ಜಿಪಂ ಬಜೆಟ್: ಶಿಕ್ಷಣ ಇಲಾಖೆಗೆ ಸಿಂಹಪಾಲು

ಜಿಪಂ: 908.02 ಕೋಟಿ ರೂ. ಬಜೆಟ್‌ಗೆ ಅನುಮೋದನೆ • ಕಳೆದ ವರ್ಷಕ್ಕಿಂತ 130.74 ಕೋಟಿ ರೂ. ಹೆಚ್ಚುವರಿ ನೀಡಿಕೆ

Team Udayavani, Jun 20, 2019, 2:22 PM IST

mandya-tdy-1..

ಬಜೆಟ್ ಪೆಟ್ಟಿಗೆಯನ್ನು ಪ್ರದರ್ಶಿಸುತ್ತಿರುವ ಅಧ್ಯಕ್ಷೆ ನಾಗರತ್ನಸ್ವಾಮಿ.

ಮಂಡ್ಯ: 2019-20ನೇ ಸಾಲಿಗೆ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳಿಗೆ 908.02 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಜಿಪಂ ಕಾರ್ಯಕ್ರಮಗಳಿಗೆ 293.02 ಕೋಟಿ ರೂ., ತಾಪಂಗೆ 613.86 ಕೋಟಿ ರೂ. ಹಾಗೂ ಗ್ರಾಮ ಪಂಚಾಯಿತಿಗೆ 1.14 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಜಿಪಂ ಅಧ್ಯಕ್ಷೆ ನಾಗರತ್ನಸ್ವಾಮಿ ಹೇಳಿದರು.

ಬುಧವಾರ ಜಿಪಂ ಕಾವೇರಿ ಸಭಾಂಗಣದಲ್ಲಿ ಆಯವ್ಯಯ ಮಂಡಿಸಿ ಮಾತನಾಡಿ, ಪ್ರಸಕ್ತ ಸಾಲಿನ ಆಯವ್ಯಯದಲ್ಲಿ 130.74 ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ನೀಡಲಾಗಿದ್ದು, ಹಿಂದಿನ ಸಾಲಿಗೆ ಹೋಲಿಸಿದರೆ ಶೇ.16.82ರಷ್ಟು ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿದೆ. 2018-19ನೇ ಸಾಲಿನಲ್ಲಿ 777.28 ಕೋಟಿ ರೂ.ಗಳನ್ನು ಮಾತ್ರ ಬಿಡುಗಡೆ ಮಾಡಲಾಗಿತ್ತು ಎಂದು ಭಾಷಣದಲ್ಲಿ ತಿಳಿಸಿದರು.

ಶಿಕ್ಷಣ ಇಲಾಖೆ ಸಿಂಹಪಾಲು: ಬಜೆಟ್‌ನಲ್ಲಿ ಮೀಸಲಿಟಿrರುವ ಅನುದಾನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಸಿಂಹಪಾಲು ಪಡೆದುಕೊಂಡಿದೆ. ಶಿಕ್ಷಣ ಇಲಾಖೆ ಕಾರ್ಯಕ್ರಮಗಳಿಗೆ 522.68 ಕೋಟಿ ರೂ. ಹಣ ನೀಡಿದ್ದು, ಕಳೆದ ಸಾಲಿನಲ್ಲಿ 436.92 ಕೋಟಿ ರೂ. ಹಣ ಹಂಚಿಕೆ ಮಾಡಿತ್ತು. ಬಿಸಿಯೂಟ ಕಾರ್ಯಕ್ರಮಕ್ಕೆ 43.18 ಕೋಟಿ ರೂ. ನಿಗದಿಪಡಿಸಿದ್ದು, ಈ ಸಾಲಿನಲ್ಲಿ 12 ಸಾವಿರ ವಿದ್ಯಾರ್ಥಿಗಳಿಗೆ ಬೈಸಿಕಲ್ ವಿತರಿಸಲು ನಿರ್ಧರಿಸಲಾಗಿದೆ. ಶಾಲಾ ಕಟ್ಟಡಗಳ ದುರಸ್ತಿಗೆ 45 ಲಕ್ಷ ರೂ. ಅನುದಾನ, 52 ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗಳಿಗೆ ಪೀಠೊಪಕರಣ ಖರೀದಿ ಹಾಗೂ ಶಿಕ್ಷಕರ ವೇತನಾನುದಾನಕ್ಕೆ 25 ಲಕ್ಷ ರೂ. ನೀಡಿದೆ ಎಂದು ವಿವರಿಸಿದರು.

