ಅಂಚೆ ಚೀಟಿ, ನಾಣ್ಯಗಳ ಮೂಲಕ ಯೋಗ ಸ್ಮರಣೆ
Team Udayavani, Jun 21, 2019, 5:53 AM IST
ಉಡುಪಿ: ಯೋಗ, ಪ್ರಾಣಾಯಾಮಗಳನ್ನು ನಿತ್ಯ ಮಾಡಬೇಕೆಂಬ ನಿಯಮವಿದ್ದರೂ ಬಹುತೇಕರು ಎಲ್ಲೋ ಕೆಲವು ದಿನ ಮಾಡಿ ಬಿಡುತ್ತಾರೆ. ಇವರಿಗೆ ನಿತ್ಯ ಬಡಿದೆಬ್ಬಿಸಲು ಅಥವಾ ನೆನಪಿಸುವಂತಹ ಕೆಲಸಗಳನ್ನು ಅಂಚೆ ಚೀಟಿ, ಅಂಚೆ ವಿಶೇಷ ಲಕೋಟೆ, ನಾಣ್ಯಗಳ ಮೂಲಕ ಅಂಚೆ ಇಲಾಖೆ ಮಾಡುತ್ತಿದೆ.
ಕಳೆದ ನಾಲ್ಕು ವರ್ಷಗಳಿಂದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಭುಜಂಗಾಸನ, ಧನುರಾಸನ, ಉಷ್ಟ್ರಾಸನ, ಉತ್ತಿತ ತ್ರಿಕೋನಾಸನದ ಚಿತ್ರಗಳನ್ನು ಒಳಗೊಂಡ ವಿಶೇಷ ಅಂಚೆ ಲಕೋಟೆಯನ್ನು ಹೊರತರಲಾಗಿದೆ. 100 ರೂ. ಮತ್ತು 10 ರೂ.ಗಳ ನಾಣ್ಯವನ್ನು 2015ರಲ್ಲಿ ಹೊರತರಲಾಗಿದೆ. ಇದರಲ್ಲಿ 10 ರೂ. ನಾಣ್ಯ ಚಲಾವಣೆಯಲ್ಲಿದೆ. 100 ರೂ. ನಾಣ್ಯ ಚಲಾವಣೆಯಲ್ಲಿಲ್ಲ. ಯೋಗಾಸನಗಳಲ್ಲಿ ವಿಶಿಷ್ಟ ಸ್ಥಾನವಿರುವ ಸೂರ್ಯಾಸನದ ಎಲ್ಲ ಭಂಗಿಗಳನ್ನು ಒಳಗೊಂಡ 5 ರೂ.ಗಳ ಅಂಚೆ ಚೀಟಿಗಳಿವೆ. ಕೇವಲ 25 ಪೈಸೆಯ ಧ್ಯಾನಸ್ಥಿತಿಯ ಅಂಚೆ ಚೀಟಿಯೂ ಲಭ್ಯವಿದೆ. ಈಗ 25 ಪೈಸೆಗೆ ಯಾವುದೇ ವ್ಯವಹಾರ ಸ್ಥಾನಮಾನವಿಲ್ಲದಿದ್ದರೂ ಅಂಚೆ ಇಲಾಖೆಯಲ್ಲಿ ಇದರ ನಾಲ್ಕು ಅಂಚೆ ಚೀಟಿಗಳನ್ನು ಹಚ್ಚಿ ಕಳುಹಿಸುವ ಕ್ರಮ ಚಾಲ್ತಿಯಲ್ಲಿದೆ. ಯೋಗದ ಆದ್ಯ ಪ್ರವರ್ತಕನೆನಿಸಿದ ಮಹರ್ಷಿ ಪತಂಜಲಿಯ, ಯೋಗ ದಿನದ ಲಾಂಛನ ಹೊಂದಿದ 5 ರೂ. ಅಂಚೆ ಚೀಟಿಯನ್ನೂ ಇಲಾಖೆ ಹೊರತಂದಿದೆ.
ಇಂತಹ ಅಪರೂಪದ ನಾಣ್ಯ, ವಿಶೇಷ ಲಕೋಟೆಗಳನ್ನು ಉಡುಪಿ ಕಾರ್ಪೊರೇಶನ್ ಬ್ಯಾಂಕ್‌ನ ಹಾಜಿ ಅಬ್ದುಲ್ಲಾ ಮ್ಯೂಸಿಯಂನಲ್ಲಿ ಸಾರ್ವಜನಿಕ ವೀಕ್ಷಣೆಗೆ ತಂದಿರಿಸಲಾಗಿದೆ. ‘ಇಂತಹ ವಿಶೇಷ ಅಂಚೆ ಚೀಟಿ, ಲಕೋಟೆಗಳು ಮಂಗಳೂರು ಪಾಂಡೇಶ್ವರದ ಫಿಲಾಟಲಿಕ್ ಬ್ಯೂರೋದಲ್ಲಿ ಸಿಗುತ್ತದೆ.
-ಎಂ.ಕೆ.ಕೃಷ್ಣಯ್ಯ,ಮ್ಯೂಸಿಯಂ ಕ್ಯೂರೇಟರ್ ಮತ್ತು ಗೈಡ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಗುತ್ತಿಗೆದಾರ ಸಚಿನ್ ಪ್ರಕರಣ; ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.