ರೈತರಿಗೆ ಸಮಗ್ರ ಕೃಷಿ ಅಭಿಯಾನ ಸಹಕಾರಿ

ಪ್ರಚಾರ ವಾಹನಕ್ಕೆ ಚಾಲನೆ ನೀಡಿದ ಶಾಸಕಿ ಎಂ.ರೂಪಕಲಾ

Team Udayavani, Jun 20, 2019, 2:03 PM IST

kolar-tdy-1..

ಬೇತಮಂಗಲದ ಕೃಷಿ ಇಲಾಖೆ ಆವರಣದಲ್ಲಿ ಪ್ರಚಾರ ರಥಕ್ಕೆ ಶಾಸಕಿ ರೂಪಕಲಾ, ಜಿಪಂ ಸದಸ್ಯೆ ನಿರ್ಮಲಾ ಹಸಿರು ನಿಶಾನೆ ತೋರಿಸಿದರು.

ಬೇತಮಂಗಲ: ರೈತರಿಗೆ ಸರ್ಕಾರಿ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲು ಕೃಷಿ ಅಭಿಯಾನ ಸಹಕಾರಿಯಾಗಿದೆ ಎಂದು ಶಾಸಕಿ ಎಂ.ರೂಪಕಲಾ ಹೇಳಿದರು.

ರೈತರಿಗೆ ಸಮಗ್ರ ಮಾಹಿತಿ ಒದಗಿಸುವ ಪ್ರಚಾರ ವಾಹನಕ್ಕೆ ಗ್ರಾಮದ ರೈತ ಸಂಪರ್ಕ ಕೇಂದ್ರ ಬಳಿ ಹಸಿರು ನಿಶಾನೆ ತೋರಿ ಮಾತನಾಡಿದ ಅವರು, ರೈತರು ಇಲಾಖೆಗಳಿಗೆ ಭೇಟಿ ನೀಡಿ ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮ ಇಳುವರಿ ಜತೆಗೆ ಲಾಭ ಪಡೆದುಕೊಳ್ಳುವಂತೆ ಸಲಹೆ ನೀಡಿದರು.

ಈ ಪ್ರಚಾರ ರಥವು ಪ್ರತಿಯೊಂದು ಹಳ್ಳಿಗೂ ಭೇಟಿ ನೀಡಲಿದ್ದು, ರೈತರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲಿದೆ. ರೈತರು ಮನೆ ಬಾಗಿಲಿಗೆ ಬಂದು ಪ್ರಚಾರ ಮಾಡುವುದರಿಂದ ಎಲ್ಲರಿಗೂ ಸೌಲಭ್ಯಗಳ ಮಾಹಿತಿ ಸಿಗಲಿದೆ. ಈ ಅಭಿಯಾನ 6 ದಿನಗಳ ಕಾಲ ಗ್ರಾಮಾಂತರ ಪ್ರದೇಶಗಳಲ್ಲಿ ನಡೆಯಲಿದೆ. ಆದರೆ, 10 ದಿನಗಳವರೆಗೂ ಪ್ರಚಾರ ಮಾಡಿ ಕಾರ್ಯಕ್ರಮದ ಉದ್ದೇಶ ಯಶಸ್ವಿಗೊಳಿಸಬೇಕೆಂದು ಶಾಸಕಿ ಸೂಚಿಸಿದರು.

