ಸಮುದಾಯ ಸಭಾಂಗಣ ಲೋಕಾರ್ಪಣೆ
ನೀಲೇಶ್ವರ ನಗರಸಭೆ ವಾರ್ಷಿಕ ಯೋಜನೆ
Team Udayavani, Jun 20, 2019, 5:56 AM IST
ಕಾಸರಗೋಡು: ನೀಲೇಶ್ವರ ನಗರಸಭೆಯ ಕರುವಾಚ್ಚೇರಿ ಯಲ್ಲಿ ನಿರ್ಮಾಣಗೊಂಡಿರುವ ಸಮುದಾಯ ಸಭಾಂಗಣ ಮತ್ತು ನಿರಂತರ ಕಲಿಕಾ ಕೇಂದ್ರ ಲೋಕಾರ್ಪಣೆ ಗೊಂಡಿತು.
ನಗರಸಭೆಯ ವಾರ್ಷಿಕ ಯೋಜನೆ ಯಲ್ಲಿ ಅಳವಡಿಸಿ 25 ಲಕ್ಷ ರೂ. ವೆಚ್ಚ ದಲ್ಲಿ ಎರಡು ಅಂತಸ್ತಿನ ಈ ಕಟ್ಟಡ ನಿರ್ಮಾಣಗೊಂಡಿದೆ. ಸ್ಥಳೀಯ ನಿವಾಸಿಗಳ ಸಾಮಾಜಿಕ-ಕಲಾ- ಸಾಂಸ್ಕೃತಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಮತ್ತು ನಿರಂತರ ಕಲಿಕಾ ಪ್ರಕ್ರಿಯೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಸಂಸ್ಥೆಗಳ ನಿರ್ಮಾಣ ನಡೆದಿದೆ. ಈ ಮೂಲಕ ನೀಲೇಶ್ವರ ನಗರಸಭೆ ವ್ಯಾಪ್ತಿಯ ಎಲ್ಲ ಪರಿಶಿಷ್ಟ ಜಾತಿ ಕಾಲನಿಗಳ ಕನಸು ನನಸಾಗಿದೆ. ಈ ಜನಾಂಗದವರ ಮೂಲ ಕಲೆಗಳ ಸಂರಕ್ಷಣೆ, ತರಬೇತಿಗೆ ಈ ಸಂಸ್ಥೆ ಪೂರಕ ವಾಗಲಿದೆ. ಸಮುದಾಯ ಸಭಾಂಗಣ ಸಂರಕ್ಷಣೆ ಸಮಿತಿ ಈ ಸಂಬಂಧ ನಿರ್ಧಾರಗಳನ್ನು ಕೈಗೊಳ್ಳಲಿದೆ.
ಕಟ್ಟಡದ ಎರಡನೇ ಅಂತಸ್ತಿನಲ್ಲಿ ಸಿದ್ಧಗೊಂಡಿರುವ ನಿರಂತರ ಕಲಿಕಾ ಕೇಂದ್ರದಲ್ಲಿ ನಿರಂತರ ಸಾಕ್ಷರತೆ ಚಟು ವಟಿಕೆಗಳ ಸಹಿತ ಪ್ರೌಢಶಾಲೆ ವಿದ್ಯಾರ್ಥಿ ಗಳಿಗೆ ಕಲಿಕೆ ಮನೆ ಸೌಲಭ್ಯವನ್ನೂ ಏರ್ಪಡಿಸಲಾಗುವುದು.
ಲೊಕಸೇವಾ ಆಯೋಗದ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ಉದ್ಯೋಗಾರ್ಥಿಗಳಿಗೆ ಉಚಿತ ರೂಪದಲ್ಲಿ ತ್ವರಿತ ತರಬೇತಿ ಚಟುವಟಿಕೆಗಳನ್ನು ನಡೆಸಲಾಗುವುದು. ಸಮುದಾಯ ಸಭಾಂಗಣದಲ್ಲಿ ಅಗತ್ಯ ವಿರುವ ಪೀಠೊಪಕರಣ, ಟಿ.ವಿ., ಧ್ವನಿವರ್ಧಕ, ಆಸನ, ಮೇಜು, ಕಪಾಟು ಇತ್ಯಾದಿ ಶೀಘ್ರದಲ್ಲೇ ಒದಗಿಸಲಾಗು ವುದು ಎಂದು ನಗರಸಭೆ ಪದಾಧಿಕಾರಿಗಳು ತಿಳಿಸಿದ್ದಾರೆ.
ಇಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಎಂ.ರಾಜಗೋಪಾಲನ್ ಸಮುದಾಯ ಸಭಾಂಗಣ ಮತ್ತು ನಿರಂತರ ಕಲಿಕಾ ಕೇಂದ್ರದ ಕಟ್ಟಡವನ್ನು ಉದ್ಘಾಟಿಸಿದರು.
ನಗರಸಭೆ ಅಧ್ಯಕ್ಷ ಪ್ರೊ| ಕೆ.ಪಿ. ಜಯರಾಜನ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ವಿ. ಗೌರಿ, ಸ್ಥಾಯೀ ಸಮಿತಿ ಅಧ್ಯಕ್ಷರಾದ ಎ.ಕೆ. ಕುಂಞಿಕೃಷ್ಣನ್, ಪಿ.ಪಿ. ಮಹಮ್ಮದ್ ರಾಫಿ, ಪಿ.ಎಂ. ಸಂಧ್ಯಾ, ಪಿ. ರಾಧಾ, ಸದಸ್ಯರಾದ ಕೆ.ವಿ. ಉಷಾ, ಕೆ.ವಿ. ರಾಧಾ, ಜಿ. ಪಂ.ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಕೆ. ಬಾಲಕೃಷ್ಣನ್, ಕೊಟ್ಟರ ವಾಸುದೇವನ್, ಕೆ. ಕೇಶವನ್, ಕೆ. ಸದಾಶಿವನ್, ಟಿ. ವಿಜಯನ್ ಮೊದಲಾದವರು ಉಪಸ್ಥಿತರಿದ್ದರು.
ನಗರಸಭೆ ಎಂಜಿನಿಯರ್ ಕೆ. ಗಣೇಶನ್ ವರದಿ ವಾಚಿಸಿದರು. ವಾರ್ಡ್ ಸದಸ್ಯ ಪಿ.ಕೆ. ರತೀಶ್ ಸ್ವಾಗತಿಸಿ ದರು. ಟಿ.ವಿ. ರಾಜನ್ ವಂದಿಸಿದರು. ಆನಂತರ ಕಲಾಕಾರ್ಯಕ್ರಮಗಳು ನಡೆದುವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vyasanagar: ಮಣ್ಣಿನ ಒಳ ರಸ್ತೆಗಳಿಗೆ ಬೇಕು ಬೀದಿದೀಪ
Mangalore: ಅಡ್ಯಾರ್ ಕಣ್ಣೂರಿನಲ್ಲಿ ತ್ಯಾಜ್ಯ ಸುಡುವಿಕೆಯಿಂದ ಪರಿಸರ ಮಾಲಿನ್ಯ
Dandeli ನಗರ ಠಾಣೆಯ ತನಿಖಾ ವಿಭಾಗದ ಪಿಎಸ್ಐಯಾಗಿ ಕಿರಣ್ ಪಾಟೀಲ್ ಅಧಿಕಾರ ಸ್ಬೀಕಾರ
Thirthahalli: ತುಂಗಾ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆ
Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.