ಮಾದರಿ ವನ ಬೆಳೆಸಿದ ಮುಚ್ಲುಕೋಡು ದೇಗುಲ
| ದೇಗುಲ ಆವರಣದಲ್ಲೊಂದು ಅಪೂರ್ವ ಸಸ್ಯರಾಶಿ
Team Udayavani, Jun 21, 2019, 9:30 AM IST
ಉಡುಪಿ, ಜೂ. 20: ಕುಕ್ಕಿಕಟ್ಟೆ ಸಮೀಪದ ಮುಚ್ಲುಕೋಡು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆವರಣದಲ್ಲಿ 150ಕ್ಕೂ ಅಧಿಕ ಔಷಧೀಯ, ಪೂಜನೀಯ ಸೇರಿದಂತೆ ಅಪರೂಪದ ಗಿಡಗಳನ್ನು ಬೆಳೆಸಲಾಗಿದ್ದು ಮಾದರಿ ವನವೊಂದು ನಿರ್ಮಾಣಗೊಳ್ಳುತ್ತಿದೆ.
ದೇಗುಲದ 2 ಎಕರೆ ಜಾಗದಲ್ಲಿ ಅಪರೂಪದ ಅಣಲೆ ಮರ, ತಪಸ್ಸೀ ಮರ, ಅರ್ಜುನ ವೃಕ್ಷ, ಶಮೀ ವೃಕ್ಷ, ರೋಹಿತಕ, ಅಶೋಕ ವೃಕ್ಷ, ಪಲಾಶ, ಕದಂಬ, ಉತ್ತರಣೆ, ರಕ್ತಚಂದನ, ಕೇದಗೆ ಸೇರಿದಂತೆ ವಿವಿಧ ಸಸ್ಯ-ಮರಗಳು ಬೆಳೆಯುತ್ತಿವೆ.
ಇಲ್ಲಿ ಮೂಲಿಕಾ ವನ, ನವಗ್ರಹ ವನ, ರಾಶಿ ವನ ಹೀಗೆ ವಿವಿಧ ವರ್ಗದ ಸಸಿಗಳನ್ನೊಳಗೊಂಡ ಪ್ರತ್ಯೇಕ ಕಿರುವನಗಳಿವೆ. ಇದರ ಜತೆಗೆ ನಾಗಬನವನ್ನು ಕೂಡ ನೈಸರ್ಗಿಕವಾಗಿಯೇ ಉಳಿಸಿಕೊಳ್ಳಲಾಗಿದೆ. ಅದರಲ್ಲೂ ಸುರಗಿಯಂಥ ಮರಗಳಿವೆ.
ವಿಶೇಷ ದಿನಗಳಂದು ನಾಟಿ:
ಇಲ್ಲಿರುವ ಗಿಡ, ಮರಗಳ ಪೈಕಿ ಕೆಲವು ಗಿಡಗಳನ್ನು ವಿಶಿಷ್ಟ ದಿನಗಳಂದು ನೆಡಲಾಗಿದೆ. ಮೂಲಿಕಾ ವನದಲ್ಲಿರುವ 80 ಗಿಡಗಳನ್ನು ಪೇಜಾವರ ಮಠಾಧೀಶ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ 80ನೇ ಜನ್ಮನಕ್ಷತ್ರದಂದು ನೆಡಲಾಗಿದೆ. ಸ್ವತಃ ಶ್ರೀಗಳು ಇಲ್ಲಿ ಹಲವು ಗಿಡಗಳನ್ನು ನೆಟ್ಟಿದ್ದಾರೆ. ಮಂತ್ರಾಲಯ ಶ್ರೀ ಗಳು ಶ್ರೀಗಂಧದ ಗಿಡ ನೆಟ್ಟಿದ್ದಾರೆ. ಪೇಜಾವರ ಕಿರಿಯ ಯತಿಗಳಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಆಸ್ಥೆವಹಿಸಿ ಗಿಡಗಳನ್ನು ಪೋಷಿಸಿಕೊಂಡು ಬಂದಿದ್ದಾರೆ. ವಾಸುದೇವ ಭಟ್ ಪೆರಂಪಳ್ಳಿ ಅವರು ಕೂಡ ಈ ಮಾದರಿ ವನ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಕರ್ಜೆಯ ಮಂಜುನಾಥ ಗೋಳಿ ಅವರು ಹಲವು ಅಪರೂಪದ ಗಿಡಗಳನ್ನು ನೀಡಿದ್ದಾರೆ. ದೇವಳದ ವ್ಯವಸ್ಥಾಪಕ ರಾಜಶೇಖರ್ ಭಟ್ ಮತ್ತು ಸಿಬಂದಿಗೂ ಈ ವನರಾಶಿಯ ಮೇಲೆ ವಿಶೇಷ ಪ್ರೀತಿ. ಅವರು ಸಸ್ಯಗಳನ್ನು ಜಾಗರೂಕತೆಯಿಂದ ಬೆಳೆಸಿದ್ದಾರೆ. ದೇಗುಲದ ಕೆರೆ, ಮೂರು ಬಾವಿಗಳಿಂದ ಇದಕ್ಕೆ ನೀರು ಹಾಕಲಾಗುತ್ತಿದೆ. ಅನೇಕರು ಇದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಸ್ಯಶಾಸ್ತ್ರ ವಿದ್ಯಾರ್ಥಿಗಳ ತಂಡ ಕೂಡ ಇಲ್ಲಿ ಅಧ್ಯಯನ ನಡೆಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.