ಆರೋಗ್ಯ ಇಲಾಖೆಗೆ 66.66 ಕೋಟಿ: ಆರೋಗ್ಯ ಇಲಾಖೆಗೆ 66.66 ಕೋಟಿ ರೂ. ಹಣ ನೀಡಿದೆ. ಇದರಲ್ಲಿ ಇಲಾಖಾ ಕಟ್ಟಡಗಳ ದುರಸ್ತಿಗೆ 52 ಲಕ್ಷ ರೂ. ಸಲಕರಣೆ ಖರೀದಿ ಹಾಗೂ ರಿಪೇರಿಗೆ 21 ಲಕ್ಷ ರೂ. ಹಾಗೂ ತಾಪಂ ಲೆಕ್ಕ ಶೀರ್ಷಿಕೆಯಡಿ ಸಾಮಗ್ರಿಗಳ ಖರೀದಿಗೆ 21 ಲಕ್ಷ ರೂ. ಹಣ ಒದಗಿಸಲಾಗಿದೆ. ಆಯುಷ್‌ ಇಲಾಖೆಗೆ 34.98 ಕೋಟಿ ರೂ. ಅನುದಾನ ನಿಗದಿಯಾಗಿದ್ದು, ಇದರಲ್ಲಿ ಸಲಕರಣೆ ಖರೀದಿ, ರಿಪೇರಿ, ಪ್ರಯಾಣ ಭತ್ಯೆ, ಸಾದಿಲ್ವಾರು ವೆಚ್ಚಕ್ಕೆ 35.52 ಲಕ್ಷ ರೂ. ಅಧಿಕಾರಿ ಮತ್ತು ಸಿಬ್ಬಂದಿ ವೇತನಕ್ಕೆ 4.41 ಕೋಟಿ ರೂ., ಔಷಧ ಖರೀದಿಗೆ 22.05 ಲಕ್ಷ ರೂ. ನೀಡಿದೆ ಎಂದರು.

ಕೃಷಿ ಇಲಾಖೆಗೆ 7.95 ಕೋಟಿ ರೂ.: ಕೃಷಿ ಇಲಾಖೆಗೆ ಈ ಸಾಲಿನಲ್ಲಿ 7.95 ಕೋಟಿ ರೂ. ಅನುದಾನ ಒದಗಿಸಿದೆ. ರೈತ ಸಂಪರ್ಕ ಕೇಂದ್ರಗಳ ನಿರ್ವಹಣೆ, ಪ್ರಾತ್ಯಕ್ಷಿಕೆ, ತರಬೇತಿಗೆ 28 ಲಕ್ಷ ರೂ., ಕೃಷಿ ಯಂತ್ರೋಪಕರಣಗಳನ್ನು ಸಹಾಯಧನದಲ್ಲಿ ರೈತರಿಗೆ ವಿತರಿÓ‌ಲು 33 ಲಕ್ಷ ರೂ., ಕೃಷಿ ಕಚೇರಿ ಕಟ್ಟಡಗಳ ದುರಸ್ತಿಗೆ 12 ಲಕ್ಷ ರೂ., ಸಹಾಯಧನದಲ್ಲಿ ಸಾವಯವ ಗೊಬ್ಬರ ವಿತರಿಸಲು 7 ಲಕ್ಷ ರೂ., ರೋಗ, ಕೀಟಗ‌ಳ ಹಾವಳಿ ನಿಯಂತ್ರಣಕ್ಕೆ ಔಷಧ, ಸಸ್ಯ ಸಂರಕ್ಷಣಾ ಉಪಕರಣಗಳಿಗೆ 9 ಲಕ್ಷ ರೂ. ನೀಡಲಾಗಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 2018-20ನೇ ಸಾಲಿನಲ್ಲಿ 1.01 ಕೋಟಿ ರೂ. ಅನುದಾನ ನಿಗದಿಪಡಿಸಿದ್ದು, ಈ ಸಾಲಿನಲ್ಲಿ 84.59 ಲಕ್ಷ ರೂ. ಮಾತ್ರ ನೀಡಿದೆ.

