ಭಾರತೀಯ ವೈದ್ಯಕೀಯ ಸಂಘದ ಮುಷ್ಕರ: ನಗರದ ಖಾಸಗಿ ಆಸ್ಪತ್ರೆಗಳ ಬೆಂಬಲ
Team Udayavani, Jun 20, 2019, 5:59 AM IST
ಉಡುಪಿ: ಪಶ್ಚಿಮ ಬಂಗಾಲದಲ್ಲಿ ವೈದ್ಯರ ಮೇಲಿನ ಹಲ್ಲೆಯನ್ನು ಖಂಡಿಸಿ ಮತ್ತು ಆರೋಗ್ಯ ಸಂಸ್ಥೆಗಳ ಮೇಲಿನ ದಾಳಿ ತಡೆಯಲು ಕಾಯ್ದೆ ರೂಪಿಸುವಂತೆ ಆಗ್ರಹಿಸಿ ಸೋಮವಾರ ಭಾರತೀಯ ವೈದ್ಯಕೀಯ ಸಂಘ ನೀಡಿರುವ ಬಂದ್ ಕರೆಗೆ ನಗರದ ಎಲ್ಲ ಖಾಸಗಿ ಆಸ್ಪತ್ರೆಗಳು ಮತ್ತು ಕ್ಲಿನಿಕ್‌ಗಳು ಸಂಪೂರ್ಣ ಬೆಂಬಲ ನೀಡಿದೆ.
ಬಂದ್‌ಗೆ ವ್ಯಾಪಕ ಬೆಂಬಲ
ಉಡುಪಿ ಜಿಲ್ಲೆಯಲ್ಲಿ ಒಟ್ಟು 24ಕ್ಕೂ ಅಧಿಕ ಖಾಸಗಿ ಆಸ್ಪತ್ರಗಳಿವೆ. ನಗರದ ಮಿಷನ್ ಆಸ್ಪತ್ರೆ, ಡಾ| ಟಿಎಂಎ ಪೈ, ಹೈಟೆಕ್, ಪ್ರಸಾದ್ ನೇತ್ರಾಲಯ, ಮಣಿಪಾಲ ಕಸ್ತೂರ್ಬಾ, ಉಡುಪಿಯ ಆದರ್ಶ, ಮಿತ್ರ, ದೊಡ್ಡಣಗುಡ್ಡೆಯ ಡಾ| ಎ.ವಿ. ಬಾಳಿಗಾ ಸೇರಿದಂತೆ ಎಲ್ಲ ಖಾಸಗಿ ಆಸ್ಪತ್ರೆ, ನರ್ಸಿಂಗ್ ಹೋಮ್‌ಗಳಲ್ಲಿ ಹೊರ ರೋಗಿಗಳ ವಿಭಾಗ ಸೋಮವಾರ ಬೆಳಗ್ಗೆಯಿಂದ ಮುಚ್ಚಿತ್ತು. ಅನಿವಾರ್ಯ ಹಾಗೂ ತುರ್ತು ಚಿಕಿತ್ಸೆಗಳನ್ನು ಮಾಡಲಾ ಗುತ್ತಿತ್ತು.
ಕ್ಲಿನಿಕ್‌ನಲ್ಲಿ ಸೇವೆ ಸ್ಥಗಿತ
ನಗರದಲ್ಲಿ ಸುಮಾರು 100 ಕ್ಲಿನಿಕ್‌ಗಳಿವೆ. ಮುಷ್ಕರದ ನಿಮಿತ್ತ ಎಲ್ಲ ವೈದ್ಯರು ವೈದ್ಯಕೀಯ ಸೇವೆಯನ್ನು ಸ್ಥಗಿತಗೊಳಿಸಿದರು. ಸಾಮಾನ್ಯವಾಗಿ ವೈದ್ಯರ ಮುಷ್ಕರದ ಸಂದರ್ಭ ಕ್ಲಿನಿಕ್ ತೆರೆದಿರುತ್ತದೆ. ಇದೇ ಮೊದಲ ಬಾರಿ ನಗರದ ಎಲ್ಲ ಕ್ಲಿನಿಕ್‌ಗಳಲ್ಲಿ ಒಪಿಡಿ ಸೇವೆ ಬಂದ್ ಮಾಡಲಾಯಿತು. ಖಾಸಗಿ ಆಸ್ಪತ್ರೆ ಮುಂಭಾಗದಲ್ಲಿ ಒಪಿಡಿ ಸೇವೆ ಬಂದ್ ಆಗಿರುವ ಕುರಿತು ಬಿತ್ತಿ ಪತ್ರ ಅಂಟಿಸಲಾಗಿತ್ತು.