ಈ ವೇಳೆ ರೇಷ್ಮೆ, ಮೀನುಗಾರಿಕೆ, ಪಶುಸಂಗೋಪನೆ, ತೋಟಗಾರಿಕೆ ಇಲಾಖೆಗಳಿಂದ ರೈತರಿಗೆ ದೊರೆಯುವ ಸೌಲಭ್ಯಗಳ ಕರಪತ್ರಗಳನ್ನು ಶಾಸಕಿ ರೂಪಕಲಾ ಬಿಡುಗಡೆ ಮಾಡಿದರು. ಜಿಪಂ ಸದಸ್ಯೆ ನಿರ್ಮಲಾ, ಮಾಜಿ ಸದಸ್ಯ ಅ.ಮು.ಲಕ್ಷ್ಮೀನಾರಾಯಣ್‌, ಗ್ರಾಪಂ ಅಧ್ಯಕ್ಷ ಕಿರಣ್‌ಕುಮಾರ್‌, ಗ್ರಾಪಂ ಸದಸ್ಯರಾದ ಮಂಜುನಾಥ್‌, ವಿನುಕಾರ್ತಿಕ್‌, ತಾಪಂ ಸದಸ್ಯ ನಾರಾಯಣಪ್ಪ, ತಹಶೀಲ್ದಾರ್‌ ರಮೇಶ್‌, ಉಪತಹಶೀಲ್ದಾರ್‌, ಕೃಷಿ ನಿರ್ದೇಶಕ ನಾಗರಾಜ್‌, ವಸಂತರೆಡ್ಡಿ, ಸಂಪತ್‌, ನಿವೃತ್ತ ಕೃಷಿ ಅಧಿಕಾರಿ ಸೋಮಸುಂದರ್‌, ಮೀನುಗಾರಿಕೆ ಸಹಾಯಕ ನಿರ್ದೇಶಕ ಲಕ್ಷ್ಮೀಕಾಂತ್‌, ತೋಟಗಾರಿಕೆ ಅಧಿಕಾರಿ ರಾಮೂರ್ತಿ, ರೇಷ್ಮೆ ಶ್ರೀನಿವಾಸ್‌, ಎಚ್ಸಿಒ ಶ್ರೀನಿವಾಸ್‌, ಮುಖಂಡರಾದ ರಾಧಾಕೃಷ್ಣರೆಡ್ಡಿ, ಪದ್ಮನಾಭರೆಡ್ಡಿ, ರೈತರು, ಮುಖಂಡರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

ಬೈಡೆನ್‌ “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karnataka: ಅನರ್ಹರ ಕಾರ್ಡ್‌ ಮಾತ್ರ ಎಪಿಎಲ್‌ಗೆ: ಮುನಿಯಪ್ಪ

Karnataka: ಅನರ್ಹರ ಕಾರ್ಡ್‌ ಮಾತ್ರ ಎಪಿಎಲ್‌ಗೆ: ಮುನಿಯಪ್ಪ

ಕೆಲ ಕಾರಣಗಳಿಂದ ಯೋಗೇಶ್ವರ್‌ಗೆ ನೋವಾಗಿದೆ: ಅಶ್ವತ್ಥನಾರಾಯಣ

C. N. Ashwath Narayan: ಕೆಲ ಕಾರಣಗಳಿಂದ ಯೋಗೇಶ್ವರ್‌ಗೆ ನೋವಾಗಿದೆ

Kolar: ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪೋಷಕರು ಪರಾರಿ

Kolar: ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪೋಷಕರು ಪರಾರಿ

0528

Bangarapet: ಗ್ರಾಪಂಗಳಲ್ಲಿ ಇಲ್ಲ ಅಧಿಕಾರಿ-ಸಿಬ್ಬಂದಿ; ಸಮಸ್ಯೆ

Kolar

Air Force Emergency: ಬಂಗಾರಪೇಟೆ ಬಳಿ ವಾಯುಪಡೆ ಹೆಲಿಕಾಪ್ಟರ್‌ ತುರ್ತು ಭೂ ಸ್ಪರ್ಶ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Suside-Boy

Karkala: ಬೋಳ ಗ್ರಾಮದ ವ್ಯಕ್ತಿ ಆತ್ಮಹತ್ಯೆ

Suside-Boy

Mudubidre: ಅಂತಿಮ ಬಿಬಿಎಂ ವಿದ್ಯಾರ್ಥಿ ಆತ್ಮಹತ್ಯೆ

Suside-Boy

Belthangady: ಕಲ್ಮಂಜ: ರಿಕ್ಷಾ ಚಾಲಕ ಆತ್ಮಹತ್ಯೆ

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Suside-Boy

Punjalakatte: ಕೊಯಿಲದ ವ್ಯಕ್ತಿ ಹಾಸನದಲ್ಲಿ ನಿಗೂಢ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.