ರಸ್ತೆಗಳ ನಿರ್ವಹಣೆಗೆ ಅನುದಾನ: ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ವಿಭಾಗದಲ್ಲಿ ಗ್ರಾಮೀಣ ಸಂಪರ್ಕ ರಸ್ತೆ ಮತ್ತು ಸೇತುವೆ ನಿರ್ಮಾಣಕ್ಕೆ 7.75 ಕೋಟಿ ರೂ. ನೀಡಿದೆ. ಜಿಲ್ಲೆಯಲ್ಲಿ 8573 ಕಿ.ಮೀ. ಉದ್ದ ರಸ್ತೆ ಇದ್ದು, ಇದರಲ್ಲಿ 1746 ಕಿ.ಮೀ. ಡಾಂಬರು, 1591 ಕಿ.ಮೀ. ಜಲ್ಲಿ ರಸ್ತೆ ಉಳಿದ 5234 ಕಿ.ಮೀ. ಗ್ರಾವೆಲ್ ರಸ್ತೆ ಇದೆ. ಈ ರಸ್ತೆಗಳ ನಿರ್ವಹಣೆಗೆ ಅನುದಾನವನ್ನು ಬಳಕೆ ಮಾಡಿಕೊಳ್ಳಬಹುದು.

ಕೆರೆಗಳ ನಿರ್ವಹಣೆಗೆ 1.24 ಕೋಟಿ ರೂ.: ಸಣ್ಣ ನೀರಾವರಿ ಕೆರೆಗಳ ನಿರ್ವಹಣೆ ಮಾಡಲು ಸರ್ಕಾರದಿಂದ 1.24 ಕೋಟಿ ರೂ. ಅನುದಾನ ಒದಗಿಸಿದೆ. 2018-19ನೇ ಸಾಲಿನಲ್ಲಿ ಸಣ್ಣ ನೀರಾವರಿ ಸಮೀಕ್ಷಾ ಕಾರ್ಯ, ಹೊಸ ಸರಬರಾಜು ಯೋಜನೆಯಡಿ 5.72 ಲಕ್ಷ ರೂ. ಹಾಗೂ 4.58 ಲಕ್ಷ ರೂ. ಅನುದಾನ ಒದಗಿಸಿದ್ದು, ಈ ಅನುದಾನದಲ್ಲಿ ಸಣ್ಣಕೆರೆಗಳ ಸರಹದ್ದನ್ನು ಗುರುತಿಸುವ ಕಾರ್ಯವನ್ನು ತೆಗೆದುಕೊಳ್ಳಲಾಗಿದ್ದು, ಈ ಅನುದಾನ ಖರ್ಚಾಗದೆ ಹಾಗೇ ಉಳಿದಿತ್ತು..ಈ ಸಾಲಿನಲ್ಲಿ 6.12 ಲಕ್ಷ ರೂ 4.90 ಲಕ್ಷ ರೂ. ಅನುದಾನ ನೀಡಿದ್ದು, ಕೆರೆಗಳ ಸರಹದ್ದು ಗುರುತಿಸುವ ಕಾರ್ಯ ಕೈಗೊಳ್ಳಲಾಗುವುದು.

