆರ್‌. ಕುಳ, ಪ್ರಜ್ವಲ್‌ ಹೇರಳ ಉಡುವ, ಶ್ರೀವಿದ್ಯಾ ಎಸ್‌. ನೀರಾಳ, ಅಭಯ ಕಾರಂತ ಬೆದ್ರಡ್ಕ, ಸಿಂಚನಾ ಹೊಳ್ಳ ಎಲ್ಲಂಗಳ, ನಯನಾ ಬಿ. ಬನ್ನೂರು ಹಾಗೂ ಚರಿತಾ ಬಿ. ಬನ್ನೂರು ಅವರಿಗೆ ದಿ| ವೆಂಕಟ್ರಮಣ ಮಯ್ಯ ಮತ್ತು ದಿ| ಕಾವೇರಿ ಅಮ್ಮ ಅವರ ಸ್ಮರಣಾರ್ಥ ಪ್ರತಿವರ್ಷ ನೀಡಲಾಗುವ ಸ್ಮರಣಿಕೆ ಮತ್ತು ಗುರು ಶ್ರೀ ಶಂಕರಾನಂದ ಪ್ರತಿಷ್ಠಾನ ಮುಗು ಹಾಗೂ ರಾಧಾಕೃಷ್ಣ ಮಯ್ಯ ಪಟ್ಲ ಅವರ ವತಿಯಿಂದ ನೀಡಲಾದ ಆರ್ಥಿಕ ಪುರಸ್ಕಾರಗಳನ್ನು ವಿತರಿಸಲಾಯಿತು. ಪುರಸ್ಕೃತರು ಈ ಸಮ್ಮಾನಕ್ಕೆ ಕೃತಜ್ಞತೆಯನ್ನು ಸಲ್ಲಿಸಿ ಮಾತನಾಡಿದರು.

ಸಮಾರಂಭದಲ್ಲಿ ಯುವ ಕವಯಿತ್ರಿ ಪರಿಣಿತಾ ರವಿ ಅವರನ್ನು ಶಾಲು ಹೊದೆಸಿ ಸಮ್ಮಾನಿಸಲಾಯಿತು. ಇತ್ತೀಚೆಗೆ ಅವರ ಕಥಾ ಸಂಕಲನವಾದ “ವಾತ್ಸಲ್ಯ ಸಿಂಧು’ ಹಾಗೂ “ಸುಪ್ತ ಸಿಂಚನ’ ಎಂಬ ಕವನ ಸಂಕಲನವು ಬಿಡುಗಡೆಯಾಗಿತ್ತು. ಇವರಿಗೆ ಉತ್ತಮ ಭವಿಷ್ಯವನ್ನು ಕೋರಿ ಅತಿಥಿಗಳು ಮಾತನಾಡಿದರು.

ಸಂಪರ್ಕ ಸಭೆಗಿಂತ ಮೊದಲು ವಿಷ್ಣು ಸಹಸ್ರನಾಮ ಪಠನ ಹಾಗೂ ಭಜನ ಸಂಕೀರ್ತನೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಅಂಗಸಂಸ್ಥೆಯ ಮುಂದಿನ ಸಂಪರ್ಕ ಸಭೆಯನ್ನು ಜು.7 ರಂದು ಅಪರಾಹ್ನ ಬೇಳದ ಕುಮಾರಮಂಗಲದ ರಾಮಚಂದ್ರ ಅಡಿಗರ ಮನೆಯಲ್ಲಿ ನಡೆಸಲು ತೀರ್ಮಾನಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಭಾಗವಹಿಸುವಂತೆ ಕೋರಲಾಯಿತು.

ಅಂಗಸಂಸ್ಥೆಯ ಪ್ರಧಾನ ಕಾರ್ಯದರ್ಶಿ ನರಸಿಂಹ ಮಯ್ಯ ಎಂ. ಮಧೂರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಚಂದ್ರಶೇಖರ ರಾವ್‌ ಏತಡ್ಕ ವಂದಿಸಿದರು. ಕೋಶಾಧಿಕಾರಿ ಕೃಷ್ಣ ಕಾರಂತ ಬನ್ನೂರು ಕಾರ್ಯಕ್ರಮ ನಿರೂಪಿಸಿದರು.

ಟಾಪ್ ನ್ಯೂಸ್

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

death

Gangolli: ಲಾರಿ ಪ್ರಯಾಣದ ವೇಳೆ ಕ್ಲೀನರ್‌ ಸಾವು

accident2

Padubidri: ಅಪರಿಚಿತ ವಾಹನ ಢಿಕ್ಕಿ;‌ ಪಾದಚಾರಿಗೆ ತೀವ್ರ ಗಾಯ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

de

Padubidri: ಕೆಎಸ್‌ಆರ್‌ಟಿಸಿ ಬಸ್ಸು ಢಿಕ್ಕಿ; ಪಾದಚಾರಿ ಸಾವು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.