ಪದ್ಮಿನಿಯಲ್ಲಿ ಸಕ್ಸಸ್ ಜರ್ನಿ
Team Udayavani, Jun 21, 2019, 5:00 AM IST
ನವರಸ ನಾಯಕ ಜಗ್ಗೇಶ್, ಪ್ರಮೋದ್, ಮಧುಬಾಲಾ, ಸುಧಾರಾಣಿ, ಹಿತಾ ಚಂದ್ರಶೇಖರ್, ವಿವೇಕ್ ಮೊದಲಾದವರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದ “ಪ್ರೀಮಿಯರ್ ಪದ್ಮಿನಿ’ ಚಿತ್ರ ಇತ್ತೀಚೆಗೆ ಐವತ್ತು ದಿನಗಳ ಯಶಸ್ವಿ ಯಾನವನ್ನು ಪೂರೈಸಿದೆ. ಇದೇ ಖುಷಿಯನ್ನು ಹಂಚಿಕೊಳ್ಳಲು ಪತ್ರಕರ್ತರು ಮತ್ತು ಮಾಧ್ಯಮಗಳ ಮುಂದೆ ಬಂದಿದ್ದ ಚಿತ್ರತಂಡ “ಪ್ರೀಮಿಯರ್ ಪದ್ಮಿನಿ’ಯ ಬಿಡುಗಡೆಯ ನಂತರದ ಜರ್ನಿಯ ಅನುಭವಗಳನ್ನು ತೆರೆದಿಟ್ಟಿತು.
ಮೊದಲು ಮಾತಿಗಿಳಿದ “ಪ್ರೀಮಿಯರ್ ಪದ್ಮಿನಿ’ಯ ನಿರ್ಮಾಪಕಿ ಶ್ರುತಿ ನಾಯ್ಡು, “ಮೊದಲ ಚಿತ್ರ ಐವತ್ತು ದಿನ ತುಂಬಿದ್ದು ಖುಷಿಯಾಗಿದೆ. ಚಿತ್ರಕ್ಕೆ ಪ್ರೇಕ್ಷಕರಿಂದ ಇಷ್ಟೊಂದು ದೊಡ್ಡ ಪ್ರತಿಕ್ರಿಯೆ ಸಿಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಚಿತ್ರ ಬಿಡುಗಡೆಯ ನಂತರ ಎಲ್ಲಾ ಕಡೆಗಳಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಚಿತ್ರ ನೋಡಿದ ಪ್ರತಿಯೊಬ್ಬರೂ ಒಳ್ಳೆಯ ಮಾತುಗಳನ್ನಾಡುತ್ತಿದ್ದಾರೆ. ಅದರಲ್ಲೂ ಮಾಲ್‌ಗಳಲ್ಲಿ, ಮಲ್ಟಿಫ್ಲೆಕ್ಸ್‌ನಲ್ಲಿ ಚಿತ್ರ ಚೆನ್ನಾಗಿ ಹೋಗುತ್ತಿದೆ. ಹೊಸ ಹುಮ್ಮಸ್ಸು ತಂದಿದೆ’ ಎಂದರು.
ಇನ್ನು ತಮ್ಮ ನಿರ್ದೇಶನದ ಮೊದಲ ಚಿತ್ರ ಐವತ್ತು ದಿನ ಪೂರೈಸಿದ ಖುಷಿ ನಿರ್ದೇಶಕ ರಮೇಶ್ ಇಂದಿರಾ ಅವರಲ್ಲೂ ಕಾಣುತ್ತಿತ್ತು. “ಚಿತ್ರ ಇಷ್ಟು ದೂರ ಬರುತ್ತೆ ಅಂಥ ನಮಗೂ ಗೊತ್ತಿರಲಿಲ್ಲ. ಚಿತ್ರದ ಸತ್ವ, ಮತ್ತದರ ಪಾತ್ರ ಜನರಿಗೆ ಇಷ್ಟವಾಗುತ್ತದೆ. ಒಳ್ಳೆ ಸಿನಿಮಾ ಮಾಡಿದ್ರೆ ಜನ ಕೈ ಹಿಡಿಯುತ್ತಾರೆ ಅನ್ನೊದು ಮತ್ತೆ ಸಾಬೀತಾಗಿದೆ. ಮುಂದೆ ಇಂಥ ಚಿತ್ರಗಳನ್ನ ಮಾಡಲು ಹೊಸ ಶಕ್ತಿ ಬಂದಿದೆ. ಎಲ್ಲರ ಪೋ›ತ್ಸಾಹ, ಪ್ರೀತಿ ಹೀಗೆ ಇರಲಿ’ ಎಂದರು.
ಇನ್ನು ಚಿತ್ರದ ಬಗ್ಗೆ ಮಾತನಾಡಿದ ನಾಯಕ ನಟ ಜಗ್ಗೇಶ್, “ಆಚಾರ-ವಿಚಾರ ಇಟ್ಟುಕೊಂಡು ಮಾಡಿದ್ರೆ ಪ್ರಚಾರ ಆಗುತ್ತೆ. ಮನಸ್ಸಿಗೆ ಮುಟ್ಟುವ ಸಿನಿಮಾ ಮಾಡಿದ್ರೆ ಜನ ನೋಡುತ್ತಾರೆ ಅನ್ನೋದಕ್ಕೆ ಇದೇ ಸಾಕ್ಷಿ. ಈ ಯಶಸ್ಸು ಎಲ್ಲವೂ ನಿರ್ದೇಶಕರಿಗೆ ಸೇರಬೇಕು. ಈ ಚಿತ್ರದಲ್ಲಿ ಒಳ್ಳೆಯ ಪಾತ್ರ ಸಿಕ್ಕಿದೆ. ಜನಕ್ಕೂ ನನ್ನ ಪಾತ್ರ ಇಷ್ಟವಾಗಿದೆ. ಆದ್ರೆ ಮುಂದೆ ಇಂಥ ಪಾತ್ರಗಳನ್ನ ಮಾಡುವುದಿಲ್ಲ’ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದ ನಟರಾದ ಪ್ರಮೋದ್, ವಿವೇಕ್, ನಟಿ ಹಿತಾ ಚಂದ್ರಶೇಖರ್, ಛಾಯಾಗ್ರಹಕ ಅದ್ವೈತ ಗುರುಮೂರ್ತಿ ಮೊದಲಾದವರು ಚಿತ್ರದ ಬಗ್ಗೆ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.