ಹೊಸ ಗೇಟ್‌ಗಳಿಗೆ ಅವಕಾಶ: 2018-19ನೇ ಸಾಲಿನಲ್ಲಿ ಸಣ್ಣ ಕೆರೆಗಳು, ಹೊಸ ಸರಬರಾಜಿಗೆ 10.30 ಲಕ್ಷ ರೂ. ಅನುದಾನ ನೀಡಿದ್ದು,ಅದು ಖರ್ಚಾಗಿರುವುದಿಲ್ಲ. ಈ ಸಾಲಿನಲ್ಲಿ 11.02 ಲಕ್ಷ ರೂ. ಅನುದಾನ ನಿಗದಿಪಡಿಸಿದ್ದು, ಇದರಲ್ಲಿ ಕೆಲವು ಕೆರೆಗಳಲ್ಲಿ ಸ್ಲೂಯೀಸ್‌ ಗೇಟ್ ಇಲ್ಲದೆ ನೀರು ಪೋಲಾಗುವ ಸಾಧ್ಯತೆಗಳಿದ್ದರೆ ಹೊಸ ಗೇಟ್‌ಗಳನ್ನು ಅಳವಡಿಸಲು ಅವಕಾಶ ಮಾಡಿಕೊಡಲಾಗಿದೆ ಎಂದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಈ ಸಾಲಿನಲ್ಲಿ ಕುಡಿಯುವ ನೀರು ಪೂರೈಕೆ ಯೋಜನೆಗಳ ಕ್ರಿಯಾಯೋಜನೆ ರೂಪಿಸಲು 246.05 ಕೋಟಿ ರೂ.ಗಳ ಹಂಚಿಕೆ ಮಾಡಲಾಗಿದೆ. ಇದರಲ್ಲಿ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಗೆ 190.30 ಕೋಟಿ ರೂ. ಹಣನಿಗದಿಪಡಿಸಲಾಗಿದೆ.

ಡಿ.ದೇವರಾಜ ಅರಸು ಹುಟ್ಟುಹಬ್ಬ ಆಚರಣೆಗೆ 1 ಲಕ್ಷ ರೂ.: ಸಮಾಜ ಕಲ್ಯಾಣ ಇಲಾಖೆಯಲ್ಲಿ ಜಿಪಂ ಕಾರ್ಯಕ್ರಮಗಳ ಅನುಷ್ಠಾನಕ್ಕೆ 18.88 ಕೋಟಿ ರೂ., ತಾಪಂ ಕಾರ್ಯಕ್ರಮಗಳಿಗೆ 18.98 ಕೋಟಿ ರೂ. ಸೇರಿ 37.87 ಕೋಟಿ ರೂ. ಹಣ ನೀಡಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ 43.13 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ವಿದ್ಯಾರ್ಥಿ ನಿಲಯಗಳ ನಿರ್ವಹಣೆ, ವೇತನ ಬಾಬ್ತು 8.01 ಕೋಟಿ ರೂ. ಕಟ್ಟಡ ಬಾಡಿಗೆ 17.64 ಕೋಟಿ ರೂ., ವಿದ್ಯಾರ್ಥಿ ನಿಲಯಗಳ ಸ್ವಂತ ಕಟ್ಟಡಗಳ ದುರಸ್ತಿಗೆ 53.19 ಲಕ್ಷ ರೂ., ಇತರೆ ಹಿಂದುಳಿದ ವರ್ಗಗಳಿಗೆ ರಿಯಾಯಿತಿಗೆ 15.93 ಕೋಟಿ ರೂ., ಡಿ.ದೇವರಾಜ ಅರಸು ಹುಟ್ಟು ಹಬ್ಬ ಆಚರಣೆಗೆ 1 ಲಕ್ಷ ರೂ. ನೀಡಿದೆ.

ಬಜೆಟ್ ಸಭೆಯಲ್ಲಿ ಉಪಾಧ್ಯಕ್ಷೆ ಪಿ.ಕೆ.ಗಾಯತ್ರಿ, ಜಿಪಂ ಸಿಇಒ ಕೆ.ಯಾಲಕ್ಕೀಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ರಾದ ರವಿ, ಡಿ.ಕೆ.ಶಿವಪ್ರಕಾಶ್‌, ಮುಖ್ಯ ಯೋಜನಾಧಿಕಾರಿ ಧನುಷ್‌ ಇದ್ದರು.

 