ತಾಲೂಕಿನಲ್ಲಿ ಬೆಂಬಲ
ಉಡುಪಿ ತಾಲೂಕಿನ ಎಲ್ಲ ಖಾಸಗಿ ಆಸ್ಪತ್ರೆ ಹಾಗೂ ಕ್ಲಿನಿಕ್‌ಗಳು ಮುಷ್ಕರಕ್ಕೆ ಬೆಂಬಲ ನೀಡಿವೆ. ತುರ್ತು ಚಿಕಿತ್ಸೆ ವಿಭಾಗ ಎಂದಿನಂತೆ ಕಾರ್ಯಚರಿಸಿದೆ. ಪಶ್ಚಿಮ ಬಂಗಾಲದ ಸಿಎಂ ಮಮತಾ ಬ್ಯಾನರ್ಜಿ ಜತೆಗಿನ ಚರ್ಚೆಯ ಬಳಿಕ ಜೂ.18ಕ್ಕೆ ಮುಷ್ಕರ ನಡೆಸುವ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ ಡಾ| ಗುರುಮೂರ್ತಿ ತಿಳಿಸಿದರು.
ಒಪಿಡಿ ಸೇವೆ ಸಿಗದೆ ಪರದಾಟ
15 ದಿನಗಳ ಹಿಂದೆ ಕೈ ಮೊಳೆ ಮುರಿತಕ್ಕೆ ಒಳಗಾದ ವೈದ್ಯರು ಪಟ್ಟಿಯನ್ನು ಹಾಕಿ ಜೂ. 17ರಂದು ಬರುವಂತೆ ಸೂಚಿಸಿದ್ದಾರೆ. ಅಂತೆಯೇ ವೈದ್ಯರ ಮುಷ್ಕರವಾದರೂ ಕೈಗೆ ಹಾಕಿರುವ ಪಟ್ಟಿ ತೆಗೆಯಬಹುದು ಅಂತ ಬಂದಿದ್ದೇನೆ. ಆದರೆ ಆಸ್ಪತ್ರೆಯಲ್ಲಿ ತುರ್ತು ಸೇವೆ ಬಿಟ್ಟು ಇತರೆ ಒಪಿಡಿ ಸೇವೆ ನೀಡಲು ಸಿಬಂದಿಗಳು ಒಪ್ಪುತ್ತಿಲ್ಲ ಎಂದು ಹೆಬ್ರಿ ನಿವಾಸಿ ಮಹೇಶ್ ಶೆಟ್ಟಿ ಬೇಸರ ವ್ಯಕ್ತಪಡಿಸಿದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Sirsi: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ
EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್ ಟೀಕೆ
Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ
India: 68 ಮಿಲಿಯನ್ ಟನ್ ಆಹಾರ ಪೋಲು…ದೇಶದ ಅಭಿವೃದ್ಧಿ, ಜನರ ಸಾವು, ಆಹಾರ ಭದ್ರತೆಗೂ ಮಾರಕ
ದೋಟಿಹಾಳ: ಉದ್ಘಾಟನೆ ಕಾಣದೆ ಅಂಗನವಾಡಿ ಕಟ್ಟಡ ಅನಾಥ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.