ಟಾಪ್ ನ್ಯೂಸ್

CM DCM

Cabinet ಸರ್ಜರಿ ಸದ್ಯ ಇಲ್ಲ:ಹೈಕಮಾಂಡ್‌ ಭೇಟಿ ಬಳಿಕ ಸಿಎಂ, ಡಿಸಿಎಂ ಸ್ಪಷ್ಟನೆ

1-ani

Tamil Nadu;ಇಂದು ಅಪ್ಪಳಿಸಲಿದೆ ‘ಫೆಂಗಲ್‌’ ಚಂಡಮಾರುತ!: ಶ್ರೀಲಂಕಾದಲ್ಲಿ 12 ಸಾ*ವು

krishna bhaire

1.26 ಲಕ್ಷ ಅರ್ಹರಿಗೆ ವಾರದಲ್ಲಿ ಬಗರ್‌ ಹುಕುಂ ಚೀಟಿ

1-ewewew

Maharashtra; ವಿಧಾನಸಭೆಗೆ 78 ಶಾಸಕರು ಮೊಟ್ಟ ಮೊದಲ ಬಾರಿಗೆ ಪ್ರವೇಶ

GDP

GDP; ದೇಶದ ಆರ್ಥಿಕಾಭಿವೃದ್ಧಿ 2 ವರ್ಷದಲ್ಲೇ ಕನಿಷ್ಠ: ಶೇ.5.4 ಜಿಡಿಪಿ ದಾಖಲು

Modi Interview

Opposition ;ಜನರ ದಾರಿ ತಪ್ಪಿಸುತ್ತಿರುವ ವಿಪಕ್ಷಗಳು: ಪ್ರಧಾನಿ ಮೋದಿ

1-samsat

Adani, Manipur ಚರ್ಚೆಗೆ ಪಟ್ಟು: ವಾರ ಪೂರ ಸಂಸತ್‌ ಕಲಾಪ ವ್ಯರ್ಥ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13

Mandya: ಬಹುಮಾನ ಗೆದ್ದ ಹಳ್ಳಿಕಾರ್‌ ತಳಿಯ ಎತ್ತು ದಾಖಲೆಯ 13 ಲಕ್ಷ ರೂ.ಗೆ ಮಾರಾಟ!

Pandavapura: A cow gave birth to three calves

Pandavapura: ಮೂರು ಕರುಗಳಿಗೆ ಜನ್ಮ ನೀಡಿದ ಸೀಮೆ ಹಸು

Mandya: ಕದ್ದ ಚಿನ್ನ ಮನೆ ಮುಂದೆ ಇಟ್ಟು ಹೋದ ಕಳ್ಳರು!

Mandya: ಕದ್ದ ಚಿನ್ನ ಮನೆ ಮುಂದೆ ಇಟ್ಟು ಹೋದ ಕಳ್ಳರು!

ಮಹಿಷಿ ವರದಿ ಅಧಿಕೃತ ಶಾಸನವಾಗಲಿ: ಗೊ.ರು. ಚನ್ನಬಸಪ್ಪ

ಮಹಿಷಿ ವರದಿ ಅಧಿಕೃತ ಶಾಸನವಾಗಲಿ: ಗೊ.ರು. ಚನ್ನಬಸಪ್ಪ

Cheluvaraya-swamy

By Election: ಮಗನ ಚುನಾವಣೆಗಾಗಿ ಎಚ್‌ಡಿಕೆ ಸಾವಿರಾರು ಕೋಟಿ ಸಂಗ್ರಹ: ಚಲುವರಾಯಸ್ವಾಮಿ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

CM DCM

Cabinet ಸರ್ಜರಿ ಸದ್ಯ ಇಲ್ಲ:ಹೈಕಮಾಂಡ್‌ ಭೇಟಿ ಬಳಿಕ ಸಿಎಂ, ಡಿಸಿಎಂ ಸ್ಪಷ್ಟನೆ

1-ani

Tamil Nadu;ಇಂದು ಅಪ್ಪಳಿಸಲಿದೆ ‘ಫೆಂಗಲ್‌’ ಚಂಡಮಾರುತ!: ಶ್ರೀಲಂಕಾದಲ್ಲಿ 12 ಸಾ*ವು

krishna bhaire

1.26 ಲಕ್ಷ ಅರ್ಹರಿಗೆ ವಾರದಲ್ಲಿ ಬಗರ್‌ ಹುಕುಂ ಚೀಟಿ

1-ewewew

Maharashtra; ವಿಧಾನಸಭೆಗೆ 78 ಶಾಸಕರು ಮೊಟ್ಟ ಮೊದಲ ಬಾರಿಗೆ ಪ್ರವೇಶ

GDP

GDP; ದೇಶದ ಆರ್ಥಿಕಾಭಿವೃದ್ಧಿ 2 ವರ್ಷದಲ್ಲೇ ಕನಿಷ್ಠ: ಶೇ.5.4 ಜಿಡಿಪಿ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.